Oppanna.com

ಬದುಕ್ಕಿನ ಬೆಲೆ ತಿಳಿಶಿದ ಕೊರೊನಾ!

ಬರದೋರು :   ಶ್ರೀಅಕ್ಕ°    on   04/04/2020    1 ಒಪ್ಪಂಗೊ

ಹರೇರಾಮ!
ಲೋಕಕ್ಕೆ ಬಂದೊದಗಿದ ಮಹಾಮಾರಿ ಕೊರೊನ. ಮನುಷ್ಯಸಂಕುಲವನ್ನೇ ಬುಡಹಿಡುದು ಅಲ್ಲಾಡ್ಸಿತ್ತು. ಇಡೀ ವಿಶ್ವದ ಎಲ್ಲಾ ದೇಶಂಗೊಕ್ಕೂ ಹರಡಿ ತಾನೇ ಸರ್ವಾಧಿಕಾರಿ ಹೇಳಿ ಮೆರಕ್ಕೊಂಡಿದ್ದ ಮಾನವನ ನಿಜಸ್ವರೂಪವ ತೋರ್ಸಿಕೊಟ್ಟತ್ತು. ಚಂದ್ರನ ಮೇಲೆ ಮಂಗಳನ ಮೇಲೆ ಅಧಿಪತ್ಯ ತೋರ್ಸುಲೆ ಹೆರಟ ಮನುಷ್ಯಂಗೆ ಭೂಮಿ ಮೇಲೆ ನಡವದೇ ಕಷ್ಟಕರ ಆಗಿ ಹೋತು. ಮುಂದುವರುದ ದೇಶಂಗೊ ಹೇಳಿ ಬೀಗಿದವ್ವು ಬಂದದರ ಅನುಭವಿಸುಲೆ ಎಡಿಯದ್ದೆ ನಿತ್ಯ ಕಣ್ಣೀರು ಹಾಕುತ್ತ ಪರಿಸ್ಥಿತಿ ಬಯಿಂದು. ನೋಡ್ತಾ ನೋಡ್ತಾ ಇದ್ದ ಹಾಂಗೇ ಪ್ರಪಂಚಲ್ಲಿ ಮನುಷ್ಯರ ಅಳಿವು ಉಳಿವಿನ ಪ್ರಶ್ನೆ ಬಯಿಂದು.
ಮನೆಂದ ಹೆರ ಹೋಪಲೆಡಿಯದ್ದೆ ಮನೆಯೊಳ ಇಪ್ಪ ಈ ಕಾಲಲ್ಲಿ ದೇವರು ಎಲ್ಲೋರಿಂಗೂ ಆತ್ಮಾವಲೋಕನ ಮಾಡಿಗೊಂಬ ಅವಕಾಶ ಮಾಡಿ ಕೊಟ್ಟಿದವು. ಪೈಸೆಯ ಹಿಂದೆ ಓಡಿಗೊಂಡಿದ್ದ ಮನುಷ್ಯನ ಓಟಕ್ಕೆ ಒಂದರಿಯಂಗೇ ತಡೆ ಬಿದ್ದಿದು. ಈ ಘಟನೆ ನಮ್ಮ ಎಲ್ಲೋರ ಕನಿಷ್ಠ ಐವತ್ತು ವರ್ಷದ ಹಿಂದಂಗೆ ಎತ್ತುಸುತ್ತು. ವಿಧಿ ಕೊಟ್ಟ ಈ ಪರೀಕ್ಷೆಲಿ ಸಮರ್ಪಕವಾಗಿ ತಾಳ್ಮೆಂದ ಎದುರುಸಿದವ° ಮಾತ್ರ ಒಳುದು ಬೆಳವಲೆ ಸಾಧ್ಯ. ಇದರ ವಿರುದ್ಧ ಹೋದವಂಗೆ ವಿನಾಶ ಸಿದ್ಧ.
