Oppanna.com

ಸ್ವಯಂವರ : ಕಾದಂಬರಿ : ಭಾಗ 19 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   07/10/2019    1 ಒಪ್ಪಂಗೊ

“ಇದೆಲ್ಲವನ್ನೂ ಆನು ನಂಬೆಕಾ?” ಶೈಲ ಕೇಶವ° ಹೇಳಿದ್ದರ ಕೇಳಿಕ್ಕಿ ನಂಬಿಕೆ ಬಾರದ್ದವರ ಹಾಂಗೆ ಅವನನ್ನೇ ನೋಡಿ ಕೇಳಿತ್ತು.

“ಉಮ್ಮ, ಎನಗೊಂತಿಲ್ಲೆ, ಊರ ಜೆನಂಗೊ ಹಿಂದಂದ ತಮಾಶೆ ಮಾಡ್ಲೆ ಸುರು ಮಾಡಿದ್ದವು, ಆನಿದಾ ಇಷ್ಟು ವಿಶಯ ಕಣ್ಣಾರೆ ಕಂಡಿದೆ, ನಂಬುತ್ತರೆ ನಂಬು, ಇಲ್ಲದ್ರೆ ಬಿಡು, ಆನು ನಾಡ್ದಿಂಗೆ ಕೆಲಸಕ್ಕೆ ಸೇರಿದ ಮತ್ತೆ ಎಂತಕ್ಕು ಗೊಂತಿಲ್ಲೆ ‌.ತಿಂಗಳುಗಟ್ಲೆ ಆಳುಗಳ ಮನೆಲಿ ನಿಲ್ಸಿಂಡು ಹಟ್ಟಿ ಕಟ್ಟುವ ಕೆಲಸ ಅಪ್ಪಂಗೆ ಬೇಕಾತಿಲ್ಲೆ.”

“ಎಂತಕ್ಕೂ ನೀನು ಗಡಿಬಿಡಿ ಮಾಡೆಡ, ನೋಡ°, ಹೆಚ್ಚು ಬುದ್ದಿ ಇಪ್ಪ ಕೂಸಲ್ಲ ಸುಶೀ..ಹಾಂಗಾಗಿ ರೆಜ ಜಾಗ್ರತೆ ಮಾಡ್ಳೇ ಬೇಕು.ನೀನು ಯೇವಗ ಮನೆಂದ ಹೆರಡುದು? ಆ ದಿನ ಬತ್ತೆ,ಅಬ್ಬೆ,ಅಪ್ಪನತ್ರೆ ಸೂಚ್ಯವಾಗಿ ವಿಶಯ ತಿಳಿಶುತ್ತೆ”.

” ಅಷ್ಟಾದರು ಮಾಡು,ಇಲ್ಲದ್ರೆ ಮನೆ ಮರ್ಯಾದಿ ಮೂರು ಕಾಸಿಂಗೆ ಹೋಕು.ಇಷ್ಟು ದಿನ ನಮ್ಮ ಮನಗೆ ಒಂದು ಘನತೆ,ಗೌರವ ಇದ್ದತ್ತು.ಅದಕ್ಕೆ ಮಸಿ ಬಳಿವಾಂಗಪ್ಪಲಾಗ”

“ನೀನೆಂತ ಹೆದರೆಡ, ಬೇಕಾರೆ ಭಾವನತ್ರೂ ಒಂದರಿ ಮಾತಾಡೆಕಾ?”

“ಎಂತ ಬೇಕಾರೂ ಮಾಡು, ಒಟ್ಟಾರೆ ಸುಶೀ ಸರಿಯಾದರೆ ಸಾಕು” ಶೈಲ° ಅವನ ಮಾತಿಂಗೆ ಬೆಲೆ ಕೊಟ್ಟತ್ತನ್ನೇಳಿ ಸಮದಾನಾತವಂಗೆ.

