Oppanna.com

ಒಂದು ಪ್ರಕರಣದ ಸುತ್ತ -೧೦ : ರಮ್ಯ ನೆಕ್ಕರೆಕಾಡು

ಬರದೋರು :   ಶರ್ಮಪ್ಪಚ್ಚಿ    on   23/07/2020    1 ಒಪ್ಪಂಗೊ

ಒಂದು ಪ್ರಕರಣದ ಸುತ್ತ -೧೦

-ರಮ್ಯ ನೆಕ್ಕರೆಕಾಡು

ಶರತ್ಚಂದ್ರ ಬಾಗಿಲು ತೆಗೆದು ಕಾಲು ಹೆರ ಮಡುಗೆಕ್ಕಾರೆ, ಕಾಲಿನ ಬುಡಲ್ಲಿ ಒಂದು ಹೂಗುಚ್ಛ ಮಡಿಕ್ಕೊಂಡಿತ್ತು. ಶರತ್ಚಂದ್ರ ಆ ಬೊಕ್ಕೆಯ ನೋಡಿ ಅತ್ಲಾಗಿತ್ಲಾಗಿ ನೋಡಿದ. ಆನು ಬರೆಕ್ಕಾರೆ ಆರಪ್ಪ ಇದರ ಮಡುಗಿಕ್ಕಿ ಹೋದ್ದು..?? ಹೇಳಿ ಮನಸ್ಸಿಲಿ ಗ್ರೇಶಿಗೊಂಡು, ಆ ಬೊಕ್ಕೆಯ ಬಗ್ಗಿ ತೆಕ್ಕೊಂಬಗ ಅದರಂದ ಒಂದು ಲೆಟರ್ ಕೆಳ ಬಿದ್ದತ್ತು. ಆ ಕೆಳ ಬಿದ್ದ ಲೆಟರನ್ನುದೇ ತೆಕ್ಕೊಂಡು, ಬಾಗಿಲು ಹಾಕಿ ಒಳಂಗೆ ಹೋದ. ಒಳ ಹೋದ ಕೂಡ್ಲೇ ಬೊಕ್ಕೆಯ ಒಂದರಿ ನೋಡಿಕ್ಕಿ ಅಲ್ಲಿಯೇ ಕರೆಲಿ ಮಡುಗಿಕ್ಕಿ, ಆ ಲೆಟರಿನ ಓದುಲೆ ಕೂದ. ಅದರಲ್ಲಿ ಆರು ಬರೆದ್ದು ಹೇಳಿ ಎಂತ ವಿವರಣೆ ಇತ್ತಿಲ್ಲೆ. ಆ ಲೆಟರಿಲಿ ಹೀಂಗಿತ್ತು. ” ಹಲೋ ಮಿಸ್ಟರ್ ಶರತ್ಚಂದ್ರ… ಅಂಜಲಿಯ ನಾಪತ್ತೆ ಪ್ರಕರಣಲ್ಲಿ ನಿನಗೆ ಗೆಲುವು ಖಂಡಿತ ಸಿಕ್ಕುತ್ತಿಲ್ಲೆ.. ಗುಡ್ ಲಕ್ ಆಂಡ್ ಆಲ್ ದ ಬೆಸ್ಟ್..” ಬರೇ ಇಷ್ಟರ ನೋಡಿದ ಕೂಡ್ಲೇ ಶರತ್ಚಂದ್ರಂಗೆ ಈ ವ್ಯಕ್ತಿ ಮಾತ್ರ ಒಳ್ಳೆ ಮಂಡೆ ಓಡ್ಸಿದ್ದು ಹೇಳಿ ಗೊಂತಾತು. ಎಂತಕೇಳ್ರೆ ಆ ಲೆಟರ್ ಕೈಲಿ ಬರೆದಿತ್ತದಲ್ಲ. ನ್ಯೂಸ್ ಪೇಪರಿಂದ ಒಂದೊಂದೇ ಅಕ್ಷರವ ಕತ್ತರ್ಸಿ ಅಂಟಿಸಿ ಕಳ್ಸಿದ್ದಾಗಿತ್ತು. ಶರತ್ಚಂದ್ರಂಗೆ ಆ ಲೆಟರ್ ಬರೆದ್ದು, ಹೆಂಗಸಾ ಅಲ್ಲ ಗಂಡಸಾ ಹೇಳಿ ಒಂದೂ ತಲೆಬುಡ ಅರ್ಥ ಆಯ್ದಿಲ್ಲೆ. ಒಂದು ಕೈಲಿ ಬೊಕ್ಕೆ ಇನ್ನೊಂದು ಕೈಲಿ ಆ ಲೆಟರ್ ಹಿಡ್ಕೊಂಡು ರೂಮಿಲಿ ಹೋಗಿ ಕಣ್ಣು ಮುಚ್ಚಿ ಕೂದ. ಕೂದವಂಗೆ ಒಂದುಜಾತಿ ಅಕ್ಷಿ ಬಪ್ಪಲೆ ಸುರಾತು. ಶರತ್ಚಂದ್ರಂಗೆ ಕೆಲವು ಹೂಗಿನ ಘಾಟು ಅಲರ್ಜಿ. ಆದರೆ ಅವಂಗೆ ಘಾಟು ಬಪ್ಪಾಂಗಿಪ್ಪ ಹೂಗು ಆ ಬೊಕ್ಕೆಲಿತ್ತಿಲ್ಲೆ. ಬರೇ ಜರ್ಬೇರ ಹೂಗು ಮಾತ್ರ ಇತ್ತದು ಅದರಲ್ಲಿ. ಹೂಗಿನ ಘಾಟು ಬಿಟ್ಟರೆ ಕೆಲವು ಸೆಂಟಿನ ಪರಿಮಳವುದೇ ಶರತ್ಚಂದ್ರಂಗೆ ಅಲರ್ಜಿ.  “ಈ ಪರ್ಫ್ಯೂಮ್ ಪರಿಮಳ…” ಹೇಳಿ ಒಂದರಿಯಂಗೆ ಕಣ್ಣು ಬಿಟ್ಟ!! ಶರತ್ಚಂದ್ರ ಆಗ ಬಾಗಿಲು ತೆಗೆದಪ್ಪಗ ಒಂದು ಪರಿಮಳ ಬಂದದು ಅವಂಗೆ ಈಗ ಗೋಷ್ಠಿ ಆತು. ಕೂಡ್ಲೇ ಕೈಲಿಪ್ಪ ಲೆಟರಿನನ್ನುದೇ ಮೂಸಿದ. ಸಣ್ಣಕ್ಕೆ ಅದೇ ಪರಿಮಳ. ಇದೇ ಪರಿಮಳ ಎಲ್ಯಪ್ಪ ಎನಗೆ ಮೂಗಿಂಗೆ ಬಡ್ದು..?? ಹೇಳಿ ಗ್ರೇಶಿಯಪ್ಪಗ ಶರತ್ಚಂದ್ರನ ಬಾಯಿಲಿ ಬಂದ ಹೆಸರು, “ಅಂಜಲಿ..” ಕೂಡ್ಲೇ ನಾಗರಾಜಂಗೆ ಫೋನು ಮಾಡಿ,” ಅಂಜಲಿಯ ನಾಪತ್ತೆ ಕೇಸಿಲಿ ಒಳ್ಳೆ ಕ್ಲೂ ಸಿಕ್ಕುದ್ದು.. ಎಂತಕುದೇ ನೀನು ಇಲ್ಲಿಗೆ ಜೀಪು ತೆಕ್ಕೊಂಡು ಬಾ.. ಇಲ್ಲಿಂದ ಒಟ್ಟಿಂಗೇ ಅಂಜಲಿಯ ಮನೆಗೆ ಹೋಪ..” ಹೇಳಿ ಶರತ್ಚಂದ್ರ ಅಂಜಲಿಯ ಮನೆಗೆ ಹೋಪಲೆ ರೆಡಿ ಆದ.
