ಅಂದು ಪಂಕಜನ ಮನೆಂದ ಬಂದ ಮತ್ತೆ ಸುಶೀಲ ಒಂದು ದಿನವೂ ನೇರ್ಪ ಇತ್ತಿದ್ದಿಲ್ಲೆ. ಒಂದೋ ಎಷ್ಟೊತ್ತಿಂಗೂ ಮಗಳನ್ನು ಅಪ್ಪಿ “ನಮಗಿನ್ನು ಬದ್ಕುಲೆಡಿಯ ಮಗಳೂ..ಆನು ಮಾಡಿದ ತಪ್ಪಿಂಗೆ ದೇವರೆನಗೆ ಶಿಕ್ಷೆ ಕೊಟ್ಟ°. ಎನ್ನ ಕೈಲಿಪ್ಪದೆಲ್ಲ ಖಾಲಿ ಆತು ಮಗಳೂ……! ಇನ್ನಿಲ್ಲೇ ಸಾಯೆಕಷ್ಟೆ ನಾವು….” ಹೇಳಿ ಕೂಗಿಂಡು ಕೂರುಗು.
ಅಲ್ಲದ್ರೆ ಕೋಪಲ್ಲಿ ಆರ್ಭಟೆ ಕೊಟ್ಟು ಬೊಬ್ಬೆ ಹಾಕಿ ಕೈಗೆ ಸಿಕ್ಕಿದ ಸಾಮಾನಿಲ್ಲಿ ತಂಗಮ್ಮಂಗೆ ಬಡಿವಲೆ ಹೋಕು. ದಿನೇಸನ ಕಂಡರೂ ಹಾಂಗೇ.
“ನಿಂಗಳ ಇಬ್ರ ಕೊಂದಿಕ್ಕಿ ಜೈಲಿಂಗೆ ಹೋಪೆ ಆನು. ಎನ್ನ ಬದ್ಕು ಹಾಳು ಮಾಡಿದ ಪಿಶಾಚಿಗೊ ನಿಂಗೊ….” ಹೇಳಿ ಅದರ ಕಂಡ ಕೂಡ್ಲೇ ಕಲ್ಲು, ಕೋಲು ಎಲ್ಲ ತೆಗದಿಡ್ಕುಗು.
ಮನಸ್ಸು ಅಸ್ತವ್ಯಸ್ತ ಅಪ್ಪದರೊಟ್ಟಿಂಗೆ ಬಸರಿ ಹೇಳಿಯೂ ಗೊಂತಪ್ಪಗ ಸುಶೀಲಂಗೆ ಪಾತಾಳಕ್ಕೆ ಬಿದ್ದ ಅವಸ್ಥೆ ಆತು. ಒಂದರಿ ನಾರಾಯಣ್ ಇದ್ದ ಮನಗೆ ಹೋದಪ್ಪಗ ಅವು ಆ ಮನೆ ಬಾಡಿಗೆಗೆ ಕೊಟ್ಟು ಬೇರೆ ಹೋಯಿದವು ಹೇಳಿ ಗೊಂತಾತು. ಡಾಕ್ಟರ್ ಪೂರ್ಣಿಗೂ ಬೇರೆ ಆಸ್ಪತ್ರೆಗೆ ವರ್ಗಾವಣೆ ಆತೂಳಿ ಗೊಂತಪ್ಪಗ ಅದರ ತಲಗೆ ಜೆಪ್ಪಿದ ಹಾಂಗಿದ್ದ ಸಂಕಟ ಆತು.
