Oppanna.com

ಕೂವೆ ಹೊಡಿ ಮಾಡ್ತ ಕ್ರಮ…

ಬರದೋರು :   ಬಂಡಾಡಿ ಅಜ್ಜಿ    on   20/02/2011    27 ಒಪ್ಪಂಗೊ

ಬೈಲಿನ ಹೊಡೆಂಗೆ ಬಾರದ್ದೆ ಸುಮಾರು ದಿನ ಕಳಾತು. ‘ಕಡ್ಳೆ ಇಪ್ಪವಕ್ಕೆ ಹಲ್ಲಿಲ್ಲೆ, ಹಲ್ಲಿಪ್ಪವಕ್ಕೆ ಕಡ್ಳೆ ಇಲ್ಲೆ’ ಹೇಳಿ ಹೇಳ್ತಿಲ್ಯೋ.. ಹಾಂಗೆ ‘ಕರೆಂಟಿಪ್ಪಾಗ ಪುರುಸೊತ್ತಿರ, ಪುರುಸೊತ್ತಿಪ್ಪಾಗ ಕರೆಂಟಿರ’. ಎಂತರ ಮಾಡುದು ಬೇಕೆ…
ಹ್ಮ್… ಹೇಳಿದಾಂಗೆ ಓ ಮೊನ್ನೆ ರೆಜ ಕೂವೆ ಹೊಡಿ ಮಾಡಿತ್ತಿದೆ…  ದಣಿಯ ಸಿಕ್ಕಿದ್ದಿಲ್ಲೆ.. ಹೆಗ್ಗುಣ ಬಿಡೆಕ್ಕೇ.. ಉದಾಕೆ ಮಾಟೆ ಮಾಡಿ ಪೂರ ಮುಕ್ಕಿ ಹಾಳು ಮಾಡುತ್ತು… ಸಿಕ್ಕಿದ್ದದರ ಒಕ್ಕಿ ತೆಗದು ಹೊಡಿ ಮಾಡಿದ್ದು… ಸಣ್ಣ ಮಕ್ಕೊಗೆಲ್ಲ ಮಣ್ಣಿ ಮಾಡಿ ಕೊಡ್ಳೆ ಒಳ್ಳೆದಾವುತ್ತಿದಾ… ಕೊರಂತಾಜೆ ಅಕ್ಕಂಗೂ ರಜ ಕೊಟ್ಟುಕಳುಸಿದೆ, ಪುಳ್ಳಿಗೆ ಮಣ್ಣಿ ಮಾಡುಲೆ….

ದೊಡ್ಡವಕ್ಕುದೇ ಹೊಟ್ಟೆಂದ ಹೋಪ ರೋಗ ಬಂದಿಪ್ಪಾಗ, ಇದರ ಮಣ್ಣಿ ತಿಂದರೆ ಒಳ್ಳೆದಾವುತ್ತು… ಒಳ್ಳೆ ತ್ರಾಣ ಬತ್ತು…
ಕೂವೆ ಹೊಡಿ ಮಾಡ್ತ ಕ್ರಮವ ಅಂದೊಂದರಿ ಹೇಳಿದ್ದೆ ಅಲ್ಲದೋ ಆನು…. ಮರದಿದ್ದರೆ ಇಲ್ಲಿ ಓದುಲಕ್ಕಡ, ಗುರಿಕ್ಕಾರ್ರು ಹೇಳಿದವು – (https://oppanna.com/adige/vida-vidada-sendagego)

ಹೇಳಿದಾಂಗೆ ಕೂವೆ ಹೊಡಿಯ ಹಲುವವುದೇ ಆವುತ್ತು… ಆರೋಗ್ಯಕ್ಕುದೇ ಒಳ್ಳೆದಿದಾ… ಒಂದು ಮುಷ್ಟಿ ಹೊಡಿಗೆ ನೀರಾಕಿ ಲಾಯಿಕಕ್ಕೆ ಕರಡುಸುದು.. ನೀರಾಯೆಕ್ಕದು.. ಮತ್ತೆ ಅದರ ಕಾಸುದು.. ಕಾಸುವಾಗ ಒಟ್ಟಿಂಗೆ ಶೆಕ್ಕರೆಯುದೇ ಹಾಕಿಗೊಳೆಕ್ಕು… ಹಸಿ ಮಾಸದ್ದೆ ನೀರು ಆರಿತ್ತು ಹೇಳಿ ಆದರೆ ಮತ್ತುದೇ ರಜ ನೀರು ಹಾಕಿ ಕಾಸಿತ್ತು… ನೀರು ಹೇಳುವಗ ನೆಂಪಾತು…ಓ ಅತ್ಲಾಗಿ ಕೊಡೆಯಾಲದೊಡೆಲಿ ಇಪ್ಪ ಸದ°ನ ಬಾವಿಲಿ ಈಗಳೇ ನೀರು ಆರಿದ್ದಡ! ಎಂತರ ಅವಸ್ಥೆ ಅಂಬಗ ಹೇಳಿ… ಅವರ ಮನೆ ಒತ್ತಕೆ ಅಲ್ಲಿ ಎಲ್ಲಿಯೋ ಬೋರುವೇಲು ತೆಗದ್ದವಡ.. ಹಾಂಗೆ ಬಾವಿನೀರಿನ ಪೂರ ಅದು ಒಳದಿಕ್ಕಂಗೆ ಅರಿಶಿಗೊಂಡಿದೋ ಹೇಳಿ… ಚೆ ಕಷ್ಟಪ್ಪಾ…

