Oppanna.com

ಇದಾರು – 15

ಬರದೋರು :   ಶುದ್ದಿಕ್ಕಾರ°    on   18/08/2011    19 ಒಪ್ಪಂಗೊ

ಕಳುದ ಸರ್ತಿಯಾಣ ಇದಾರುವಿಲಿ ಆರ ಮಂಡೆಗೆ ಗುರ್ತ ಮಾಡಿದ್ದು ಗೊಂತಾಯಿದಲ್ಲದೋ (ಸಂಕೋಲೆ)

ಎಲ್ಲೋರೊಟ್ಟಿಂಗೆ ಎನಗೂ ಅರಡಿಗು ಪೇಂಟು ಸೂಟು ಟೈ ಕಟ್ಟಿ ಬೂಟೀಸ್ ಒಳ ಕಾಲು ಹಾಕಿ ನಿಂಬಲೆ ಹೇಳುವಾಂಗೆ ಪೊರ್ಬುಗಳ ಹಾಂಗೆ ಕಾಣುತ್ತವರ ಒಟ್ಟಿಂಗೆ ನಿಂದುಗೊಂಡಿಪ್ಪ ಬಲದ ಹೊಡೆ ಅಕೇರಿಯಾಣ ಜವ್ವನಿಗ ಒಬ್ಬನ ನೋಡಿ. ಮೀಸೆ ತೆಗದ್ದೋ ಮೀಸೆ ಇಲ್ಯೋ ಹೇಳಿ ನೋಡೆಡಿ. ಶಾಲೇಲಿ ಕಲ್ತಿಕ್ಕಿ ಮತ್ತೆ ವಿಶ್ವವಿದ್ಯಾಲಯಲ್ಲಿಯೂ ಕಲ್ತವು ಇವ್ವು. ಹಲವು ಭಾಷೆಗಳ ಒಳ್ಳೆತ ಬಲ್ಲವು. ವೃತ್ತಿಲಿ ಉದ್ಯೋಗಿ ಹೇಳಿಗೊಂಬ ಇವಕ್ಕೆ ಕವನ, ಸಾಹಿತ್ಯ ಅತೀ ಮೆಚ್ಚುಗೆ. ಇವಕ್ಕೆ ಕೆಲವು ಸರ್ತಿ ರಜಾ ಒಳ್ಳೆತ ಉದಾಸನ ಹೇಳಿ ಅಷ್ಟೇ ತೊಂದರೆ. ಮಲಯಾಳ ಕನ್ನಡ ಇಂಗ್ಲೀಷ್ ಸಾಹಿತ್ಯ ಬಲ್ಲ ಇವ್ವು ತಮಿಳು ಭಾಷೆ ಆರಡಿಯ ಹೇಳಿದ್ದವಿಲ್ಲೆ. ಸಾಗರದಡಿಗೆ ಇಳುದು ರತ್ನವನ್ನೇ ತಂದು ತೋರ್ಸುವ ಸಾಮರ್ಥ್ಯ ಇಪ್ಪ ಇವ್ವು ನಮ್ಮ ಬೈಲಿಂಗೂ ಒಬ್ಬ ಭಾವನೇ. ಇಲ್ಲಿ ಬೈಲಿಲಿ ಎನ್ನಂದ ಎಡಿವದರ ಬರಕ್ಕೊಂಡು ಬೈಲಿನ ಆತಿಥೇಯ° ಆಯೆಕ್ಕು ಹೇಳಿಗೊಂಡವು. ಏನಾರು ರಹಸ್ಯ ಇವರ ಕೈಗೆ ಸಿಕ್ಕಿರೆ ಬಾಯಿಬಿಟ್ಟು ಹೇಳದ್ದೆ ಕೂಬಲೆ ಅರಡಿಯದ್ದ ಗಟ್ಟಿಗ. ಕೆಮಿ ಹಿಡಿವೆ ಮಾಣಿ ಹೇಳಿರೆ ಕಾಲಳವೆ ಅಜ್ಜಾ ಹೇಳಿ ಹೆದರುಸುವ ಈ ವ್ಯಕ್ತಿ ಇದಾರು?

ವಿ.ಸೂ. : ಸರೀ ಉತ್ತರ ಹೇಳಿದವಕ್ಕೆ ಬೊಳುಂಬು ಮಾವನ ಲೆಕ್ಕಲ್ಲಿ ಗಡಬಡ್ ಪ್ರೀ.

19 thoughts on “ಇದಾರು – 15

  1. ಈಗ “ಗಡ್ ಬಡ್” ಎಷ್ಟು ಆರ್ಡರ್ ಮಾಡೆಕು ?!!!