ಮಗಳ ಲಾಯ್ಕಲ್ಲಿ ಕಲಿಶೆಕು ಹೇಳಿ ಕನಸು ಕಟ್ಟಿದ್ದೆಲ್ಲ ನೀರಿಲ್ಲಿ ಮಾಡಿದ ಹೋಮದ ಹಾಂಗಾತು. ಇಷ್ಟು ದಿನ ಕಷ್ಟ ಪಟ್ಟು ದಿನೇಸಂಗೂ, ತಂಗಮ್ಮಂಗೂ ಕಾಣದ್ದಾಂಗೆ ಹುಗ್ಸಿ ಮಡುಗಿದ ಪೈಸೆಯೂ ಪಂಕಜನತ್ರೆ ಕೊಟ್ಟಾತು. ಅವಕ್ಕೆ ಬಿಟ್ಟು ಬೇರಾರಿಂಗೂ ವಿಶಯವೂ ಗೊಂತಿಲ್ಲೆ.ಇನ್ನೀಗ ಕೈಲಿ ಒಂದು ರುಪಾಯಿ ಸಾನೂ ಇಲ್ಲೆ ಹೇಳಿಯಪ್ಪಗ ಅದರ ಮಾನಸಿಕ ಆರೋಗ್ಯ ಏರಿಳಿತ ಆತು. ಕೆಲವು ಸರ್ತಿ ಸರಿಯಾಗಿ ಮಂಡೆ ಸಮ ಇಲ್ಲದ್ದವರ ಹಾಂಗೇ ಮಾಡ್ಲೆ ಸುರುಮಾಡಿತ್ತು. ಕೂಗಿಂಡು ಕೂರುಗು ಕೆಲವುದಿನ. ಅದರಷ್ಟಕೆ ಮಾತಾಡುಗು. ಒಪ್ಪಕ್ಕಂಗೆ ಕೂಡ ಒಂದೊಂದರಿ ಬಡಿವಲೆ ಹೋಕು
“ನೀನು ಆ ರಾಕ್ಷಸನ ಮಗಳು. ನೀನು ಮಡುಗೆ ಆನು….” ಹೇಳಿ ಅದರ ಹಿಂದಂದಲೇ ಅಟ್ಸಿಂಡು ಬಕ್ಕು.
ಅಬ್ಬೆಯ ಹೊಸ ಅವತಾರ ನೋಡಿ ಒಪ್ಪಕ್ಕ° ಹೆದರಿ ಪುಚ್ಚೆಯ ಹಾಂಗಾತು. ಕೆಲವು ಮನೆಯವು ಇವರ ಅವಸ್ಥೆ ಕಂಡು ಒಂದೊಂದರಿ ಊಟ ಕೊಟ್ಟು ಕೊಂಡಿತ್ತಿದ್ದವು. ಸುಶೀಲ ಅದನ್ನೂ ಯೇವಗಲೂ ಉಣ್ಣ..ಮನಸ್ಸು ಕಂಡರೆ ಮಾತ್ರ ರಜ ಉಂಬದದು. ಮೀವಲೆ ಮನಸ್ಸೇ ಇಲ್ಲೆ. ತಲೆ ಕಸವೆಲ್ಲ ಬಿಕ್ಕಿ ಹಾಕಿ ಒಂದು ರೀತಿಲಿ ವರ್ತಿಸುವ ಅದರತ್ರೆ ಮಾತಾಡ್ಲೆ ಒಪ್ಪಕ್ಕಂಗೂ ಹೆದರಿಕೆ. ಅಂದರೂ ಇರುಳಪ್ಪಗ ಒಪ್ಪಕ್ಕನ ಕೊಂಗಾಟಲ್ಲಿ ಹತ್ತರೆ ಮನುಶುಗದು. ಹಾಂಗಾಗಿ ಅಬ್ಬೆ ಹೇಳಿರೆ ಅದಕ್ಕೆ ಪ್ರೀತಿಯೇ.
ಒಳ ಮನಸ್ಸು ಸರಿ ಇದ್ದರೂ ಸುಶೀಲ ದಿನೇಸ, ತಂಗಮ್ಮ ಹತ್ತರೆ ಬಾರದ್ದಿಪ್ಪಲೆ ಬೇಕಾಗಿ ತಲೆಸಮ ಇಲ್ಲದ್ದವರ ಹಾಂಗೆ ಮಾಡಿಂಡಿದ್ದದು ಕೆಲವು ಸರ್ತಿ. ದಿನೇಸ ಕೆಲವು ದಿನ ಅದರ ಗೆಳೆಯರ ಎಲ್ಲ ಮನಗೆ ಕರಕ್ಕೊಂಡು ಬಂದಪ್ಪಗ ಕತ್ತಿ ತೋರ್ಸಿ ಹೆದರ್ಸಿ ಅಟ್ಸಿತ್ತು ಸುಶೀಲ.
