Oppanna.com

ಸಮಸ್ಯೆ 101 : “ಕಟಾರ ತು೦ಬ ಬೇಯಿಸಿದ್ದು ಕಡ್ಲೆಬೇಳೆ ಪಾಯಸಾ”

ಬರದೋರು :   ಸಂಪಾದಕ°    on   05/09/2015    35 ಒಪ್ಪಂಗೊ

ಬೈಲಿಲಿ ಭಾಗ್ಯಕ್ಕ ಪರಿಚಯ ಮಾಡಿದ ” ಪ೦ಚಚಾಮರ” ವೃತ್ತಲ್ಲಿ ಈ ವಾರದ ಸಮಸ್ಯೆ .
ಅಕ್ಷರ ಛ೦ದಸ್ಸಿಲಿ ನಾಲ್ಕು ಸಾಲಿನ ಚರಣ೦ಗಳ ರಚನೆ ಮಾಡೆಕ್ಕು.
” ನನಾನ ನಾನ ನಾನನಾನ ನಾನನಾನ ನಾನನಾ “

ಸಮಸ್ಯೆ : “ಕಟಾರ ತು೦ಬ ಬೇಯಿಸಿದ್ದು ಕಡ್ಲೆಬೇಳೆ ಪಾಯಸಾ”

35 thoughts on “ಸಮಸ್ಯೆ 101 : “ಕಟಾರ ತು೦ಬ ಬೇಯಿಸಿದ್ದು ಕಡ್ಲೆಬೇಳೆ ಪಾಯಸಾ”

  1. ನಳ ಪಾಕ
    ಕಟಾರ ತುಂಬ ಬೇಯಿಸಿದ್ದು ಕಡ್ಲೆ ಬೇಳೆ ಪಾಯಸಾ
    ಚಟಾಕು ಉಪ್ಪು ಸೇರುಸಿಕ್ಕಿ ಪಾಕ ಮಾಡಿ ನೋಡಿರೇ
    ಬಟಾಟೆ ಬೆಂದಿ ತಿಂದ ಹಾಂಗೆ ಭಾರಿ ರೈಸುಗೂ ರುಚೀ
    ಪುಟಾಣಿ ಮಕ್ಕೊ ಹೊಟ್ಟೆ ತುಂಬ ಉಂಗು ಸಂತಸಂದಲೇ

    1. ಹ.ಹಾ.. ಪ್ರಾಸಾಕ್ಷರ೦ಗೊ ಮುಗುತ್ತೋ ಹೇಳಿ ಗ್ರೇಶಿರೆ ಏತಡ್ಕ ಮಾವನ ಬತ್ತಳಿಕೆಲಿ ಇನ್ನೂ ಸುಮಾರಿದ್ದು !
      ಪಾಕ ರೈಸಿದ್ದು ಮಾವ .

  2. ಎಲ್ಲವೂ ಈ ಸರ್ತಿ ಬೇರೆ ಬೇರೆ ಭಾವಲ್ಲಿ ಬರದ್ದು ಖುಷಿಯಾವ್ತು ಓದುಲೆ.

  3. ಕಟೀಲು ಮೇಳದಾಟ ನೋಡ್ಲೆ ಕೂದು ಬೆಲ್ಲ
    ತೂಗಲೂ
    ಘಟೋತ್ಕಚಾಗಿ ಬಂದ ವೇಷ ಕೊಟ್ಟ
    ದೊಡ್ಡ ಆರ್ಭಟೇ
    ಪಟಾಕಿ ಕೇಳಿ ಎದ್ದ ಭಾವ ತಿಂದದೆಂತ ಕೇಟರೇ
    ಕಟಾರ ತು೦sಬ ಬೇಯಿಸಿದ್ದ ಕಡ್ಲೆಬೇಳೆ ಪಾಯಸಾ” 🙂 🙂

    1. ಹ್ಹ ಹ್ಹ ಹ್ಹ … ಭಾವನ ಕಥೆ ಭಾರೀ ಫಸ್ಟು !! ಲಾಯ್ಕಾಯಿದು…

      1. ಅಪ್ಪು….. ಎಲ್ಲೋರದ್ದೂ ಹೊಸ ವೃತ್ತಲ್ಲಿ ರೈಸಿದ್ದು..

  4. ಹಟಕ್ಕೆ ಬಿದ್ದು ಪಾಕಶಾಸ್ತ್ರ ಪ೦ಡಿತಕ್ಕಳೆಲ್ಲರಾ
    ಸಟಕ್ಕ ಬೈದು ಹೋಗಿ ತ೦ದಿದಿ೦ದದೊ೦ದು ಪುಸ್ತಕಾ
    ಪುಟ೦ಗಳನ್ನೆ ನೋಡಿ ಸಜ್ಜಿಲುಪ್ಪು ಖಾರ ಹಾಕಿಯೇ
    ಕಟಾರ ತು೦ಬ ಬೇಯಿಸಿದ್ದು ಕಡ್ಲೆ ಬೇಳೆ ಪಾಯಸಾ II

    1. ಲಾಯ್ಕ ಅಕ್ಕಪ್ಪೋ ಉಪ್ಪು ಖಾರ ಹಾಕಿದ ಕಡ್ಲೆಬೇಳೆ ಪಾಯಸ !! ಪೂರಣ ಅಂತೂ ಲಾಯ್ಕಿದ್ದು !!