ಹ್ಮ್.. ಈಗ ಹಲುವಕ್ಕೆ ಬಪ್ಪೊ…ಹಸಿಮಾಸಿ ಬೇವಲಪ್ಪಾಗ ಅದಕ್ಕೆ ತುಪ್ಪ ಹಾಕೆಕ್ಕು… ಮತ್ತೆ ಒಂದು ರೆಜ ಏಲಕ್ಕಿ ಗುದ್ದಿ ಹಾಕಿರಾತು ಪರಿಮ್ಮಳಕ್ಕೆ… ಓ ಮೊನ್ನೆ ಏಲಕ್ಕಿ ಗುದ್ದುತ್ತ ಕಲ್ಲು ತೆಕ್ಕೊಂಡು ಬಯಿಂದು ಒಪ್ಪಕ್ಕ… ಕಡವ ಕಲ್ಲಿನ ಪುಳ್ಳಿಯ ಹಾಂಗೆ ಇಪ್ಪಂತದ್ದು.. ಸಣ್ಣಕೆ… ಎನಗ ಎಲೆಡಕ್ಕೆ ಗುದ್ದಲುದೇ ಅಕ್ಕು ಹೇಳಿ ಕಂಡತ್ತು.. ಮತ್ತೆ ಅದರಲ್ಲಿ ಏಲಕ್ಕಿ ಗುದ್ದಿರೆ ಏಲಕ್ಕಿಯ ಪರಿಮ್ಮಳವೇ ಗೊಂತಾಗ ಹೇಳಿಗೊಂಡು ಪುಳ್ಳಿ ಬೇರೆ ತಂದು ಕೊಟ್ಟತ್ತದ…
ಹ್ಮ್ ಅದಿರಳಿ… ಈಗ ಹಲುವ ಆತನ್ನೆ… ಇದು ಗಟ್ಟಿ ಹಲುವ ಅಲ್ಲ, ಹಾಲ್ಬಾಯಿಯ ಹಾಂಗೆ ಅಪ್ಪಂತಾದ್ದು… ಲಾಯಿಕಾವುತ್ತು ತಿಂಬಲೆ…
ಹಲುವಕ್ಕೆ ಬಣ್ಣ ಬರೇಕಾರೆ ರಂಗಿನ ಹೊಡಿ ಹಾಕುಲೂ ಅಕ್ಕು ರೆಜ…

ಕಳುದ ವರುಷ ಕೂವೆ ಹೊಡಿ ಮಾಡುವಾಗ ಪಟ ತೆಗದಿತ್ತಿದಿಲ್ಲೆ… ಈ ಸರ್ತಿ ಪುಳ್ಳಿ ಮೊಬಾಯಿಲಿನ ಕೇಮರಲ್ಲಿ ಕೊಡಿಯಂದ ಕಡೆಂಗೊರೆಗೆ ಎಲ್ಲ ಪಟ ತೆಗದ್ದು… ಕೊಡೆಯಾಲದ ಹೊಡೆಲಿಪ್ಪ ಪುಳ್ಯಕ್ಕೊಗೆ ಎಲ್ಲ ಕೂವೆ ನೋಡಿ ಗೊಂತಿದ್ದೋ ಇಲ್ಲೆಯೋ… ಕೂವೆ ಗೆಂಡೆಯ ಪಟವುದೇ ಇದ್ದು… ಹೊಡಿ ಮಾಡ್ತ ಕ್ರಮದ ಪಟವುದೇ ಇದ್ದು… ಪುರುಸೊತ್ತಿಲಿ ಕೂದಂಡು ಆಲ್ಬಾಮು ನೋಡಿಕ್ಕಿ ಆತೊ…

ನಿಂಗಳುದೇ ಕೂವೆ ಹೊಡಿ ಮಾಡಿಮಡಗಿ… ರಜ ಗುರುಟಟೆ ಕೆಲಸ ಆದರುದೇ ಮಾಡಿರೆ ಒಳ್ಳೆದು… ಮಕ್ಕೊಗೂ, ದೊಡ್ಡವಕ್ಕೂ ಉಪಯೋಗ ಅಪ್ಪಂತದ್ದೇ ಅಲ್ಲದೋ….

