Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಕಳುದ ವಾರ ಬೈಲಿಲಿ ಕುಸುಮದ ಎಸಳುಗೊ ರೈಸಿದ ಕಾರಣ ಈ ವಾರ ಕುಸುಮಷಟ್ಪದಿಲಿ, ಬೈಲಿಲಿ ರೈಸುತ್ತಾ ಇಪ್ಪ ಲೋಕಸ೦ಚಾರಿ ಅಡಿಗೆ ಸತ್ಯಣ್ಣ೦ಗೆ ಯೇವಗ ಪುರುಸೊತ್ತಪ್ಪೊದು ಕ೦ಡು ಹುಡುಕ್ಕುವ° , ಆಗದೋ ?
“ಅಡಿಗೆ ಸತ್ಯಣ್ಣ೦ಗೆ ಪುರುಸೊತ್ತಿದಾ॥”
ಕುಸುಮ ಷಟ್ಪದಿಯ ಮಾತ್ರೆಗಳ ಲೆಕ್ಕಾಚಾರ ನೆ೦ಪಿದ್ದನ್ನೇ ?
ಹೆಚ್ಚಿನ ಮಾಹಿತಿಗೆ:
ಕಡೆಬಾಳೆ ಕೀತಿಲ್ಲೆ
ಕೊಡಿಬಾಳೆ ಕಟ್ಟಿಲ್ಲೆ
ಸುಡುವ ಕಿಚ್ಚಿನ ಮು೦ದೆ ಕೂಬಲಿಲ್ಲೆ|
ನೆಡುಗುವಾಟಿಯ ತಿ೦ಗ
ಳಿಡಿಕ ಮನೆಲಿಪ್ಪ ನ
ಮ್ಮಡಿಗೆ ಸತ್ಯಣ್ಣ೦ಗೆ ಪುರುಸೊತ್ತಿದಾ||
ಕಡು ಬೇಸಗೆಯು ಕಳುದು
ಗುಡುಗುಮಳೆ ಸುರುವಾದ
ರಡಿಗೆ ಸತ್ಯಣ್ಣ೦ಗೆ ಪುರುಸೊತ್ತಿದಾ|
ಪಡಿ ಮೇಲೆ ಕೂದೊ೦ಡು
ಕಡೆಬಾಯಿ ತು೦ಬುಸುಗು
ಪಡುಜೆಗಿಲಿಲೆಲೆಯಡಕೆ ಹೊಗೆಸೊಪ್ಪಿನಾ||
ಹೊಡಿಬುರುಡೆ ಸಿಕ್ಕಿಯಪ್ಪಗ ಅಡಿಗೆ ಸತ್ಯಣ್ಣ ಹೊಗೆಸೊಪ್ಪು ಬಣ್ಣಿಸಿ, ಕೊಡ್ಲೆ ಕೊಡುಗೈದಾನಿ. ಅವನ ಮಾತಿನ ಕಲ್ಪನೆ
ಮಡಿಕೇರಿ ಮೈ೦ದಿ೦ಗೆ
ಹೊಡಿಬುರುಡೆ ಜೊತೆಯಿರ್ಲೆ
ರಡು ಕುಣಿಯ ಹೊಗೆಸೊಪ್ಪುಯಿದು ಕಡ್ಪವೇ
ಕಡುಚಳಿಲು ಕೆಣಿಶುಗಿದು
ಕಡೆಗಣಿಸೆಡ ಮಿನಿಯಾ°
ಯಡಿಗೆ ಸತ್ಯಣ್ಣ೦ಗೆ ಪುರುಸೊತ್ತಿದಾ
ಕುಣಿಯ = ಕಾಸರಗೋಡಿನತ್ತರಿಪ್ಪ ಇಪ್ಪ ಊರಿನ ಹೆಸರು. ಅಲ್ಲಿಯಾಣ ಹೊಗೆಸೊಪ್ಪು ತು೦ಬಾ ಕಡ್ಪ ಮತ್ತು ಘಾಟುದೆ ಜಾಸ್ತಿಯಡ.
ಮಡಿಕೇರಿ ಭಾವಯ್ಯ°ನ ಹೊಡಿಬುರುಡೆ ನೋಡಿ ಬನ್ತಿದು. ಸತ್ಯಣ್ನನ ಎಲೆ ತಿ೦ಬ ಪಾತ್ರದ ಚಿತ್ರಣ& ಗುರಿದೆ ಕಲ್ಪನೆ೦ದ ಆಕಾರಕ್ಕೆ ಇಳಿಶುಲೆಡಿಗಾಯಿಲ್ಲೆ. ಒಲ್ಳೆದೇ ಆಯಿದು. ಅದಿತಿ ಅಕ್ಕ ತು೦ಬಾ ಮಾರ್ಮಿಕವಾಗಿ ತಿಳಿಶಿದ್ದವು.
ಭಾಗ್ಯಕ್ಕ,
ಲಾಯ್ಕ ಆಯಿದು,ಕಲ್ಪನೆ.
“ಹೊಗೆಸೊಪ್ಪುಯಿದು” ಮತ್ತೆ “ಕಡೆಗಣಿಸೆಡ ಮಿನಿಯಾ°ಯಡಿಗೆ” – ಇಲ್ಲಿ ವಿಸ೦ಧಿ ದೋಷವ ತಪ್ಪುಸೊಗ ವ್ಯಾಕರಣ ತಪ್ಪಿದ್ದು.
