Latest posts by ಸಂಪಾದಕ° (see all)
- ಪೆರಡಾಲ ವಸಂತ ವೇದಪಾಠ ಶಿಬಿರ : ಎಪ್ರಿಲ್7 ರಿಂದ ಪ್ರಾರಂಭ - April 6, 2023
- ವಿಷು ವಿಶೇಷ ಸ್ಪರ್ಧೆ – 2023 : ಆಹ್ವಾನ - March 19, 2023
- ನಗೆ ಬರಹ ದ್ವಿತೀಯ – ಮೆಡಿ ಉಪ್ಪಿನಕಾಯಿ - July 9, 2021
ಈ ವಾರ ಅಕ್ಷರ ವೃತ್ತಲ್ಲಿ ಒ೦ದು ಪ್ರಯತ್ನ ಮಾಡುವ°.
ಛ೦ದಸ್ಸಿನ ಹೆಸರು ತೋಟಕ ವೃತ್ತ.
ಚೌಪದಿಯ ಹಾ೦ಗೆ ನಾಲ್ಕು ಸಾಲುಗಳಲ್ಲಿ ದ್ವಿತೀಯಾಕ್ಷರ ಪ್ರಾಸ ( ಆದಿಪ್ರಾಸ) ನಿಯಮವ ಪಾಲುಸಿಗೊ೦ಡು ಈ ಸಮಸ್ಯೆಯ ಪರಿಹಾರ ಮಾಡುವ°, ಬನ್ನಿ.
ನಾಲ್ಕರಲ್ಲಿ ಒ೦ದು ಸಾಲು ಹೀ೦ಗಿದ್ದು.
ನೆಗೆಮಾಣಿಯ ಬೈದರೆ ಕೂಗುಗವಾ°॥
ಮತ್ತೆ ನಿ೦ಗಳ ಕಲ್ಪನೆಲಿ ಬೇಕಾದ ಹಾ೦ಗೆ ಮು೦ದುವರಿಸಿ.

ಸೂ:
ಇದರ ಲಕ್ಷಣ ಹೇ೦ಗೆ ಹೇಳಿರೆ:
೧೧- ೧೧- ೧೧- ೧೧-
ಒಂದು ಗೆರೆಲಿ – ಸಲಗಂ – ಲಘು, ಲಘು, ಗುರು – ಒಳಗೊಂಡ ಸಗಣ ನಾಲ್ಕು ಗುಂಪು ಬರೆಕ್ಕು. ಅದಕ್ಕೇ ಶೇಡ್ಯಮ್ಮೆ ಗೋಪಾಲಣ್ಣ ಸೂತ್ರವ ಹೀಂಗೆ ಹೇಳುಗು – ‘ಇರೆ ತೋಟಕಮೀರೆರಡಾ ಸಗಣಂ’.
ಕವಿಗಳ ಭಾಷೆಲಿ – ಸಗಣ೦ಗಳು ನಾಲ್ಕಿರೆ ತೋಟಕವೈ.
ತೋಟಕವೃತ್ತದ ಕೆಲವು ರಚನೆಗೊ:
- ಬೈಲಿಲಿ ಬಟ್ಟಮಾವ° ಹಾಕಿದ ಆದಿಗುರುಗಳ ಪ್ರಿಯ ಶಿಷ್ಯ ತೋಟಕಾಚಾರ್ಯರ ತೋಟಕಾಷ್ಟಕಮ್ (ಇವರಿಂದಾಗಿಯೇ ಇದಕ್ಕೆ ತೋಟಕ ವೃತ್ತ ಹೇಳಿ ಹೆಸರುಬಂದದಾಡ)
ಸಂಕೊಲೆ: https://oppanna.com/gurugo/totakashtakam - ಭಾರತರತ್ನ ದಿ.ಸುಬ್ಬಲಕ್ಷ್ಮಿ ಹಾಡಿದ, ನಿತ್ಯ ಹಸಿರಾದ ವೆ೦ಕಟೇಶ್ವರ ಸುಪ್ರಭಾತಲ್ಲಿ ” ಕಮಲಾಕುಚ ಚೂಚುಕ ಕು೦ಕುಮತೋ” ಇದೇ ಛ೦ದಸ್ಸಿಲಿ ಇಪ್ಪ ಭಾಗ.
ಸಂಕೊಲೆ: ಇಲ್ಲಿದ್ದು - ನಮ್ಮ ಬೈಲಿನ ನೆಗೆಮಾಣಿ ಬರದ ನೆಗೆಸುಪ್ರಭಾತ
ಸಂಕೊಲೆ: https://oppanna.com/nege/nege-suprabhata
~*~
ಈ ಸಮಸ್ಯಾ ಪೂರಣಕ್ಕೆ ಬಂದ ಕವನಂಗಳ ನೋಡಿರೆ ಭಾರೀ ಕೊಶೀ ಆವ್ತು (ನೆಗೆ ಮಾಣಿ ಕೂಗುತ್ತ ಹೇಳಿ ಕೊಶೀ ಆದ್ದು ಅಲ್ಲ ).
ನಮ್ಮವರಲ್ಲಿಪ್ಪ ಪ್ರತಿಭೆಯ ಹೆರ ಹಾಕಲೆ ಇದು ತುಂಬಾ ಸಹಕಾರಿ ಆಯಿದು ಹೇಳ್ತಲ್ಲಿ ಯಾವ ಸಂಶಯವೂ ಇಲ್ಲೆ.