“ಇದಕ್ಕೆ ನಿಜವಾಗಿಯೂ ಮರ್ಲು ಹಿಡುದ್ದು.ಎಂತಾರು ಮಾಡಿ ಆಸ್ಪತ್ರೆಗೆ ಸೇರ್ಸು.ಇಲ್ಲದ್ರೆ ಇಲ್ಲಿಪ್ಪವರ ಕೊಲ್ಲುಗು” ಹೇಳಿ ಹತ್ತರಾಣ ಮನೆಯವೆಲ್ಲ ಹೇಳಿರೂ ದಿನೇಸ, ತಂಗಮ್ಮ ಕೇಳಿದ್ದವಿಲ್ಲೆ. ಅವು ಸುಶೀಯ ಬೈದರೆ ಅದು ಅವರ ಬಡಿವಲೆ ಬಕ್ಕು. ಅಷ್ಟಪ್ಪಗ ಅವುದೆ ಬಡಿಗು..
ಹೀಂಗೇ ಏಳೆಂಟು ತಿಂಗಳು ಕಳುದತ್ತು. ಸುಶೀಲನ ದೇಹಲ್ಲಿ ಶಕ್ತಿಯೇ ಇತ್ತಿದ್ದಿಲ್ಲೆ. ಆದರೆ ಹೊಟ್ಟೆ ಮಾತ್ರ ದೊಡ್ಡ ಕಂಡು ಕೊಂಡಿದ್ದತ್ತು.
“ಈ ಹೆರಿಗೆಲಿ ಅದು ಖಂಡಿತ ಸಾಯ್ತು” ಹೇಳಿ ಅಲ್ಲಿಪ್ಪವೆಲ್ಲ ಮಾತಾಡಿಂಡಿತ್ತಿದ್ದವು.
ಬಿಟ್ಟು ಬಿಟ್ಟು ಬಪ್ಪ ಹೊಟ್ಟೆ ಬೇನೆ, ನಡವಲೂ ಎಡಿಯದ್ದಷ್ಟು ಸೊಂಟ ಬೇನೆ ಇದ್ದರೂ ಸುಶೀಲ ಹಲ್ಲು ಮುಟ್ಟೆ ಕಚ್ಚಿ ಬೇನೆ ತಡಕ್ಕೊಂಡತ್ತು. ಅಂದರೂ ಒಂದು ದಿನ ಮಧ್ಯಾಹ್ನಪ್ಪಗ ಮಾತ್ರ ಅದಕ್ಕೆ ಅತೀ ಭಯಂಕರ ಹೊಟ್ಟೆ ಬೇನೆ ಬಂತು. ಇದು ನರಳುದು ಕಾಂಬಗ ತಂಗಮ್ಮಂಗೆ ಕೋಪ ಬಂದು ಬಡಿವಲೆ ಬಂತು.
“ಅದರ ಬಡುದ್ದು ಹೆರ ಹಾಕು” ಹೇಳಿಂಡು ದಿನೇಸನೂ ಅಲ್ಲಿಗೆ ಬಂತು. ಹೊಟ್ಟೆ ಬೇನೆ ಹೇಳಿ ನರಳುವ ಸುಶೀಲನ ದಿನೇಸನೇ ಕಾಲಿಲ್ಲಿ ದೂಡಿ ಮನೆಂದ ಹೆರ ಹಾಕಿಕ್ಕಿ ಬಾಗಿಲು ಹಾಕಿ ಒಳ ಕೂದತ್ತು.