ನಮ್ಮ ಭಾಷೆಯ ಶಬ್ದ೦ಗಳ ಜೋಡಣೆ ಮಾಡೊಗ ಸುಮಾರು ಸರ್ತಿ ಈ ರೀತಿಯ ಕಷ್ಟ ಆವುತ್ತು.
ಮೇಲೆ ಆನು ಬರದ್ದರ್ಲಿಯೂ ಒ೦ದು ದಿಕ್ಕೆ (ಜೆನವಿಲ್ಲೆಯಡಿಗೆ ಸತ್ಯಣ್ಣ೦ಗೆ) ಈ ಸಮಸ್ಯೆ ಇದ್ದು.
ಈ ಸ೦ದರ್ಭಲ್ಲಿ ಶಬ್ದ ಬದಲ್ಸೊದು ಭಾಷಾಶುದ್ಧಿಯ ಮಟ್ಟಿ೦ಗೆ ಒಳ್ಳೆದು ಹೇಳಿ ತೋರ್ತು.ಮು೦ದೆ ಈ ಜಾಗ್ರತೆ ಎಲ್ಲೋರೂ ಮಾಡುವ ಆಗದೋ?
ಕೆಳಣ ಹಾಂಗೆ ಬದಲ್ಸಿರೆ ವ್ಯಾಕರಣ ದೋಷ ಹೋವ್ತು.
“ರಡು ಕುಣಿಯ ಹೊಗೆಸೊಪ್ಪಿದು ಬಲುಕಡ್ಪ”
” ಜೆನವಿಲ್ಲೆದಡಿಗೆ (ಜೆನವಿಲ್ಲದೆ + ಅಡಿಗೆ ) ”
ಮುಂದಣ ಸರ್ತಿ ನಾವೆಲ್ಲೋರು ವ್ಯಾಕರಣವ ಗಮನಲ್ಲಿ ಮಡಿಕ್ಕೊಂಡು ಪದ್ಯ ಬರೆವ. ಎಂತ ಹೇಳ್ತಿ ?
ಕಡುಸೀವು ಬಳುಸಿದರೆ
ಕೊಡಿಬೆರಳಿನದ್ದಿ೦ಡೆ
ರಡು ಹನಿಯ ನಕ್ಕಿಕ್ಕಿ ಮತಿಮಾಡುಗು|
ಕಡದು ಕೂಡಿರು ಸಮಕೆ
ಹೊಡದು೦ಬ ಜೆನವಿಲ್ಲೆ
ಯಡಿಗೆ ಸತ್ಯಣ್ಣ೦ಗೆ ಪುರುಸೊತ್ತಿದಾ ||
ದಡಿ ಬಳುಸಿ ! ಮೆಡಿ ಹೋತೊ?
ಮಡಗಿದ್ದೊ ಮಜ್ಜಿಗೆಯ?
ಕಡೆ ಹ೦ತಿಗೊಳಿಗನ್ನೆ ಬಿಡಿ ತಲೆಬೆಶೀ|
ಕೊಡಿಯೆತ್ತುಸುವ° ಬನ್ನಿ
ಹೆಡಗೆಲಶನವ ಹಿಡುದ
ರಡಿಗೆ ಸತ್ಯಣ್ಣ೦ಗೆ ಪುರುಸೊತ್ತಿದಾ||
ಮಡಿಕೇರಿ ಭಾವಯ್ಯ° ಹೇದರೆ ಅಡಿಗೆ ಸತ್ಯಣ್ಣನ ಹಳೇ ಚೆಂಙಾಯಿಯೇ.
ಮಡಿಕೇರಿ ಭಾವಯ್ಯ°
ಹೊಡಿಬುರುಡೆ ಹಿಡ್ಕೊಂಡು
ಅಡಿಗೆ ಕೊಟ್ಟಗೆಯೊಳವೆ ಬಂದೆತ್ತಿದಾ°.. |
ಕಡವ ಕಲ್ಲಿನ ಮೇಗೆ
ಹೊಡೆಯೆರಗಿ ಕೂದೊಂಡ್ರೆ
ಅಡಿಗೆಸತ್ಯಣ್ಣಂಗೆ ಪುರುಸೊತ್ತಿದಾ! || 🙂 ||
ಹೋ…. ನೆಗೆಮಾಣಿ!!!! ಎಂತ ಬಾರೀ ಅಪ್ರೂಪ?
ಗುಡು ಗುಡು ಬೈಕಿಲಿ ಹೆರಡೊಗ ಎದುರೆ ಕೂಪಲೆ ಆರಿದ್ದವು ಮತ್ತೆ?
ಎಲ್ಲಾ ಅಪ್ಪ-ಅಮ್ಮಂದಿರಿಂಗೂ ಇದೇ ಆಶಯ- ಹಾರೈಕೆ -ಮಕ್ಕೊ ಜೀವನಲ್ಲಿ ಮುಂದೆ ಬರೆಕ್ಕು- ಅದೇ ಜೀವನದ ಸಾರ್ಥಕತೆ ಹೇಳಿ ನಂಬಿ ದುಡಿತ್ತವು. ಸತ್ಯಣ್ಣನ ದುಡಿಮೆಯ ಆ ರೀತಿ ಕಲ್ಪಿಸಿಗೊಂಡು ಬರದ ಕವನ ನಿಜವಾಗಿಯೂ ಅದ್ಭುತ !