ಅಷ್ಟಪ್ಪಗ ಅದರ ಅತ್ತೆಯೂ ಬಂದು ಮಾತಾಡ್ಲೆ ಕೂದ ಕಾರಣ ಮತ್ತೆ ಸುಶೀಲನ ವಿಶಯ ಮಾತಾಡ್ಲಾಯಿದಿಲ್ಲೆ ಅವಂಗೆ.
ಅಲ್ಲಿಂದ ಅಂಬಗಳೇ ಹೆರಡೆಕೂಳಿ ಗ್ರೇಶಿರೂ ಅವು ಬಿಟ್ಟಿದವಿಲ್ಲೆ

“ಬಪ್ಪದೇ ಅಪರೂಪ,ಬಂದರೂ ‘ಕೆಸವಿನ ಕೋಲಿಂಗೆ ಕಂಜಿ ಕಟ್ಟಿಕ್ಕಿ ಬಂದ ಹಾಂಗೆ ಮಾಡುದು’ .ಇನ್ನು ಕೆಲಸಕ್ಕೆ ಸೇರಿದ ಮತ್ತೆ ಬೇಕಪ್ಪಗ ಬಪ್ಪಲೆಡಿತ್ತೋ.. ಈ ಸರ್ತಿ ಉಣ್ಣದ್ದೆ ಹೋಪಲೇ ಇಲ್ಲೆ” ಶೈಲನ ಅತ್ತೆ ಒತ್ತಾಯ ಮಾಡಿದವು. ಹಾಂಗೆ ಅಲ್ಲಿ ಉಂಡಿಕ್ಕಿಯೇ ಹೆರಟದವ°.

ಮನಗೆ ಬಂದ ಮತ್ತೆ ಆರತ್ರೂ ಹೆಚ್ಚು ಮಾತಾಡ್ಲೆ ಹೋಯಿದಾ° ಇಲ್ಲೆ.ಅಬ್ಬೆ ಹತ್ತರೆ ಮಾತ್ರ “ಕೆಲಸ ಸಿಕ್ಕಿತ್ತು, ಇನ್ನು ಹದಿನೈದು ದಿನಲ್ಲಿ ಸೇರುದು ” ಹೇಳಿದ°.
“ಎಲ್ಲಿ, ಎಂತದು?’ ಹೇಳಿ ಅಬ್ಬೆ ಕೇಳಿದ ಪ್ರಶ್ನೆಗೆ ಅವ° ಸರಿ ಉತ್ತರ ಕೊಡ್ಲೆ ಹೋಯಿದನೇ ಇಲ್ಲೆ.

ಅಣ್ಣಂಗೆ ಕೆಲಸ ಸಿಕ್ಕಿದ್ದು ಸುಶೀಲಂಗೆ ಕೊಶೀ ಆತು.ಅದರ ಕಳ್ಳಂಟಿಗೆ ಬುದ್ದಿ ಗೊಂತಾದ್ದು ಅವಂಗೆ ಮಾಂತ್ರ, ಅಬ್ಬೆ ಅಪ್ಪಂಗೆ ಅದರ ವಿಶಯಲ್ಲಿ ರೆಜವೂ ಸಂಶಯ ಬಯಿಂದಿಲ್ಲೆ ಹೇಳಿ ಧೈರ್ಯ. ಹಾಂಗಾಗಿ ಅವ° ಮನೆಂದ ಹೋದರೆ ದಿನೇಸನತ್ರೆ ಮಾತಾಡ್ಲೆ, ಅದರೊಟ್ಟಿಂಗೆ ತಿರುಗುಲೆ ಹೆದರಿಕೆ ಇಲ್ಲೇಳಿ ಕೊಶಿಯಾತು.

” ಅಣ್ಣಂಗೆ ಕೆಲಸ ಸಿಕ್ಕಿತ್ತು, ಅವ° ಇನ್ನಾಣ ವಾರ ಹೋವ್ತ°.ಅವ° ಹೋದರೆ ನವಗೆ ಹೆದರಿಕೆ ಇಲ್ಲೆ.ಹಾಂಗಾಗಿ ಅಣ್ಣ ಮನೆಲಿಪ್ಪನ್ನಾರ ನಾವು ರೆಜಾ ಜಾಗ್ರತೆಲಿಪ್ಪೊ°. ಇನ್ನೀಗ ಅವನ ಕಳ್ಸಲೆ ಅಕ್ಕ° ಬಂದರೂ ಆತು‌.ಅದಕ್ಕೆ ಗೊಂತಾದರೆ ಮತ್ತೆ ಕೇಳೆಡ…..” ಸುಶೀಲ ದಿನೇಸ ಸಿಕ್ಕಿಯಪ್ಪಗ ಹೇಂಗೋ ಅಷ್ಟು ಹೇಳಿತ್ತು.

