Oppanna.com

ಸಮಸ್ಯೆ -04: “ಆಟಿಯ ತಿಂಗಳ ಮಳೆಗಾಲ”

ಬರದೋರು :   ಸಂಪಾದಕ°    on   28/07/2012    27 ಒಪ್ಪಂಗೊ

ಹೂಗಿನ ಒಳ ಕುಸುಮ ಇಪ್ಪ ಸಂಗತಿಯ ನವಿರು ನವಿರಾಗಿ ನಮ್ಮ ಬೈಲಿನವು ವಿವರುಸಿದ್ದವು.
ತುಂಬಾ ಕೊಶಿ ಆತು. ಭಾಗವಹಿಸಿದ ಹೆರಿ-ಕಿರಿಯ ಎಲ್ಲೋರಿಂಗೂ ನಮಸ್ಕಾರಂಗೊ.
ನಾಕನೇ ಸಮಸ್ಯೆ ಯೇವದು ನೋಡುವನೋ?

ಈ ವಾರದ ಸಮಸ್ಯೆ:

“ಆಟಿಯ ತಿಂಗಳ ಮಳೆಗಾಲ”

ಎಲ್ಲೋರುದೇ ಮಳೆಗಾಲದ ವಿವರಣೆ ಮಾಡಿ, ಮಳೆಲಿ ಚೆಂಡಿ ಆಗಿ, ಶರ ಪ್ರಯೋಗ ಮಾಡಿ.
ಆತೋ?

ಶರ ಷಟ್ಪದಿ

ಸೂ:

  • ಆಟಿ = ಕರ್ಕಾಟಕ ಮಾಸ
  • ಈ ಸಮಸ್ಯೆ ಶರ ಷಟ್ಪದಿಲಿ ಇದ್ದು.
    (ಆಟಿಯ | ತಿಂಗಳ | ಮಳೆಗಾ | ಲ)
    ನಾಕು ನಾಕರ ಎರಡು ಗುಚ್ಛ – ಮೊದಲೆರಡು ಸಾಲಿಲಿ.
    ನಾಕರ ಮೂರು ಗುಂಪು, ಕೊನೆಗೊಂದು ಗುರು – ಮೂರ್ನೇ ಸಾಲಿಲಿ.
  • ಆದಿಪ್ರಾಸಕ್ಕೆ ಸಲಹೆ: (ಆಟಿ)
    ಸುರುವಾಣ ಅಕ್ಷರ ಗುರು, ಎರಡ್ಣೇ ಅಕ್ಷರ “ಟ” ಕಾರ.
    ಕಾಟಿ, ಕೋಟೆ, ಅಟ್ಟ, ಪೆಟ್ಟು, ಲೂಟಿ, ಸೂಟೆ, ಇತ್ಯಾದಿ.
  • ಹೆಚ್ಚಿನ ಮಾಹಿತಿಗೆ:
    https://oppanna.com/oppa/shara-kusuma-bhoga-bhamini-shatpadi
    http://padyapaana.com

27 thoughts on “ಸಮಸ್ಯೆ -04: “ಆಟಿಯ ತಿಂಗಳ ಮಳೆಗಾಲ”

  1. ಮುಳಿಯದಣ್ಣನ ಪದ್ಯವೂ ಸಾಟಿಯಿಲ್ಲದ್ದದೇ , “ಜಲ ಮೈಮಾಟದ ನಾಟ್ಯವೊ?” ಅದ್ಬುತ ಕಲ್ಪನೆ, ಮುಳಿಯದಣ್ಣಾ ಪದ್ಯ ಸೂ….ಪರಾಯಿದು.