27 thoughts on “ಕೂವೆ ಹೊಡಿ ಮಾಡ್ತ ಕ್ರಮ…

  1. ಹರೇ ರಾಮ ಅಜ್ಜಿ,

    ನಿಂಗೋ ಬೈಲಿಂಗೆ ಶುದ್ದಿ ಹೇಳುಲೇ ಬಾರದ್ದೆ ಸುಮಾರು ಸಮಯ ಆತು… ಏಕೆ ಬತ್ತಿಲ್ಲಿ? ಮೊನ್ನೆ ಎನ್ನ ೫ ತಿಂಗಳ ಮಗಳಿಂಗೆ ಶೀತ ಜ್ವರ ಬಂತು… ಅಮೃತ ಬಳ್ಳಿ ಕಷಾಯ ಕುಡಿಷಿದೆ… ಈಗ ಚೂರು ಕಪ್ಹ ಇದ್ದು… ಸಾಂಬ್ರಾಣಿ, ಜೇನು ಕೊಡುತ್ತಾ ಇದ್ದೆ. “ಓಹೋಹೋ!! ಮಗಳಿಂಗೆ ಜ್ವರ ಬಂದಪ್ಪಗ ಈ ಬಂಡಾಡಿ ಅಜ್ಜಿಯ ನೆನಪಾತು…” ಹೇಳಿ ಬಯ್ಯೇಡಿ… ಇಷ್ಟು ಸಮಯ ಬೈಲಿಂಗೆ ಬಪ್ಪಲೆ ಪುರುಸೊತ್ತು ಆಗಿಗೊಂಡು ಇತ್ತಿಲ್ಲೇ… ಸಾಫ್ಟ್ ವೇರ್ ಹೇಳಿಗೊಂಡು ಸುಮಾರು ಸಮಯ ಹಾಳು ಮಾಡಿದೆ… ಈಗ ‘ಹರೇ ರಾಮ’ದ ಪ್ರಭಾವಂದ ಹಾಂಗೂ ಮಗಂಗೆ ಪೇಟೆ ಮದ್ದುಗಳ ಕುಡಿಶಲೆ ಕಷ್ಟ ಪಟ್ಟ ಅನುಭವಗಳಿಂದ ಕಲ್ತುಗೊಂಡಿದೆ… ‘ಅಜ್ಜಿ ಮದ್ದುಗಳೇ ಎಷ್ಟೋ ವಾಸಿ’… ಹೇಳಿ. ಮಕ್ಕಳ ಆದಷ್ಟು ಊರ ಕ್ರಮಲ್ಲಿ ಬೆಳೆಷೆಕ್ಕು ಹೇಳಿ ಆಸೆ… ಆದರೆ ಕ್ರಮಂಗೋ ಜಾಸ್ತಿ ಗೊಂತಿಲ್ಲೇ… ನಿಂಗಳ ಹಾಂಗಿಪ್ಪ ಅನುಭವಸ್ಥರು ಸಹಾಯ ಮಾಡೆಕ್ಕು… ಎನಗೋಸ್ಕರ ಆದರೂ ಬೈಲಿಂಗೆ ಜಾಸ್ತಿ ಬತ್ತಾ ಇರಿ…

    1. ಬೈಲಿಂಗೆ ಬರೆಕ್ಕು ಬರೆಕ್ಕು ಹೇಳಿ ಗ್ರೇಶೊದು ಜಯೊ.. ಬಪ್ಪಲೇ ಆವ್ತಿಲ್ಲೆ. ಈ ಚಳಿಗೆ ಗೆಂಟು ಬೇನೆಗೊ ಎಲ್ಲ ಜಾಸ್ತಿ ಇದಾ.. ಮತ್ತೆ ಪುಳ್ಳಿಗೆ ಪರೀಕ್ಷೆ ಗವುಜಿಯುದೇ.. ಈ ಕರೆಂಟಿನ ಪೆಟ್ಟಿಗೆ ತೆಗದು ಕೊಡೆಕ್ಕನ್ನೆ..
      ಹೇಳಿದಾಂಗೆ ಮಗಳು ಉಶಾರಿದ್ದನ್ನೆ ಈಗ..? ಅಪ್ಪು ಆ ಪೇಟೆ ಮದ್ದು ತಿಂದು ಸುಮ್ಮನೇ ಒಂದಕ್ಕೆ ಮತ್ತೊಂದು ಮಾಡಿಗೊಂಬದು ಎಂತಕೆ.. ನಮ್ಮ ಊರಿನ ನಮ್ಮ ಮನೆಲೇ ಮಾಡುವ ಮದ್ದುಗೊ ಒಳ್ಳೆದು..