ಮದಲಾಣ ಕಾಲಲ್ಲಿ ನಮ್ಮ ಹೆರಿಯವ್ವು ಎಷ್ಟು ಚೆಂದಕ್ಕೆ ಜೀವನ ಮಾಡಿಗೊಂಡಿತ್ತಿದ್ದವು! ಅವರವರ ಜೀವನಕ್ಕೆ ಎಷ್ಟು ಬೇಕೋ ಅಷ್ಟೇ ದುಡುಕ್ಕೊಂಡು ಒಳಿಶಿಗೊಂಡು ಜೀವನ ಮಾಡಿದ್ದವು. ಅವಕ್ಕೆದೇ ಹೆಚ್ಚಿಗೆ ಪೈಸೆ ಮಾಡುವ ಅವಕಾಶ ಇತ್ತಿಲ್ಲೆಯಾ ಕೇಳಿದರೆ, ಇತ್ತು! ಆದರೆ ಅವಕ್ಕೆ ಪ್ರತಿಯೊಂದರ ಬೆಲೆ ಗೊಂತಿತ್ತು. ನಮ್ಮ ನಾಳಂಗಾಣ ತಲೆಮಾರಿಂಗೆ ದುಡುದು-ತಿಂಬಲೆ ಬೇಕು ಹೇಳಿಯೇ ಅವು ದುಡುದು ಪೈಸೆ ರೂಢಿಗೆ ಮಾಡಿ ಕೊಟ್ಟಿದವಿಲ್ಲೆ. ಅವಕ್ಕೆ ಕಷ್ಟಂಗೊ ಇತ್ತಿಲ್ಲೆಯಾ? ಇತ್ತನ್ನೆ! ಆಯಾ ಕಾಲಕ್ಕೆ ಅವಕ್ಕೆ ಅವರದ್ದೇ ಆದ ಕಷ್ಟಂಗೊ ಇತ್ತು. ಆದರೂ ಎಲ್ಲಿಯೂ ಸಂಯಮ ತಪ್ಪದ್ದೆ ಜೀವನ ಮಾಡಿದವು.
ಈಗ ನವಗೆ ಎಲ್ಲದರಲ್ಲಿಯೂ ಸ್ಪರ್ಧೆ! ಇನ್ನೊಬ್ಬಂದ ಹೆಚ್ಚಿಗೆ ಪೈಸೆ ಮಾಡೆಕ್ಕು. ಮಕ್ಕೊಗೆ ಪುಳ್ಯಕ್ಕೊಗೆ ಒಳಿಶೆಕ್ಕು.  ವಾಹನಂಗೊ ಆಯೆಕ್ಕು. ಒಂದೊಂದು ಮನೆಲಿಯೂ ಮೂರು ನಾಲ್ಕು ವಾಹನ ಬೇಕು. ಇನ್ನೊಬ್ಬಂದ ಹೆಚ್ಚಿಗೆ ಮಾರ್ಕು ತೆಗೆಯೆಕ್ಕು. ತೊಂಭತ್ತರಂದ ಮೇಲೆ ತೆಗೆಯದ್ದವ ಮನುಷ್ಯನೇ ಅಲ್ಲ! ಕುಟುಂಬದ ಮರ್ಯಾದಿ ಪ್ರಶ್ನೆ ಕಡಮ್ಮೆ ಮಾರ್ಕು ಬಂದರೆ. ಜಾಗೆ ಹೆಚ್ಚಿಗೆ ಮಾಡೆಕ್ಕು. ಜಾಗೆ ಇದ್ದಲ್ಲಿ ಪೂರಾ ರಬ್ಬರು, ಸಿಕ್ಕಿದ್ದದರ ಬೆಳೆಶಿತ್ತು. ಗುಡ್ಡೆಗಳ ಪೂರಾ ತಟ್ಟು ಮಾಡಿ ಕೃಷಿ ಮಾಡಿತ್ತು. ಪೇಟೆಲಿ ಗುಡ್ಡೆಗೊ ಪೂರಾ ಹೋಗಿ ಸೈಟುಗೊ ಆತು. ಊರು ಆರಿಂಗೂ ಬೇಡ. ಎಲ್ಲೋರಿಂಗೂ ಪೇಟೆ ಆಯೆಕ್ಕು. ಬೇರೆ ದೇಶದ ಕೆಲಸ ಆಯೆಕ್ಕು.  ಮೊದಲು ಪೇಟೆಗೆ ಹೋಗಿ ಬೇಕಾದ್ದು ತೆಗೆಯೆಕ್ಕಿತ್ತು. ಈಗ ಪೇಟೆಯೇ ಮನೆಯೊಳದಿಕ್ಕೆ ಬಯಿಂದು. ಮನೆಲಿಯೇ ಕೂದು ಬೇಕಾದ್ದದರ ಒತ್ತಿದರಾತು ಹಾಂಗೆ ಪೈಸೆ ಹೋಗಿ ಹೀಂಗೆ ಬೇಕಾದ್ದು ಸಾಮಾನುಗೊ ಬತ್ತು. ಹತ್ತರಾಣ ಅಂಗುಡಿಗೂ ಹೋಗೆಡ. ಕೈಲಿ ಮೊಬೈಲು ಬಂದು ಪ್ರಪಂಚವೇ ಕೈಯೊಳ ಇದ್ದು. ಯಾವುದು ಬೇಕು ಯಾವುದು ಬೇಡ. ಹೀಂಗಿಪ್ಪ ಕಾಲಲ್ಲಿ ಮನುಷ್ಯ ಸುಖಿಯೇ ಆಗಿರೆಕ್ಕಾತಲ್ಲದಾ? ಎಂತಕೆ ಈ ರೋಗಾಣು ಭೂಮಿಗೆ ಪ್ರವೇಶ ಮಾಡಿತ್ತು?