ಆ ಬೊಕ್ಕೆಯನ್ನುದೆ ಲೆಟರನ್ನುದೇ ತೆಕ್ಕೊಂಡು ಶರತ್ಚಂದ್ರ ನಾಗರಾಜನೊಟ್ಟಿಂಗೆ, ಅಂಜಲಿಯ ಮನೆಗೆ ಹೋದ. ” ಭಾವ… ಇದಾ ಇಂದುದಿಯಪ್ಪಗಳೇ ಆರೋ ಒಂದು ಬೊಕ್ಕೆಯೊಟ್ಟಿಂಗೆ ಲೆಟರ್ ದೆ ತಂದು ಮನೆ ಎದುರೆ ಮಡುಗಿದ್ದವು…” ಹೇಳಿಕ್ಕಿ ಎಲ್ಲವನ್ನುದೇ ವಿವರ್ಸಿದ. ಆದರೆ ಶರತ್ಚಂದ್ರಂಗೆ ಇದು ಅಂಜಲಿದೇ ಪರ್ಫ್ಯೂಮ್ ಹೇಳಿ ಹೇಂಗೆ ಗೊಂತಾತು ಹೇಳುದು ಎಲ್ಲರಿಂಗೂ ತಲೆಗೆ ಹುಳು ಬಿಟ್ಟಾಂಗೆ ಆತು. ನಾಗರಾಜ,” ಸರ್ ನಿಂಗ ಹೇಂಗೆ ಅದು ಅಂಜಲಿದೇ ಪರ್ಫ್ಯೂಮ್ ಹೇಳ್ತ ನಿರ್ಧಾರಕ್ಕೆ ಬಂದದು ??” ಹೇಳಿ ಆಶ್ಚರ್ಯಲ್ಲಿ ಕೇಳಿತ್ತು. ಶರತ್ಚಂದ್ರ,” ಎಂತದೂ ಎನಗೆ ಕನ್ಫರ್ಮ್ ಇಲ್ಲೆ. ಒಂದು ಸಂಶಯ ಅಷ್ಟೆ..! ” ಹೇಳಿಕ್ಕಿ ಅಂದ್ರಣ ಘಟನೆಯ ಬಿಚ್ಚಿ ಮಡುಗಿದ.
ಅಂಜಲಿ ಕಾಣೆ ಆದ ದಿನ ಉದಿಯಪ್ಪಗ ಮನೆಯ ಸುತ್ತಮುತ್ತ ಒಂದರಿ ತನಿಖೆ ಮಾಡುವ ಹೇಳಿ ಶರತ್ಚಂದ್ರ ಮನೆಯ ಹಿಂದಣ ಹೊಡೆಂಗುದೇ ಹೋದ. ಹಿಂದಣ ಹೋಡೆಲಿ ಅಂಜಲಿಯ ಕೋಣೆಯ ‌ಕಿಟಕಿ ಇಪ್ಪದು. ಒಂದರಿ ಕಿಟಕಿಂದ ಬಗ್ಗಿ ನೋಡಿದ. ಸಣ್ಣಕ್ಕೆ ಸೆಂಟಿನ ಘಾಟು ಮೂಗಿಂಗೆ ಬಡುದತ್ತು. ಹಾಂಗಾಗಿ ಅಲ್ಲಿ ಅಕ್ಷಿ ಬಪ್ಪಲೆ ಸುರಾತು. ಹಾಂಗಾಗಿ ಶರತ್ಚಂದ್ರಂಗೆ ಅದು ಅಂಜಲಿಯ ‌ಪರ್ಫ್ಯೂಮ್ ಆದಿಕ್ಕು ಹೇಳ್ತ ಸಂಶಯ ಬಂದದು. ಇದರ ಎಲ್ಲಾ ಕೇಳಿ ಕೇಶವ ಕೂಡ್ಲೇ, “ಅಂಜಲಿ ಹೀಂಗೆ ಪರಿಮಳ ಬಪ್ಪಾಂಗಿಪ್ಪದರ ಎಲ್ಲಾ