      1. ಅಜ್ಜಿಯ ನೋಡಿಯೇ ಧಾರಾಂಗೆ ಖುಷಿ ಆತಿದ… ರಜ್ಜ ಆಗ ಕೂಗಿಗೊಂಡು ಇತ್ತು… ಈಗ ಎಷ್ಟು ಖುಷಿಲಿ ಆಟ ಆಡ್ತಾ ಇದ್ದು ನೋಡಿ…

      2. ಅಜ್ಜಿ… ಒಂದು ವಿಷಯ ಕೆಳುಲೇ ಇದ್ದತ್ತು… ಇತ್ತೀಚಿಗೆ ಮಗಳು ಹೊತ್ತೋಪ್ಪಗಣ ಹೊತ್ತಿಂಗೆ ಮೈ ಎಲ್ಲ ಗಟ್ಟಿ ಮಾಡಿಗೊಂಡು ಗ್ಯಾಸ್ ಆದ ಹಾಂಗೆ ಕೂಗುತ್ತು… ಎಲೋಪತಿಕ್ ದಾಗುಟ್ರಕ್ಕ ಅದಕ್ಕೆ colicaid ಹೇಳಿ ಒಂದು ಮದ್ದು ಕೊಡುತ್ತವು… ಪುಳ್ಳಿಗೆ ಗೊಂತಿಪ್ಪಲೂ ಸಾಕು… ಅದಕ್ಕೆ ಊರ ಮದ್ದು ಎಂತರ ಅಜ್ಜಿ? ಹೊಟ್ಟೆಬೇನೆಗೆ ಗಂಧ ಕೊಟ್ಟರೆ ಆವುತ್ತು ಹೇಳಿ ಚೂರು ಚೂರು ಗಂಧ ಕೊಡುತ್ತಾ ಇದ್ದೆ…

        1. ಇದಾ ಗೇಸಿನ ಉಪದ್ರ ಆದರೆ, ಜೀರಿಗೆ ಕಶಾಯ ತುಂಬಾ ಒಳ್ಳೆದು.
          ಜೀರಿಗೆಯ ಹೊಡಿ ಮಾಡಿ, ನೀರಿಲ್ಲಿ ಕೊದುಶಿ,(ನೀರು ಒಳ್ಳೆತ ಅರುಶಿನ ಆಯೆಕ್ಕು) ಕಶಾಯ ಮಾಡಿ ಕೊಡ್ಲಕ್ಕು.
          ಇನ್ನು ಸಣ್ಣ ಮಕ್ಕೊಗೆ ಹೊಟ್ಟೆಯ ಬೇರೆ ತೊಂದರೆಗೊಕ್ಕೆ- ದಾಳಿಂಬ ಓಡಿನ ಮಜ್ಜಿಗೆ/ಮೊಸರಿಲ್ಲಿ ತಳದು ಅದರ ಕೊಟ್ಟರೆ ಪ್ರಯೋಜನ ಸಿಕ್ಕುತ್ತು.
          ಎರಡೂದೆ ಅನುಭವ ಆಯಿದು.

          1. ತುಂಬಾ ಧನ್ಯವಾದಂಗ ಅಪ್ಪಚ್ಚಿ… ಕೆಲವು ಸರ್ತಿ ಮದ್ದುಗೋ ಗೊಂತಿದ್ದರೂ ಸಮಯಕ್ಕೆ ನೆನಪಾವುತ್ತಿಲ್ಲೇ… ನಿಂಗ ಹೇಳಿದ ಹಾಂಗೆ ಜೀರಿಗೆ ಕಷಾಯ ಮಾಡಿ ಕೊಟ್ಟೆ… ತುಂಬಾ ಉಪಕಾರ ಆತು…

          2. ಇನ್ನೊಂದು ಮದ್ದು ಕೇಳುತ್ತ ಇದ್ದೆ… ಅಜ್ಜಿ/ ಅಪ್ಪಚ್ಚಿ ಅಥವಾ ಅನುಭವ ಇಪ್ಪ ಆರು ಹೇಳಿದರೂ ಅಕ್ಕು… ಗುರಿಕ್ಕಾರ್ರು ಬೈಲು ಧರ್ಮಕ್ಕೆ ಸಿಕ್ಕಿದ್ದು ಹೇಳಿ ಡಾಕ್ತ್ರಿಂಗೆ ಕೊಡುವ ಫೀಸ್ ಎಲ್ಲ ಒಳಿಶಿಗೊಳ್ಳುತ್ತ ಇದ್ದು ಹೇಳಿ ಹೇಳಿದರೆ ಆ ಫೀಸ್ ನ ಅವಕ್ಕೆ ಕೊಡುದು ಹೇಳಿ ಅಂದಾಜಿ ಮಾಡಿದ್ದೆ 🙂

            ಮಗಳ ಕೆಪ್ಪಟೆಲ್ಲಿ ಮಾಂತ್ರ ಸಣ್ಣ ಕೆಂಪು ತೊರಿಗ ಇದ್ದು… ಅದಕ್ಕೆ ಎಲೋಪತಿಕ್ ಮದ್ದು ಆದರೆ valbet cream ಒಳ್ಳೆದಾವುತ್ತು… ಮನೆ ಮದ್ದು ಯಾವುದು ಒಳ್ಳೆದು?