ಮನುಷ್ಯರ ಅತಿ ಆಸೆಯ ಸಹಿಸುಲೆ ಭೂಮಿಗೆ ಆತಿಲ್ಲೆ. ಭೂಮಿಯ ಮೇಲಾಣ ಮನುಷ್ಯರ ಅತ್ಯಾಚಾರವ ಸಹಿಸುಲೆ ಅದಕ್ಕೆ ಎಡಿಗಾತಿಲ್ಲೆ. ಯಾವುದಕ್ಕೂ ಒಂದು ಸಹನೆಯ ಪರಮಾವಧಿ ಇದ್ದನ್ನೆ! ಹಲವು ರೀತಿಲಿ ಸೂಚನೆಗಳ ಕೊಟ್ಟರೂ ಮನುಷ್ಯಂಗೆ ತನಗೆ ಪ್ರಕೃತಿ ಸೂಚನೆ ಕೊಡ್ತಾ ಇಪ್ಪದು ಹೇಳಿ ಅಂದಾಜು ಮಾಡಿಗೊಂಬಲೆ ಆತಿಲ್ಲೆ. ಗೊಂತಪ್ಪಗ ಕಾಲ ಮಿಂಚಿ ಹೋಪ ಪರಿಸ್ಥಿತಿ ಬಯಿಂದು. ಈಗ ಮನುಷ್ಯ ಮನೆಯ ಒಳ ಬಂದಿ. ಬೇಕಾಬಿಟ್ಟಿ ತಿರುಗಿಗೊಂಡಿದ್ದವ ಈಗ ಪ್ರತಿದಿನ ಮನೆಲಿಯೇ ಇರೆಕ್ಕು. ಊಟ ತಿಂಡಿಗೂ ಜಾಗ್ರತೆ ಮಾಡೆಕ್ಕು. ಪೈಸೆ ಎಷ್ಟಿದ್ದರೆಂತ ಮನೆಲಿ ತಿಂಬಲೆ ಬೇಕಾದ ಅಶನ ನೀರಿಂಗೆ ತಾತ್ವಾರ ಬಂದಿಪ್ಪಗ. ಪೇಟೆ ಆಯೆಕ್ಕು ವಿದೇಶ ಆಯೆಕ್ಕು ಹೇಳಿ ಹೋದೋರ ಪಾಡು ಈಗ ಆರಿಂಗೂ ಬೇಡ. ಮಕ್ಕಳ ಭವಿಷ್ಯ ನಿರ್ಧಾರ ಮಾಡುವ ಪರೀಕ್ಷೆಗಳ ನಡೂಕೆಯೇ ರೋಗಾಣು ಬಯಿಂದು. ಆರದ್ದೂ ನಾಳೆ ಹೇಂಗೆ ಹೇಳಿ ಗೊಂತಿಲ್ಲೆ. ಜೀವನದ ಪರೀಕ್ಷೆಯ ನಡುಗೆ ಮನುಷ್ಯ° ಮಾಡ್ತ ಪರೀಕ್ಷೆ ಯಾವ ಲೆಕ್ಕ?
ಕೃಷಿಕನ ಬದುಕಿಲಿ ಯಾವ ವೆತ್ಯಾಸ ಆಯಿದಿಲ್ಲೆ. ಅವಂಗೆ ನಿನ್ನೆಯೂ ಇಂದೂ ಎಲ್ಲ ಒಂದೇ. ಬೇಕಾದ್ದದರ ಬೆಳೆಶಿ ತಿಂಬ ಸ್ವಾತಂತ್ರ್ಯ ಇದ್ದು. ತನಗೆ ಬೇಕಾದ್ದದರ ಬೆಳೆಶಿಗೊಂಬ ತಾಕತ್ತೂ ಇದ್ದು. ಯಾವುದು ಇದ್ದರೂ ಇಲ್ಲದ್ದರೂ ಅವಂಗೆ ಇಪ್ಪದರಲ್ಲಿ ಜೀವನ ಮಾಡ್ಲೆ ಎಡಿಗು. ಹಲವು ಕಷ್ಟಂಗಳ ಸಹಿಸಿ ಸಂಯಮ ಅವನಲ್ಲಿದ್ದು.
ಕೃಷಿಕರಾಗಿದ್ದ ನಮ್ಮ ಹಿರಿಯರು ಪ್ರಕೃತಿಯ ಪೂಜೆ ಮಾಡಿದವು. ದೈವ ದೇವರ ಒಲಿಶಿಗೊಂಡು ಬಂದವು. ಗುರುಹಿರಿಯರ ಗೌರವಿಸಿದವು. ಈಗ ಪೈಸೆ ಇದ್ದವಕ್ಕೇ ಪ್ರಾಶಸ್ತ್ಯ ಕೊಟ್ಟು ಮನುಷ್ಯನೇ ದೇವರಿಂದ ಮೇಲೆ ಆತು. ನಾವು ಪೈಸೆಯ ಕೂಡಿಮಡಿಗಿ ಮಕ್ಕೊಗೆ ಪುಳ್ಯಕ್ಕೊಗೆ ಹೇಳಿ ಒಳಿಶಿ ಮಡಿಗಿದರೆ ಅವಕ್ಕೆ ದುಡುದು ತಿಂಬಲೆ ಮನಸ್ಸು ಬಾರ. ಕೂಡಿಟ್ಟದು ಅಂತೇ ಕಳದು ಹೋಕು! ತರವಾಡು ಮನೆಗಳೇ ಮಾರಿ ಆರಾರ ಪಾಲಾದಪ್ಪಗ ದೈವ ದೇವರುಗೊ ಆರಿಂಗೆ? ತಪ್ಪಿದಲ್ಲಿ ದಾರಿ ಹೇಳುವ ಗುರುಹಿರಿಯರು ಎಂತಕ್ಕೆ? ಯಾವಾಗ ಮನುಷ್ಯನಲ್ಲಿ ಈ ಭಾವನೆಗೊ ಬಂತೋ ಅವನ ಅಡಿಪಾಯಕ್ಕೇ ಒರಳೆ ಬಂತು. ಈಗ ರೋಗಾಣು ಬಂದಪ್ಪಗ ಒಳ ಎಲ್ಲ ಗೋಳೆ ಹೇಳಿ ಅಂದಾಜು ಆದ್ದದು.
ಪ್ರಕೃತಿ ಕೊಟ್ಟ ಈ ಪರೀಕ್ಷೆಲಿ ಎಲ್ಲೊರೂ ಅವರವರ ಪಾತ್ರವ ಸರಿಯಾಗಿ ನಿಭಾಯಿಸಲಿ. ಇನ್ನು ಮುಂದೆ ಆದರೂ ಅಗತ್ಯಕ್ಕೆ ತಕ್ಕ ಸಂಪಾಲ್ಸುವ, ಒಳಿಶುವ, ಬೆಳವ ಪ್ರವೃತ್ತಿ ಎಲ್ಲರಲ್ಲಿಯೂ ಬರಲಿ. ಆರು ಎಷ್ಟೇ ದೂರ ಹೋದರೂ ಎಷ್ಟೇ ದೊಡ್ಡ ಹುದ್ದೆಲಿದ್ದರೂ ಅವ್ವವ್ವು ಹುಟ್ಟಿ ಬೆಳದ ಮಣ್ಣಿನ ಮರೆಯದ್ದೆ ರಕ್ಷಣೆ ಮಾಡಿ ಮಡುಗಲಿ. ಅಗತ್ಯಕ್ಕೆ ತಕ್ಕವೇ ಜೀವನ ಮಾಡುವ ಗುಣ ಎಲ್ಲೋರಲ್ಲೂ ಬರಲಿ.