“ಅಷ್ಟು ದಿನ ನಿನ್ನತ್ರೆ ಮಾತಾಡ್ಲೆಡಿಯದಾ? ಎನ್ನ ಉಸಿಲು ನಿಂಗು . ಎನ್ನ ಪ್ರಾಣ ನೀನು” ದಿನೇಸನ ಮಾತು ಕೇಳಿಯಪ್ಪಗ ಸುಶೀಲಂಗೆ ಸಂಕಟ ಆತು.ಆದರೂ ಸದ್ಯಕ್ಕೆ ದೂರ ನಿಲ್ಲದ್ದೆ ಬೇರೆ ದಾರಿ ಇಲ್ಲೆ ಹೇಳಿ ಅದರ ಹೇಂಗೋ ಒಪ್ಪುಸಿತ್ತು.
ಆದರೂ ಅದರ ಮನಸಿಡೀ ದಿನೇಸನತ್ರೆ ಇದ್ದತ್ತು.ಅದರೊಟ್ಟಿಂಗೆ ಸಿನೆಮಾಕ್ಕೆ ಹೋಪಾಂಗೆ, ಆಕಾಶಲ್ಲಿ ಹಾರಿದಾಂಗೆ,ಸಿನೆಮಾಂಗಳಲ್ಲಿ ಕಾಂಬ ಹಾಂಗಿದ್ದ ದೊಡ್ಡ ಮನೆಲಿ ದಿನೇಸನೊಟ್ಟಿಂಗೆ ಬದುಕ್ಕುವ ಹಾಂಗೆ..ಬೇಕಾದಾಂಗಿದ್ದ ಸೀರೆ, ಚಿನ್ನ ಎಲ್ಲ ಹಾಕಿ ಅದರೊಟ್ಟಿಂಗೆ ಕಾರಿಲ್ಲಿ ತಿರುಗುವ ಹಾಂಗೆ, ಅಷ್ಟಪ್ಪಗ ಎಲ್ಲೋರು ” ಈ ಸುಶೀಲನ ಪುಣ್ಯವೇ..ಎಷ್ಟೊಳ್ಳೆ ಗೆಂಡ,ಎಷ್ಟು ಆಸ್ತಿ….ಅದೂ ಇದೂ….” ಹೇಳಿ ಕೊಂಬ ಹಾಂಗಿದ್ದ ಕನಸುಗಳೇ ಅದಕ್ಕೆ ಇದ್ದದು.

ಒಂದೆರಡು ದಿನ ಅದರ ಕಾಣದ್ದಿಪ್ಪಗ ಕಂಡಾಪಟ್ಟೆ ಉದಾಸೀನ ಆತದಕ್ಕೆ.ಕಾಗದ ಬರವೊ° ಹೇಳಿರೆ ಅದಕ್ಕೆ ಕನ್ನಡ ಓದಲೇ ಅರಡಿತ್ತಿಲ್ಲೆ. ಅಂದರೂ ಇನ್ನು ಪುನಾ ಅಣ್ಣನೆದುರು ಸಿಕ್ಕಿ ಬೀಳುದು ಬೇಡ ಗ್ರೇಶಿತ್ತು.

ಚಂದ್ರಣ್ಣಂಗೂ ಮಗಂಗೆ ಕೆಲಸ ಸಿಕ್ಕಿದ್ದು ಕೊಶಿಯಾತು. ಈಗ ಮದ್ಲಾಣಾಂಗೆ ತೋಟದ ಕೆಲಸ ಮಾಡ್ಲೆಡಿತ್ತಿಲ್ಲೆ ಅವಕ್ಕೆ..ಎರಡು ಸರ್ತಿ ತೋಟಕ್ಕೆ ಹತ್ತಿ ಇಳುದರೆ ದಮ್ಮು ಕಟ್ಟುತ್ತು. ಕಾಲು ಮೊಳಪ್ಪು ಎಲ್ಲ ಬೇನೆ ಆವ್ತು. ಸರಿಯಾಗಿ ಆಳುಗಳೂ ಕೆಲಸಕ್ಕೆ ಬಾರದ್ದಿಪ್ಪಗ ಮಗ° ಕೃಷಿಯ ಮಾತ್ರ ನಂಬಿರಾಗಾಳಿಯೇ ಅವು ಅವನ ಹೆಚ್ಚು ಕಲಿಶಿದ್ದು.
“ಎನ್ನ ಕೈ ಕಾಲು ಗಟ್ಟಿ ಇಪ್ಪನ್ನಾರ ಅವ° ಕೆಲಸಕ್ಕೆ ಹೋಗಲಿ.ಮತ್ತಾಣದ್ದು ಮತ್ತೆ ಆಲೋಚನೆ ಮಾಡುವೊ°” ಹೇಳಿ ಶಾರದೆ ಹತ್ರೆ ಕೆಲವು ಸರ್ತಿ ಹೇಳುವ ಕ್ರಮಯಿದ್ದವು.

