Oppanna.com

ಕಮರಿದ ಚಿಗುರು-ವಿಜಯಲಕ್ಷ್ಮೀ. ಎಲ್. ಭಟ್

ಬರದೋರು :   ಶರ್ಮಪ್ಪಚ್ಚಿ    on   25/07/2020    1 ಒಪ್ಪಂಗೊ

ಕಮರಿದ ಚಿಗುರು

ವಿಜಯಲಕ್ಷ್ಮೀ. ಎಲ್. ಭಟ್

ಆನು ಮದುವೆ ಆಗಿ ಎಂಗಳ ಊರಿಂಗೆ ಬಂದ ಸಮಯಲ್ಲಿ ನಡೆದ ನೈಜ ಘಟನೆ ಇದು.
ನೀಲ! ಇದು ಎಂಗಳ ಮನೆಯ ಹತ್ರಣ ಹುಡುಗಿ. ಆನು ಎಂಗಳ ಊರಿಂಗೆ ಬಂದ ಟೈಮಿಲಿ ಅದು ಸಾಧಾರಣ ಪಿಯುಸಿ ಮುಗಿಸಿ ಡಿಗ್ರಿಗೆ ಸೇರಿತ್ತು ಹೇಳಿದ ನೆನಪು.
ನೀಲ ತುಂಬಾ ಚಂದದ ಕೂಸು! ತೆಳ್ಳಂಗೆ, ಬೆಳ್ಳಂಗೆ ಬಳುಕುವ ಬಳ್ಳಿಯ ಹಾಂಗಿಪ್ಪ ನೀಳಕಾಯದ ಸುಂದರಿ ಹೇಳಿದರೆ ತಪ್ಪಾಗ! ಅಂಬಗ, ಈಗಣ ಹಾಂಗೆ ಚೂಡಿದಾರ, ನೈಟಿ ಎಲ್ಲಾ ಯಾವುದೂ ಬಳಕೆಗೆ ಬಂದಿತ್ತಿಲ್ಲೆ. ಎಂತ ಇದ್ದರೂ ಸೀರೆ ಅಥವಾ ಲಂಗ ದಾವಣಿ ಅಷ್ಟೇ..!
ತುಂಬುನೆರಿಗೆಯ ಲಂಗ ದಾವಣಿ, ಸುರುಳಿ ಕೂದಲಿನ ಜೋಡು ಜೆಡೆಗ, ಹಣೆಗೆ ಸಣ್ಣ ಕುಂಕುಮ ಬೊಟ್ಟು, ಎರಡು ಕೈಗೆ ತುಂಬಾ ಕುಪ್ಪಿ ಬಳೆಗ. ಇಷ್ಟು ಬಿಟ್ಟರೆ ನೀಲಂಗೆ ಹೆಚ್ಚಿನ ಅಲಂಕಾರ ಎಂತದೂ ಇತ್ತಿಲ್ಲೆ!
ನೀಲ ನಾಲ್ಕು ಜನ ಅಣ್ಣಂದಿರ ಒಬ್ಬಳೇ ಕೊಂಡಾಟದ ತಂಗೆ, ಅತ್ತಿಗೆಕ್ಕಳ ಒಲವಿನ ನಾದಿನಿ, ಅಮ್ಮನ ಅಕ್ಕರೆಯ ಮಗಳು.
ನೀಲ ಎಂಗಳ ಮನೆಗೆಲ್ಲ ಬಂದುಗೊಂಡಿತ್ತಿಲ್ಲೆ. ಯಾವಗಾದರು ಒಂದೊಂದರಿ ಕಾಲೇಜಿಂಗೆ ಹೋಪಗ ಎದುರೆ ಸಿಕ್ಕುಗು. ” ಏನೇ ನೀಲಾ ಹ್ಯಾಗಿದ್ದೀಯಾ? ಕಾಲೇಜಿನಲ್ಲಿ ಯಾರಾದರೂ ಈ ಹಳ್ಳಕ್ಕೆ ಬಿದ್ದಿದ್ದಾರೋ ಹೇಗೆ..??” ಹೇಳಿ ಆನು ತಮಾಷೆ ಮಾಡಿದರೆ, ನಾಚಿಕೆಂದ ಮೋರೆಲ್ಲಾ ಕೆಂಪು ಮಾಡಿಗೊಂಡು ನೆಗೆ ಮಾಡಿದರೆ, ಆ ನೆಗೆಯ ನೋಡುದೇ ಒಂದು ಚಂದ..!
ಇನ್ನು ನೀಲನ ಅಪ್ಪ ರಂಗೆಗೌಡಾಳಿ. ಮಹಾ ಜಿಪುಣ ! ಮಹಾ ಕ್ರೂರಿ ಬೇರೆ. ಹೆಂಡತಿ, ಮಗಳು, ಸೊಸೆಕ್ಕೊ, ಪುಳ್ಳಿಯಕ್ಕೊ, ಅದರೆಡೆಲಿ ಎದೆಯುದ್ದ ಬೆಳೆದು ಮಗಂದ್ರೂ ಸಹ ಆರೂ ಅದರ ಮಾತಿಂಗೆ ಎದುರು ಹೇಳುವಾಂಗಿಲ್ಲೆ ಎಂತ ಇದ್ದರೂ ಆ ಮನೆಲಿ ಅದರ ಮಾತೇ ಮೊದಲು, ಅದರ ಮಾತೇ ಅಕೇರಿ.