ಇದೆಲ್ಲಾ ನೋಡಿ ನೆಗೆ ಮಾಣಿಗೆ ನೆಗೆ ಬಯಿಂದು ಹೇಳಿ ಇದರ ಮೇಗಿಪ್ಪ ಪಟ ನೋಡಿರೇ ಗೊಂತಾವ್ತು.
ನೆಗೆಮಾಣಿ ಅಲ್ಲ; ಈ ಸರ್ತಿ ಬೋಚಬಾವ° ಕೂಗುದು. ಎಂತಗೆ?
ರಘುಭಾವನ ಕಂಡರೆ ಬೈಲಿನೊಳಾ
|
ನೆಗೆ ಜಾರುಗು ಬೋಚನ ಮೋರೆಲಿಯೇ!
ಹೆಗಲಾಗಿಯೆ ಬಿಂಗಿಲಿ ಸೇರುವ – ಆ
ನೆಗೆಮಾಣಿಯ ಬೈದರೆ ಕೂಗುಗವಾ°! |
ನೆಗೆಮಾಣಿಗೆ ಆರಾರು ಬೈದರೆ ಬೋಚಬಾವಂಗೆ ಕೂಗಲೇ ಬಕ್ಕು. ಗೊಂತಾತೋ?
ಅಕ್ಕು..ಅಕ್ಕು. ಹೀಂಗೇ ಲೊಟ್ಟೆ ಹೇಳಿಗೊಂಡು ಕಾಲ ಕಳೆ. ಆಚಿಕೆ ಬೋಚಭಾವ ಬಿದ್ದು ಬಿದ್ದು ನೆಗೆ ಮಾಡ್ತದರ ಪೆಂಗಣ್ಣ ಕಂಡಿದನಡ.
ಯೇನೆ ಆಗಲಿ, ಇಲ್ಲೀಗ ಮಾತ್ರೆ, ಪ್ರಾಸ, ವೃತ್ತ ಎಲ್ಲ ಸರಿ ಆಯಿದು. ಮಾಷ್ಟ್ರು ಮಾವನಲ್ಲಿ ಇಂಗ್ಲೀಷಿನೊಟ್ಟಿಂಗೆ ಇದನ್ನೂ ಕಲ್ತದು ಗೊಂತಾವುತ್ತು. ಎನ್ನದೆಂತ ಟೀಕೆ ಇಲ್ಲೆಪ್ಪ.
ಹೋ! ಎಲ್ಲೋರು ಸೇರಿ ನೆಗೆಮಾಣಿಯ ಕೂಗುಸಿ ಆತೋ?
ಪದ್ಯಂಗೊ ಲಾಯ್ಕಾಯಿದು; ಸಂಶಯವೇ ಇಲ್ಲೆ.
ಆದರೆ ಕೂಗಿದ್ದರ್ಲಿ ಸಂಶಯ ಇದ್ದು.
ಅಕ್ಕಾ, ಎನಗೆ ಶ್ಯಾಮಣ್ಣನ ದಾಸಪ್ಪ ಮಾಸ್ಟ್ರನ ಕತೆ ನೆಂಪಾತು….
ಲಾಯ್ಕ ಆಯಿದಾತ….
ಉರಿ ಬೇಸಗೆ ಕೆಂಡವು ಸುಡ್ತದು ಮೈ
ಸರಿ ಚಾಮರ ಬೀಸಿಯೆ ಬೇನೆಯು ಕೈ
ಹರುದೋಡುವ ತೋಡದು ಕಂಡರೆ ಬೈ
ದರು ಯೋಚನೆ ಮಾಡದೆ ಹಾರುದೆ ಸೈ
ಎನ ಬೊಬ್ಬೆಯ ಹೊಡ್ಸೆಡ ಏ ಮಗನೇ
ಮನೆ ಚಾವಡಿ ಮೂಲೆಲಿ ಆಡುವಿಯೋ
ದಿನ ಹೀಂಗೆಯೆ ಲೂಟಿಯ ಮಾಡಿರೆ ನೀ
ನಿನ ಬೆನ್ನಿಗೆ ಬೀಳುಗು ಜಾಗ್ರತೆ ಹ್ಞಾ
ಉದಿಯಪ್ಪಗ ಮಾಡಿದ ತೆಳ್ಳವು ಆ
ಗದೆ ಮೋರೆಯ ಉಬ್ಬಿಸಿ ನಡ್ದವಿವೂ
ಇದ ಬೇಕೆನ ಚೂರೆಡೆ ಹೊಂದಿಕೆ ಮಾ
ಡದೆ ಗೆಂಟಿನ ಹಾಕುದು ಎಂತದಕೋ
ಧಗೆ ಇದ್ದರೆ ಪೇಟೆಗೆ ಹೋಗೆಡಿ ನಿಂ
ಗೊಗೆ ಬಚ್ಚಿರೆ ಎಂಗೊಗೆ ಬೈಗುಳವೂ
ಬೆಗರಿಳ್ಸುವ ಬೇಗೆಲಿ ಮಂಡೆಯ ಬೇ
ನೆಗೆ ಮಾಣಿಯ ಬೈದರೆ ಕೂಗುಗವಾ
{ಮಂಡೆಯ ಬೇನೆಗೆ }
ಅದಿತಿ ಅಕ್ಕನ ಪರಿಹಾರ ಈ ವಾರದ ಸಮಸ್ಯೆಗೆ ಹೊಸ ದಾರಿಯ ತೋರುಸಿದ್ದು.ಭಾರೀ ಲಾಯ್ಕ ಆಯಿದು
ಅದಿತಿ ಅಕ್ಕಂದು ಹೊಸ ವಿನೂತನ ಪರಿಹಾರ. ಪಷ್ಟಾಯಿದು ಅಕ್ಕ.