ಸುಡುವ ಬೆಂಕಿಗೆದುರಾ-
ಗೆಡಿಯದ್ದೆ ಬಚ್ಚಿದರು
ಕಡುಕಷ್ಟ ಪಟ್ಟರುದೆ ತೃಪ್ತಜೀವ
ಕುಡಿಯೋದಿ ಬಾಳಿಲೊಂ
ದಡಿಮುಂದೆ ಬಂದರಾ-
ತಡಿಗೆ ಸತ್ಯಣ್ಣಂಗೆ ಪುರುಸೊತ್ತಿದಾ
ಈ ಸರ್ತಿ ಎಲ್ಲೋರ ಪೂರಣಂಗಳೂ ರೈಸಿದ್ದಪ್ಪೋ!
ತುಂಬಾ ಕೊಶಿ ಆತು.
ಅದಿತಿ ಅಕ್ಕಾ, ಅತ್ಯದ್ಭುತ ಸಾರ! 🙂
(ಸುಡುವ ಕಿಚ್ಚಿನಯೆದುರು) ಹೇಳಿ ಮಾಡಿರೆ ಮಾತ್ರೆ ಸಮಸ್ಯೆಯೂ ಇಲ್ಲೆ.
ಒಪ್ಪಣ್ಣನ ಒಪ್ಪಕ್ಕೆ ಧನ್ಯವಾದ. 🙂
ಮನೆಲಿ ಮೊದಲಿಂದ ಪಂಜಸೀಮೆ ಭಾಷೆ ಬಳಕೆಲಿದ್ದ ಕಾರಣ, ಪಕ್ಕ “ಕಿಚ್ಚು” ಹೇಳುವ ಪದ ತಲಗೆ ಬೈಂದೇ ಇಲ್ಲೆ. ಹಾಂಗಾಗಿ “ಬೆಂಕಿ” ಹೇಳಿ ಬರದ್ದು. 🙂
ಮತ್ತೆ “ಕಿಚ್ಚಿನಯೆದುರು” ಹೇಳಿ ಮಾಡಿದರೆ ಎರಡನೇ ಸಾಲು “ಎಡಿಯದ್ದೆ” ಹೇಳಿ ಸುರು ಮಾಡೆಕ್ಕು. ಆಗ ವಿಸಂಧಿ ಆವ್ತು. ಹಾಂಗಾಗಿ “ಸುಡುವ ಬೆಂಕಿಗೆದುರಾಗೆಡಿಯದ್ದೆ” ಇದರ “ಸುಡುವ ಕಿಚ್ಚಿಗೆದುರಾಗೆಡಿಯದ್ದೆ” ಹೇಳಿ ಮಾಡಿದರೆ ಸರಿ ಆವ್ತು.
ತುಮ್ಬಾ ಲಾಯಿಕ ಅಯಿದು ಅದಿತಿ ಅಕ್ಕ. ವೆ೦ಕಟಣ್ಣ, ಹೊಗೆಯೆದುರೆ ಹೋಳಿಗೆ ಮಾಡುವ ಚಿತ್ರಲ್ಲಿ ಸತ್ಯಣ್ನ ಕಿಚ್ಹಿನೆದುರೆ ಕೂದ್ದು ನೋಡಿದರೆ ಇದು ಗೊನ್ತಕ್ಕು. ಚಿತ್ರಕ್ಕೂ , ಪದ್ಯಕ್ಕೂ ಎರಡಕ್ಕೂ ಒಟ್ಟಿನ್ಗೆ ಒನ್ಡು ಒಪ್ಪ.
ಅದಿತಿ ಅಕ್ಕ,
ತೂಕದ ಭಾವ.ತು೦ಬಾ ಲಾಯ್ಕ ಆಯಿದು.
“ಸುಡುವ ಕಿಚ್ಚಿ೦ಗೆ ಮೈ
ಗೆಡಿಯದ್ದೆ ಬಚ್ಚಿದರು”
ಹೇಳಿ ಮಾಡಿರೆ ಅಕ್ಕು ಹೇಳಿ ಕಾಣುತ್ತು.
ರಘು ಭಾವ,
ನಿಂಗ ಹೇಳಿದ ಹಾಂಗೆ “ಸುಡುವ ಕಿಚ್ಚಿ೦ಗೆ ಮೈಗೆಡಿಯದ್ದೆ ಬಚ್ಚಿದರು” ಹೇಳಿ ಮಾಡುದೇ ಸರಿ. ಅಷ್ಟಪ್ಪಗ ಓದುಲೆ ಸರಾಗ ಆಗಿ ಲಾಯ್ಕಾವ್ತು.
ಒಪ್ಪ ಕೊಟ್ಟ ಎಲ್ಲೋರಿಂಗೂ ಧನ್ಯವಾದ. 🙂
ಎಲ್ಲರ ಪದ್ಯಂಗೊ ಲಾಯ್ಕಲ್ಲಿ ಬೈಂದು. ಕುಶಿ ಆವ್ತು ಓದುಲೆ.
ಅಡಿಗೆ ಸತ್ಯಂಣ್ಣಂಗೆ ಅಡಿಗೆ ಕೆಲಸದೆಡೆಲಿ ಪುರುಸೊತ್ತು ಸಿಕ್ಕೊಗ, ಭಾಗ್ಯಕ್ಕಂಗೂ, ಇಂದಿರತ್ತೆಗೂ ಪದ್ಯ ಬರವ ತೆರಕ್ಕು. ಇದು ಗಮ್ಮತ್ತಾಯಿದು.
ಅಬ್ಬಾ…ಅತ್ತೇ ಸೂಪರ್… ಹೋಪಗ ಮಳೆ ಸಿಕ್ಕದ್ದರೆ ಬಚಾವ್….