ಬೆಳಿ ತೊಗಲಿನ ದೊಡಾ ದೇಹ, ಅಗಲ ಹಣೆ, ದಪ್ಪದಪ್ಪ ಹುಬ್ಬುಗೊ, ಕೆಂಡ ಕಾರುವ ಸಣ್ಣ ಕಣ್ಣುಗೊ, ಅಗಲವಾದ ರಕ್ಕಸನ ಕೆಮಿಗೊ, ಕೆಮಿಗೊಂದು ಕೆಂಪುಕಲ್ಲಿನ ಒಂಟಿ. ಏನೊ ಒಟ್ಟಾರೆ ಹೇಳ್ಲೆ ಎಡಿಯದ್ದಾಂಗಿಪ್ಪ, ಅಸಹ್ಯ ಹೆದರಿಕೆ ಹುಟ್ಟುವ ವ್ಯಕ್ತತ್ವ..!
ಸದಾ ಎಲ್ಲೋರ ಮೇಲೂ ಸವಾರಿ ಮಾಡುವ ಕೆಟ್ಟ ಗುಣ. ಹಟ್ಟಿ ತುಂಬಾ ದನ, ಎಮ್ಮೆ ಜಾನುವಾರುಗೊ. ದಿನ ಉದಿ ಆದರೆ ಅದರ ಆರೈಕೆ-ಚಾಕ್ರಿ. ಇದೇ ಅದರ ದಿನಚರಿ. ಮತ್ತೆ ಆಳು ಕಾಳೂಳಿ ಒಂದು ಪೈಸವನ್ನು ಖರ್ಚು ಮಾಡುವ ಅಭ್ಯಾಸ ಅದಕ್ಕಿಲ್ಲೆ. ಎಲ್ಲಾ ಕೆಲಸವನ್ನು ಹೆಂಡತಿ ಮಕ್ಕಳತ್ರೆ ಮಾಡಿಸಿಕೊಂಡು ಪೈಸೆ ಉಳಿಸಿಕೊಂಬದು.
ಎಂಗಳ ಕೆಲಸದ ಹೆಣ್ಣು ಎಂಗಳಲ್ಲಿಗೆ ಬರೆಕ್ಕಾದರೆ ನೀಲನ ಮನೆ ದಾಂಟಿಯೇ ಬರೆಕ್ಕು. ಆ ದಿನ ಉದಿಯಾಯ್ಕಾರೆ ನೀಲನ ಮನೆಂದ ಎಂತದೋ ಗಲಾಟೆ ಕೇಳ್ತಾ ಇತ್ತು. “ಏನೇ ಅದು ನೀಲ ಮನೆಲಿ ಗಲಾಟೆ…??” ಕೆಲಸದ ಹೆಣ್ಣಿನತ್ರೆ ಕೇಳಿದೆ.
ಅದು ಗೌರಕ್ಕನ್ನ  ತವರಿಗೆ ಕಳಿಸಿಬಿಟ್ರಂತೆ..! ಅದೇನೋ ಮದುವೆಲಿ ವರದಕ್ಷಿಣೆ ದುಡ್ಡು ಕೊಡೋದು ಪೂರಾ ಕೊಟ್ಟಿಲ್ವಂತೆ. ದುಡ್ಡು ಕೊಡೋದು ಇನ್ನೂ ಬಾಕಿ ಇತ್ತಂತೆ. ದುಡ್ಡು ತಕೊಂಡು ಬಾರದಿದ್ರೆ ನೀನು ಈ ಮನೆಗೆ ಬರೋದೆ ಬೇಡಾಂತ ಗೌಡ್ರು ಕಂಡೀಷನ್ ಹಾಕಿದ್ದಾರಂತಕ್ಕ”
ಹಾಗಾದ್ರೆ ಅವಳ ಗಂಡ ಸುಮ್ನಿದ್ನಾ? ಅವ್ನು ಏನೂ ಅನ್ಲಿಲ್ವಾ?”
ಇಲ್ಲಕ್ಕ.. ಗೌಡ್ರು
ಯಾರ ಮಾತನ್ನು ಕೇಳೋರಲ್ಲ. ಏನೋ ಆ ಮನೆ ಹೆಣ್ಣು ಮಕ್ಕಳನ್ನ ದೇವ್ರೇ ಕಾಪಾಡ್ಬೇಕು..” ಹೇಳಿಗೊಂಡು ಒಳ ಹೋತು. ಆನುದೆ ಗೌಡನ ಬಗ್ಗೆ ಆಲೋಚನೆ ಮಾಡಿಗೊಂಡು ಒಳ ಹೋದೆ.