ಕೇಶವ° ಕೆಲಸಕ್ಕೆ ಸೇರಿದ ಮತ್ತೆ ಅಂಬಗಂಬಗ ಬಪ್ಪಲೆಡಿಯ.ಬಂದರೂ ಹೆಚ್ಚು ದಿನ ನಿಂಬಲೆಡಿಯ.ಹಟ್ಟಿ ಕೆಲಸ ಸುಮಾರು ಆಗಿಂಡು ಬಂತು.ಹಾಂಗಾಗಿ ಅವ° ಹೋಪಂದ ಮದಲೇ ಹಟ್ಟಿ ಒಕ್ಕಲು ಮಾಡ್ಲಕ್ಕು ಹೇಳಿ ಚಂದ್ರಣ್ಣ ಜೋಯಿಶ ಮಾವನತ್ರೆ ಹೋಗಿ ಮುಹೂರ್ತ ಕೇಳಿಂಡು ಬಂದವು.
ಅಂದಿಂಗೆ ಎಂಟರಲ್ಲಿ ಒಳ್ಳೆ ಮುಹೂರ್ತವೂ ಸಿಕ್ಕಿತ್ತು. ಮಗಂಗೆ ಕೆಲಸ ಸಿಕ್ಕಿದ ಸಂತೋಶಲ್ಲಿ ಒಂದು ಪೂಜೆ ಎಲ್ಲ ಮಾಡ ರಜ ಗೌಜಿಲಿ ಮಾಡುವ ಅಂದಾಜಿಲಿ ಹೆರಟವು.

ಕೇಶವಂಗೆ ತುಂಬಾ ಸಮದಾನ ಆತು.ಹಟ್ಟಿ ಒಕ್ಕಲು ಕಳುದರೆ ಮತ್ತೆ ಆಳುಗಳ ಗೌಜಿ ಇಲ್ಲೆನ್ನೇ. ದಿನೇಸ ಹೋದರೆ ದೊಡ್ಡ ತಲೆಬೆಶಿ ಮುಗಿತ್ತು.ತಂಗೆಯ ಹಾರಾಟವೂ ಕಮ್ಮಿಯಕ್ಕು.

ಶಾರದೆಗೆ ಕೆಲಸದ ಗಡಿಬಿಡಿ ಹೆಚ್ಚಾತು. ದನ ಸದ್ಯ ಕಂಜಿ ಹಾಕಿದ್ದು.ಅದರ ಕೆಲಸ ಆಯೆಕು. ಭಾಮೆಯಕ್ಕ ಕೂದಲ್ಲೇ ಆಗಿ ಅವಕ್ಕೆ ಹೊತ್ತೊತ್ತಿಂಗೆ ಬೇಕಾದಾಂಗೆ ಆಯೆಕು.ಅದರೆಡೆಲಿ ‘ಉಳುಕ್ಕಿದಲ್ಲಿಗೆ ವಾತ’ ಹೇಳುವಾಂಗೆ ಯೇವಗಲೂ ಕೆಲಸಕ್ಕೆ ಬಪ್ಪ ಹೆಣ್ಣಿಂಗೆ ಕಾಲು ಅಡಿ ಮೊಗಚ್ಚಿ ನಡವಲೆಡಿಯದ್ದಾಂಗಾತು.
ತಲಗೆ ಕೈ ಮಡುಗಿ ಕೂದತ್ತು ಶಾರದೆ. ಯೇವ ಕೆಲಸ ಮದಾಲು ಮಾಡುದು? ಶೈಲ ಇದ್ದಿದ್ದರೆ ಅರೆವಾಶಿ ಕೆಲಸ ಅದುವೇ ಮಾಡ್ತಿತು. ಸುಶೀಲನತ್ರೆ ಎಂತ ಹೇಳಿಯೂ ಪ್ರಯೋಜನ ಇಲ್ಲೆ.ಇನ್ನೂ ಮಕ್ಕಳಾಟಿಕೆ ಬಿಡದ್ದ ಕೂಸು.