ಸುಡುಬೆಶಿಲ ದಿನಗಳಲಿ
ಬಿಡದ ಜೆಂಬ್ರಂಗಳುದೆ
ಯಡಿಗೆಯವಕೆ ಬಿಡುವೇಯಿರದ ಹಾಂಗೆ ।
ಜಡಿಮಳೆಯು ಸೊಯ್ಪುವಗ
ಬಿಡುಗುಯೆಣ್ಣೆಲಿ ಪೋಡಿ
ಯಡಿಗೆ ಸತ್ಯಣ್ಣಂಗೆ ಪುರುಸೊತ್ತಿದಾ ॥
ಗಡಿನಾಡ ಸತ್ಯಣ್ಣ
ಗುಡುಗುಡುನೆ ಪಲ್ಸರಿಲಿ
ಕೊಡೆಯಾಲಕೆ ಸಿನೆಮಕೆ ಹೆರಟುನಿಂದಿದ° ।
ಒಡನಾಡಿ ಶಾರದೆಗೆ
ತಡೆಯದ್ದ ಕೊಶಿಯಾತ
ದಡಿಗೆ ಸತ್ಯಣ್ಣಂಗೆ ಪುರುಸೊತ್ತಿದಾ ॥
ಇದು ೪ ದಿನ ಇಪ್ಪ ಅಪರ ಕ್ರಿಯೆ ಅಡಿಗೆ ಬಗ್ಗೆ–
ಎಡೆಯೆಡೆಲಿ ಚಾ ಕಾಫಿ
ಕುಡುಕೊ೦ಡು ಕಡೆಶೊ೦ಡು
ವಡೆಸುಟ್ಟವಡಿಗೆಗೇಯಣಿ ಮಾಡಿದಾ°
ಕಡೆದಿನವು ಬೊಡುದರೂ
ಕಡೆಹ೦ತಿಯೂಟಲ್ಲಿ
ಯಡಿಗೆ ಸತ್ಯಣ್ಣಂಗೆ ಪುರುಸೊತ್ತಿದಾ
**************
ಜಾತ್ರೆ ಸಮಯಲ್ಲಿ ಹೆರಾಣ ಊರಿ೦ಗೆ ಹೋದರೆ ಮನಗೆ ಬ೦ದೆತ್ತೆಕ್ಕು ಹೇಳುವ ನಂಬಿಕೆ
ಅಡಿಗಡಿಗೆಯೂರೆಲ್ಲ
ಗಡಿಯಬಿಟ್ಟೋಡಾಡಿ
ಕೊಡಿಯಿಳಿವ ದಿನಮೊದಲೆ ಮನೆಯೆತ್ತಿದಾ°
ಮಡದಿ ಮಗಳೊಡೆಗೂಡಿ
ಬೆಡಿನೋಡಿಯೊರಗುಲೇ
ಯಡಿಗೆ ಸತ್ಯಣ್ಣ೦ಗೆ ಪುರುಸೊತ್ತಿದಾ
ಭಾಗ್ಯಕ್ಕಾ ಎರಡುದೇ ರೈಸಿದ್ದು….
೧.
ಹಿಡಿಸೂಡಿಲುಡುಗಿಕ್ಕಿ
ಕೊಡಿಬಾಳೆ ಮಡುಗಿದರೆ
ಬೊಡುದಿಪ್ಪ ಮಕ್ಕಳುದೆ ಹಂತಿಲಿಕ್ಕು ।
ಕಡೆ ಹಪ್ಪಳವ ಹೊರಿಯೆ
ಹೊಡಿ ಬೀಡಿಯೆಳವಲೀ
ಗಡಿಗೆ ಸತ್ಯಣ್ಣಂಗೆ ಪುರುಸೊತ್ತಿದಾ ।।
೨.
ಅಡರೆಡೆಲಿ ಮಡಲಿಂಗೆ
ಕೊಡೆ ಕಿಚ್ಚು ಹೊತ್ತುವಗ
ಸುಡುನೀರು ಕಾಸಿದರೆ ಚೆರಿಗೆ ತುಂಬ ।
ಗಡಿಬಿಡಿ ಗಡದ್ದೂಟ
ಹೊಡೆಮೊಗಚಿದಾಂಗಾದ
ರಡಿಗೆ ಸತ್ಯಣ್ಣಂಗೆ ಪುರುಸೊತ್ತಿದಾ ।।
ಎರಡೂ ಕವನಂಗಳೂ ಲಾಯ್ಕಾಯಿದು. ಸಮಸ್ಯೆಯ ಸಮರ್ಪಕವಾಗಿ ಬಿಡುಸಿದ್ದಿ, ಪುರುಸೊತ್ತು ಸಿಕ್ಕಿಪ್ಪಾಗ ಹೀಂಗೇ ಮಾಡುಗಷ್ಟೆ. ಅಭಿನಂದನೆಗೊ.
ಎರಡೂ ಪೂರಣಂಗೊ ಲಾಯಿಕಿದ್ದು.
ಇಂದಿರತ್ತೆ ಮತ್ತೆ ಕುಮಾರಮಾವಂಗೆ ಧನ್ಯವಾದಂಗೋ….
ಗೋಪಾಲಣ್ಣ ಸತ್ಯಣ್ಣನ ಬೆಶಿ ಮೊಬೈಲಿನ ವಿಷಯ ಹೇಳಿಯಪ್ಪಗ ಮಿಂಚಿದ ಕವನ….