    2. ಇದು ಹೊಸ ರುಚಿಯೋ ಅಂಬಗ..?

      1. ಸಾಲದ್ದಕ್ಕೆ ಕಟಾರ ತುಂಬ ಮಾಡಿ ಮಡುಗಿದ್ದವಡ … ಇನ್ನು ಹೆಂಗೆ ಮುಗುಷುತ್ತವೋ..? ಛೆ…

        1. ಬೈಲಿನವು ಎಲ್ಲೋರು ಬಂದು ಪಾಯಸ ಹೊಡೆದರೆ, ತೂಷ್ಣಿಯಾಗಿ ಹೋಕೋ ಹೇಳಿ.
          ಕವನಂಗೊ, ವಿಮರ್ಷಗೊ ಎಲ್ಲವೂ ಲಾಯಕಿದ್ದು.

    3. ಅಂಬಗ ಅದಕ್ಕೆ ‘ಅಟ್ಟಿನಳಗೆ’ ಪಾಕ ಹೇಳಿ ಹೆಸರು ಮಡುಗಿದರೆ ಹೆಂಗೆ ?

  5. ಕಟಾರ ತುಂಬ ಬೇಯಿಸಿದ್ದು ಕಡ್ಲೆಬೇಳೆ ಪಾಯಸಾ
    ಕಟಾಕ್ಷ ಬೀರಿ ಮುದ್ದುಕೃಷ್ಣ ಕೇಳಿದಮ್ಮ ಪಾಚವಾ?
    ತಟಾಕದತ್ತ ಹೋಗಡಿಂದು ಹುಟ್ಟು ಹಬ್ಬವಲ್ಲದೋ ?
    ತಟಾರನೆದ್ದು ಕೇಳಿದಮ್ಮ ಬೆನ್ನೆ ಕಲ್ಲುಲಾಗದೋ ?
    ಕಟಾಕ್ಷ ಬೀರಿ= ಓರೆ ನೋಟಲ್ಲಿ
    ಪಾಯಸ ಮಾಡಿಗೊಂಡಿಪ್ಪಗ ಯಶೋದೆ, ಕೃಷ್ಣ೦ಗೆ ಬೆಣ್ಣೆಯ ನೆನಪ್ಪು ಮಾಡುದು ಬೇಡ ಹೇಳಿ ಮನಾಸಿಲಿ ಗ್ರೇಶಿಯೊಂಡು ಕೆರೆಯತ್ತರೆ ಆಡುಲೆ ಹೋಗಡಿ ಹೇಳಿ ಹೇಳ್ತು . ಅಷ್ಟಪ್ಪಗ ಕೂದಲ್ಲಿಂದ ಎದ್ದು ಬೆಣ್ಣೆ ಕದ್ದುಗೊಮ್ಬಲೆ ಯಾವಾಗಲೂ ಯಶೋದೆಯತ್ತರೆ ಕೇಳಿಯೇ (ಪರ್ಮಿಷನ್ ತೆಕ್ಕೊಂಡು) ಅವ° ಹೋಪದಾ ಹೇಳುವಾಂಗೆ ಕೊನ್ಜೆ ಮಾತಿಲಿ ಯಶೋದೆ ಮರೆಷೆಕ್ಕು ಹೇಳಿ ಗ್ರೇಶಿದ ವಿಷಯವನ್ನೇ”ಅಮ್ಮ ಬೆಣ್ಣೆ ಕಳ್ಳುಲಾಗದೋ” ಹೇಳಿ ಕೇಳ್ತ°

    1. ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನವನ್ನೇ ಸಮಸ್ಯೆಲಿ ಪೂರಣವಾಗಿ ತೆಕ್ಕೊಂಡದು ಸಮಯೋಚಿತ ಭಾಗ್ಯಕ್ಕ .

    2. ತುಂಬಾ ಲಾಯ್ಕು ಮತ್ತು ಸಮಯೋಚಿತವಾಗಿದ್ದು.

    3. ಪ್ರಚಲಿತವಾದ್ದನ್ನೇ ಪೂರಣದ ಹೂರಣವಾಗಿಸಿದ್ದು ತುಂಬಾ ಖುಷಿಯಾತು …ಲಾಯ್ಕಆಯಿದು ಎರಡೂ ಪದ್ಯಂಗೊ.

    4. ಶುರುವಿಂಗೆ ಬಂದ ಪಾಚ ಜಾಸ್ತಿ ರುಚಿಕಟ್ಟಾಯಿದು.