ಭಗದತ್ತ ಕೊದಂಟಿಯೊ ಹೋಂಟ ಫಕೀ
ರಗಮಾರನೊ ಬೋಸುಡಿ ಪಿರ್ಕಿಯೊ ಮೈ
ತಗಡೆಮ್ಮೆಯೊ ದರ್ವೆಶಿ ಹೇಳಿ ವಿನಾ
ನೆಗೆಮಾಣಿಯ ಬೈದರೆ ಕೂಗುಗವಾ
ಹ.ಹಾ.. ಶೈಲಜಕ್ಕ ”ಬೈಗಳು” ಅ೦ಕಣ ಸುರು ಮಾಡಿದ್ದವೋ ಹೇ೦ಗೆ? ಇಷ್ಟು ಬೈಗಳಿನ ಜಡಿಮಳೆ ಬ೦ದರೆ ನೆಗೆಮಾಣಿ ಕೂಗದ್ದೆ ಇಕ್ಕೊ? ಲಾಯ್ಕ ಆಯಿದು.
ನೆಗೆಮಾಣಿಯ ನೆಗೆ ಎಲ್ಲ ಗುಡ್ಡೆ ಹತ್ತುಗೋ ಶೈಲಜಕ್ಕ…ಪಾಪ ನೆಗೆಮಾಣಿ.
ಮಗನೇ ಹಟ ಮಾಡೆಡ ನೀ ಬೆಶಿಸೇ
ಮಗೆ ಕಾಯಲು ಬೇಕೆನಗೀಗ ಕೊಡೂ
ಹೊಗೆ ವಾಸನೆ ಬತ್ತದು ಬೇಡ ಬಿಡೂ
ನೆಗೆ ಮಾಣಿಯ ಬೈದರೆ ಕೂಗುಗವಾ
ಮಾವ,ಹೊಗೆ ವಾಸನೆ ಆದರೆ ಎ೦ತ ಸೇಮಗೆ ಸೇಮಗೆಯೇ..ರುಚಿಕರ ಆಯಿದು.
ಮಗುಭಾವನ ಮಾವಿನ ಗೆಲ್ಲ ಕೊಡೀ
ಹಗಲಾದರೆ ತುರ್ಕನೆ ಹತ್ತುಗವಾ°
ಚೊಗರಾದರು ಚೂ೦ಟಿದರಾ ಮೆಡಿಯಾ
ನೆಗೆಮಾಣಿಯ ಬೈದರೆ ಕೂಗುಗವಾ°॥
ಮೆಡಿ ಕೊಯ್ಯೆಡ ಪೋಕುರಿ ಹೇಳಿದರೇ
ನೆಡಗೊ೦ದರಿ ಮೋರೆಯ ಪೀ೦ಟುಸಿಯೇ
ಚಡವಿ೦ದಲೆ ಓಡುಗು ತೋಡಕರೇ
ಸೆಡವಿ೦ದಲೆ ಹೊಯ್ಗೆಲಿ ಜಾರುಗವಾ°॥
ಸೆಸಿತೋಟದ ತೆ೦ಗಿನ ಕೊತ್ತಳಿಕೇ
ಹೊಸಗೆದ್ದೆಯ ದ೦ಡೆಲಿ ಒಯ್ಶಿದರೇ
ಕಿಸೆಗೊ೦ದರಿ ಪಕ್ಕನೆ ಕೈಯಿಳುಶೀ
ಮಸಿಮಾಡುಗು ಕಿಚ್ಚಿನ ಪೆಟ್ಟಿಗೆಲೀ॥
ಹಳೆ ಹಟ್ಟಿಯ ನೋಡಿರೆ ಬೈಪ್ಪಣೆಯಾ
ಒಳ ಹುಲ್ಲಿನ ಕಟ್ಟವ ಬಿಡ್ಸುಗವಾ°
ಮಳೆ ಬ೦ದರೆ ಮಾಡಿನ ಓಡ ಬುಡಾ
ಚಳಿಯಾದರು ನೀರಿಲಿ ಹಾರುಗವಾ°॥
ಹೆಗಲಿ೦ಗೆ ಕುಳಿ೦ಪನು ಕಚ್ಚಿದರೂ
ಬೆಗರಿ೦ಗುದೆ ಬಚ್ಚದ ಪೋಕ್ರಿಯವಾ°
ಪೊಗರಿದ್ದರು ದೊಡ್ಡಕೆ ದೊ೦ಡೆಲಿಯೇ
ನೆಗೆಮಾಣಿಯ ಬೈದರೆ ಕೂಗುಗವಾ°॥
ಪೋಕ್ರಿ ಮಾಣಿಯ ಲೂಟಿಗೊ ಸ್ವಂತ ಅನುಭವದ್ದಾ ಹೇಂಗೆ ? ಬಾಲ್ಯದ ಸವಿನೆನಪುಗೊ ರಸಪಾಕವಾಗಿ ಬಯಿಂದು. ಪಾಪ ಬೈವದು ಬೇಡ ಮಾಣಿಯ ಲೂಟಿಮಾಡಿಗೊಂಡಿರಲಿ.