ವಡೆಹಿಟ್ಟು ಕಲಸ್ಯೊಂಡು
ನಡುನಡುಕೆ ಫೋನಿನ
ಕಡೆ ಹೆಗಲ್ಲಿಯೆ ಮಡುಗಿ ಮಾತಾಡ್ವಗಾ ।
ಸಡನ್ನದು ಜಾರಿದರೆ
ವೊಡಫೋನು ರೆಡಿಯಕ್ಕೊ
ಅಡಿಗೆ ಸತ್ಯಣ್ಣಂಗೆ ಪುರುಸೊತ್ತಿದಾ ।।
ಸಮಯ ಸ್ಪೂರ್ಥಿಲಿ ಚಿಮ್ಮಿದ್ದು ಲಾಯಿಕಾಯಿದು ಶೈಲಕ್ಕ.
ಆದರೆ ಫೋನಿನ ಹತ್ತರೆ ಒನ್ದು ಮಾತ್ರೆ ಕಮ್ಮಿ ಆಯಿದೊ? ”ಸಡನ್ನದು” ಹೇಳುವಲ್ಲಿ ೨ ನೆ ಅಕ್ಶರದ ಗುರು ಬಪ್ಪಲಾಗದೊ ಹೇಳಿ ಎನ್ನ ನೆನಪು.
ಓಹ್ …. ಭಾಗ್ಯಕ್ಕ ಹೀಂಗೆ ಮಾಡಿರೆ ಸರಿ ಆತಲ್ಲದಾ?
ವಡೆಹಿಟ್ಟು ಕಲಸ್ಯೊಂಡು
ನಡುನಡುಕೆ ಫೋನಿಲ್ಲಿ
ಕಡೆ ಹೆಗಲಿಲಿಯೆ ಮಡುಗಿ ಮಾತಾಡ್ವಗಾ ।
ದಡಬಡನೆ ಜಾರಿದರೆ
ವೊಡಫೋನು ರೆಡಿಯಕ್ಕೊ ?
ಅಡಿಗೆ ಸತ್ಯಣ್ಣಂಗೆ ಪುರುಸೊತ್ತಿದಾ ।।
ವಡಫೋನೋ ಫೋನೊಡವಾ – ಅಂತೂ ಕವನ ಲಾಯ್ಕಿದ್ದು- ಮೊಬೈಲಿನ ಅವಾಂತರ ಹಾಂಗುದೆ ಅಕ್ಕಪ್ಪ.!
ಆನು ವೊಡಫೋನು ಹೇದು ಬರದ್ದು ಹಾಂಗಿಪ್ಪ ಸಿಮ್ ಒಂದು ಇದ್ದನ್ನೇ ಅದಕ್ಕೆ… 🙂 🙂
ಬೊಡುದು ಹೋದರು ಕೂಡ
ಬಿಡುಗಡೆಯು ಸಿಕ್ಕಾನೆ
ಅಡುಗೆ ಕೆಲಸದ ನಡುಕೆ ರಜೆಯಿಲ್ಲೆನೇ ।
ಗಡಿಬಿಡಿಯದೆಡಕಿಲ್ಲು-
ದಡಿಗಡಿಗೆ ಫೋನುದೇ
ಮಡುಗಲೆಡಿಗೋಯೆಡಿಯ ಬಿಡಲೆಡಿಯನೇ ।
ಗುಡುಗುಡುಗಿ ತಡೆಯದ್ದೆ
ಜಡುದು ಮಳೆಬಂದುಸಾ-
ರಡಿತೋಡು ತುಂಬಿತ್ತು ಹರುದತ್ತದಾ ।
ಗಡಿಮೀರಿ ಹೊಳೆದಾಟ
ಲೆಡಿಯದ್ದೆ ಬಾಕಿಯಾ-
ದಡಿಗೆ ಸತ್ಯಣ್ಣಂಗೆ ಪುರುಸೊತ್ತಿದಾ ।
ಪಶ್ಟಾಯಿದು ಭಾವ.
ಗೋಪಾಲಣ್ಣ, ಕವಿಸಾಮ್ರಾಟ ಆವುತ್ತಾ ಇದ್ದೀರನ್ನೆ. ಎರಡು ಪದ್ಯಂಗಳೂ ಲಾಯ್ಕಿದ್ದು- ಅಭಿನಂದನೆಗೊ.
ಸಾರಡಿತೋಡು ತುಂಬಿಹರಿವಾಗ ಸತ್ಯಣ್ಣ ಮತ್ತೆ ನೆರೆನೀರು ಇಳಿವನ್ನಾರಕ್ಕೆ ಸಾರಡಿ ಅಪ್ಪಚ್ಚಿಯ ಮನೆಗೆ ಹೋದ್ದದೋ?
ಕಪಿ ಸಾಮ್ರಾಟ ಹೇಳಿ ಬಿದುರಿಲ್ಲಿ ಕೊಟ್ಟಿಕ್ಕೆಡಿ ಇಂದಿರಕ್ಕಾ. ನಿಂಗಳೆಲ್ಲೋರ ಪದ್ಯದೆದುರು ಎನ್ನದು
ಬರೀ ಚೆಪ್ಪುಡಿದು. ಪದ್ಯ ಪೂರಣಲ್ಲಿ ಎನ್ನದೂದೆ ಒಂದು ಲೆಕ್ಕಕ್ಕಿರಳೀ ಹೇಳಿ ಬರದ್ದದು. ನಿಂಗೊ, ಭಾಗ್ಯಲಕ್ಷ್ಮಿ ಅಕ್ಕ, ಶೈಲಜಕ್ಕಾ ಎಲ್ಲೋರುದೆ ಒಳ್ಳೊಳ್ಳೆ ಪದ್ಯ ಬರದು ರೈಸುತ್ತಾ ಇಪ್ಪದು ಕಂಡು ಕೊಶಿ ಆವ್ತಾ ಇದ್ದು. ಅಂತೂ ಬೈಲಿಲ್ಲಿ ಪದ್ಯದ ಸುರಿಮಳೆ ಸುರುದು ಸೂಪರ್ ಆಯಿದು.