ಅಬ್ಬೆ ಒಟ್ಟಿಂಗೆ ಒಪ್ಪಕ್ಕನೂ ಕೂಗಿಂಡು ಬಂತು. ಸುಶೀಲ ಹಳೇ ದಿನಗಂಗಳ ನೆಂಪು ಮಾಡಿಂಡು “ಅಬ್ಬೇ.. ಅಪ್ಪಾ….” ಹೇಳಿ ಕೂಗಿಂಡೇ ಮೆಲ್ಲಂಗೆ ಎದ್ದು ನಡವಲೆ ಎಡಿತ್ತಾ ನೋಡಿತ್ತು. ಭಾರೀ ಬಂಙಲ್ಲಿ ಬೇನೆ ತಡಕ್ಕೊಂಡು ನಾಲ್ಕೈದು ಮೆಟ್ಟು ನಡದು ನಿಂದು..ಮತ್ತೆ ಪುನಾ ನಡದು,ಕೂದು,ನೆಗರಿ ಮಾರ್ಗದ ಹತ್ತರಂಗೆ ಎತ್ತಿಯಪ್ಪಗ ತಲೆ ತಿರುಗಿ ಬಿದ್ದತ್ತು. ಅಬ್ಬೆ ಬಿದ್ದದು ಕಂಡು ಒಪ್ಪಕ್ಕ
“ಅಬ್ಬೇ… ಅಬ್ಬೇ…” ಹೇಳಿ ಕೂಗಿಂಡು ಅದರ ಮೈ ಮುಟ್ಟಿ ಮುಟ್ಟಿ ದಿನಿಗೇಳಿಂಡಿದ್ದತ್ತು.
ಅಷ್ಟಪ್ಪಗ ಅಲ್ಲೇ ಹೋಪ ಒಂದು ರಿಕ್ಷಾದ ಡ್ರೈವರು ಅವರ ಹತ್ತರೆ ಬಂದು ನಿಲ್ಸಿತ್ತು. ಅದಕ್ಕೆ ಸುಶೀಲನ ಕಂಡು ಗುರ್ತಯಿದ್ದು. ಡಾಕ್ಟರ್ ಪೂರ್ಣಿ ಒಂದು ವಾರ ಆಸ್ಪತ್ರೆಂದ ಸುಶೀಲನ ಅದರ ಮನಗೆ ಕಳ್ಸಿದ್ದದು ಇದರ ರಿಕ್ಷಾಲ್ಲಿ. ಅವರ ಮನಗೆ ಅಂಬಗಂಬಗ ಸುಶೀಲ ಹೋಪದು ನೋಡಿದ್ದದು. ಡಾಕ್ಟರ್ ಪೂರ್ಣಿಯ ,ನಾರಾಯಣ್, ಪಂಕಜ ಎಲ್ಲರನ್ನೂ ಅದಕ್ಕೆ ಸರೀ ಗುರ್ತವೂ ಇದ್ದತ್ತು.
ಸುಶೀಲನ ಬಗ್ಗೆ ಹೆಚ್ಚು ಗೊಂತಿಲ್ಲದ್ರೂ ಭಾರೀ ಕಷ್ಟಲ್ಲಿದ್ದು ಹೇಳಿ ಅಂದಾಜಿದ್ದತ್ತು. ಆದರೆ ಈ ಪರಿಸ್ಥಿತಿ ಕಾಂಬಗ ಅದರ ಕಣ್ಣಿಲ್ಲಿ ನೀರು ಬಂತು. ಪಾಪ ಪುಣ್ಯ ಇಪ್ಪ ಆ ಮನುಶ್ಯ ಅದರ ಅಂಬಗಳೇ ಅದರ ರಿಕ್ಷಾಲ್ಲಿ ಹೇಂಗೋ ಮನುಶಿ ಸರಕಾರಿ ಆಸ್ಪತ್ರೆಗೆ ಕರಕ್ಕೊಂಡು ಬಂತು. ಪುಣ್ಯಕ್ಕೆ ಅಲ್ಲಿ ಒಳ್ಳೆಯ ಡಾಕ್ಟರಕ್ಕೊ ಇತ್ತಿದ್ದವು. ಅಂದರೂ ಸುಶೀಲನ ಪರೀಕ್ಷೆ ಮಾಡಿದ ಡಾಕ್ಟರಂಗೆ ಈ ಹೆರಿಗೆ ಇಲ್ಲಿ ಮಾಡ್ಸಿರೆ ಕಷ್ಟ ಅಕ್ಕು. ಆಪರೇಷನ್ ಮಾಡ್ತರೂ ಅಷ್ಟು ಸುಲಭ ಇಲ್ಲೇಳಿ ಅಂದಾಜಾತು.