  2. ಮುಳಿಯದಣ್ಣ,ಇನ್ನು ಗೊಬ್ಬರದ ಹೆಡಗೆಯ ಹೊರ್ಲೆ ನಾವೇ.. .ಸುಂದರಿಯೋ ಸುಂದರನೋ ಸಿಕ್ಕಲೇ ಸಿಕ್ಕ .ಎನ್ನ ಪದ್ಯಕ್ಕೆ ನಿಂಗೊ ಒಪ್ಪಕ್ಕೆ ಒ…ಪ್ಪ ಕೊಟ್ಟಿದಿರಿ.ಧನ್ಯವಾದಂಗೊ.ಇನ್ನು ಚೆನ್ನೈ ಬಾವನ” ಎಡಕ್ಕ ಮಡಕ್ಕ”ಕ್ಕೆ — –ಎನಗೂ ಹಾಂಗೇ ಆಗಿಂಡ್ದಿದ್ದತ್ತು ಭಾವಾ, ನಾಕು ನಾಕು ಸರ್ತಿಬರದು ಬರದು, ತಿದ್ದಿ ತಿದ್ದಿ ,ಅಪ್ಪಾಗ ಒನ್ದು ನಮುನೆ ಸರಿ ಆವುತ್ತು . ನಿಂಗಳ ಪದ್ಯಲ್ಲಿ ಏನೂ ತಪ್ಪಿಲ್ಲೆ.
    ಚೂರು ಅರ್ಥ ಬದಲಿಸಿ ಬರದರೆ ಹೇಂಗೆ ಹೇಳಿ ಬರದ್ದದು. ಪದ್ಯ ಲಾಯಕ್ಕಾಅಯಿದು ದನ್ಯವಾದಂಗೊ.

  3. ಆಟದ ಚೆ೦ಡೆಗೆ
    ಕೂಟದ ಮದ್ದಳೆ
    ಸಾಟಿಯಿರದ್ದ ಪ್ರದರ್ಶನವೊ?
    ನಾಟಕ? ಜಲ ಮೈ
    ಮಾಟದ ನಾಟ್ಯವೊ
    ಆಟಿಯ ತಿ೦ಗಳ ಮಳೆಗಾಲ?

  4. ಈಟಿನ ಹೆಡಗೆಯ
    ತೋಟಕೆ ಹೊರುಲಾ
    ತಾಟಕಿ ಸು೦ದರಿ ಬಾರದ್ದೆ
    ಊಟಿಯ ಹೊಡೆ ತಿರು
    ಗಾಟಕೆ ಹೆರಟ
    ತ್ತಾಟಿಯ ತಿ೦ಗಳ ಮಳೆಗಾಲ
    ****************
    ಮಾಟೆಯ ಕೊರದೂ
    ಕೋಟಿಯ ಬಾಚುತ
    ಪಾಟವ ಕಲುಶಿದ ನಾಯಕರೂ
    ಓಟಿನ ಬೇಡುಲೆ
    ನೋಟಿನ ಸೊರುಗಿದ
    ರಾಟಿಯ ತಿ೦ಗಳ ಮಳೆಗಾಲ
    ****************
    ಊಟವನು೦ಬಲೆ
    ಪೇಟೆಗೆ ನೆಡವಗ
    ನೋಟಿನ ಕಿಸೆಯೊಳ ಮಡಗಿದರೆ
    ಕೂಟಲ್ಲಿಸ್ಪೇ
    ಟಾಟಕ್ಕೆಳದ
    ತ್ತಾಟಿಯ ತಿ೦ಗಳ ಮಳೆಗಾಲ
    ****************
    ಸಾಟಿನ ಕೊಟ್ಟರೆ
    ಲೂಟಿಯ ಮಾಣಿಗೆ
    ಮಾಟೆಯ ಹಲ್ಲಿನ ಕಿಸ್ಕೊ೦ಡು
    ಬಾಟುಗು ಕಾಟ೦
    ಕೋಟಿಯ ಮನೆಯೊಳ
    ಆಟಿಯ ತಿ೦ಗಳ ಮಳೆಗಾಲ
    *****************

  5. ಚೆನ್ನೈ ಬಾವನ ಪದ್ಯ ಲಾಯಕ್ಕಾಯಿದು.ಕಡೆಯ ಮೋರು ಸಾಲು ಹೀಂಗೆ ಮಾಡಿದರೆ ಹೇಂಗೆ ನೋಡಿ

    ಕೋಟನು ಬೂಟನು

    ಕಟ್ಟಿಯೆ ಮಡುಗುಸು-

    ಗಾಟಿಯ ತಿಂಗಳ ಮಳೆಗಾಲ

    1. ಧನ್ಯವಾದ ಬಾಲಣ್ಣ. ಲಾಯ್ಕ ಇದ್ದು ಇದ್ದು. ನಿಂಗೊ ಕೋಟಿನ ಬೂಟಿನ ಕಟ್ಟಿಮಡಿಗಿದ ರೀತಿ. ಮಾತ್ರೆ ಲೆಕ್ಕಾಚಾರ ರಜಾ ಎಡಕ್ಕಮಡಕ್ಕ ಆವ್ತು ಎನಗೆ . ಅಭ್ಯಾಸ ಇಲ್ಲೆ.