ಗಡಿಬಿಡಿಯ ಜೆಂಬ್ರಂಗೊ
ಬೊಡುದತ್ತು, – ಸತ್ಯಣ್ಣ
ಪಡುದೇಶ ಸುತ್ತುಲೆಡ – ಹೆರಟುನಿಂದಾ ।
ಮಡದಿಮಕ್ಕಳ ಜತೆಲಿ
ಕಡಲ ದಾಂಟಿಯೆ ಹೋದ°
ನಡಿಗೆ ಸತ್ಯಣ್ಣಂಗೆ ಪುರುಸೊತ್ತಿದಾ ॥
ಬೊಡುದತ್ತು ಎನಗೆಡಿಯ
ಕೊಡಿ ಹಿಡಿಯ ಸತ್ಯಣ್ಣ
ಎಡಿಗಾದ್ದು ಮಾಡಿಯೊಂಡಿಕ್ಕು ನಿತ್ಯ
ಗಡಿಬಿಡಿಲಿ ಬೆಳಿತಲೆಯ
ಹೊಡೆ ಮಾಂತ್ರ ಕಪ್ಪಾತು
ಅಡಿಗೆ ಸತ್ಯಣ್ಣಂಗೆ ಪುರುಸೊತ್ತಿದಾ
(ಕೊಡಿಹಿಡಿ=ಮುಷ್ಕರ ಹೂಡು)
———-
ಅಡಿ ಮಡುಗಿರೇ ಆಟಿ
ಎಡಿಯ ಶುಭಕಾರ್ಯಂಗೊ
ಅಡಿಗೆ ಸತ್ಯಣ್ಣಂಗೆ ಪುರುಸೊತ್ತಿದಾ
ಸುಡೆಕು ಹಪ್ಪಳ ತುಂಬ
ಬೊಡಿಯ ಸಾಂತಾಣಿಯುದೆ
ಎಡೆಯೆಡೆಲಿ ಗೆನಮೆಣಸಿನ ಕಷಾಯವೂ
—————-
ಎಡೆಯೆಡೆಲಿ ಹೊಡಾಡಿಕೆ
ಅಡಿಗೆಯೂ ಕೈನೀರುದೆ
ಕೊಡಿಬಾಳೆಲಿ ಬಳುಸಿ ಮಡುಗಿದ ಭಕ್ಷ್ಯ
ಎಡಿಯ ನಿಂಗಳ ದೆಸೆಲಿ
ವಡೆಯ ಹೊಡಿಮಾಡುಗೂ
ಅಡಿಗೆ ಸತ್ಯಣ್ಣಂಗ ಪುರುಸೊತ್ತಿದಾ
(ಹೊಡಾಡಿಕೆ=ದುರ್ಗಾ ನಮಸ್ಕಾರ)
ಮೇಲೆ ಬರದ್ದರ ವಿಸ೦ಧಿ ದೋಶ ಸರಿ ಮಾಡಿದ್ದು. ಇನ್ನೂ ಇದ್ದರೆ ಹೇಳಿಕ್ಕಿ.
ಕಡಲೆ ಬೇಳೆಯೆಳದೇ
ಕಡವ ರಂಗಣ್ಣಂಗೆ
ಬೊಡಿವಲ್ಲ್ಯೊರೆಗೆ ಸೌದಿ ಬೆಶಿಯೇರುಲೆ
ಮಡಲಾಕಿ ಮುಗಿಶುವಾ,
ಕಡೆಬೀಡಿ ಹೊಗೆಬಿಡ್ಲೆ
ಯಡಿಗೆ ಸತ್ಯಣ್ಣಂಗೆ ಪುರುಸೊತ್ತಿದಾ
ಇದು ಅರ್ಥ ಅಪ್ಪಾಂಗೆ ಸುಲಾಭಕ್ಕೆ ಬರದ್ದೀರನ್ನೆ- ಲಾಯ್ಕ ಆಯಿದು- ಅಭಿನಂದನೆಗೊ ಭಾಗ್ಯಕ್ಕ.
ಕಡೆಯಡಕೆ ಮರ ಸಂಕ
ಎಡೆಬಿಡದ ಜಡಿಮಳೆಲಿ
ಕಡುದೋಗಿ ಊರಂಡಮಾನಾತದಾ
ಅಡರಿಯೋದಿದ° ಕಥೆ ಗ
ರುಡ ಕೇಳಿದಾ ವ್ಯಥೆ
ಅಡಿಗೆ ಸತ್ಯಣ್ಣಂಗೆ ಪುರುಸೊತ್ತಿದಾ
**********************************
ಕಡಲೆ ಬೇಳೆಯೆಳದೇ
ಕಡವ ರಂಗಣ್ಣಂಗೆ
ಬೊಡಿವಲ್ಲ್ಯೊರೆಗೆ ಸೌದಿ ಬೆಶಿಯೇರುಲೆ
ಮಡಲು ಹಾಕಿ ಮುಗಿಶೋ
ಕಡೆಬೀಡಿ ಹೊಗೆಬಿಡ್ಲೆ
ಅಡಿಗೆ ಸತ್ಯಣ್ಣಂಗೆ ಪುರುಸೊತ್ತಿದಾ
(ರುಡ ಕೇಳಿದಾ ವ್ಯಥೆ) – ಮಾತ್ರೆ ಲೆಕ್ಕಾಚಾರ ತಪ್ಪಿದ್ದನ್ನೆ.