ಗೌಡನ ಸೊಸೆಕ್ಕಳ ಪೈಕಿ ಗೌರಿ ಅಕೇರಿ ಸೊಸೆ. ಸದ್ಯ ಮದುವೆ ಆಗಿ ಮನೆ ತುಂಬಿದ್ದು. ಸದಾ ತೋಟ, ಮನೆ, ಗೆದ್ದೇಳಿ ಗಾಣದೆತ್ತಿನಾಂಗೆ ಮೌನವಾಗಿ ಗೆಯಿಕ್ಕೊಂಡಿತ್ತು.
ವರದಕ್ಷಿಣೆ ಹೇಳಿ ಎರಡು ಲಕ್ಷ ರುಪಾಯಿ ಗೌರಿಯ ಅಪ್ಪ ಕೊಡುದೋಳಿ ಮಾತಾಗಿತ್ತಡ. ಅಷ್ಟು ಪೈಸೆ ಒಂದರಿಯೇ ಕೊಡ್ಲೆ ಎಡಿಯದ್ದೆ ಅದೆಷ್ಟೋ ರೆಜ ಪೈಸೆ ಬಾಕಿ ಇತ್ತಡ. ಅದರ ತಪ್ಪಲೆ  ಎರಡು ಮೂರು ಸರ್ತಿ ಗೌರಿ ಅಪ್ಪನ ಮನೆಗೆ ಹೋಯಿದಡ. ಅಲ್ಲೆಂತ  ಕಷ್ಟವೊ ಹೋದಷ್ಟು ಸರ್ತಿಯೂ ಗೌರಿ ಬರಿಕೈಲಿ ಬೈಂದು. ಆದರೆ ಈ ಸರ್ತಿ ‌ಬರಿಕೈಲಿ ಬಪ್ಪಾಂಗೆ ಇಲ್ಲೆ. ಪೈಸೆ ತಾರದ್ರೆ ಗೌರಿಗೆ ಅಪ್ಪನ ಮನೆ ಶಾಶ್ವತ!
ಒಳುದ ಎರಡು ಸೊಸೆಕ್ಕೊ ಗೌಡಂಗೆ ತಗ್ಗಿ ಬಗ್ಗಿಯೇ ನಡೆತ್ತವು. ಆದರೆ ಮೂರ್ನೆ ಸೊಸೆ ರೇಣುಕ ಮಾತ್ರ ರೆಜ ಜೋರು! ಗೌಡನ ಅನ್ಯಾಯವ ಎಲ್ಲ ಅದು ಸಹಿಸಿಗೊಂಡಿತ್ತಿಲ್ಲೆ. ವಿದ್ಯಾವಂತೆ! ಬುದ್ಧಿವಂತೆ. ಮಾವನ ಒರಟುತನಕ್ಕೆಲ್ಲ ಸೊಪ್ಪು ಹಾಕಿಗೊಂಡಿತ್ತಿಲ್ಲೆ.
ಸದಾ ಮಾವ ಸೊಸೆಯ ಒಳ ಶೀತಲ ಯುದ್ಧ ನಡಕ್ಕೊಂಡೇ ಇತ್ತು. ಗೌಡ ಎಂತಾದರೂ ಹೇಳಿದರೆ ಅದು ಹೇಳುವ ಬುದ್ದಿವಾದಂಗೊಲ್ಲ ಹಿಡಿಸದ್ರೆ ರೇಣು ಕೂಡ್ಲೇ ಎದುರುತ್ತರ ಕೊಟ್ಟುಗೊಂಡಿತ್ತು. ಕ್ಯಾರೇ ಮಾಡಿಗೊಂಡಿತ್ತಿಲ್ಲೆ. ಹಾಂಗೇಳಿ ಗೌಡ ಏನೂ ಸೊಸೆಗೆ ಹೆದರಿಗೊಂಡಿತ್ತಿಲ್ಲೆ. ಮುಲಾಜಿಲ್ಲದ್ದೇ ಅಬ್ಬರಿಸಿಗೊಂಡಿತ್ತು.