ರಿಕ್ಷಾ ಡ್ರೈವರು ಅಷ್ಟು ಹೊತ್ತುದೆ ಅಲ್ಲೇ ಕೂದೊಂಡಿದ್ದತ್ತು. ಪುಟ್ಟು ಒಪ್ಪಕ್ಕನ ಒಬ್ಬನೇ ಬಿಟ್ಟಿಕ್ಕಿ ಹೋಪಲೆ ಮನಸ್ಸು ಬಯಿಂದಿಲ್ಲೆ ಅದಕ್ಕೆ.
“ಬೇರೆ ಆಸ್ಪತ್ರೆಗೆ ಕರಕ್ಕೊಂಡು ಹೋಗಿ, ಇಲ್ಲಿ ಕಷ್ಟ.ಹೀಂಗಿದ್ದ’ ಕೇಸುಗಳ ತೆಕ್ಕೊಂಬಷ್ಟು ಧೈರ್ಯ ಎನಗಿಲ್ಲೆ ಹೇಳಿದವು ಡಾಕ್ಟರ್” ಹೇಳಿ ನರ್ಸು ಬಂದು ಹೇಳಿಯಪ್ಪಗ ರಿಕ್ಷಾ ಡ್ರೈವರಿಂಗೆ ಎಂತ ಮಾಡೆಕೂಳಿ ಗೊಂತಾಯಿದಿಲ್ಲೆ.
ಅಷ್ಟಪ್ಪಗ ಪೂರ್ಣಿ ಡಾಕ್ಟರ ಒಟ್ಟಿಂಗೆ ಇತ್ತಿದ್ದ ನರ್ಸು ಆ ದಾರಿಯಾಗಿ ಬಂತು. ಇದು ಅದರ ನಿಲ್ಸಿ ಸುಶೀಲನ ವಿಷಯ ಹೇಳಿತ್ತು
“ಒಂದರಿ ಪೂರ್ಣಿ ಡಾಕ್ಟರ ಪೋನ್ ನಂಬರ್ ಕೊಡಿ’ ಇದು ಅವರ ಮನಗೆ ಕೆಲಸಕ್ಕೆ ಬಂದು ಕೊಂಡಿದ್ದ ಹೆಣ್ಣು. ಜೀವವೇ ಅಪಾಯಲ್ಲಿದ್ದು ಹೇಳ್ತವು ಡಾಕ್ಟರ್. ಒಂದು ಉಪಕಾರ ಮಾಡಿ” ಆ ಜನ ಕೈ ಮುಗುದು ಕೇಳಿಯಪ್ಪಗ ಆ ನರ್ಸಿಂಗೆ “ಅಯ್ಯೋ” ಹೇಳಿ ಆತು. ಅದು ಅಂಬಗಳೇ ಒಳ ಬಂದು ಸುಶೀಲನ ಪರೀಕ್ಷೆ ಮಾಡಿದ ಡಾಕ್ಟರ ಹತ್ತರೆ ವಿಷಯ ಹೇಳಿತ್ತು. ಪೂರ್ಣಿ ಡಾಕ್ಟರುದೆ ಈ ಡಾಕ್ಟರುದೆ ಒಳ್ಳೆ ಆತ್ಮೀಯರು. ಹಾಂಗಾಗಿ ಇದರ ವಿಶಯ ಹೇಳಿಯಪ್ಪಗ ಅದು ಪೂರ್ಣಿ ಡಾಕ್ಟರ್ ಇಪ್ಪ ಆಸ್ಪತ್ರೆಗೆ ಪೋನು ಮಾಡಿ ಅದರತ್ರೆ ಮಾತಾಡಿ ವಿವರ ಎಲ್ಲ ಹೇಳಿತ್ತು