ಭಾವಯ್ಯ ಬೆಸ್ಟಾಯಿದು. ಅಪರೂಪದ ಹವ್ಯಕ ಶಬ್ದ ಪ್ರಯೋಗ ನೋಡುವಗ ಕೊಶಿ ಆವ್ತು.
ರಘು ಭಾವಾ,
ಸೂಪರ್ ಆಯಿದು ಇದು.
ಹಾಡುಲೆ ಅಂತೂ ತುಂಬಾ ಕೊಶಿ ಆವ್ತು, ನೆಗೆ ಬತ್ತು.
ನೆಗೆಮಾಡಿಯೆ ಲೂಟಿಯ ಮಾಡಿರುದೇ
ನೆಗೆಮಾಣಿಯ ಬೈದರೆ ಕೂಗುಗವಾ°
ಬಿಗುಮಾನವ ಬಿಟ್ಟಳು ಅಬ್ಬೆಯು ತಾ
ಬಿಗುದಪ್ಪಿಯೆ ಮುದ್ದಿಸಿ ತೂಗಿದಳೂ ॥
ಭುಗಿಲೆದ್ದತು ಕೋಪವು ವಾನರ ರಾ
ಜಗೆ, ಬೈದನು ತಿದ್ದುಲೆ ಅಂಗದನಾ
ನೆಗೆ – ಕಂದನೆ ಬಾನಿಲಿಯೆತ್ತರಕೇ
ನೆಗೆ, ಮಾಣಿಯ ಬೈದರೆ ಕೂಗುಗವಾ° ॥
ಅತ್ತೇ, ಇದು ಭಾರೀ ಲಾಯ್ಕದ ಕಲ್ಪನೆ. ಓಯ್, ನೆಗೆಮಾಣೀ – ಹಾರು ಮೇಗ೦ಗೆ !
ನೆಗೆ – ಕಂದನೆ ಬಾನಿಲಿಯೆತ್ತರಕೇ
ನೆಗೆ, ಮಾಣಿಯ ಬೈದರೆ ಕೂಗುಗವಾ°
ತೋಟಕ ವೃತ್ತದ ರಚನಗಳ ನೋಡಿಯಪ್ಪಗ ಸಗಣ ಮಾಂತ್ರ ಕಂಡತ್ತಷ್ತೆ.ಆದಿ ಪ್ರಾಸ ಕಂಡಿದಿಲ್ಲೆ.ಗೊಂತಿಪ್ಪವು ತಿಳುಶಿರೆ ಅಕ್ಕು.
ಅಪ್ಪು ಮಾವ. ಡಾ.ಮಹೇಶಣ್ಣನೂ ಈ ಪ್ರಶ್ನೆಯ ಕೇಳಿದ°. ಸ೦ಸ್ಕೃತಲ್ಲಿ ಆದಿಪ್ರಾಸದ ನಿಯಮ ಇಲ್ಲೆ.ಕನ್ನಡ ಛ೦ದೋಬದ್ಧ ರಚನೆಲಿ ಆದಿಪ್ರಾಸ ನಿಯಮ ಸಾಮಾನ್ಯ ಎಲ್ಲಾ ಪ್ರಕಾರಲ್ಲಿಯೂ ಇದ್ದು.ಕನ್ನಡಲ್ಲಿ ತೋಟಕದ ಬಳಕೆ ಭಾರೀ ಕಮ್ಮಿ ಹೇಳುಲಕ್ಕು.
ನಗೆ ಮಾಣಿಯ ಬೈದರೆ ಕೂಗುಗವಾ
ನಿಗ ಮಾಡಿಯೆ ಪಾಠವನೋದದ ಮಾ
ಣಿಗೆ ಜೆಪ್ಪುದು ಖಂಡಿತ ಹೇಳಿಕಿಯ
ಮ್ಮಗೆ ಬೇಡುವ ಗೋಳದು ತಪ್ಪದಡಾ
ನಗೆ ಮಾಣಿಯ ಬೈದರೆ ಕೂಗುಗವಾ
ಮಗನೇಳಿರೆಯಮ್ಮಗೆ ಹೆಮ್ಮೆಯೆ ಸು
ಮ್ಮಗೆಯೂರಿಡಿ ಡಂಗುರ ಹೆಟ್ಟುಸಿಯೇ
ದಿಗಿಲುಟ್ಟುಸಿ ಯಾರುದೆ ಬೈಯವಡಾ
ಪದ್ಯವ ಚೂರು ಸರಿ ಮಾಡಿ ಬರ್ದೇ..