ಗೌರಿ ಅಪ್ಪನ ಮನೆಗೆ ಹೋಗಿ ಮೂರು-ನಾಲ್ಕು ತಿಂಗಳೇ ಕಳುದಿರೆಕ್ಕು. ಆ ದಿನ  ಗೌಡನ ಮನೆಂದ ಮತ್ತೆಂತದೋ ಗಲಾಟೆ. ಕೂಗುದು ಎಲ್ಲ ಕೇಳಿಗೊಂಡಿತ್ತು. ವಿಚಾರುಸುಲೆ ಕೆಲಸದ್ದೂ ಬೈಂದಿಲ್ಲೆ ಆ ದಿನ. ಆರನ್ನೊ ವಿಚಾರಿಸಿರೆ ವಿಷಯ ಗೊಂತಾತು. ರೇಣು ಆತ್ಮಹತ್ಯೆ ಮಾಡಿಗೊಂಡಿತ್ತಡ!  ನಿನ್ನೆ ಹೊತ್ತಪಗ ಗುಡ್ಡೆಂದ ದನಗಳ ಎಬ್ಬಿಗೊಂಡು ಬಪ್ಪಗ ಅಲ್ಲೆ ಹತ್ತರೆ ಇತ್ತ ಕೆರೆಗೆ ಕಾಲು ಜಾರಿ ಬಿದ್ದದಡ! ಅದರ ಗೆಂಡ ಬೇರೆ ಊರಿಂಗೆ ಕೆಲಸದ ಮೇಲೆ ಹೋದ್ದು ಬಪ್ಪಗಳೇ ಕಸ್ತಲೆ ಆಗಿತ್ತಡ. ಇರುಳು ಉದಿಯವರೆಗೆ ಹುಡಿಕಿರೂ ರೇಣು ಸಿಕ್ಕಿದ್ದಿಲ್ಲೆ. ಉದಿಯಪ್ಪಗ ರೇಣುವಿನ ಗೆಂಡ ಕೆರೆ ಹತ್ತರೆ ಬಂದು ನೋಡುವಾಗ ರೇಣುವ ಹೆಣ ಕೆರೆಲಿ ತೇಲಿಗೊಂಡಿತ್ತಡ.
ಆದರೆ ನಡದ ವಿಷಯವೇ ಬೇರೆ. ಆ ದಿನ ರೇಣು ಗೆಂಡ ಹಳ್ಳಿಗೆ ಹೋದ ಮೇಲೆ ರೇಣುಗುದೇ ಅದರ ಮಾವಂಗುದ ಎಂತದೋ ವಿಷಯಕ್ಕೆ ಜಗಳ ಆತಡ.. ಹೊತ್ತೋಪಗ ರೇಣು, ದನಗಳ ಅಟ್ಟಿಗೊಂಡು ಬಪ್ಪಲೆ ಗುಡ್ಡೆಗೆ ಹೋಗಿತ್ತಡ.  ಅದರ ಹಿಂದಂದಲೇ ಹೋದ ಗೌಡ ಅದರ ಅಡ್ಡಕಟ್ಟಿ, ಅದರ ನೆಲಕ್ಕೆ ನೂಕಿಹಾಕಿ, ಅದರ ಬಾಯಿಗೆ ವಸ್ತ್ರ ಚಳ್ಳಿತ್ತಡ. ಮತ್ತೆ ಅದರ ಕೊರಳೊತ್ತಿ ಎಲ್ಲ ಬಲ ಹಾಕಿ ಒತ್ತಿ ಹಿಡ್ದಡ. ಜೀವ ಒಳಿಸಿಗೊಂಬಲೆ ರೇಣು ಬೇಕಾದಷ್ಟು ಕೊಸರಾಡಿತ್ತು. ಆದರೆ ಗೌಡನ ಭೀಮಬಲದ ಮುಂದೆ ರೇಣುವ ಯಾವ ಪ್ರತಿಭಟನೆಯೂ ನಡದ್ದಿಲ್ಲೆ. ರೆಜ ಹೊತ್ತು ಒದ್ದಾಡಿದ ರೇಣು ಜೀವ ನಿಧಾನಕ್ಕೆ ತಣ್ಣಂಗಾತು. ಆಮೇಲೆ ಅಲ್ಲೇ ಹತ್ತರೆ ಇದ್ದ ನೀರು ತುಂಬಿದ ಕೆರೆಯ ಹತ್ತರಂಗೆ ರೇಣುವ ಹೆಣವ ಹೇಂಗೋ ದರದರನೆ  ಎಳಕ್ಕೊಂಡು ತಂದು, “ಎನ್ನ ಸಾವಿಂಗೆ ಆರೂ ಕಾರಣರಲ್ಲ.. ಎನ್ನ ಗೆಂಡ ಮಾವಂಗೆ ತೊಂದರೆ ಕೊಡೆಡಿ..” ಹೇಳಿ ಅದು ಮೊದಲೆ ಬರದು ಮಡುಗಿದ ಕಾಗದದ ತುಂಡಿನ ಒಂದು ಪ್ಲಾಸ್ಟಿಕ್ ತೊಟ್ಟೆಲಿ ಹಾಕಿ ಅದರ ಮಡಿಸಿ ರೇಣುವ ಶವದ ಕೈ ಒಳ ಚಳ್ಳಿ ಗಟ್ಟಿಯಾಗಿ  ಮುಚ್ಚಿತ್ತಡ. ಮತ್ತೆ ಎನ್ನ ಕೆಲಸವೆಲ್ಲ ಆರೂ ನೋಡಿದ್ದವೇಲ್ಲೇಳಿ ನಿಗಾಂಟಾದ ಮೇಲೆ, ರೇಣುವ ಶವವ ದರದರನೇ ಎಳಕೊಂಡು ಬಂದು ಕೆರೆಗೆ ತಳ್ಳಿತ್ತಡ. ಮತ್ತೆ ಮೈ ಕೈ ಎಲ್ಲಾ ಲಾಯ್ಕಲ್ಲಿ ಕುಡುಗಿಗೊಂಡು ಎಂತದೂ ನಡದ್ದೇ ಇಲ್ಲೆ ಹೇಳುವಾಂಗೆ ಏದುಸಿರು ಬಿಟ್ಟುಗೊಂಡು ತುರುತುರುಲ ಓಡಿತ್ತಡ. ಇದೆಷ್ಟು ಎನಗೆ ಆರಿಂದಲೋ ಗೊಂತಾದ ವಿಷಯ. ಅಂತೂ ರೇಣುವ ಮುಗ್ಧ ಜೀವ ಅನ್ಯಾಯವಾಗಿ ಬಲಿ ಆತು.. ಇತ್ಲಗಿ ಗೌರಿಯ ಬದುಕುದೇ ಕಮರಿ ಹೋತು.