ಅಷ್ಟಪ್ಪಗ ಅದಕ್ಕೆ ಬಲದ ಕೈ ಹಾಂಗೆ ಸಕಾಯಕ್ಕೆ ಬಂದದು ತಂಗಮ್ಮ.ದಿನೇಸನ ಅಬ್ಬೆ.
“ಆಯೆಕಾದ ಕೆಲಸ ಎನ್ನತ್ರೆ ಹೇಳಿ ಅಕ್ಕಾ, ಆನು ಹೇಂಗೂ ಕೆಲಸಯಿಲ್ಲದ್ದೆ ಕೂಬ ಜೆನ.ನಿಂಗೊ ಹೇಳಿದ್ದರ ಮಾಡಿಕೊಡುವೆ” ಶಾರದೆಗೆ ನಿಜವಾಗಿಯೂ ತಂಗಮ್ಮನ ದೇವರೇ ಕಳ್ಸಿದ್ದು ಹೇಳಿ ಆತು.ತಮಿಳು ಹೆಣ್ಣುಗೊ ಕೆಲಸಲ್ಲಿಯೂ ಉಶಾರಿ ಇರ್ತವು. ಸಾಲದ್ದಕ್ಕೆ ತಂಗಮ್ಮ ಇವರಲ್ಲೇ ಇಪ್ಪದೂದೆ.
ಉಡುಗುದು,ಉದ್ದುದು,ಕೇರುದು, ಬಳುಗುದು…..ಹೇಳಿ ಎಲ್ಲಾ ಕೆಲಸವನ್ನು ಮಾಡಿತ್ತು.ಒಟ್ಟಿಂಗೆ ಶಾರದೆಯೊಟ್ಟಿಂಗೆ ಹಟ್ಟಿ ಕೆಲಸಕ್ಕೂ ಸೇರಿತ್ತು.

“ತಂಗಮ್ಮ ಕೆಲಸಲ್ಲಿ ಇಷ್ಟು ಉಶಾರಿಕ್ಕೂಳಿ ಗ್ರೇಶಿದ್ದಿಲ್ಲೇತಾ.ಈ ಸಮಯಲ್ಲಿ ಅದು ಸಿಕ್ಕಿದ್ದು ಎನ್ನ ಅಜ್ಜಿ ಪುಣ್ಯ. ಇಲ್ಲದ್ರೆ ಪೂಜಗಪ್ಪಗ ಆನು ಮನುಗೆಕಾವ್ತಿತು” ಶಾರದೆ ಸುಮಾರು ಸರ್ತಿ ಗೆಂಡನತ್ರೆ,ಮಕ್ಕಳತ್ರೆ ಹೇಳಿತ್ತು.

“ಆತಪ್ಪಾ, ಅದು ಸಿಕ್ಕಿದ್ದು ಒಳ್ಳೆದಾತು. ಅದನ್ನೇ ಎಷ್ಟು ಸರ್ತಿ ಹೇಳುದು?” ಕೇಶವಂಗೆ ತಂಗಮ್ಮನ ಕಂಡರೆ ದೊಡ್ಡ ಸಮದಾನ ಇಲ್ಲೆ.ಒಂದನೇ ಕಾರಣ ದಿನೇಸನ ಅಬ್ಬೆ ಅದು. ಮತ್ತೊಂದೆಂತಾಳಿರೆ ಅದಕ್ಕೆ ಕೆಲಸ ಮಾಡುವ ಒಟ್ಟಿಂಗೆ ಚೆಂದಕೆ ಮಾತಾಡಿ ಅಬ್ಬೆ ಕೈಂದ ಮನೆ ವಿಶಯ ಎಲ್ಲ ಕೇಳಿ ತಿಳಿತ್ತು.ಅಬ್ಬಗೆ ಅದೆಲ್ಲ ತಲಗೆ ಹೋವ್ತಿಲ್ಲೆ.. ಅದು ಕೇಳಿದ್ದಕ್ಕೆಲ್ಲ ಸತ್ಯವೇ ಹೇಳುದು.

ಕಾರ್ಯಕ್ರಮಕ್ಕೆ ಎರಡು ದಿನ ಮದಲೇ ಶೈಲನೂ ಬಂತು. ಕೇಶವಂಗೆ ಕೊಶಿಯಾತು. ಅಂದ್ರಾಣ ವಿಶಯ ಆದ ಮತ್ತೆ ಅವ° ಸುಶೀಲನತ್ರೆ ಮಾತಾಡುದು ಕಮ್ಮಿ ಮಾಡಿದ್ದ°. ಈಗ ದಿನೇಸನತ್ರೆ ಮಾತಾಡ್ತಿಲ್ಲೆ ಹೇಳಿ ಅವನ ನಂಬಿಕೆ.