ನಿಗ ಮಾಡಿಯೆ ಪಾಠವನೋದದೆಯೇ
ನೆಗರುತ್ತರೆ ಅಪ್ಪನು ಜೆಪ್ಪುಗಿದಾ
ನಿಗಿ ಕೆಂಡವ ಕಾರಿಕಿ ಕೊತ್ತಳಿಗೇ
ಸಿಗಿಲಪ್ಪಗ ತಪ್ಸೆನು ಬಾರದರೇ
ಮಗ ಹೇಳಿರೆ ಕೇಳದರೂ ದಿನವೂ
ಬಿಗಿಹುಬ್ಬಿನ ಗೆಂಡನ ಬೇಡುಗಿದಾ
ತೆಗೆಯದ್ದಿರಿ ನಿಂಗಳ ಬೈಗುಳವಾ
ನೆಗೆಮಾಣಿಯ ಬೈದರೆ ಕೂಗುಗವಾ
ದಿನ ನಿತ್ಯವು ಅಮ್ಮನು ಊರಿಡಿಕೂ
ಜನರತ್ತರೆ ಹೇಳುಗು ಕೂಗುದರಾ
ಮನೆ ಹತ್ತರೆ ಹೋಪವುದೇ ಹೆದರೀ
ದನವೋಡಿದ ಹಾಂಗೆಯೆ ಓಡುಗಡಾ
ಹೊಗೆಸೊಪ್ಪಿನ ಕುಪ್ಪಿಯ ಪೀಂಕುಸಿಯಾ
ಹೊಗೆಯಟ್ಟದ ಮೂಲೆಲಿ ಹುಗ್ಗುಸಿದಾ
ಸಿಗದಿಪ್ಪಗ ಮಾವನು ಕೋಪಿಸಿಯೇ
ನೆಗೆಮಾಣಿಯ ಬೈದರೆ ಕೂಗುಗವಾ ।೧।
ರಘುಭಾವನು ಗೀಚಿದ ಭಾಮಿನಿಯಾ
ತೆಗದಿಡ್ಕಿದ ಸಾರಡಿ ತೋಡಿಲಿಯೇ
ಬಿಗಿಮುಷ್ಟಿಯ ತೋರುಸಿಯಬ್ಬರಿಸೀ
ನೆಗೆಮಾಣಿಯ ಬೈದರೆ ಕೂಗುಗವಾ ।೨।
ಟೀಕೆ ಯೇ ಇಲ್ಲೆ ಮಾವ. ಭಾಮಿನಿಗೆ ತೊ೦ದರೆ ಕೊಟ್ಟರೆ ಕಾನಾವಣ್ಣನೂ ದ೦ಟೆ ತೆಗಗು !
ಕುಮಾರ ಭಾವ, ರಘುಭಾವ ಬರದ ಪದ್ಯವ ತೋಡಿಂಗೆ ಇಡ್ಕಿದರೆ, ನೆಗೆಮಾಣಿಯ….. ಚೋಲಿ ಎಳೆಕು.
ಫಸ್ಟಾಯಿದು ಪದ್ಯಂಗೊ.
ಮಾವ, ಕುಣಿಯ ಹೊಗೆಸೊಪ್ಪಿನ ಘಾಟು ತಡವಲೆಡಿಯದ್ದೆ ಅವ ಹುಗ್ಗಿಸಿಮಡುಗಿದ್ದಾಯಿಕು ಪಾಪ.
ಹಗಲಾದರೆ ಸಾಕವನಾ ಹಟವೋ
ಬಿಗಿಲೂ ಎನಗೇ ಕೊಡೆಯೂ ಎನಗೇ
ಬೆಗುಡೋ ನಿನಗೆಂತಕೆ ಬೇಕು ಮಗಾ
ನೆಗೆ ಮಾಣಿಯ ಬೈದರೆ ಕೂಗುಗವಾ
ಮಾವಾ,ರೈಸಿದ್ದು.ಸರೀ ಆಯಿದು ಬೈದ್ದದು ! ಕೂಗಲಿ.
ಗೋಪಾಲಣ್ಣಂಗೆ ೩ನೇ ಗೆರೆ ತಪ್ಪಿತ್ತಾ ಹೇಳಿ………….
ಎನ್ನ ತೋಟಕ……….
ಬಗೆ ಕೊಡ್ತೆಯಡಕೆ ಹೆರ್ಕಿದರೀ
ಧಗೆ ಬೇಸಗೆ ತಿಂಗಳ ದೊಡ್ರಜೆಲಿ
ಪ್ಪಗ ಮಾವ಼ನ ಠೀವಿಯ ಗರ್ಜನೆಲೂ
ನೆಗೆಮಾಣಿಯ ಬೈದರೆ ಕೂಗುಗವಾ಼
ಜೆಗಿಲಿಂದಲೆ ಏಣಿಯ ಹತ್ತಿಯದಾ
ಹೊಗೆಯಟ್ಟದೊಳುಪ್ಪಿನ ಕಾಯಿಯ ಮಂ
ಡಗೆ ಚೆಂಡಿಲಿ ಮುಟ್ಟಿಯೆ ಚಪ್ಪರಿಸೈ
ನೆಗೆಮಾಣಿಯ ಬೈದರೆ ಕೂಗುಗವಾ಼
ಅಪ್ಪು, ಗೋಪಾಲಣ್ಣನ ಮೂರ್ನೆ ಸಾಲಿಲಿ ತಪ್ಪಿದ್ದು.
ನಿಂಗಳ ಶುರುವಾಣ ಪದ್ಯಲ್ಲಿ ಶುರುವಾಣ ಗೆರೆಲಿ ಅದೇ ನಮುನೆ ತಪ್ಪು ಬಯಿಂದು.
ಶೈಲಜಕ್ಕ.ಲಾಯ್ಕ ಆಯಿದು ಪ್ರಯತ್ನ.
ಶುರುವಾಣದ್ದು,ಸಣ್ಣ ತಿದ್ದುಪಡಿ.