ಹಾಕಿಗೊಂಡಿತ್ತಿಲ್ಲೆ.. ಎಂಗಳುದೇ ಉಪಯೋಗ್ಸುತ್ತಿಲ್ಲೆಯ ಭಾವ..” ಹೇಳಿದ. ಶರತ್ಚಂದ್ರ,” ಹ್ಞೇಂ… ಅಂಬಗ ಇಲ್ಲಿಗೆ ಬೇರೆ ಆರು ಬೈಂದವು..?? ನಾಗರಾಜ.. ಬಾ ಒಂದರಿ ಅಲ್ಲಿ ಹೋಗಿ ಪುನಃ ಎಂತಾರು ಕ್ಲೂ ಸಿಕ್ಕುತ್ತಾ ನೋಡುವ..” ಹೇಳಿಯಪ್ಪಗ ವೀಣಾ,” ಆರಾರು ಬಂದಿಕ್ಕು ಹೇಳ್ರೆ ಅರ್ಥ ಎಂತ.. ದೇವರೆ ಅಂಜಲಿಗೆ ಎಂತ ಆಗಿರದ್ದಾಂಗೆ ನೋಡಿಗೊ..” ಹೇಳಿ ಬಾಯಿ ಮುಚ್ಚೆಕ್ಕಾರೆ ಶಾಂತ ಉಸುಲು ಜೋರು ಜೋರು ಬಿಡ್ಲೆ ಸುರು ಮಾಡಿತ್ತು. ವೀಣಾಂಗೆ ಎಂತ ಆವ್ತ ಇದ್ದು ಹೇಳಿ ತಲೆಗೆ ಹೋಪ ಮೊದಲೇ ಶಾಂತ ಬಡಕ್ಕನೆ ಕೆಳ ಬಿದ್ದತ್ತು. ವೀಣಾ ಕೂಡ್ಲೇ,” ಅತ್ತಿಗೆ… ಅತ್ತಿಗೆ… ಎಂತಾತು.. ಇದಾ ಒಂದರಿ ಇಲ್ಲಿ ಬನ್ನಿ..” ಹೇಳುವಾಗ ಮನೆಯ ಹಿಂದಣ ಹೊಡೆಂಗೆ ಹೋಪಲೆ ಹೆರಟ ಶರತ್ಚಂದ್ರ, ಕೇಶವ, ನಾಗರಾಜ ಮೂರು ಜನವುದೇ ತಿರುಗಿ ಬಂದವು. ಭೋದ ತಪ್ಪಿದ ಶಾಂತನ ಜೀಪಿಲಿ ಕರಕ್ಕೊಂಡು ಎಲ್ಲೋರು ಆಸ್ಪತ್ರೆಗೆ ಹೋದವು. ಆಸ್ಪತ್ರೆಗೆತ್ತುವನ್ನಾರ ವೀಣಾ ಶಾಂತನ ಅಂಗೈಯ, ಪಾದದ ಅಡಿಯ ಪೂರಾ ತಿಕ್ಕಿತ್ತು. ಆಸ್ಪತ್ರೆಗೆ ಹೋದಾಂಗೆ ಡಾಕ್ಟ್ರಕ್ಕ ಶಾಂತನ ಐಸಿಯು ವಿಂಗೆ ಕರಕ್ಕೊಂಡು ಹೋದವು. ರಜ ಹೊತ್ತು ಕಳ್ದಿಕ್ಕಿ ಡಾಕ್ಟ್ರ ಹೆರ ಬಂದು, ” ಎಂತ ಈ ಹೆಮ್ಮಕ್ಕೋಗೆ ಉಂಬಲೆ ತಿಂಬಲೆ ಎಂತ ಕೊಟ್ಟಿದಿಲ್ಲಿರಾ.. ಒಳ್ಳೆತ ವೀಕ್ನೆಸ್ ಇದ್ದು.. ಈಗ ಗ್ಲೂಕೋಸ್ ಕೊಡ್ತಾ ಇದ್ದೆಯಾ.. ಬೋಧ ಬಂದ ಮತ್ತೆ ವಾರ್ಡಿಂಗೆ ಶಿಫ್ಟ್ ಮಾಡ್ತೆಯ. ಮತ್ತೆ ಹೊತ್ತಪ್ಪಗ ಡಿಸ್ಚಾರ್ಜ್ ಮಾಡಿ ಕರಕ್ಕೊಂಡು ಹೋಪಲಕ್ಕು..” ಹೇಳಿದವು. ಶರತ್ಚಂದ್ರ,” ಷೇ.. ಒಂದರ ಮೇಲೊಂದು ಸಮಸ್ಯೆ.. ವೀಣಾ ಇಂದು ಮಧ್ಯಾಹ್ನ ಅಕ್ಕಂಗೆ ಕ್ಯಾಂಟೀನ್ ಊಟ ಎಲ್ಲ ಕೊಡುದು ಬೇಡ.. ಮನಗೆ ನಾಗರಾಜನೊಟ್ಟಿಂಗೆ  ಹೋಗಿ ಊಟ ತಾ..” ಹೇಳಿದ. ವೀಣಾನ ನಾಗರಾಜ ಮನೆಗೆ ಕರಕ್ಕೊಂಡು ಹೋತು.
ವೀಣಾ ಬಪ್ಪಗ ಶಾಂತಂಗೆ ಬೋಧ ಬಂದಿತ್ತು. ವೀಣಾ ಬುತ್ತಿಲಿಪ್ಪ ಹೆಜ್ಜೆಗೆ ಮಜ್ಜಿಗೆದೆ ನಿಂಬೆಹುಳಿ ಉಪ್ಪಿನಕಾಯಿದೆ ಹಾಕಿ ಶಾಂತಂಗೆ ಉಣ್ಸಿತ್ತು. ” ಎಂತ ಅತ್ತಿಗೆ ಇದು.. ಆನು ಅಂದೇ ನಿಂಗಳತ್ರೆ ಹೇಳಿತ್ತಿದೆ, ಹೆಜ್ಜೆ ನೀರು ಬಿಟ್ಟು ಕೂದರೆ ಸಮಸ್ಯೆ ಅಕ್ಕು ಹೇಳಿ.. ಒಂದರಿ ಕೆಮಿಗೆ ಹಾಯಿಕೊಳ್ತಿ. ಮರುದಿನಂದ ಪುನಃ ಮೊದ್ಲಣ ಹಾಂಗೆ.. ಈಗ ಉಂಡಿಕ್ಕಿ ರಜ್ಜೊತ್ತು ಒರಗಿ.. ಮತ್ತೆ ಹೊತ್ತಪ್ಪಗ ಮನೆಗೆ ಹೋಪ” ಹೇಳಿ ವೀಣಾ ಹೇಳಿದ್ದಕ್ಕೆ ಶಾಂತ  ತಲೆ ಆಡ್ಸಿತ್ತು. ‌ಹೊತ್ತಪ್ಪಗಂಗೊರೆಗೆ ಎಲ್ಲೋರು ಆಸ್ಪತ್ರೆಲಿ ಇತ್ತಿದ್ದವು. ಮತ್ತೆ ಆಸ್ಪತ್ರೆಂದ ಶಾಂತನ ಡಿಸ್ಚಾರ್ಜ್ ಮಾಡ್ಸಿ ಕರಕ್ಕೊಂಡು ಜೀಪಿಲಿ ಮನೆಗೆ ಹೋದವು.