            ನುಸಿ ಕಚ್ಚಿದ್ದಕ್ಕೆ ಆದರೆ ಗಂಧ-ಚಂದನ ಕಿಟ್ಟಿದರೆ ಒಳ್ಳೆದಾವುತ್ತು…

  2. ಅಜ್ಜೀ, ಕೂವೆ ಹೊಡಿ ಮಾಡ್ತದು ಹೇಳಿ ಕೊಟ್ತದು ಲಾಯ್ಕಾಯಿದು. ಶಂಕರ ಮಾವ° ಹೇಳಿದ ಹಾಂಗೆ ಪೇಟೆಲಿ ಸಿಕ್ಕುದರ ಉಪಯೋಗ ಮಾಡ್ಲೇ ಹೆದರಿಕೆ ಆವುತ್ತು.
    ನಮ್ಮಲ್ಲಿ ಮದಲಿಂಗೆ ಈ ಕೂವೆ ಸುಮಾರು ಜನರ ಜೀವನಕ್ಕೆ ಒಂದು ದಾರಿ ಆಗಿತ್ತಡ್ಡ ಅಲ್ಲದಾ ಅಜ್ಜೀ? ಕೇರಳ ಹೊಡೆಲಿ ಈಗಳೂ ಕೆಲವು ಜನ ಕೂವೆಗೆಂಡೆ ಒಕ್ಕಿ ಮಾರಿ ಬದುಕ್ಕುತ್ತವು.

    ಅಜ್ಜೀ, ಕೂವೆಗೆಂಡೆ ಸಿಕ್ಕಿದರೆ ನಿಂಗೊ ಹೇಳಿದ ಹಾಂಗೇ ಹೊಡಿ ಮಾಡಿ ಮಡುಗುತ್ತೆ ಆತೋ!!! ಪುಳ್ಳಿಯ ಒಟ್ಟಿಂಗೆ ಬನ್ನಿ ಒಂದರಿ ಇಲ್ಲಿಗೆದೇ!!

    1. ಅಕ್ಕು ದೇವೀ.. ಪುರುಸೋತಿಲಿ ಬಪ್ಪೊ…

  3. ಕೂವೆ ಮಣ್ಣೀ.. ಕೂವೆ ಮಣ್ಣೀ.. ಕೂವೆ ಮಣ್ಣೀ..
    ಲಲ್ಲ ಲಲ್ಲ ಲಾ..
    ಹೊಡಿ ಎಲ್ಲ ಮಾಡಿ ಆತಲ್ದೋ? ಯೇವಗ ಬರೆಕ್ಕು ಅಜ್ಜಿ ಮನೆಗೆ? 😉

    1. ಉಂಬದು, ತಿಂಬದು, ಬಿಂಗಿ ಮಾಡುದು, ಒರಗುತ್ತದು ಇಷ್ಟೇ ಆತು… ಮೊದಾಲು ಮಾಷ್ಟರಣ್ಣನಲ್ಲಿಗೆ ಹೋಗಿ ನಿನ್ನ ಕಲಿಕೆ ಮುಗಿಶು… ಹತ್ತು ಪಾಟ ಆದ ಮತ್ತೆ ಕೂವೆ ಮಣ್ಣಿ ತಿಂಬಲೆ ಬಂದರೆ ಸಾಕು.. ಎಂತ?

  4. ಅಜ್ಜಿ,ಕೂವೆ ಹೊಡಿ ಮಾಡೊದು ಹೇ೦ಗೆ ಹೇಳಿ ಗೊ೦ತಾತದ.ಗೆ೦ಡೆ ಒಳುಶಿದ್ದಿರೋ?ಬಪ್ಪ ವರುಷ ಹೊಡಿ ಮಾಡುಲೆ ಈಗಳೆ ನಡೆಕ್ಕನ್ನೆಪ್ಪಾ.ಇದರನ್ನೂ ಕೆಡ್ಡಸದ ಸಮಯಲ್ಲಿ ಒಕ್ಕೊದೋ? ಮತ್ತೆ ಅರಶಿನ ಹೊಡಿ ಮಾದುತ್ಸು ಹೇ೦ಗೆ?ಅರಶಿನ ಗೆ೦ಡೆ ಒಕ್ಕಲೆ ಬಾಕಿ ಆಯಿದಿದಾ.

