Latest posts by ವಿಜಯತ್ತೆ (see all)
- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
ಹಿಂದಾಣವರ ಶುದ್ಧ ಮುದ್ರಿಕೆ (ಭಾಗ-2)
ಕೆಲಸಿ ಮೈಲಿಗೆ
ನಮ್ಮದಲ್ಲಿ ಮೈಲಿಗಗೆ ಕೆಲಾವು ಹೆಸರಿದ್ದು.ಕೆಲವು ಸಾರ ಇಲ್ಲದ್ದಾದರೆ ಇನ್ನು ಕೆಲವು ಕಡ್ಪದ್ದು.. ಅದಲ್ಲೊಂದು ಕೆಲಸಿ ಮೈಲಿಗೆ!. ಕಾರಣ ಅಲ್ಲಿ ಎಲ್ಲಾ ತರದವೂ ಕುಚ್ಚಿ(ಕ್ಷೌರ) ತೆಗೆಶಿಕ್ಕಿ ಹೋವುತ್ತವು!!.ಆರಲ್ಲಿ ಹೇಂಗಿದ್ದ ರೋಗವೋ ಕಲುಷಿತವೋ ಇಕ್ಕು ಹೇಳ್ಲೆಡಿಯ.(ಇದು ಹೆರಿಯರ ಮನೋಭೂಮಿಕೆಯಾಗಿತ್ತು).
ಬ್ರಾಹ್ಮಣರಲ್ಲಿ ಮಾಣಿಯಂಗೊಕ್ಕೆ ಮೂರು ವರ್ಷಪ್ಪಗ ಚೌವಳ ಹೇಳಿ ಮಾಡುವ ಕ್ರಮ.ಅಷ್ಟರವರೆಗೆ ಅವರ ತಲೆಕೂದಲಿಂಗೆ ಕತ್ತರಿ ಹಾಕಲಿಲ್ಲೆ.(ಉತ್ತರ ಕನ್ನಡಲ್ಲಿ ಈಗಳೂ ಈ ವಿಧಿ ಆಚರಣೆ ಇದ್ದು).
ಕುಚ್ಚಿ ತೆಗೆಶಲೆ ಶನಿವಾರ,ಮಂಗಳವಾರ ,ಅಪರಾಹ್ನ,ಅಮವಾಸ್ಯೆ, ಜನ್ಮನಕ್ಷತ್ರ ಹೀಂಗಿದ್ದೆಲ್ಲ ನಿಷಿದ್ಧ.
ಹಾಂಗೇ ಕೆಲಸಿಕೊಟ್ಟಗ್ಗೆ ಹೋಗಿ ಬಂದಪ್ಪಗ ಮದಾಲು ಆರನ್ನೂ ಮುಟ್ಟದ್ದೆ ; ಮನೆ ಹೆಮ್ಮಕ್ಕಳತ್ರಂದ ಅನಿಶುದ್ಧಿ ತೆಕ್ಕಂಡು ನೆತ್ತಿಗೆ, ಹೊಕ್ಕಳಿಂಗೆ ಹಾಕಿ ತಿಕ್ಕಿಕ್ಕಿ ತಲಗೆ,ಮೈಗೆ ವಸ್ತ್ರ ಸಹಿತ ಮಿಂದೊಂಡು ಬರೆಕು..ಮೀವಲೆ ಮದಲೆ ಎಂತದೂ ಕುಡಿವದಾಗಲಿ, ತಿಂಬದಾಗಲೀ ಆಗಲೇ ಆಗ. ಈ ತನಕ ಅದು ಪೊಡುಂಬು ಹೇಳಿ ಗ್ರೇಶೆಂಡಿದ್ದವಕ್ಕೆ…,ಹೀಂಗಿದ್ದೆ ಲ್ಲ ಸರಿಯಾದ ಕ್ರಮ ಹೇಳಿ ಕೊರೋನಾ ಪರೋಕ್ಷವಾಗಿ ಕಲ್ಷಿದ್ದು!!!!.
ಕಾಲಾಯತಸ್ಮೈನಮಃ.
~~~ಲೇ-ವಿಜಯಾಸುಬ್ರಹ್ಮಣ್ಯ.