ಕಾಲ ಕಷ್ಟ, ಸುಖ, ಸಂಕಟ, ಬೇಸರಿಕೆ-ಯಾವುದನ್ನು ಲೆಕ್ಕಕ್ಕೆ ತೆಕ್ಕೊಳದ್ದೆ ಮುಂದೋಡಿಗೊಂಡೇ ಇತ್ತು. ಈ ಜಂಜಾಟಂಗಳ ಎಡೆಲಿ ನೀಲನ ಡಿಗ್ರಿಯೂ ಮುಗುದತ್ತು. ಡಿಗ್ರಿ ಮುಗುದ ಒಂದು ತಿಂಗಳಿಲಿ ನೀಲನ ಮದುವೆ ನಿಗಾಂಟಾತು. ಹುಡುಗ ಅಬ್ಬೆ ಅಪ್ಪಂಗೆ ಒಬ್ಬನೇ ಮಗಡ. ಹುಡುಗ ನೋಡ್ಲು ಚಂದ ಇತ್ತಡ. “ದೇವರೇ ಸದ್ಯ! ಈ  ಹುಡುಗಿ ಆದರೂ  ಚೆಂದಕ್ಕಿರಲಪ್ಪ..!” ಹೇಳಿ ಆನು ದೇವರತ್ರೆ ಹತ್ತು ಸರ್ತಿ ಕೇಳಿಗೊಂಡಿಪ್ಪೆ…
ಆದರೆ ಎಂಗಳೆಲ್ಲಾ ನಂಬಿಕೆ ಸುಳ್ಳಾಪ್ಪಾಂಗೆ ಆ ದಿನ ಎಂಗೊಗೆಲ್ಲ ದೊಡ್ಡ ಆಘಾತ ಕಾದಿತ್ತು! ನೀಲಾ ಅವರ ಮನೆಯ ಹಿತ್ತಿಲಿನ ಬೀಜದ ಮರಕ್ಕೆ ಕೊರಳಿಂಗೆ ಬಳ್ಳಿ ತೆಕೊಂಡತ್ತು. ವಿಷಯ ಗೊಂತಾಗಿ ಎಂಗೊಲ್ಲ ಒಂದೇ ಪೆಟ್ಟಿಂಗೆ ನೀಲನ ಮನೆ ಹತ್ತರೆ ಓಡಿದೆಯ.
ನೋಡಿದರೆ ನೀಲನ ಹೆಣ ಮರದ ಗೆಲ್ಲಿಲಿ ನೇತುಗೊಂಡಿತ್ತು. ನೀಲನ ದೇಹಲ್ಲಿ ಒಳ ಉಡುಪು ಬಿಟ್ಟರೆ ಬೇರೆ ವಸ್ತ್ರ ಇತ್ತಿಲ್ಲೆ. ಅದರ ಒಳಲಂಗ ಪ್ರಾಣ ಹೋಪ ಸಂಕಟಕ್ಕೆ ಮೂತ್ರಶಂಕೆಂದ ಇಡೀ ಚೆಂಡಿಯಾಗಿತ್ತು. ಅದರ ಚೆಂದದ ರಾಶಿ ಕೂದಲು ಅಸ್ತವ್ಯಸ್ತವಾಗಿ ಮೇಲಂಗೆ ಕಟ್ಟಿಗೊಂಡಿತ್ತು. ಅದರ ಸೌಮ್ಯವಾದ  ಮೋರೆ ಇಡೀ ಕಪ್ಪಾಗಿ ವಿಕಾರ ಆಗಿತ್ತು.
ಎನಗಿನ್ನು ಹೆಚ್ಚುಹೊತ್ತು ಅಲ್ಲಿ ನಿಂದರೆ ದುಃಖ ತಡವಲೆಡಿಯಾಳಿ ಓಡೋಡಿ ಮನೆಗೆ ಬಂದು ಸೋಪಲ್ಲಿ ಕೂದೆ. ಎಂಗಳ ಏರಿಯಾಲ್ಲೆಲ್ಲಾ ಒಂಥರಾ ಸ್ಮಶಾನ ಮೌನ. ಎಲ್ಲೋರ ಮನಸಿಲಿಯೂ  ದುಃಖ ಮಡುಗಟ್ಟಿತ್ತು.