  6. ಲೂಟಿಯ ಮಕ್ಕಳ

    ಕಾಟವ ತಡವಲೆ

    ಆಟವ ಆಡುಸೆಕಾತನ್ನೆ

    ಪಟ್ಟನೆ ಹೆರಟರೆ

    ತಟ್ಟನೆ ಬಂತದ

    ಆಟಿಯ ತಿಂಗಳ ಮಳೆಗಾಲ

    ~~~~೦೦~~~~

    ನೋಟಕೆ ಅದ!ಮುಗಿ-

    ಲಾಟಕೆ ಮಿಂಚಿನ

    ಕೂಟಕೆ ಮೈಮನ ಮರಸಿತ್ತು!

    ಓಟವ ಓಡುಸು-

    ವಾಟವ ನಾಡುಸೆ-

    ಕಾಟಿಯ ತಿಂಗಳ ಮಳೆಗಾಲ

    1. ಬಾಲಣ್ಣನ ಆಟಿಯ ವರ್ಣನೆ ಮಳೆಗಾಲವ ನೆನಪ್ಪುಸಿತ್ತು ! ಎರಡನೆಯ ಸಾಲುಗಳ ಲಾಲಿತ್ಯ ಅದ್ಭುತ.
      ಬೆ೦ಗಳೂರಿಲಿ ಇಪ್ಪವಕ್ಕೆ ಮಳೆಗಾಲ ಇನ್ನು ನೆನಪು ಮಾ೦ತ್ರವೊ?

  7. ನೋಟದ ಬಿರುಸಿನ,

    ಕೂಟದ ಮುಗಿಲಿನ,

    ಮಾಟದ ಗುಡುಗಿನ ಮದ್ದಳೆಯ

    ಹೆಟ್ಟುತ, ನಾಗಾ-

    ಲೋಟದಿ ಬರೆಕಾ-

    ತಾಟಿಯ ತಿಂಗ ಳ ಮಳೆಗಾಲ

    (ಎಲ್ಲೊರ ಆಶಯ ಇದೂ)

  8. ಸಾಟಿಯೆ ಇಲ್ಲ
    ದ್ದಾಟಿಯ ಜಡಿಮಳೆ
    ಸೃಷ್ಟಿಯ ಮೋಹಕದಬ್ಬರವು ।
    ದೃಷ್ಟಿಯೆ ಮಂಕ
    ಪ್ಪಷ್ಟುದೆ ಸೊರುಗುಗು
    ಆಟಿಯ ತಿಂಗಳ ಮಳೆಗಾಲ ॥

    1. ಕುಮಾರ ಮಾವನ ಪದ್ಯಕ್ಕೆ ಸಾಟಿಯೆ ಇಲ್ಲೆ. ಭರ್ಜರಿ ಸೊರುಗುವ ಮಳೆಯ ವರ್ಣನೆ ಲಾಯಕಾಯಿದು.
      ಈ ಸರ್ತ್ಯಾಣ ಆಟಿಮಳೆಗಾಲ ನಿಜವಾಗಿ ನೋಡಿರೆ ಹೀಂಗೆ ಕಾಣ್ತಾ ಇದ್ದು.

      ಭೇಟಿಯ ಕೊಡದ್ದೆ
      ನೋಟವೆ ಇಲ್ಲದ
      ಚೋಟುದ್ದದ ಈ ಮಳೆಗಾಲ ।

      ಮಾಟದ ಬೆಶಿಲಲಿ
      ಆಟವನಾಡುವ
      ಆಟಿಯ ತಿಂಗಳ ಮಳೆಗಾಲ ॥

      ಅಲ್ಲದೊ ಭಾವಯ್ಯ ?