  2. ಕರಿಗ್ಗೋಟು ರಾಶಿ ಎಡಕ್ಕಿಲಿ ಒಂದು ಹಣ್ಣಡಕ್ಕೆ ಮಡಗಿದ ಹಾಂಗೆ – ಪ್ರಕಾಶಮಾನವಾಗಿ ಕಾಣ್ತನ್ನೇಪ್ಪಾ!
    ಆರು, ಆರು, ಆರು?

    ಎನಗೊಂತಿದ್ದೂ..
    ಅಬ್ಬ, ಈ ಸರ್ತಿಯೂ ಪ್ರೈಸು ಎನಗೇ.
    ಬೊಳುಂಬುಮಾವ, ಆನೆಲ್ಲಿ ಸಿಕ್ಕೆಕ್ಕೂ…? 😉

  3. ಪ್ರಾಯೋಜಕತ್ವ ಎನ್ನ ಪಾಲಿಂಗೆ ಬಂದ ಕಾರಣ ಆನು ಉತ್ತರ ಹೇಳೆಕಾದ ಅವಶ್ಯಕತೆ ಇಲ್ಲೆ. ಶುದ್ದಿಕಾರ ಎನಗೆ ಒಳ್ಳೆ ಅವಕಾಶ ಒದಗಿಸಿ ಕೊಟ್ಟು ಪ್ರಚಾರ ಕೊಟ್ಟದಕ್ಕಾಗಿ ಧನ್ಯವಾದಂಗೊ. ಮಕ್ಕಳೆ, ಉತ್ತರ ಎನಗೆ ನಿಜವಾಗಿಯು ಗೊಂತಿಲ್ಲೆ ಆತೊ ? ಕುಮಾರಣ್ಣ ಕೇಳಿದ ಹಾಂಗೆ ಆನುದೆ ಕೇಳ್ತಾ ಇದ್ದೆ. ಎಂತಕೆ ? ಪುಳ್ಳಿ ಹೇಳಿಯೊ ?

  4. ಓ… ಇವು ಮೊನ್ನೆ `ಕೃಷ್ಣ ಭವನ’ಲ್ಲಿ ತುಪ್ಪಡೋಚೆ ತಿಂಬಗ ಸಿಕ್ಕಿದ ಜೆನ… ಆದರೂ ಆರು ಹೇಳಿ ಹೇಳುಲಾಗ ಹೇಳಿ ಬೊಳುಂಬು ಮಾವ° ಹೇಳಿದ್ದವು. ಪದಬಂಧದ ಹಾಂಗೆ ಇದರಲ್ಲೂ ಸಸ್ಪೆನ್ಸ್ ಇರಳಿ, ಆತೋ?

  5. ಅ೦ದೊ೦ದರಿ ಪೇರಿಸಿನ ಕೃಷ್ಣಭವನಲ್ಲಿ ಮಸಾಲೆದೋಸೆ ಕಾದಿರಿಸಲೆ ಗುರಿಕ್ಕಾರ್ರು ಹೇಳಿದ್ದು ಇವಕ್ಕೆಯೋ?

    1. ಮಹೇಶಣ್ಣಾ, ಕಾದಿರಿಸಿದ್ದು ಸರಿಯಾದ ಉತ್ತರ ಹೇಳಿದವಕ್ಕೆ. ಉತ್ತರ ಹೇಳಿದವು ಆರೋ? 🙂

  6. ‘ಕಪ್ಪು’ದೆ ‘ಬೆಣಚ್ಚು’ದೆ ಒಟ್ಟಿ೦ಗೆ ಸೇರಿರೆ ಎ೦ತ (ಆರು) ಸಿಕ್ಕುಗು? ಹೇಳಿ ‘ಬೊಳು೦ಬು’ ಮಾವ೦ಗೆ ಗೊ೦ತಿದ್ದೋ ಏನೋ? ಉಮ್ಮಪ್ಪ.. ಎನಗ೦ತೂ ಗೊ೦ತಿಲ್ಲೆ!! 😉

    1. ‘ಅದು’ದೇ ‘ಇದು’ದೇ ಭಯಂಕರ ಮಂಡೆ ಆತನ್ನೇ ಗಣೇಶಣ್ಣ!!

    2. ಅದಾ, ಕತ್ತಲೆಲಿಯುದೆ ರಜಾ ಬೆಣಚ್ಚು ಕಂಡ ಹಾಂಗೆ ಆವ್ತಾ ಇದ್ದಾನೆ ಗಣೇಶಾ ?