“ಆಪರೇಷನ್ ಮಾಡುವ ಸ್ಥಿತಿಲಿ ಅದಿಲ್ಲೆ. ಆಪರೇಷನ್ ಮಾಡದ್ರೆ ಅಮ್ಮಂಗೂ,ಶಿಶುವಿಂಗೂ ಅಪಾಯ. ಈ ಸ್ಥಿತಿಲಿ ಎಂತ ಮಾಡ್ಲೂ ಎಡಿಯ. ಒಟ್ಟಿಂಗೆ ಒಂದು ಹೆಮ್ಮಕ್ಕೊ ಸಾನೂ ಇಲ್ಲೆ.ಒಂದು ಸಣ್ಣ ಕೂಸಿನ ಕರಕ್ಕೊಂಡು ಬಂದದು”
ಸುಶೀಲ ಹೇಳಿ ಗೊಂತಾದ್ದದೂದೆ ಡಾಕ್ಟರ್ ಪೂರ್ಣಿ ಅಂಬಗಳೇ ಸುಶೀಲನ ಆಂಬುಲೆನ್ಸ್ ಲಿ ಅದರ ಗೆಂಡನ ಆಸ್ಪತ್ರೆಗೆ ಕಳ್ಸಲೆ ಹೇಳಿತ್ತು
“ಎಷ್ಟು ಖರ್ಚಾದರೂ ತೊಂದರೆ ಇಲ್ಲೆ. ಆನು ಕೊಡುವೆ. ಆದಷ್ಟು ಬೇಗ ಕಳ್ಸಿ. ಮಗಳೂದೆ ಒಟ್ಟಿಂಗೆ ಇರಲಿ”
ಪೂರ್ಣಿ ಡಾಕ್ಟರ್ ಗೆ ಭಾರೀ ಹತ್ರಾಣ ಸಂಬಂಧ ಇಕ್ಕಂಬಗ ಹೇಳಿ ಜಾನ್ಸಿ ಅವು ಸುಶೀಲಂಗೆ ಅರ್ಜೆಂಟಿಂಗೆ ಒಂದೆರಡು ಇಂಜೆಕ್ಷನ್ ಎಲ್ಲ ಕೊಟ್ಟು ಫಕ್ಕನೆ ಇನ್ನೊಂದು ಆಸ್ಪತ್ರೆಂದ ವಾಹನ ತರ್ಸಿ ಸುಶೀಲನ ಕಳ್ಸಿಕೊಟ್ಟವು.
ರಿಕ್ಷಾ ಡ್ರೈವರಿಂಗು ರಜ ಸಮದಾನ ಆತು. ಇನ್ನೆಂತಾದರೂ ಡಾಕ್ಟರ್ ಪೂರ್ಣಿ ಇದ್ದನ್ನೇ ಹೇಳಿ ಧೈರ್ಯಲ್ಲಿ ಅದು ಅದರಷ್ಟಕೆ ಹೋತು.
‘ ಏನು ,ಎಲ್ಲಿಗೆ, ಎಂತದು’ ಹೇಳುವ ಪ್ರಶ್ನೆಗೊ ಮನಸ್ಸಿಲ್ಲಿ ಇದ್ದರೂ ಬೇನೆ ತಡವಲೆಡಿಯದ್ದೆ ನರಳುವ ಸುಶೀಲಂಗೆ ವಾಹನಲ್ಲಿ ಇಪ್ಪವರತ್ರೆ ಎಂತದೂ ಕೇಳ್ಲೆ ಎಡಿಗಾಯಿದಿಲ್ಲೆ. ಇನ್ನು ರಜ್ಜ ಹೊತ್ತಿಲ್ಲಿ ಆನು ಸತ್ತರೆ ಎನ್ನ ಮಗಳಿಂಗೆ ಆರಿದ್ದವು ಹೇಳುವ ಯೋಚನೆ ಮಾತ್ರ ಅದರ ಮನಸಿಲ್ಲಿ ಇದ್ದದು. ಹಾಂಗಾಗಿ ವಾಹನ ಎಷ್ಟು ದೂರ ಬಯಿಂದು ಹೇಳಿ ಸಾನೂ ಅಂದಾಜಾಯಿದಿಲ್ಲೆ.