ಬಗೆ ಕೊಡ್ತೆಯಡಕ್ಕೆಯ ಹೆರ್ಕಿದರೀ
ಧಗೆ ಬೇಸಗೆ ತಿಂಗಳ ದೊಡ್ರಜೆಲಿ
ಪ್ಪಗ ಮಾವ಼ನ ಠೀವಿಯ ಗರ್ಜನೆಲೂ
ನೆಗೆಮಾಣಿಯ ಬೈದರೆ ಕೂಗುಗವಾ಼
ಆದರೆ ಎರಡು/ಮೂರನೆ ಸಾಲುಗಳ ನೆಡುಕೆ ಸ೦ಧಿ ಬಾರದ್ದರೆ ಪರಿಪೂರ್ಣ ಹೇಳುಲಕ್ಕು.
“ಮಗು ಮಾವನ” ಹೇಳಿ ಮಾಡಿರೆ ಉತ್ತಮ.
ಹಾ… ಅಪ್ಪಲ್ಲದಾ…. ಧನ್ಯವಾದಂಗೊ…
ಬೆಗುಡಾಡೆಡನೀ ಬಿಡುದೆಂತರದೂ
ಹೊಗೆರೈಲಿನ ಹಾಂಗೆಯೆ ಬಾಯಿಯಲೀ
ಸಿಗರೇಟಿನ ಬಲುಗೆಡ ಬೇಡೇಳೀ
ನೆಗೆಮಾಣಿಯ ಬೈದರೆ ಕೂಗುಗವಾ° ॥
ಯಪ್ಪ, ಮಾತ್ರೆ ಉಪಯೋಗಿಸಿದರೂ ಸಗಣ ಹಾಕಲೆ ಎಷ್ಟು ಕಷ್ಟ ಇದ್ದಪ್ಪಾ. ಒಂದು ಪದ್ಯ ಬರವಲೇ ಕಷ್ಟ ಆತು. ಭಾಗ್ಯಲಕ್ಷ್ಮಿ ಅಕ್ಕ ಅಷ್ಟೆಲ್ಲ ಹೇಂಗೆ ಬರದವಪ್ಪ,ಒಂದೆರಡು ಕಡೆ ತಡವರಿಸಿದ್ದು ಬಿಟ್ಟರೆ ಎಲ್ಲವೂ ಲಾಯಕಿತ್ತು. ಶ್ಯಾಮಣ್ಣನ ಸುರೂವಾಣ ಬ್ಯಾಟಿಂಗ್ ರೈಸಿದ್ದು.
ಎಂತರ ಬ್ಯಾಟಿಂಗ್ ರೈಸುದು ಭಾವಾ… ಫಸ್ಟ್ ಬಾಲಿಂಗೆ ಅವುಟ್ ಅಲ್ಲದಾ… ಸೆಹವಾಗಿನ ಹಾಂಗೆ
ಸಗಣ ಸರಿ ಬೀಳದ್ದೆ ಅವುಟ್….
ಹು,ಸಿಗರೇಟು ಬಲುಗಿರೆ ಬೈವದಾ ! ಎರಡ್ಡು ಬಿಡೆಡದೋ ಬೊಳು೦ಬು ಮಾವಾ ?
ಬೆಗುಡಾಡೆಡ ನೀ ಬಿಡುದೆಂತರದೂ
ಹೊಗೆರೈಲಿನ ಹಾಂಗೆಯೆ ಬಾಯಿಯಲೀ
ಸಿಗರೇಟಿನ ಇಡ್ಕಿದ ಗುದ್ದುವೆ ಬಾ
ನೆಗೆಮಾಣಿಯ ಬೈದರೆ ಕೂಗುಗವಾ° ॥
ರಘುಭಾವ, ವಿಸಂಧಿ ಬಂತದ.
ಬೊಳು೦ಬು ಮಾವ,
ಷಟ್ಪದಿಗಳಲ್ಲಿಪ್ಪ ವಿಸ೦ಧಿದೋಷದ ನಿಯಮ ಚೌಪದಿಗಳಲ್ಲಿ ಇಲ್ಲೆ.
ಅಪ್ಪಾ. ವಿಷಯ ಒಂದು ಗೊಂತಾತು. ಧನ್ಯವಾದಂಗೊ.
ಸಗಣ ರಟ್ಟಿದ ಹಾ೦ಗಾಯಿದೊ ಗೊನ್ತಿಲ್ಲೆ.ತಪ್ಪಿದ್ದರೆ ತಿದ್ದಿ ತೋರ್ಸುವಿ ಹೇಳಿ ಧೈರ್ಯಲ್ಲಿ ಹಾಕಿದೆ.