ರೆಜ ಹೊತ್ತಿಲಿ ಗೌಡನ ಮನೆ ಮುಂದೆ ಪೋಲೀಸು ಜೀಪು ಆಂಬುಲೆನ್ಸ್ ಎಲ್ಲಾ ಹಾಜಿರು. ಗೌಡನ ಮನೆಯೋರ ಅಕ್ಕಪಕ್ಕದ ಮನೆಯವರ ವಿಚಾರಣೆ, ಪೋಸ್ಟ್ ಮಾಟರ್ಮ್ ಎಲ್ಲಾ ಮುಗುದು ನೀಲನ ದಹನ ಕಾರ್ಯ ಮುಗಿವಗ ಗಂಟೆ ನಾಲ್ಕು ಆಗಿತ್ತು.
ಎಂತ ವಿಚಿತ್ರ ಹೇಳಿದರೆನೀಲನ ಸುಟ್ಟು, ಅದರ ಕಾಷ್ಟದ ಕಿಚ್ಚು ನಂದೆಕ್ಕರೆ ಗೌಡ ಹಾಲು ತೆಕ್ಕೊಂಡು ಡೈರಿಗೆ ಹೆರಟಿದು. ರೆಜವೂ ಕರುಣೆ ಇಲ್ಲದ್ದ ಗೌಡನ ಹುಂಬತನಕ್ಕೆ ನೆಗೆಮಾಡೆಕ್ಕೊ ಕೂಗೆಕ್ಕೊ ಎಂತದೂ ಗೊಂತಾಗದ್ದೆ ಎಂಗೊಲ್ಲ ಮಂಕಾಗಿತ್ತಿದ್ದೆಯ. ಎಂತ ಹೇಳಿದರೆ, ಅದರ ಎಲ್ಲ ತಪ್ಪನ್ನು ಅದರ ಪೈಸವೇ ಮುಚ್ಚಿ ಹಾಕಿದ್ದು.
ನೀಲಾ ಮಣ್ಣಿಲಿ ಮಣ್ಣಾಗಿ ಅದೆಷ್ಟೊ ದಿನ ಕಳದರೂ ಎನಗೆ ಮಾತ್ರ ಅದರ ಮರವಲೇ ಆಯಿದಿಲ್ಲೆ. ಇರುಳು ಮನಿಗಿದರೆ ನೀಲನ ಕಪ್ಪು ಕನಿಪ್ಪೆಕಟ್ಟಿದ ಮೋರೆಯೇ ಕಂಡು ಗೊಂಡಿತ್ತು. ನೀಲನ ಸಾವು ಆತ್ಮಹತ್ಯೆಯಾ ಅಥವಾ ಕೊಂದದಾದಿಕ್ಕಾ! ಇಡೀ ವಿಚಾರ ತಲೆಲಿ ‌ಸುತ್ತಿಗೊಂಡಿತ್ತು.
ನೀಲಾ ಸತ್ತು ಎರಡು ಮೂರು ತಿಂಗಳು ಕಳುದಿರೆಕ್ಕು. ಎನ್ನ ಅಂದಾಜಿ ಸರಿ ಆಗಿತ್ತು. ಹೇಳಿದರೆ ನೀಲ ಆತ್ಮಹತ್ಯೆ ಮಾಡಿಗೊಂಡದು.. ಅದರ ಹೆತ್ತ ಅಪ್ಪನೇ ಕೊಂದಾಕಿದ್ದು! ಈ ವಿಷಯ ನೀಲನ ಅಣ್ಣ ಹೇಳುವಗ ಎನಗೆ ನಿಜಕ್ಕೂ  ಗೌಡನ ಬಗ್ಗೆ ತುಂಬಾ ಅಸಹ್ಯ ಆಗಿತ್ತು.
ಆ ದಿನ ಗೌಡ ಮಗಳ ಕರಕೊಂಡು ಜ್ಯುವೆಲರಿ ಶಾಪಿಂಗೆ  ಹೋಗಿ, ಮದುವೆಗೆ ಬೇಕಾದ ಚಿನ್ನ ಎಲ್ಲ ತೆಗೆದು, ಚಿನ್ನ, ಒಳುದ ಪೈಸೆ ಎಲ್ಲ ಮಗಳ ಕೈಲಿ ಕೊಟ್ಟು ಮನೆಗೆ ಹೋಗಿ ಇದರೆಲ್ಲ ಅಮ್ಮನತ್ರೆ  ಜಾಗ್ರತೆಲಿ ಕಪಾಟಿಲಿ ಮಡುಗುಲೆ ಹೇಳು. ಎನಗೆ ರೆಜ ಬೇರೆ ಕೆಲಸ ಇದ್ದು; ನೀನು ಹೋಗು ಆನು ಮತ್ತೆ ಬತ್ತೆ ಹೇಳಿ ಮಗಳ ಮನೆಗೆ ಕಳುಸಿತ್ತು.