  7. ಛೆ! ಇವರ ಎಲ್ಲಿಯೋ ಕಂಡ ಗುರ್ತ ಇದ್ದನ್ನೆಪ್ಪಾ.. ಎಲ್ಲಿ ಹೇಳಿ ನೆಂಪಾವ್ತಿಲ್ಲೆ..

    ….

    ಹ್ಞಾ, ಈಗ ನೆಂಪಾತು- ಇವು ಕೃಷ್ಣಭವನಲ್ಲಿ ಬೋಳು ಉಂಬದರ ಆನು ಕಂಡಿದೆ..!!

    1. ಪುತ್ತೂರಿಂದ ಕಾಸ್ರೋಡಿಂಗೆ ಹೋವುತ್ತ ಬಸ್ಸಿಲಿ ಕಂಡಿಪ್ಪಿ ಸುಭಗ ಭಾವಾ. ಮತ್ತೆ ನಿಂಗೊ ಕಂಡದು ಎಲ್ಲಿ ಇಪ್ಪ ಕೃಷ್ಣಭವನಲ್ಲಿ? ಪುತ್ತೂರಿಂದೋ ಸುಳ್ಯದ್ದೋ? 🙂

  8. ಈ ಜೆನವ ನಾವು ಕಂಡಿದಿಲೆಪ್ಪ. ಆದರೆ, ಇವರ ಗುರ್ತ ಹೇಳಿರೆ ಬೊಳುಂಬು ಮಾವ ಎಂತಕೊ ಗಡ್ ಬಡ್ ಕೊಡ್ಸೆಕ್ಕಪ್ಪದು ? ಅದೆಂತ ಈ ಜೆನ ನಿಂದ ಜಾಗೆ ಚೆಂಡಿ, ಶಾಂತಸಾಗರದ ಮೇಲೆ ನಿಂದ ಹಾಂಗೆ ?
    ನವಗೆ ಮನಸ್ಸಿಲಾಯೊ ಕೇಳಿರೆ, ಉಮ್ಮಪ್ಪ….

    1. ಅದು ಮಾರ್ಗದ ಕರೆಲಿ ಇಪ್ಪ ಲಾನಿಂಗೆ ಬಿಟ್ಟ ನೀರು ಆಗಿಕ್ಕೋ ಕುಮಾರಣ್ಣಾ!

      1. ಇವ್ವೇ ನೀರು ಬಿಟ್ಟಿಕ್ಕಿ ನಿಂದದೋಳಿ ಅನುಮಾನಪ್ಪ!!

        1. ಇಂತಿಪ್ಪ ವಿಶ್ವವಿದ್ಯಾಲಯದ ಕೊಳೆಂಜಿಗಳಲ್ಲಿ ನೀರು ಬಿಡ್ಲೆ ಬೇಱೆಯೇ ಜೆನ ಇರವೋ ಭಾವಾ!

  9. “ಸಾಗರದಡಿಗೆ ಇಳುದು ರತ್ನವನ್ನೇ ತಂದು ತೋರ್ಸುವ”ಜೆನದ ಅ೦ದಾಜಿ ಆತಿದಾ…ಆ ದಿನ ತ೦ಪು ಕನ್ನಡ್ಕ ಬೇಕಾಯಿದಿಲ್ಲೆಯೋ??

  10. ಯೇ., ಇದು ಇವ್ವೋ!!
    ಈ ಫಟ ಇಲ್ಲಿ ಬೈಂದೂ ಹೇಳಿ ಗೊಂತಾರೆ ದಗ ದಗನೆ ಹಾರುಗನ್ನೇ ಇವ್ವು.
    ಕೆಲವು ದಿಕ್ಕೆ ತಲೆ ತಗ್ಗಿಸಿ ನಿಂದುಗೊಂಡ ಹಾಂಗೆ ಕಂಡರೂ ಎಲ್ಲಿ ತಲೆ ನೆಗ್ಗೆಲೆ ಚಾನ್ಸ್ ಸಿಕ್ಕುತ್ತು ಹೇಳಿ ಕಾಯ್ತಾಂಗೆ ಇಕ್ಕನ್ನೇ ಇವ್ವು!! ಮನಸ್ಸಿಲಾಯೋ !

    1. ಎನಗೆ ನಿಂಗಳನ್ನೇ ಅನುಮಾನ ಚೆನ್ನೈಭಾವಾ! ಇದು ಹೇಂಗೆ ಇಲ್ಲಿಗೆ ಬಂತು? 😉 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×