Oppanna.com

ಮುಳ್ಳು ಸೌತೆಕಾಯಿ ಉಪ್ಪಿನಕಾಯಿ

ಬರದೋರು :   ವೇಣಿಯಕ್ಕ°    on   30/09/2014    1 ಒಪ್ಪಂಗೊ

ವೇಣಿಯಕ್ಕ°

ಮುಳ್ಳು ಸೌತೆಕಾಯಿ ಉಪ್ಪಿನಕಾಯಿ

ಬೇಕಪ್ಪ ಸಾಮಾನುಗೊ:

  • 3 ಸಾಧಾರಣ ಗಾತ್ರದ ಎಳತ್ತು ಮುಳ್ಳು ಸೌತೆ
  • 1/4 ಕಪ್(ಕುಡ್ತೆ) ಉಪ್ಪು
  • 1 ಕಪ್(ಕುಡ್ತೆ) ಉಪ್ಪಿನಕಾಯಿ ಹಸಿ ಹೊರಡಿ
  • 1/2 ಚಮ್ಚೆ ಸಾಸಮೆ
  • ದೊಡ್ಡ ಚಿಟಿಕೆ ಇಂಗು
  • 1/2 ಚಮ್ಚೆ ಎಣ್ಣೆ

ಮಾಡುವ ಕ್ರಮ:

ಹೊರಡಿ ಮಾಡುವ ಕ್ರಮಃ
ಉಪ್ಪಿನಕಾಯಿ ಹೊರಡಿಯ “ಮಾವಿನ ಮೆಡಿ ಉಪ್ಪಿನಕಾಯಿಲಿ” ಹೇಳಿದ ಹಾಂಗೆ ಮಾಡಿ.

ಉಪ್ಪಿನಕಾಯಿ ಮಾಡುವ ಕ್ರಮಃ

ಮುಳ್ಳು ಸೌತೆಯ ತೊಳದು, ಮನಾರಕೆ ಉದ್ದಿ ಒಂದು ಕರೆಲಿ 5 ನಿಮಿಷ ನೀರ ಪಸೆ ಆರುಲೆ ಮಡುಗಿ.

ಮುಳ್ಳು ಸೌತೆಯ ಕೊರದು, ಅದರ ತಿರುಳಿನ ಮನಾರಕೆ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ತುಂಡು ಮಾಡಿ. ಇದಕ್ಕೆ ಉಪ್ಪು ಬೆರುಸಿ 7-8 ಘಂಟೆ ಒಂದು ಕರೆಲಿ ಮುಚ್ಚಲು ಮುಚ್ಚಿ ಮಡುಗಿ.

ಇದಕ್ಕೆ ಹೊರಡಿ ಹಾಕಿ ಬೆರುಸಿ. ಒಗ್ಗರಣೆ ಸಟ್ಟುಗಿಲ್ಲು ಸಾಸಮೆ, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ ಇಂಗು ಹಾಕಿ ರೆಜ್ಜ ಹೊತ್ತು ಮಡುಗಿ, ಉಪ್ಪಿನಕಾಯಿಗೆ ಹಾಕಿ ತೊಳಸಿ. ಇದರ ಪ್ರಿಡ್ಜಿಲ್ಲಿ ಮಡುಗಿದರೆ ಒಂದು ವಾರದ ವರೆಗೆ ಉಪಯೋಗ್ಸುಲೆ ಅಕ್ಕು. ಇದು ಅಶನ, ದೋಸೆ ಇತ್ಯಾದಿಗಳ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

ಸೂಚನೆಃ ಉಪ್ಪಿನಕಾಯಿ ಮಾಡುವಗ ಚೆಂಡಿ ಕೈ/ ಚೆಂಡಿ ಪಾತ್ರ ಉಪಯೋಗ್ಸುಲೆ, ನೀರು ಮುಟ್ಟುಸುಲೆ ಆಗ.

~

ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

One thought on “ಮುಳ್ಳು ಸೌತೆಕಾಯಿ ಉಪ್ಪಿನಕಾಯಿ

  1. ಊರಿಂದ ಬಪ್ಪಗ ಮನೆಂದ ಅತ್ತೆ ಕೊಟ್ಟ ಮೆಡಿ ಉಪ್ಪಿನಕಾಯಿಲಿ ಮೆಡಿ ಮುಗುದು ಎಸರು ಒಳಿತ್ತು ಎನಗೆ ಇಲ್ಲಿ. ಅದಕ್ಕೆ ಆನು ವಾಪಾಸು ಮಾವಿನಕಾಯಿ ತಂದು ಕೊಚ್ಚಿ ಹಾಕಿ ಎಸರಿನ ಉಪಯೋಗ ಮಾಡಿಗೊಂಡಿತ್ತಿದ್ದೆ. ಈಗ ಈ ಹೊಸ ವಿಧಾನ ಸಿಕ್ಕಿದ್ದು ಲಾಯಿಕಾತು ವೇಣಿ. ಇಲ್ಲಿ ಎಳತ್ತು ಸೌತೆ ಸಿಕ್ಕುದು ಅಪರೂಪ. ಒಂದರಿಯೊ ಏನೋ ಮಾಡಿದ್ದೆ ಅಷ್ಟೆ ಅದರ ಉಪ್ಪಿನಕಾಯಿ. ಆದರೆ ಮುಳ್ಳುಸೌತೆ ಲಾಯಿಕದ್ದು ಯಾವಾಗಲೂ ಸಿಕ್ಕುತ್ತು. ಹಾಂಗೆ ಮಾಡಿ ತಿಂದು ಎಲ್ಲ ಆತು. ಲಾಯಿಕವ್ತು ಆತಾ?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×