ನೆಗೆಮಾಡಿಯೆ ತಿಂಡಿಯ ಕೊಡ್ತರೆಯೀ
ಬಗೆ ಬೇಕೆನಗೆಸ್ಟುದೆ ಹೇಳುಗವಾ°
”ಹೊಗೆಯಿಲ್ಲದ ಕಿಚ್ಚಿಲಿಯಾಡಡ ಬಾ ”
ನೆಗೆಮಾಣಿಯ ಬೈದರೆ ಕೂಗುಗವಾ°
ಹಗಲಪ್ಪಗ ಶಾಲಗೆ ಕಳ್ಸುಲೆ ಹೋ
ಪಗ ಮಾಸಿದ ಗಾಯವ ತೋರ್ಸುಗವಾ°
ಬಿಗಿ ಮಾಡಿದ ಕೈಲಿಡುದೊಯ್ವಗಾ
ನೆಗೆಮಾಣಿಯ ಬೈದರೆ ಕೂಗುಗವಾ°
ಜೆಗಿಲಿ೦ದಲೆ ಆಟದ ಮೋಜಿನ
ಬೆಗರಿದ್ದರು ಹೂಟವ ಹೂಡುಗವಾ°
ಹಗೆ ಮಾಡದೆ ಕಾದಿಯು ಸೋತವ° ಆ
ನೆಗೆಮಾಣಿಯ ಬೈದರೆ ಕೂಗುಗವಾ
ಮಗ° ಬಾ ಬೆಗರೋಪಲೆ ಮೀ ತಣುದಾ
ಧಗೆ ಹೋದರೆ ಉ೦ಬಲೆ ಸೇರುಗವಾ°
ಸೊಗಸಿ೦ದಲೆ ಹೇಳುವ ಅಮ್ಮನು ಆ
ನೆಗೆಮಾಣಿಯ ಬೈದರೆ ಕೂಗುಗವಾ
ನೊಗ ಸೇರುವ ಅಣ್ಣನು ಬ೦ದರೆ
ಜಗ ಜಟ್ಟಿಗೊ ಎಂಗಳೆ ಹೇಳುಗವಾ°
ರಗಳ೦ದಲೆ ಜೋರಿಲಿ ಅಪ್ಪನು ಆ
ನೆಗೆಮಾಣಿಯ ಬೈದರೆ ಕೂಗುಗವಾ
ಜಗದೀಶನ ಬಿಂಕದ ಬಾಲ್ಯದ ಆ
ನೆಗೆಮೋರೆಯ ಸ೦ಚಿನ ಕೇಳುಗವಾ°
ಮುಗು ದಾ ಕತೆ ಅಜ್ಜಿಯು ” ಸಾಕೊರಗೋ° ”
ನೆಗೆಮಾಣಿಯ ಬೈದರೆ ಕೂಗುಗವಾ
ಭಾಗ್ಯಲಕ್ಷ್ಮಿ ಅಕ್ಕ ನೆಗೆಮಾಣಿಯ ಚೆಂದಕ್ಕೆ ಬೈದವು. ಶುರುವಾಣದ್ದಂತೂ ಸೂಪರ್.
ಎರಡ್ನೆ ಪದ್ಯಲ್ಲಿ ಮೂರ್ನೆ ಸಾಲಿಲಿಯೂ,ಮೂರ್ನೆ ಪದ್ಯದ ಶುರುವಾಣ ಸಾಲಿಲಿಯೂ ಒಂದು ಅಕ್ಷರ ಕಮ್ಮಿ ಆಯಿದು. ಬಾಕಿ ಇಪ್ಪದರಲ್ಲಿ ವಿಸಂಧಿ ಸರಿ ಮಾಡಿರೆ ಒಳ್ಳೆ ಪದ್ಯಂಗೊ.
ನಿಂಗಳ ಪ್ರಯತ್ನಕ್ಕೆ ಕೊಶಿ ಆತು.
ಅಕ್ಕನ ಪ್ರಯತ್ನ ಲಾಯ್ಕ ಆಯಿದು.ಅಲ್ಲಲ್ಲಿ ಸಣ್ಣ ತಿದ್ದುಪಡಿ ಮಾಡಿದರೆ ಸರಿಯಾತು.
ನೆಗೆಮಾಡಿಯೆ ತಿಂಡಿಯ ಕೊಡ್ತರೆಯೀ
ಬಗೆ ಬೇಕೆನಗೆಷ್ಟುದೆ ಹೇಳುಗವಾ°
”ಹೊಗೆಯಿಲ್ಲದ ಕಿಚ್ಚಿಲಿಯಾಡಡ ಬಾ ”
ನೆಗೆಮಾಣಿಯ ಬೈದರೆ ಕೂಗುಗವಾ°
ಹಗಲಪ್ಪಗ ಶಾಲಗೆ ಕಳ್ಸುಲೆ ಹೋ
ಪಗ ಮಾಸಿದ ಗಾಯವ ತೋರ್ಸುಗವಾ°
ಬಿಗಿ ಮಾಡಿದ ಕೈಲಿಡುದೊಯ್ಯುತಲೀ
ನೆಗೆಮಾಣಿಯ ಬೈದರೆ ಕೂಗುಗವಾ°
ಜೆಗಿಲಿ೦ದಲೆ ಆಟದ ಮೋಜಿಲಿಯೇ
ಬೆಗರಿದ್ದರು ಹೂಟವ ಹೂಡುಗವಾ°
ಹಗೆ ಮಾಡದೆ ಕಾದಿಯು ಸೋತರುದೇ
ನೆಗೆಮಾಣಿಯ ಬೈದರೆ ಕೂಗುಗವಾ°
ಮಗ° ಬಾ ಬೆಗರೋಪಲೆ ಮೀ ತಣುದಾ
ಧಗೆ ಹೋದರೆ ಉ೦ಬಲೆ ಸೇರುಗವಾ°
ಸೊಗಸಿ೦ದಲೆ ಹೇಳುವ ಅಮ್ಮನುದೇ
ನೆಗೆಮಾಣಿಯ ಬೈದರೆ ಕೂಗುಗವಾ
ನೊಗ ಸೇರುವ ಅಣ್ಣನು ಬ೦ದರೆ ಮೂ
ಜಗ ಜಟ್ಟಿಗೊ ಎಂಗಳೆ ಹೇಳುಗವಾ°
ರಗಳೆ೦ದಲೆ ಅಪ್ಪನು ಜೋರಿಲಿಯೇ
ನೆಗೆಮಾಣಿಯ ಬೈದರೆ ಕೂಗುಗವಾ
ಜಗದೀಶನ ಬಿಂಕದ ಬಾಲ್ಯದ ಆ
ನೆಗೆಮೋರೆಯ ಸ೦ಚಿನ ಕೇಳುಗವಾ°
ಮುಗುದಾ ಕತೆ ಅಜ್ಜಿಯು ” ಸಾಕೊರಗೋ° ”
ನೆಗೆಮಾಣಿಯ ಬೈದರೆ ಕೂಗುಗವಾ
ಸರಿ ಮಾಡುವ ಪ್ರಯತ್ನ ಮಾಡಿದ್ದೆ. ಹಾಕುಲೆ ಆಯಿದಿಲ್ಲೆ.ಈ ಸರ್ತಿ ವಿಸ೦ಧಿಯ ವಿಶಯ ರಜ ಹೆಚ್ಹು ಅರ್ಥ ಆತು. ಸರಿ ಮಾಡಿತೋರ್ಸದಕ್ಕೆ ಧನ್ಯವಾದನ್ಗೊ.