ಹಾಂಗಾಗಿ ಶೈಲ ಬಂದಿಪ್ಪಗ ಈ ವಿಶಯ ಅಬ್ಬೆಪ್ಪನತ್ರೆ ಮಾತಾಡೆಡ ” ಹೇಳಿದ°. ಅದಕ್ಕೂ ಸುಶೀಲನ ಕಾಂಬಗ ಯೇವ ಸಂಶಯವೂ ಬಯಿಂದಿಲ್ಲೆ.

ಆದರೆ ನಿಜವಾಗಿಯೂ ಸುಶೀಲಂಗೆ ತುಂಬ ಸಂಕಟ ಆಗಿಂಡಿದ್ದತ್ತು.ಹಟ್ಟಿ ಕೆಲಸ ಮುಗುದ ಮತ್ತೆ ದಿನೇಸ ಅದರ ಊರಿಂಗೆ ಹೋಕು.ಮತ್ತೆ ಕಾಂಬಂದೇಂಗೆ? ಹದಿನೆಂಟು ವರ್ಷ ಆಗದ್ದೆ ಮದುವೆ ಮಾಡ್ಲೆ ಆವ್ತಿಲ್ಲೇಡ.ಅದರ ಕಾಣದ್ದೆ ಬದುಕುಲೇ ಎಡಿಯ. ಅಬ್ಬೆ ಅಪ್ಪ° ಒಪ್ಪದ್ರೂ ಅದರನ್ನೇ ಮದುವೆಪ್ಪದು.ಮದುವೆ ಕಳುದ ಮತ್ತೆ ಒಪ್ಪದ್ದೆ ಎಂತ ಮಾಡ್ತವು? ಸಿನೆಮಾಂಗಳಲ್ಲಿ ಎಲ್ಲ ಹಾಂಗೇ ಅಲ್ಲದಾ? ಸುರುವಿಂಗೆ ಮನೆಯವು ಒಪ್ಪುತ್ತವಿಲ್ಲೆ.ಅಕೇರಿಗೆ ಒಪ್ಪಿ ಚೆಂದಕೆ ಮದುವೆ ಮಾಡ್ತವು, ಇಲ್ಲದ್ರೆ ಮನಗೆ ಕರಕ್ಕೊಂಡು ಬತ್ತವು.ಆಸ್ತಿ,ಪೈಸೆ ಕೊಡ್ತವು. ಅಂದರೂ ಅದಕ್ಕೆ ಎಷ್ಟು ಸಮಯ ಬೇಕಕ್ಕು ಗೊಂತಿಲ್ಲೆ.

ಹೀಂಗೇ ಒಬ್ಬೊಬ್ಬನ ಒಂದೊಂದು ಆಲೋಚನೆಗಳ ಎಡಕ್ಕಿಲ್ಲಿ ಹಟ್ಟಿ ಒಕ್ಕಲು, ಪೂಜೆ ಎಲ್ಲ ಗೌಜಿಲಿ ಕಳುದತ್ತು.ಇಷ್ಟು ಸಮಯ ಮನೇಲೇ ನಿಂದು ಕೆಲಸ ಮಾಡಿಕೊಟ್ಟ ಆಳುಗೊಕ್ಕೆ ಚಂದ್ರಣ್ಣ ಅವಕ್ಕೆ ಕೊಶಿಯಪ್ಪ ಹಾಂಗೆ ವಸ್ತ್ರ,ಅಂಗಿ,ಪೈಸೆ ಎಲ್ಲ ಕೊಟ್ಟವು. ಕೇಶವನೂ ಗುರು ಹಿರಿಯರ ಆಶೀರ್ವಾದ ಪಡಕ್ಕೊಂಡು ಕೆಲಸಕ್ಕೆ ಸೇರ್ಲೆ ಬೆಂಗ್ಳೂರಿಂಗೆ ಹೆರಟ°.ಶೈಲನೂ ಅದರ ಮನಗೆ ಹೋತು.

ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>

~*~*~

ಕಳುದ ವಾರದ ಸಂಚಿಕೆ:

ಪ್ರಸನ್ನಾ ಚೆಕ್ಕೆಮನೆ

One thought on “ಸ್ವಯಂವರ : ಕಾದಂಬರಿ : ಭಾಗ 19 – ಪ್ರಸನ್ನಾ. ವಿ. ಚೆಕ್ಕೆಮನೆ

  1. ಕೇಶವ ಇಲ್ಲದ್ದೆ ಇನ್ನು ಎಂತೆಲ್ಲಾ ಅಕ್ಕೊ, ದೇವರೇ ಕಾಪಾಡೆಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×