      1. ಬೊಳು೦ಬು ಮಾವಾ,
        “ಕೊಡದ್ದೆ” ಯ ಬದಲಿಸಿದರೆ ಸರಿ ಅಕ್ಕು. ( ಲಗ೦ ಸಮಸ್ಯೆ)

  9. ಆಟಿ ತಿಂಗಳ ವರ್ಣನೆ ತುಂಬ ತಮಾಶೆಯೊಟ್ಟಿಂಗೆ ಬಯಿಂದು.
    ‘ಕಿಡಿಂಜಲು’, ‘ಅಟ್ಟಲ್ಲಿ’, ‘ಸೈಡಿಂಗೆ’ -> ಇಲ್ಲಿ ಒಂದೊಂದು ಮಾತ್ರೆಗೊ ಹೆಚ್ಚಿಗೆ ಆಯಿದು. ಬಾಕಿ ಎಲ್ಲ ಸರಿ ಇದ್ದು ಭಾವ.

  10. ಅಟ್ಟಲಿ ಮಡುಗಿದ
    ಕಿಟ್ಟನ ಕಿಡಿಂಜಲು
    ತಟ್ಟನೆ ಮಳಗದ ಹೆರಬಂತು ।

    ಕೊಟ್ಟಗೆ ಅಟ್ಟಲ್ಲಿ
    ಕಟ್ಟಿದ ಸೂಟಗು
    ಆಟಿಯ ತಿಂಗಳ ಮಳೆಗಾಲ ॥

    ಹೂಟೆಯ ಹೂಡುಲೆ
    ನಾಟಿಯ ಮಾಡುಲೆ
    ಪೇಟೆಯ ಮೋಹವು ಬಿಡೆಕನ್ನೆ ।

    ಕೋಟುದೆ ಸೂಟುದೆ
    ಬೂಟುದೆ ಸೈಡಿಂಗೆ
    ಆಟಿಯ ತಿಂಗಳ ಮಳೆಗಾಲ ॥

    1. ಚೆನ್ನೈ ಭಾವನುದೆ ಗೆದ್ದಗೆ ಇಳುದ್ದದು ಕಂಡು ಕೊಶೀ ಆತು. ಪ್ರಥಮ ಪ್ರಯತ್ನ ಲಾಯಕಾಯಿದು. ಕುಮಾರಣ್ಣ ಹೇಳಿದ ಹಾಂಗೆ ಒಂದೆರಡು ಕಡೆ ಮಾತ್ರೆ ಜಾಸ್ತಿ ಆಯಿದು. ಮಳೆಗಾಲಲ್ಲಿ ಶೀತಕ್ಕೆ, ನೆಗುಡಿಗೆ ಹೇಳಿ ಕೆಲವೊಂದಾರಿ ಮಾತ್ರೆಗೊ ಬೇಕಾವ್ತು ಅಲ್ಲದೊ ?

      1. ಅಪ್ಪಪ್ಪು… ಮಾತ್ರೆ ರಜಾ ಕಡ್ಪ ಆಗಿಹೋತಡ. ತಜ್ಞರತ್ರೆ ಕೇಳಿಯಪ್ಪಗ ಹೀಂಗೆ ಹಾಕಿರೆ ಸಮ ಅಕ್ಕು ಹೇಳಿದ್ದವು. ಹಾಂಗೆ ಅದನ್ನೇ ರಜಾ ಸಮಮಾಡಿ ಇನ್ನೊಂದರಿ –

        ಅಟ್ಟಲಿ ಮಡುಗಿದ
        ಕಿಟ್ಟನ ಛತ್ರಿದೆ
        ತಟ್ಟನೆ ಮಳಗದ ಹೆರಬಂತು ।

        ಕೊಟ್ಟಗೆ ಅಟ್ಟಲಿ
        ಕಟ್ಟಿದ ಸೂಟಗು
        ಆಟಿಯ ತಿಂಗಳ ಮಳೆಗಾಲ ॥

        ಹೂಟೆಯ ಹೂಡುಲೆ
        ನಾಟಿಯ ಮಾಡುಲೆ
        ಪೇಟೆಯ ಮೋಹವು ಬಿಡೆಕನ್ನೆ ।

        ಕೋಟುದೆ ಬೂಟುದೆ
        ಕಟ್ಟಿಯೆ ಮಡುಗುವೊ
        ಆಟಿಯ ತಿಂಗಳ ಮಳೆಗಾಲ ॥

  11. ಪೇಟೆಯ ಜೀವನ
    ದೋಟದ ಎಡೆಲೀ
    ತೋಟದ ನೆನಪುದೆ ಚಿರಕಾಲ ।
    ನಾಟಿಯ ಸಮೆಲಿಯೆ
    ಕಾಟವ ಕೊಡುವ
    ಆಟಿಯ ತಿಂಗಳ ಮಳೆಗಾಲ ॥