    1. ಜಾಲತಲೇಲಿ ಇಪ್ಪ ತೆಂಗಿನ ಮರದ ಬುಡಲ್ಲಿ ನೆಟ್ಟು ಮಡಗಿದ್ದು…
      ಅರಿಶಿನ, ಶುಂಟಿ, ಕೂವೆ ಎಲ್ಲವುದೇ ಸಾಮಾನ್ಯ ಒಂದೇ ಸಮಯಲ್ಲಿ ಒಕ್ಕುದು.. ಅದರ ಸೆಸಿಗೊ ಸಾಯಿತ್ತದ…
      ಅರಿಶಿನ ಹೊಡಿ ಮಾಡುಲೆ, ಅದರ ಚೆಂದಕೆ ತೊಳದು ಸಣ್ಣಕೆ ತೆಳೂವಿಂಗೆ ಕೊರದು ಒಣಗುಸುದು.. ಸರೀ ಒಣಗಿದ ಮತ್ತೆ ಹೊಡಿ ಮಾಡ್ತದು.. ರಜಾ ಸೆಕೆ ಬರುಸಿಯುದೇ ಒಣಗುಸಿದರೆ ಅಕ್ಕು.. ಹಾಂಗೆ ಮಾಡಿದರೆ ಬಣ್ಣ ರಜ ಬದಲುತ್ತು ಹೊಡಿದು..
      ಒಣಗುಸಿ ಮಡುಗಿದ ಅರಿಶಿನ ತುಂಡುಗಳ ಕೆಂಡಕ್ಕೆ ಹಾಕಿ ಹೊಗೆ ಎಳದರೆ ಶೀತಕ್ಕೆಲ್ಲ ಲಾಯಿಕಾವುತ್ತು…
      ಹಾಂಗೆ ನೋಡಿದರೆ ಉಪ್ಪಿನಕಾಯಿಗೆ ಪೇಟೆಂದ ತಂದ ಹೊಡಿಂದಲೂ ಮನೆಲೇ ಮಾಡಿದ ಹೊಡಿ ಹಾಕಿದರೆ ಒಳ್ಳೆದು.. ಪರಿಮ್ಮಳವುದೇ, ಆರೋಗ್ಯವುದೇ…
      ನೆನಪ್ಪು ಮಾಡಿದ್ದದು ಒಳ್ಳೆದಾತು ಅಣ್ಣೊ…

  5. ಕೂವೆ ಹೇಳಿದರೆ ಸಸ್ಯಶಾಸ್ತ್ರಲ್ಲಿ-Curcuma angustifolia ROXB ಹೇಳಿ ಹೆಸರು.
    ಆರಾರೂಟ್-arrowroot ಹೇಳಿದರೆ-Maranta arundinaceae (LINN)
    ಮರಗೆಣಸು-Tapioca ಹೇಳಿದರೆ-Manihot utilissima (POHL)
    ಈ ಮೂರೂ ಇಂದು ಅಂಗಡಿಗಳಲ್ಲಿ ಕೂವೆಹೊಡಿ/ಆರಾರೂಟ್ ಹೊಡಿ ಹೇಳಿ ಮಿಕ್ಸ್ ಮಾಡಿ ಮಾರುತ್ತವು.ಆಯುರ್ವೇದದ ಪ್ರಕಾರ ಆರಾರೂಟ್/ಮರಗೆಣಸಿನ ಹೊಡಿಗೊ ತುಂಬ ಉಷ್ಣ/ಪಿತ್ತಕಾರಕೊಂಗೊ,ಆದರೆ ಕೂವೆಹೊಡಿ ಮಾತ್ರ ತುಂಬ ತಂಪು(ಸುವರ್ಣಿನಿ ಅಕ್ಕನ ಹತ್ರೆ ಕೇಳಿ,ಬಯಲಿನ ಕೂಸುಗೊಕ್ಕು/ಹೆಮ್ಮಕ್ಕೊಗು ತುಂಬ ಯೂಸ್ ಫ಼ುಲ್).ಕೂವೆಹೊಡಿ ಕೆಜಿಗೆ ೧೦೦-೧೨೦ ರೂಪಾಯಿ ಆದರೆ ಆರಾರೂಟ್/ಮರಗೆಣಸಿನ ಹೊಡಿ ಕೆಜಿಗೆ ೨೫-೩೦ ರೂಪಾಯಿ ಮಾತ್ರ,ಆದ ಕಾರಣ ಈ ಮಿಕ್ಸ್ ಮಾಡಿ ಲಾಭ ಹೊಡವ ವ್ಯಾಪಾರ.ಬಂಡಾಡಿ ಅಜ್ಜಿ ಪುಳ್ಳಿಗೆ ಹೇಳಿ ಅಟ್ಟಲ್ಲಿ ಕಟ್ಟಿಮಡುಗದ್ದೆ ಬಯಲಿಂಗೆ ಕೊಡ್ತರೆ ಎನಗೆ ೨ಕೆಜಿ ಕೂವೆ ಹೊಡಿ ಬೇಕಿತ್ತು.