ಮನೆಗೆ ಹೋಗಿ ಸೋಫಾಲ್ಲಿ ಕೂಪಗ ನಾಗರಾಜ,” ಆನಂಬಗ ಹೆರಡೆಕ್ಕಾ..??” ಕೇಳಿತ್ತು. ಶರತ್ಚಂದ್ರ,” ಸರಿ.. ಈಗ ಹೆರಡು. ನಾಳೆ ಉದಿ ಆಯ್ಕಾರೆ ಇಲ್ಲಿಗೆ ಬಾ..  ಸಿಕ್ಕಿದ ಕ್ಲೂ ಬಿಡುದು ಬೇಡ. ಒಂದರಿ ಹಿಂದೆ ಹೋಗಿ ಬೇರೆಂತಾರು ಕ್ಲೂ ಸಿಕ್ಕುತ್ತಾ ನೋಡುವ..” ಹೇಳಿದ.
ಮರುದಿನ ಉದಿಯಪ್ಪಗಳೇ ನಾಗರಾಜ ಮನೆಗೆ ಬಂತು. ನಾಗರಾಜ ಬಂದಪ್ಪದ್ದೇ ಎಲ್ಲಾ ಹಿಂದಣ ಹೊಡೆಂಗೆ ಹೋದವು. ಎಲ್ಲರುದೇ ಎಂತಾರು ಸಿಕ್ಕುತ್ತಾ ಹೇಳಿ ಹುಡ್ಕಿದವು. ವೀಣಾ ಶಾಂತನ ಭುಜ ಹಿಡ್ಕೊಂಡು ಅಲ್ಲಿಯೇ ಕರೆಲಿ ನಿಂದತ್ತು. ನಾಗರಾಜ ಅಲ್ಲಿಯೇ ಒಂದು ‌ಹತ್ತು ಅಡಕ್ಕೆ ಸೆಸಿ ಇಪ್ಪ ಜಾಗೆಗೆ ಹೋತು. ಶರತ್ಚಂದ್ರಂಗೆ ಕಿಟಕಿಂದ ರಜ ಈಚೊಡೆಲಿ ನೆಲಕ್ಕಂದ ಸುಮಾರು ಒಂದೂವರೆ ಅಡಿ ಮೇಲೆ ಎಂತದೋ ಮಣ್ಣು ಮಣ್ಣು ಕಂಡಾಂಗಾತು. ಎಂತರಾಳಿ ಸರೀ ನೋಡ್ಲಪ್ಪಗ ನಾಗಾರಾಜ,” ‌ಸಾ….ರ್…. ಒಂದರಿ ಇಲ್ಲಿ ಬಂದು ನೋಡಿ…” ಹೇಳಿ ಎಂತದೋ ಸುಳಿವು ಸಿಕ್ಕಿದಾಂಗೆ ಬೊಬ್ಬೆ ಹೊಡೆದತ್ತು.

ಮುಂದುವರಿತ್ತು >>>>

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

One thought on “ಒಂದು ಪ್ರಕರಣದ ಸುತ್ತ -೧೦ : ರಮ್ಯ ನೆಕ್ಕರೆಕಾಡು

  1. ಸಿ ಐ ಡಿ ಗೆ ಕ್ಲೂ ಸಿಕ್ಕುವ ಸಾಧ್ಯತೆ ಬಗ್ಗೆ ಒಂದು ಕಲ್ಪನೆಯ ಚಂದಕ್ಕೆ ಹೆಣದ್ದು ಲಾಯ್ಕ ಆಯಿದು ! .
    ನೀನು ನೈಜ ಘಟನೆಗಳ ಸಂಗ್ರಹ ಮಾಡಿ ಬರವಲೆ ಪ್ರಯತ್ನ ಮಾಡು (. ಇದು ಯಾವುದೇ ದೋಷ ಕಂಡು ಹೇಳಿದ್ದಲ್ಲ !!.ಹಾಂಗೆ ಮಾಡಿದರೆ ನೀನು ಒಂದು ಬೇಡಿಕೆಯ ಬರಹಗಾರ್ತಿ ಅಪ್ಪಲೆಡಿಗು ಹೇಳ್ತದು ಎನ್ನ ಕಲ್ಪನೆ ಅಷ್ಟೆ)

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×