    ಸೀಟಿನ ಒಳುಸಲೆ
    ಕೋಟಿಯ ಕೊಡುವಾ
    ಕಾಟುಗಳದ್ದೇ ಕಾರ್ಬಾರ ।
    ನೋಟಿನ ಎಣುಸುವ
    ಪಾಟಿಲಿ ಮರದವು
    ಆಟಿಯ ತಿಂಗಳ ಮಳೆಗಾಲ ॥

    ಹೋಟೆಲಿನೊಳದಿಕೆ
    ಮೇಟಿನ ಜೆತೆಲಿಯೆ
    “ಹಾಟಿ”ನ ತಿಂಡಿಯ ತಿಂದರುದೆ ।
    ಮಾಟದಿ, ಚಳಿ ಕುಳಿ
    ರಾಟವ ಆಡುವ
    ಆಟಿಯ ತಿಂಗಳ ಮಳೆಗಾಲ ॥

    1. ಬೊಳುಂಬು ಮಾವನ ಮೂರು ಪದ್ಯಂಗೊ ಲಾಯಿಕಿದ್ದು.
      ” ರಾಟವ ಆಡುವ ” -> ಇದರಲ್ಲಿ ‘ವಿಸಂಧಿ ದೋಷ’ ಆಯಿದು. ಸಂಧಿ ಆಯೆಕ್ಕಾದ ಶಬ್ದಂಗಳ ವಿಂಗಡುಸುದು ನಿಶಿದ್ಧ. “ರಾಟವನಾಡುವ” ಹೇಳಿ ಸರಿ ಮಾಡ್ಲಕ್ಕು.

      1. ಸರಿ ಮಾಡಿಕೊಟ್ಟದಕ್ಕೆ ಧನ್ಯವಾದಂಗೊ. ಹವ್ಯಕ ಭಾಷೆಂದ ಹೆರ ಹೋಪದು ಬೇಡ ಹೇಳ್ತ ಉದ್ದೇಶ ಎನ್ನದಾಗಿತ್ತು. “ಆಟವನಾಡುವ” ಹೇಳ್ತದು ಕನ್ನಡದ ಶಬ್ದದ ಹಾಂಗೆ ಕೇಳ್ತು.

  12. ಸೂಟೆಯ ಹಿಡಿದರು
    ನೋಟಕೆ ಕಸ್ತಲೆ
    ಮಾಟೆಯೊಳವೆ ನಾವಿದ್ದಾಂಗೆ!
    ತೋಟಕೆ ರೋಗವು
    ನಾಟುಗೊ ಸಂಶಯ
    ಆಟಿಯ ತಿಂಗಳ ಮಳೆಗಾಲ

    1. ಗೋಪಾಲಣ್ನ,
      ಎರಡು ವಾರ ಕಳುದು ಬಂದರೂ ಆಟಿ ತಿಂಗಳ ವರ್ಣನೆ ತುಂಬ ಲಾಯಿಕ್ಕಾಯಿದು. ಹೀಂಗೆ ಅಪರೂಪ ಆಗೆಡಿ ಆತೋ, ಪ್ಲೀಸ್….