ಮರಸಂಕ ಎಡೆಬಿಡದ
ಕಡುದೋಗಿ ಊರಂಡಮಾನ
ವ್ಯಥೆ ಅಡಿಗೆ —-ಇಲ್ಲೆಲ್ಲ ವಿಸಂಧಿ ಬಯಿಂದು.
ಅಡಕೆ ಮರದಾಸ೦ಕ
ವೆಡೆಬಿಡದ ಜಡಿಮಳೆಲಿ
ಕಡುದೋಗಿಯೂರ೦ಡಮಾನಾತದಾ
ಅಡರಿಯೋದಿದವಾ° ಗ
ರುಡ ಕೇಳಿದ ಪುರಾಣ
ವಡಿಗೆ ಸತ್ಯಣ್ಣಂಗೆ ಪುರುಸೊತ್ತಿದಾ
ಈಗ ಸರಿಯಾದ ಹಾ೦ಗೆ ಕಾಣ್ತು.ಇನ್ನುದೆ ತಪ್ಪಿದ್ದರೆ ಹೇಳಿ ಮಾವ.
ಊರಂಡಮಾನಾತದಾ, ಮತ್ತೆ ಅಡರಿಯೋದಿದವಾ° – ಇದೆರಡು ಶಬ್ದಕ್ಕೆ ಅರ್ಥಗೊಂತಾತಿಲ್ಲೆನ್ನೆ- ಹಾಂಗಾಗಿ ಕವನದ ತಿರುಳು ಮಂಡೆಗೆ ಹೊಗ್ಗಿದ್ದಿಲ್ಲೆ- ವಿವರುಸುತ್ತೀರಾ ಭಾಗ್ಯಕ್ಕ?
1)ಅಡರು + ಓದಿದಾ =ಅಡರಿಯೊದಿದಾ . ಅಡರು ಹೇಳುದು ನಮ್ಮಲ್ಲಿ ಗ್ರಾಮ್ಯ ಭಾಷೆ ಆದಿಕ್ಕು . ಹೇಳುವಸ್ಟು ಎನಗೂ ಗೊಂತಿಲ್ಲೆ . ಆದರೆ ಇದರ ಬಳಕೆ ಮಾಡುದರ ಕೇಳಿ ಗೊಂತಿದ್ದು . ಹಿಂಜರಿವದು ಹೇಳಿ ಇದರ ಅರ್ಥ. ಉದಾ : ದೊಡ್ಡ ಜೋರಿನ ನಾಯಿ ಅಶನ ತಿ೦ಬಗ ಕುಜ್ಞಿ ನಾಯಿಗೆ ಆಶೆ ಆದರೂ, ಅದು ದೊಡ್ಡದರ ಹತ್ತೆರೆ ಹೂವುತ್ತಿಲೆ . ಅಸ್ಟಪ್ಪಗ, ಕುಜ್ಞಿ ನಾಯಿ ದೊಡ್ಡ ನಾಯಿಗೆ ಹೆದರಿ ಅಡರ್ತು ಹೇಳಿ ಹೇಳುಲಕ್ಕು.
2 ). ಊರು +ಅಂಡಮಾನು = ಊರಂಡಮಾನು . ಊರು ಅಂಡಮಾನಿನ ಹಾಂಗೆ ಆತು .
ಸಾಂದರ್ಬಿಕವಾಗಿ ಹೇಳ್ ತರೆ ಹೆರಾಣ ಆಗು ಹೊಗುಗಳಿಂದ ಸಂಪರ್ಕ ಕಡುಕೊಂಡ ಜಾಗೆ . ಮೊನ್ನೆ ರುದ್ರ ಪ್ರಯಾಗ ಜಿಲ್ಲೆಲಿ ಹಲವು ದಿಕ್ಕೇ ಆದ ಹಾಂಗೆ . ತೀರಾ ಹಳ್ಳಿಗಳಲ್ಲಿ ಈಗಳೂ ಆವುತು . ಸತ್ಯಣ್ಣನ ಪೆರ್ಲಲ್ಲಿ ಆಗ . ಅದು ಎನ್ನ ಕಲ್ಪನೆ ಅಷ್ಟೇ
ಅಂಡಮಾನು( +ನಿಕೋಬಾರ್ ದ್ವೀಪ ಸಮೂಹ ) ಹೇಳುದು ಭಾರತದ ಪೂರ್ವ ಕರಾವಳಿಲಿಪ್ಪ ದ್ವೀಪ . ಈಗ ಕೇಂದ್ರಾಡಳಿತ ಪ್ರದೇಶಕ್ಕೆ ಒಳಪಟ್ಟುಗೊಂಡಿದ್ದು . ಬ್ರಿಟೀಷರ ಕಾಲಲ್ಲಿ ತುಂಬಾ ದಂಗೆ ಏಳುವೋರ ಜೈಲಿ೦ಗೆ ಅಲ್ಲಿಗೆ ಕಳುಸಿಗೊಂಡಿತ್ತವಡ . ವೀರ ಸಾವರ್ಕರ್ ಸುಮಾರು ವರ್ಷ ಅಲ್ಲಿತ್ತಿದವಡ . ಹಾಂಗಾಗಿ ಜೈಲಿನ ಹಾಂಗೆ —-ಎಲ್ಲಿಗೂ ಹೂಪಲಾವುತ್ತಿಲ್ಲೇ ಹೇಳುವ ಹಿನ್ನಲೆಯೂ ಇದ್ದು .