    5. ಪೂರಣವ ಮೆಚ್ಚಿದ ಎಲ್ಲೋರಿಂಗೂ ಧನ್ಯವಾದ

  6. ಪುಟಾಣಿ ಕಿಟ್ಟ ಪೋಕ್ರಿ ಮಿತ್ರರೊಟ್ಟುಗೂಡ್ಸಿಗೊಂಡರಾ
    ವಟಾರಲಿಪ್ಪ ಬೆಣ್ಣೆ ಕದ್ದು ದೂರು ಬಕ್ಕು ಹೇಳಿಯೇ I
    ಪುಟಾಣಿಯಮ್ಮ ಆ ಯಶೋದೆ ಹಬ್ಬದ೦ದು ಹಂಚುಲಾ
    ಕಟಾರ ತುಂಬ ಬೇಯಿಸಿದ್ದು ಕಡ್ಲೆ ಬೇಳೆ ಪಾಯಸಾ II

  7. ಪುಟಾಣಿ ಮಕ್ಕೊ ಬಂದವಪ್ಪ, ತುಂಬಿಹೋತು ಬೊಬ್ಬೆಯೂ
    ಕಟಾರ ತುಂಬ ಬೇಯಿಸಿದ್ದು ಕಡ್ಲೆಬೇಳೆ ಪಾಯಸಾ
    ಬಟಾಣಿ ಹಾಕಿ ಮಾಡೆಕಡ್ಡ ಕೂರ್ಮವಾ ಚಪಾತಿಗೇ
    ವಠಾರ ಪೂರ ಬಂದು ಕೇಳಿ ಖಾಲಿಮಾಡಿ ಹೋಕುದೇ ||

    1. ಎರಡು ಪೂರಣ೦ಗಳೂ ಲಾಯಕ ಆಯಿದು ಅತ್ತೆ .

  8. ಕಟಾಕ್ಷ ಬೀರಿ ವೃದ್ಧಿಸಿದ್ದ ಮೇಲೆ ಇಪ್ಪ ದೇವರೂ
    ಕಟಾವು ಹೆಚ್ಚು ಕಂಡು ಬೈಂದು ಮೂಲೆ ತೋಟದುದ್ದಕೂ
    ಪಟೋರ ಹೆರ್ಕಿ ತುಂಬುಸೆಕ್ಕು ಗೋಣಿಚೀಲ ಎಂಟರಾ
    ಕಟಾರ ತುಂಬ ಬೇಯಿಸೆಕ್ಕು ಕಡ್ಲೆಬೇಳೆ ಪಾಯಸಾ ||

      1. ಪಟೋರ ಹೇಳಿದರೆ ಒಣಗಿ ಸೊಲುದ ಅಡಕ್ಕೆಯ ಹೆರ್ಕಿ ಅಪ್ಪಗ ಸಿಕ್ಕುವ ಒಂದು ವಿಭಾಗ.. ಸೆಕೆಂಡ್ ಕ್ಲಾಸ್ ಅಡಕ್ಕೆಗೆ ಆ ಹೆಸರು.

    1. ಪಟೋರ ಸೆಕೆಂಡ್ ಕ್ಲಾಸು ಆದರೆಂತ, ಪೂರಣ ಫಷ್ಟು ಕ್ಲಾಸು

  9. ಚಟಾಕಿನಷ್ಟು ಮೊನ್ನೆ ಮಾಡಿ ಕಮ್ಮಿ ಹೇಳಿ ಇಂದಿಗೇ
    ಕಟಾರ ತು೦ಬ ಬೇಯಿಸಿದ್ದು ಕಡ್ಲೆಬೇಳೆ ಪಾಯಸಾ
    ಕಿಟಾರ ಬೊಬ್ಬೆ ಹಾಕಿದತ್ತೆಯೋರು ಬಾರ್ಸಿ ಬಿಟ್ಟವೂ
    ಗಿಟಾರು ಆರು ಮಾರು ಇಲ್ಲೆಯಾದ್ರೆ ಮೂರು ಮಾರಿದೂ.

    1. ಕಡೇ ಸಾಲು ಸ್ಪಷ್ಟ ಆಯಿದಿಲ್ಲೆನ್ನೇ ಹೇಳಿ ಮತ್ತೆ ಮತ್ತೆ ಓದಿಯಪ್ಪಗ ಅರ್ಥ ಆತು ಅದಿತಿಯಕ್ಕಾ . ವಿಜಯತ್ತೆ ಬರದ ನುಡಿಗಟ್ಟಿನ ಬಳಸಿದ್ದು ಕೊಶಿಯಾತು .

        1. ವಿಜಯತ್ತೆಯ ನುಡಿಗಟ್ಟು ಹೇಳುವಾಗ ಎನ್ನ ಮಂಡೆಗೆ ಹೊಕ್ಕಿತ್ತದ …ಟ್ಯೂಬ್ ಲೈಟ್ ! ಪದ್ಯ ಗಮ್ಮತ್ತಾಯಿದು ….ಹೊಸಹೊಸ ಕಲ್ಪನೆಲಿ ಬಂದರೆ ಓದುಲೆ ಖುಷಿಯಾವುತ್ತು…

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×