  13. ಕುಂಟಲ ನೇರಳೆ
    ಸೋಂಟೆದೆ ಸೆಂಡಗೆ
    ಬೋಟಿದೆ ಚಕ್ಕುಲಿ ಹಪ್ಪಳದೆ
    ಒಟ್ಟಿಂಗಿದ್ದರೆ
    ಊಟವೆ ಬೇಡ
    ಆಟಿಯ ತಿಂಗಳ ಮಳೆಗಾಲ

    ಬ್ಯಾಟಿನ ಬಾಲಿನ
    ಅಟ್ಟಕೆ ಹತ್ತಿಸಿ
    ಸ್ಕೂಟರು ಶೆಡ್ಡಿನ ಒಳಮಡುಗಿ
    ಆಟವ ಆಡೆಡಿ
    ಪೇಟೆಗೆ ಹೋಗೆಡಿ
    ಆಟಿಯ ತಿಂಗಳ ಮಳೆಗಾಲ

    ಟೀಟಿಯೆ ಆಡುದು
    ಈಟಿವಿ ನೋಡುದು
    ಕಾಟಂಗೋಟಿಯ ತಿಂಬದುದೆ
    ಟ್ವಿಟ್ಟರು ಫೇಸ್ಬುಕ್
    ಪಟ್ಟಾಂಗಲೆ ಕಳೆ
    ಆಟಿಯ ತಿಂಗಳ ಮಳೆಗಾಲ

    1. ಪೆರ್ಲದಣ್ಣನ ಪದ್ಯಂಗೋ ಪಷ್ಟಾಯಿದು. ಮೂರನೆ ಪದ್ಯ ಹೈಕ್ಲಾಸು !
      ಮದಲ ಎರಡು ಪದ್ಯಲ್ಲಿ ಮಾತ್ರೆಗೊ ತಟಪಟ ಆಯಿದನ್ನೆ.
      ೧.” ಊಟವೆ ಬೇಡ ” -> ಒಂದು ಮಾತ್ರೆ ಕಮ್ಮಿ ಆಯಿದು.(>>> ಊಟವೆ ಮೆಚ್ಚುಗೊ, ಹೇಳಿರೆ ಸರಿ ಅಕ್ಕು)
      ೨. “ಅಟ್ಟಕೆ ಹತ್ತಿಸಿ
      ಸ್ಕೂಟರು …..” -> ಮಹಾಪ್ರಾಣದ ಮದಲಾಣ ಅಕ್ಷರ ಗುರು ಆವುತ್ತು, ಹಾಂಗಾಗಿ ‘ಹತ್ತಿಸಿ ” ಲಿ ಒಂದು ಮಾತ್ರೆ ಹೆಚ್ಚಿಗೆ ಆವುತ್ತು.( ಅಟ್ಟಕೆ ಹಾಕಿ….ಹೇಳಿ ತಿದ್ದುಲಕ್ಕು.)

  14. “ಆಟಿಲ್ಲಿಯೂ ಮಳೆ ಇಲ್ಲೇ…” ಹೇಳಿ ಊರಿಲ್ಲಿ ದೊಡ್ಡವು ಮಾತನಾಡಿಗೊಮ್ಬದರ ಕೇಳಿ ಪುಟಾಣಿ ಕಿಶೋರ ಹೀಂಗೆ ಹೇಳುಗ?

    ಆಟವ ಆಡುತ
    ತೋಟಲಿ ಕಳದರು
    ಪೇಂಟುದೆ ಚೆಂಡಿಯೆ ಆವುತ್ತೋ?
    ನೆಂಟರ ಜೊತೆಗೇ
    ಸೋಂಟೆಯ ಸವಿವಲೆ
    ಆಟಿಯ ತಿಂಗಳ ಮಳೆಗಾಲ

    1. ಸಣ್ಣ ಮಕ್ಕೋ ಹಾಂಗೇ ಹೇಳುಗಟ್ಟೆ. ಲಾಯಿಕಿದ್ದು.
      “ಆಟವ ಆಡುತ ” -> ವಿಸಂಧಿ ಅಪ್ಪದರ ತಿದ್ದುತ್ತಿರೋ ಅಕ್ಕ.

      1. “ಆಟವನಾಡುತ” ಹೇಳಿ ಸುಲಭಲ್ಲಿ ಮೊನ್ನೆಯೇ ಪರಿಹಾರ ಸಿಕ್ಕಿತ್ತು.”ಪೇಂಟುದೆ ಚೆಂಡಿಯೆ ಆವುತ್ತೋ?” – ಇದಕ್ಕೆ ಮನಸ್ಸಿಂಗೆ ಹಿತ ಅಪ್ಪ ಪರಿಹಾರ ಸಿಕ್ಕಿದ್ದಿಲ್ಲೇ…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×