ಅಡರು ಹೇಳಿರೆ ಶಬ್ದಕೋಶಲ್ಲಿ ಮೇಲೇರು, ಹಬ್ಬು ಹೇಳುವ ಅರ್ಥ ಕಂಡತ್ತು, ಮತ್ತೆ ಅಡರು [ತುಳು] ಹೇಳಿರೆ ಕೋಲುಸೌದಿಯ ತುಂಡುಗೊ- ಇದೆರಡು ಕೇಳಿ ಗೊಂತಿತ್ತು. ಹಾಂಗಾಗಿ ನೇರವಾಗಿ ನಿಂಗಳ ಹತ್ತರೆಯೇ ಕೇಳಿದ್ದು. ನಮ್ಮ ಭಾಷೆಲಿ ಸುಮಾರು ಗ್ರಾಮ್ಯಶಬ್ದಂಗೊ ಸೇರಿಗೊಂಡಿಕ್ಕು- ಅದರ ಕವನಲ್ಲಿ ಬಳಕೆ ಮಾಡುದರಿಂದ ಅದು ಎಲ್ಲೋರಿಂಗೂ ಗೊಂತಾವುತ್ತು. ಭಾಗ್ಯಕ್ಕ, ಇನ್ನೂಇನ್ನು ಹೆಚ್ಚಿಗೆ ಅಪರೂಪದ ಶಬ್ದಂಗಳ ಪ್ರಯೋಗವಾಗಲಿ- ನರಸಿಂಹಣ್ಣ ಮಾಡ್ತ ಹಾಂಗೆ. ಈಗ ಪದ್ಯ ಅರ್ಥವೂ ಆತು, ಕುಶಿಯೂ ಆತು- ಧನ್ಯವಾದಂಗೊ ಹೊಸ ದೃಷ್ಟಿಕೋನದ ಕಲ್ಪನೆಯ ಒಟ್ಟಿಂಗೆ ಅಡಿಗೆ ಸತ್ಯಣ್ಣನ ಕೇರಾಫ್ ಕಡೆಂದ ಬಂದ ಇನ್ನೊಂದು ಸೊತ್ತಿನ ಬಗ್ಗೆಯೂ ಮಾತಾಡಿದ್ದಕ್ಕೆ.
“ಹಾ೦ಕಾರ ಅಡರಿದ್ದು” ಹೇಳಿ ನಮ್ಮಲ್ಲಿಯೂ ಬಳಸುತ್ತವು.ಅಲ್ಲಿ ಮೇಲೇರು ಹೇಳ್ತ ಅರ್ಥವೆ ಆವುತ್ತು. ನಿ೦ಗೊ ಶಬ್ದಕೋಶಲ್ಲಿ ನೋಡಿದ ಅಡರು ನಮ್ಮತ್ತರೂ ಇದ್ದು . ನಿ೦ಗೊ ಹೇಳಿದ ವಿಷಯವ ಗಮನಲ್ಲಿ ಮಡಿಕೊಳ್ತೆ .
ಊರು ಅಂಡಮಾನು ಆವುತ್ತು – ಇಷ್ಟು ಸುಲಭದ್ದು ಎನಗೆ ಅರ್ಥ ಆಯಿದಿಲ್ಲೆನ್ನೆ- ನಾಚಿಗೆಗೇಡು.
ಛೆ… ಬಿಡಿ ಅತ್ತೆ.
ಹೋ!! ಚೆನ್ನೈ ಭಾವ೦ಗೆ ಹಬ್ಬ…
ಕೊಡೆಯಾಲ ಮನೆಲಿ ಸ
ಣ್ಣಡಿಗೆಯೊಬ್ಬನೆ ಮುಗುಶಿ
ಗಡಿಬಿಡಿಲಿ ರಂಗಣ್ಣ ಬಸ್ಸತ್ತಿದಾ
ಜಡಿಗುಟ್ಟಿ ಮಳೆ ಬತ್ತು
ಗುಡಿಹೆಟ್ಟಿ ಕೂದ ದೊ
ಡ್ಡಡಿಗೆ ಸತ್ಯಣ್ಣಂಗೆ ಪುರುಸೊತ್ತಿದಾ
ಕಡಿಯದ್ದೆ ಹನಿಬಿದ್ದು
ಜಡಿಗುಟ್ಟ ಮಳೆಬಪ್ಪ-
ಗಡಿಗೆ ಸತ್ಯಣ್ಣಂಗೆ ಪುರುಸೊತ್ತಿದಾ
ಕಡೆಯೆಕ್ಕು ಕಡುಬಿಂಗೆ
ಮಡುಗೆಕ್ಕು ಸೊಳೆಹೊರುದು
ಕೊಡುಗೊ ಚೆನ್ನೈಭಾವ ಫೋನ್ನಂಬ್ರವ ?
ಅಡಿಗೆ ಸತ್ಯಣ್ಣನ ಒಳ್ಳೆ ಸಂಪರ್ಕ ಇಪ್ಪದು ಬೈಲಿಲಿ ಚೆನ್ನೈಭಾವಂಗೆ ಮಾತ್ರ.
ಹಾಂಗಾಗಿ ಸತ್ಯಣ್ಣನ ಫೋನ್ನಂಬ್ರವ ಚೆನ್ನೈಭಾವನೇ ಕೊಡೆಕ್ಕಷ್ಟೆ. 🙂
😀 😀