ನೀಲ ಅಪ್ಪ ಕೊಟ್ಟ ಒಡವೆ, ಪೈಸೆ ಎಲ್ಲ ತೆಕ್ಕೊಂಡು ಮನೆಗೆ ಹೆರಟತ್ತು. ಅದರ ಫ್ರೆಂಡು ಪದ್ಮ ಎದುರೆ ಸಿಕ್ಕಿತ್ತು. ಪದ್ಮನ ಸೊರಗಿದ ಮೋರೆ, ಕೆಂಪಾದ ಕಣ್ಣುಗೊ, ಕೆದರಿದ ಕೂದಲು, ಬಾಡಿಗೊಂಡಿದ್ದ ಗೆಳತಿಯ ವಿಚಾರ್ಸಿತ್ತು. ಪದ್ಮನ ಅಪ್ಪಂಗೆ ಇದ್ದಕ್ಕಿದ್ದಾಂಗೆ ಎದೆ ಬೇನೆ ಸುರು ಆಗಿ ಪದ್ಮ ಅದರ ಆಸ್ಪತ್ರೆಗೆ ಸೇರ್ಸಿದ್ದು.  ಇದ್ದ ಒಬ್ಬ ಅಣ್ಣ ಕೆಲಸದ ಮೇಲೆ ಬೆಂಗ್ಳೂರಿಂಗೆ ಹೋಯ್ದು. ಈ ಪರಿಸ್ಥಿತಿಲಿ ಪದ್ಮನತ್ರೆ ಬಿಡಿಗಾಸು ಇಲ್ಲದ್ದರ ಎಲ್ಲ ಪದ್ಮ ಕೂಗಿಗೊಂಡೆ ವಿವರಿಸಿತ್ತು.ಗೆಳತಿಯ ಸಂಕಟ ನೋಡ್ಲೆ ಎಡಿಯದ್ದೆ ಕೂಡ್ಲೇ ಕೈಲಿಪ್ಪ ಪೈಸವ ತೆಗೆದು ಪದ್ಮಂಗೆ ಕೊಟ್ಟತ್ತು. ಆದರೆ ಮನೆಗೆ ಬಂದ ಮೇಲೆ ನೀಲಂಗೆ ತುಂಬಾ ಹೆದರಿಕಪ್ಪಲೆ ಸುರಾತು. ಅಯ್ಯೋ ಹಿಂದೆ ಮುಂದೆ ನೋಡದ್ದೇ ಪದ್ಮಂಗೆ ಪೈಸೆ ಕೊಡ್ಲಾವುತಿತ್ತಿಲ್ಲೆ. ಇನ್ನು ಅಪ್ಪಂಗೆ ಎಂತ ಹೇಳುದು ಇದೇ ಯೋಚನೆಲಿ ನೀಲಂಗೆ ತಲೆ ಚಿಟ್ಟು ಹಿಡಿವಾಂಗೆ ಆತು.
ಗೌಡ ಮನೆಗೆ ಬಪ್ಪಗ ಇರುಳು ಹತ್ತು ಗಂಟೆ ಆಗಿತ್ತು. ಬಂದ ಕೂಡ್ಲೇ ಉಂಬಲೆ ಕೂದು ಮಗಳ ದಿನಿಗೇಳಿತ್ತು. ನೀಲಾ ಹೆದರಿಗೊಂಡೇ ಎದುರೆ ಬಂದು ನಿಂದಿತ್ತು. ಪೈಸದ ಬಗ್ಗೆ ವಿಚಾರಿಸಿಯಪ್ಪಗ ಥರಗುಟ್ಟಿಗೊಂಡೇ ನಡೆದ ವಿಷಯವ ವಿವರಿಸಿತ್ತು. ಮಗಳ ಉದ್ಧಟತನಕ್ಕೆ ಗೌಡನ ಕೋಪ ನೆತ್ತಿಗೇರಿತ್ತು. ಉಂಬಲೆ ಕೂದಲ್ಲಿಂದ ಧಡಕ್ಕನೆ ಎದ್ದು ನಿಂದತ್ತು. ಉಂಬಲೆ ಕೂದ ಮಣೆಯ ತೆಕ್ಕೊಂಡು ಬಾಗಿಲತ್ರೆ ನಿಂದುಗೊಂಡಿದ್ದ ನೀಲನ ಹೊಡೆಂಗೆ ಎಳದ್ದು ಇಡ್ಕಿತ್ತು! ಕಬ್ಬಿಣದಾಂಗಿಪ್ಪ ಹಳೆ ಕಾಲದ ಮಣೆ ಸೀದಾ ಹೋಗಿ ನೀಲನ ಎದೆಗೆ ಹೋಗಿ ಬಡುದತ್ತು. ನೀಲ ಕೀರಿಕುಚ್ಚಿ ಕೂಡ್ಲೇ ನೆಲಕ್ಕೆ ಬಿದ್ದತ್ತು. ಮನೆಯೋರೆಲ್ಲಾ ನೋಡಿಗೊಂಡಿದ್ದಾಂಗೆ ಒಂದೇ ಕ್ಷಣಲ್ಲಿ ಎಲ್ಲಾ ತಣ್ಣಂಗಾಗಿತ್ತು. ನೀಲಾ ಕೊರೊ ಕೊರೋಳಿ ಶಬ್ಧ ಮಾಡಿಗೊಂಡು ಒದ್ದಾಡಿ ಒದ್ದಾಡಿ ಪ್ರಾಣವೇ ಬಿಟ್ಟಿತ್ತು. ಮನೆಯವೆಲ್ಲಾ ಸ್ಥಂಬೀಬಭೂತರಾಗಿ ನೋಡಿಗೊಂಡಿದ್ದಾಂಗೆ ಗೌಡ, ನೀಲನ ಹೆಣದ ಕೊರಳಿಂಗೆ ಅದರ ಸೀರೆಂದಲೆ ಉರುಳು ಹಾಕಿ ಹಿತ್ತಿಲಿನ ಬೀಜದ ಮರಕ್ಕೆ ಹೇಂಗೋ ಎಳಕೊಂಡೋಗಿ ನೇಲ್ಸಿಕ್ಕಿ ಬಂತು. ಈ ವಿಷಯದ ಬಗ್ಗೆ ಆರತ್ತರಾದರೂ ಬಾಯಿ ಬಿಟ್ಟರೆ ನಿಂಗೊಗು ಇದೇ ಗತಿ ಅಕ್ಕೂಳಿ ಹೆದರಿಸಿ ಎಲ್ಲಿಗೊ ಹೋತು. ಅಂತೂ ಇಂತೂ ಇನ್ನು ಹತ್ತು ವರ್ಷ ಬಾಳಿ ಬದುಕೆಕ್ಕಾದ ಆ ಎಳೆ ಜೀವ  ಕಮರಿಹೋತು! ಮುದ್ದು ಹುಡುಗಿಗೆ ಅದರ ಅಪ್ಪನೇ ಮೃತ್ಯು ಆಗಿ ಬಿಟ್ಟತ್ತು. ಎಂತ ವಿಪರ್ಯಾಸ!
ಆ ಕ್ರೂರಿ, ಇದೇ ಅಟ್ಟಹಾಸ ದಬ್ಬಾಳಿಕೆ ಮಾಡಿಗೊಂಡೇ ಬಾಳಿತ್ತು. ಆದರೆ ಮಕ್ಕ ಮೊಮ್ಮಕ್ಕೊ ಆರುದೇ  ಅದರ ಒಟ್ಟಿಂಗೆ ಇರದ್ದೇ ಅವರವರ ದಾರಿ ಹುಡುಕಿಗೊಂಡು ಯಾವಗಲೋ ದೂರ ಹೋಯಿದವು.
ಗೌಡ ಅದು ಮಾಡಿದ ಅತರ್ವಣಂಗೊಕ್ಕೆಲ್ಲ ತಕ್ಕ ಶಿಕ್ಷೆ ಹೇಳುವಾಂಗೆ, ಅಂಗಾಂಗ ಎಲ್ಲ ನಿಷ್ಕ್ರಿಯ ಆಗಿ, ಎರಡು ಮೂರು ವರ್ಷ ಹಾಸಿಗೆಲಿ ನೆಗರಿ ನೆಗರಿ ಮೇಯೆಲ್ಲ ಹುಣ್ಣು ಹುಳುವಾಗಿ ಇತ್ತೀಚಿಗಷ್ಟೇ ಮರಣಿಸಿದ್ದು.ಆದರೆ ಅದರ ಹೆಂಡತಿ ಸುಮತಿ ಮಾತ್ರ ಗೆಂಡ ಮಾಡಿದ ಪಾಪ ಕರ್ಮಂಗೊಕ್ಕೆಲ್ಲಾ ಸಾಕ್ಷಿ ಹೇಳುವಾಂಗೆ, ಮನೋರೋಗಿಯಾಗಿ ಇನ್ನೂ ಆ ಮನೆಲಿ ಸತ್ತೂ ಸತ್ತೂ ಬದುಕುತ್ತಾ ಇದ್ದು.

ವಿಳಾಸ:
ವಿಜಯಲಕ್ಷ್ಮೀ. ಎಲ್. ಭಟ್
W/o. ಲಕ್ಷ್ಮೀಶ ಭಟ್
ಉರಿಮಜಲು ಮನೆ
ಅಂಚೆ ಉರಿಮಜಲು, ಇಡ್ಕಿದು ಗ್ರಾಮ.

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

One thought on “ಕಮರಿದ ಚಿಗುರು-ವಿಜಯಲಕ್ಷ್ಮೀ. ಎಲ್. ಭಟ್

  1. ಅಬ್ಬಾ ಎಂತ ಕ್ರೂರಿ ಗೌಡ.ಮನಸ್ಸಿಂಗೆ ನಾಟುವ ಹಾಂಗೆ ಇದ್ದು ಕತೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×