    1. { ಕೊಡ್ತರೆ ಎನಗೆ ೨ಕೆಜಿ ಕೂವೆ ಹೊಡಿ ಬೇಕಿತ್ತು }
      ಹೋ! ಬಂಡಾಡಿಪುಳ್ಳಿಗೆ ಅಂತೂ ಕೈಗೆ ಸಿಕ್ಕಿದ್ದು ಬಾಯಿಗೆ ಸಿಕ್ಕಿದ್ದಿಲ್ಲೆ, ಪಾಪ!!
      ಶಂಕರಮಾವ, ಎಲ್ಲ ತೆಕ್ಕೊಂಡೋಗಿ! ಲಾಯಿಕಾವುತ್ತು.

      1. ಅಪ್ಪಪ್ಪು ಲಾಯಿಕಾವುತ್ತು… ಶಂಕರಣ್ಣಂಗೆ ಕೊಡುವೊ..
        ಹಲುವ ಮಾಡಿದರೆ ನಿನಗೆ ಮಾತ್ರ ಕೊಡುಲಿಲ್ಲೆ.. ನೋಡೊ…

    2. ಓ ಕೂವೆಯ ಇಂಗ್ಳೀಶಿಲಿಯುದೇ ಹೇಳುತ್ತವೋ…
      ಎರಡು ಕೇಜಿ ಮಾಡ್ತಷ್ಟೆಲ್ಲ ಕೂವೆ ಎಲ್ಲಿದ್ದು ಬೇಕೆ… ಪೂರ ಹೆಗ್ಣ ಒಕ್ಕಿ ಹಾಳುಮಾಡುತ್ತು…
      ಬಂಡಾಡಿ ಹೊಡೇಂಗೆ ಬಪ್ಪಲಿದ್ದರೆ ತೆಕ್ಕೊಂಡೋಪಲಕ್ಕದ ರಜ್ಜ…

  6. ಅಜ್ಜಿ, ಎನ್ನ ಕೆಮಿ ಹಿ೦ಡೆಡಿ.. ಮೊದಲೇ ಹೇಳಿಕುತ್ತೆ… 😉
    ಅ೦ಬಗ, ಕೂವೆಗೆಂಡೆ ಒಕ್ಕುದು ಕತ್ತಿಲಿಯೋ.. ಕುಟ್ಟಾರೆ ಆಗದೋ??? 😀

  7. ಧನ್ಯವಾದಂಗೊ ……. ತಿಳಿಶಿಕೊಟ್ಟದ್ದಕ್ಕೆ ………………. ಗಣೇಶ ಭಾವ …………….

  8. ಕೂವೆಗೆ ಮಲಯಾಳಲ್ಲಿಯುದೆ ‘ಕೂವ / ಕೂವಕ್ಕಿಳಙ್’ (കൂവ) ಹೇಳಿಯೇ ಹೇಳ್ತವು. ಆದರೆ ಹೆಚ್ಚಿನ ಈಗಾಣ ಮಲಯಾಳಿಗೊಕ್ಕುದೆ ಇದು ಗೊ೦ತಿಲ್ಲೆ. ಬೇರೆ ಎ೦ತಾರು ಹೇಳ್ತವೋ ಗೊ೦ತಿಲ್ಲೆ. ಗೊ೦ತಾದರೆ ಹೇಳ್ತೆ ಆತಾ..

  9. ಕೂವೆ ಹೊಡಿಗೆ ಮಳಯಾಳಲ್ಲಿ ಎಂತ ಹೇಳ್ತವು ಹೇಳಿ ಆರಿಂಗಾರು ಗೊಂತಿದ್ದಾ ? ….. ಗೊಂತಿಪ್ಪವು ತಿಳುಶಿತ್ತಿರಾ ?

    1. ‘ವೆಳ್ಳಕ್ಕೂವ’ ಹೇಳಿಯುದೆ ಹೇಳ್ತವು. ನಿಜವಾಗಿ ಈ ಶಬ್ದ ಮಲಯಾಳ೦ದಲೇ ಬ೦ದದೋ ಹೇಳಿ ಕಾಣ್ತು..