ನೆಗೆ ಮಾಣಿಯ ಬೈವ ಪ್ರಯತ್ನಕ್ಕೆ ಹೊಗಳಿಸಿಗೊ೦ಡ ಹಾ೦ಗೆ ಆತು.
ಬೆಶಿಬೆಶಿಗೆ ಶ್ಯಾಮಣ್ಣ ಸುರುಮಾಡಿಯೇ ಬಿಟ್ಟವದಾ. ಈ ಸರ್ತಿಯಾಣ ಸಮಸ್ಯಾ ವಿಷಯ ಭಾರೀ ಪಷ್ಟು ಇದ್ದು. ಅನೇಕ ಸ್ವಾರಸ್ಯ ಪದ್ಯಂಗೊ ಮೂಡಿ ಬಕ್ಕು ಹೇಳಿ ಎದುರುನೋಡ್ತು.
ಹೊಗೆ ಅಡಿಗೆಯ ಕೊಟ್ಟಗೆ ಮಾಡಿಲಿಯೇ
ಬಗೆ ಭಕ್ಷ್ಯದ ಪರಿಮಳ ಮೂಗಿಲಿಯೇ
ತೆಗೆ ತಿನ್ನಡ ನೀನು ಹೇಳ್ಯೋಂಡು
ನೆಗೆಮಾಣಿಯ ಬೈದರೆ ಕೂಗುಗವಾ°॥
ಹೋಓಓಓ… ಈಗ ಗೊಂತಾತದ… ಇದು ತೋಟಕ ಆಯ್ದಿಲ್ಲೆ.. ಛೆ…
ಅಪ್ಪು.
ಪ್ರತೀ ಗೆರೆಲಿ ಹನ್ನೆರಡು ಅಕ್ಷರ ಬಂದರೆ ಆತು.ಮೂರು ಮೂರು ಅಕ್ಷರ ಇಪ್ಪ ನಾಲ್ಕು ಗುಛ್ಛಂಗೊ. ಪ್ರತೀ ಮೂರು “ಸಗಣ” ಆಯೆಕ್ಕಪ್ಪದು. ( ಯಮಾತಾರಾಜಭಾನಸಲಗಂ – > ಇದರಲ್ಲಿ ಸಲಗಂ ಸಗಣ)
“ಯೇ ಭಾವ ಎಲ್ಲ ಸಾಲಿಲಿ ಸಗಣ ಹಾಕಿಗೊಂಡು ಬಂದರೆ ಆತು” ಹೇಳ್ತ ನೆಗೆಮಾಣಿ.
ಅಪ್ಪಪ್ಪು… ಸಗಣ ಹಾಕಿದ್ದು ಸರಿಯಾಗದ್ದ ಕಾರಣ ತೋಟಕ್ಕೆ ಹೋಗಿಯೂ ಪ್ರಯೋಜನ ಇಲ್ಲೆ ಹೇಳಿ ಆತು…
ಶ್ಯಾಮಣ್ಣ ಬರದ್ದದು ಈಗ ಸರಿಯಾತನ್ನೇ !
ಹೊಗೆ ತು೦ಬಿದ ಕೊಟ್ಟಗೆ ಮಾಡಿಲಿಯೇ
ಬಗೆ ಭಕ್ಷ್ಯದ ಪಮ್ಮವು ಮೂಗಿಲಿಯೇ
ತೆಗೆ ತಿನ್ನಡ ನೀ ನೆಡೆ ಹೇಳಿದರಾ
ನೆಗೆಮಾಣಿಯ ಬೈದರೆ ಕೂಗುಗವಾ°॥
ಎಷ್ಟು ನೋಡಿದರೂ ಸರಿ ಮಾಡುದು ಹೇಂಗೆ ಹೇಳಿ ಗೊಂತಾಗಿತ್ತಿಲ್ಲೆ….
ಗಾಯಾಳು ಸೆಹವಾಗಿಂಗೆ ತೆಂಡುಲ್ಕರು ರನ್ನರ್ ಆಗಿ ಬಂದಂಗಾತು…