ಮಕ್ಕೊಗೆ ಜೀವನದ ಪರೀಕ್ಷೆಯ ಎದುರುಸುವ ಶಿಕ್ಷಣ ಸಿಕ್ಕಲಿ. ಮಾರ್ಕುಗೊ ಮನುಷ್ಯನ ರೂಪುಸುತ್ತಿಲ್ಲೆ. ಅವನ ಒಳ ಇಪ್ಪ ಸಂಸ್ಕಾರ ಬದುಕಿಲಿ ಅವನ ಒಟ್ಟಿಂಗೆ ಇಪ್ಪದು. ಇಂಥಾ ಸಂದರ್ಭಂಗಳಲ್ಲಿ ನವಗೆ ಶ್ರೀಗುರುಗಳ ಕನಸಿನ ವಿಶ್ವವಿದ್ಯಾಲಯವಾದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಅಗತ್ಯ ಗೊಂತಪ್ಪದು. ಸನಾತನ ಸಂಸ್ಕಾರ, ಸಂಸ್ಕೃತಿಗಳ ವಿದ್ಯೆಗಳ ಒಟ್ಟಿಂಗೆ ತನ್ನ ಇತಿ ಮಿತಿಗಳ ಅರ್ತು ಸಂಯಮಲ್ಲಿ ಬದುಕಿ ಬಾಳುದು ಹೇಂಗೆ ಹೇಳುದರ ಇಲ್ಲಿ ಕಲಿವ ಅವಕಾಶ ಇದ್ದು. ನಮ್ಮ ಮುಂದಾಣ ಪೀಳಿಗೆಗೆ ಇದೊಂದು ವರವಾಗಲಿ.
ನಮ್ಮ ಹೆರಿಯೋರು ಮಾಡಿದ ಹಾಂಗೇ ಇಪ್ಪ ಜೀವನವ ನಾವುದೇ ಮಾಡುವ°. ನವಗೆ ಬೇಕಾದಷ್ಟೇ ದುಡುದು ತಿಂದು ಒಳಿಶುವ°.  ಮಕ್ಕಳ ಬದುಕ್ಕನ್ನೂ ಅವಕ್ಕೆ ಬೇಕಾದ ಹಾಂಗೆ ದುಡುದು ಬೆಳೆಶುಲೆ ಅವರ ತಯಾರುಮಾಡುವ°. ಜೀವನ ಯಾವ ಪರೀಕ್ಷೆ ಒಡ್ಡಿದರೂ ನಮ್ಮ ಮಕ್ಕೊ ಧೈರ್ಯಗೆಡದ್ದೆ ಎಲ್ಲವನ್ನೂ ಎದುರ್ಸಿ ಮುಂದೆ ಹೋಪ ಹಾಂಗೆ ಬೆಳೆಶುವ°. ಪ್ರಕೃತಿ ಕೊಟ್ಟ ಈ ಒಂದು ಅವಧಿಲಿ ನಮ್ಮ ಜೀವನವ ಪುನಃ ನೋಡಿಗೊಂಡು ಮುಂದಾಣ ದಾರಿಯ ನಾವೇ ರೂಪು ಮಾಡುವ°.

One thought on “ಬದುಕ್ಕಿನ ಬೆಲೆ ತಿಳಿಶಿದ ಕೊರೊನಾ!

  1. ಒಳ್ಳೆ ಚಿಂತನೆಯ ಲೇಖನ.
    ನಾವು ಕಲ್ತದು ಭಾರತೀಯ ವಿದ್ಯೆ ಅಲ್ಲ. ಸಂಸ್ಕೃತಿಯ ಮರದತ್ತು. ಈಗ ಎಲ್ಲವನ್ನೂ ಅನುಭವಿಸೆಕ್ಕು . ಸಂಕಟ ಬಂದಾಗ ವೆಂಕಟರಮಣ ಹೇಳ್ತ ಪರಿಸ್ಥಿತಿಗೆ ಎತ್ತಿದ್ದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×