  10. ಅಜ್ಜಿ, ಎಂಗೊ ಶಾಲೆಗೆ ಹೋವ್ತ ಪ್ರಾಯಲ್ಲಿ, ಅಬ್ಬೆ ಜಾಲಿಲ್ಲಿ ಬೆಶಿಲಿಂಗೆ ಒಣಗಲೆ ಹೇಳಿ ಮಡಗಿದ ಕೂವೆ ಹೊಡಿಯ ಉರುಟುರುಟು ಉಂಡೆಗಳ ಮೆಲ್ಲಂಗೆ, ಹೊಡಿ ಆಗದ್ದಾಂಗೆ ಎತ್ತಿ ಬಾಯಿಲಿ ಮಡಗಿ ಅಪ್ಪಗ ಕರಗಿ ನೀರಾದ್ದದು ಗ್ರೇಶಿ ಬಾಯಿಲಿ ನೀರು ಬಂತು. ಎಂತಾ ರುಚಿ ಅಲ್ಲದೊ ? ಮನ್ನೆ ಮಕ್ಕೊಗೆ ಹೇಳಿ ಬದಿಯಡ್ಕ ಮಹಿಳೋದಯಂದ ಒಂದೆರಡು ಪೇಕೆಟ್ಟು ಹಿಡುಕ್ಕೊಂಡು ಬಯಿಂದೆ, ಕಾಲಿಯೂ ಆತು. ಕೂವೆ ಹೊಡಿ ಮಾಡ್ತ ಪಟಂಗಳ ಒಟ್ಟಿಂಗೆ ಲೇಖನ ಲಾಯಕಾಯಿದು.

    ಅಜ್ಜಿ , ನಿಂಗಳ ಪುಳ್ಳಿ ಮಾಡಿದ ಹಾಂಗೆ ನಿಂಗಳ ಸ್ವರಲ್ಲೇ ಬೇರೆ ಬೇರೆ ಶುದ್ದಿಗಳ ಕೇಳುವೋ ಹೇಳಿ ಆಸೆ ಆವ್ತಾ ಇದ್ದು. ನಿಂಗಳ ಪುಳ್ಳಿ ಹತ್ರೆ ಹೇಳಿರೆ ರಿಕಾರ್ಡು ಮಾಡಿ ಕೊಡುಗು. ಮಾಡ್ತಿರಾ ?

    1. ಯೇ ದೇವರೇ ನೀನು ನೆಂಪು ಮಾಡಿದೆಯೊ ಅಣ್ಣೊ.. ನೆಗೆಗಾರಂಗೆ ಗೊಂತಾದರೆ ಎನ್ನ ಕೂವೆ ಹೊಡಿ ಪೂರ ಒಂದೇ ದಿನಲ್ಲಿ ಕಾಲಿ ಅಕ್ಕು ಹೇಳಿ ಆ ಶುದ್ದಿ ಹೇಳದ್ದೇ ಕೂದ್ದದು ಆನು… ಅವಂಗೆ ಹೇಳಿಕ್ಕೆಡ ಆತೊ..
      ಈ ರಿಕಾರ್ಡು ಮಾಡ್ತದೆಲ್ಲ ನವಗೆ ಆಗಪ್ಪಾ.. ಅದೆಂತದೋ ಮಯಿಕರಫೋನಡ… ಆನು ಈಚ ಫೋನಿಲಿ ಮಾತಾಡ್ತದೇ ಕಮ್ಮಿ.. ಇನ್ನು ಅಷ್ಟುದ್ದ ಫೋನಿಲಿ ಹೇಂಗೆ ಮಾತಾಡ್ತದು…

  11. ಮಾಡಿ ಕೊಟ್ಟರೆ ತಿಂಬಲೆ ಆನಿದ್ದೆ ಹೆದರೆಡಿ.

  12. ಇದರ ಓದಿಯಪ್ಪಗ ಸಣ್ಣಾಗಿಪ್ಪಗ ಕೂವೆ ಹೊಡಿ ಮನೆಲಿ ಮಾಡಿ೦ಡಿತ್ತಿದ್ದದು ನೆ೦ಪಾತು. ಕೂವೆ ಮಣ್ಣಿ ನೆ೦ಪಾಗಿ ಬಾಯಿಲಿ ನೀರು ಬ೦ತು…. ಧನ್ಯವಾದ೦ಗೊ ಅಜ್ಜೀ.. ಈಗ ಕೂವೆ ಹೊಡಿ ಸಿಕ್ಕೆಕಾರೇ ಕಷ್ಟ, ಪೇಟೆ೦ದ ತ೦ದದು ಎಷ್ಟು ತಾಜಾ ಹೇಳಿ ದೇವರಿ೦ಗೇ ಗೊ೦ತು..

    1. ಪೇಟೆಲಿ ಅರಾರೂಟ್ ಹೇಳಿ ಎ೦ತದೋ ಹೊಡಿ ಸಿಕ್ಕುತ್ತು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×