ಮನೆಲಿ ಹಾಕಿಂಡಿದ್ದ ಅದೇ ಅಂಗಿ ಹಾಕಿಂಡು ಅಬ್ಬೆಯೊಟ್ಟಿಂಗೆ ಬಂದ ಪುಟ್ಟು ಒಪ್ಪಕ್ಕಂಗೆ ತನ್ನ ಭವಿಷ್ಯದ ಬದುಕು ಎಂತಾವ್ತೋ ಹೇಳುವ ಹೆದರಿಕೆ, ಆತಂಕ ಇಲ್ಲದ್ರೂ ‘ಇವೆಲ್ಲ ಸೇರಿ ಹೀಂಗೆ ವಯರೆಲ್ಲ ಕೈಗೆ ಕುತ್ತಿ ಮನುಶಿಂಡು ಅಬ್ಬೆಯ ಕರಕ್ಕೊಂಡು ಎಲ್ಲಿಗೆ ಹೋಪದಾದಿಕ್ಕೂಳಿ ಗೊಂತಾಗದ್ದೆ ಅವರೆಲ್ಲರ ಮೋರೆಯನ್ನೂ ಬದಲ್ಸಿ ಬದಲ್ಸಿ ನೋಡಿಂಡು ಸುಮ್ಮನೇ ಆ ವಾಹನದ ಸೀಟಿಂಗೆ ಅಂಟಿ ಕೂದತ್ತು.
ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>
~*~*~
ಕಳುದ ವಾರದ ಸಂಚಿಕೆ:
-
ಸ್ವಯಂವರ : ಕಾದಂಬರಿ : ಭಾಗ 36: https://oppanna.com/kathe/swayamvara-36-prasanna-chekkemane/
- ಒಲುಮೆಯ ಸಿರಿದೀಪ - October 22, 2021
- ಸ್ವಯಂವರ ಭಾಗ 51-ಪ್ರಸನ್ನಾ ವಿ ಚೆಕ್ಕೆಮನೆ - June 1, 2020
- ಸ್ವಯಂವರ ಭಾಗ 50-ಪ್ರಸನ್ನಾ ವಿ ಚೆಕ್ಕೆಮನೆ - May 25, 2020
ಸುಶೀಲನ ಅವಸ್ಥೆ ಕಂಡು ಬೇಜಾರಾತು. ಏವ ಕೂಸುಗಳೂ ಹೀಂಗಪ್ಪಲಾಗ.
ಛೆ ಸುಶಿ ಪುನಃ ಬಸರಿಯಾ.. ಎಂಥ ಮಾಡುಗು ಅದು ಈ ಸ್ಥಿತಿಲಿ…ಕಣ್ಣೀರು ಬತ್ತು ಓದುವಾಗ…ಅಂತೂ ಪೂರ್ಣಿ ಕೈಗೆ ಸುಶಿ ಸಿಕ್ಕುತ್ತನ್ನೆ ಹೇಳಿ ಸಮಾಧಾನ…ದೇವರ ಹಾಂಗೆ ಡ್ರೈವರ್ ಬಂತನ್ನೆ…ತುಂಬಾ ಲಾಯ್ಕಲ್ಲಿ ಏರುಪೇರು ವಿವರ್ಸಿ ಬರದ್ದೆ.. ಇನ್ನು ಸುಷಿಗೆ ಯಾವ ಕಷ್ಟ ಅನುಭವಿಸುವ ಶಕ್ತಿ ಇರ ಕಾಂತು…
Bhavishyada alochane illade yavudo avidyaavanta anaagarikana ottinge odi banda koosinge kastada saramaaleye atu… Ondu maguvina nodigomba shaktiye sushige ille.. innu inondu maguvina adenta maadugu.. innadaru adara appa amma bandu adara karakondu hogiddare laikithu..
ಪಾಪ ಸುಶೀಲ ಎಂತೆಲ್ಲಾ ಅವಸ್ಥೆ ಪಟ್ಟತ್ತು.ಮುಳುಗುವವಂಗೆ ಹುಲ್ಲು ಕಡ್ಡಿ ಆಸರೆ ಆಸರೆ ಸಿಕ್ಕಿದ ಹಾಂಗೆ ಸುಶೀಲಂಗೆ ಡ್ರೈವರ್ ಸಕಾಯಕ್ಕೆ ಬಂತು ಪಾಪ.