Oppanna.com

ಸಮಸ್ಯೆ 20 : ಚಳಿಗಾಲ ಹೋಗಿ ಬೇಸಗೆಗಾಲ ಬ೦ತು ಮಾವಿನಕಾಯಿ ಮೆಡಿ ಬಿಟ್ಟಿದೋ?

ಬರದೋರು :   ಸಂಪಾದಕ°    on   23/02/2013    46 ಒಪ್ಪಂಗೊ

ಈ ವಾರದ ಸಮಸ್ಯೆ  : ಚಳಿಗಾಲ ಹೋಗಿ ಬೇಸಗೆಗಾಲ ಬ೦ತು ಮಾವಿನಕಾಯಿ ಮೆಡಿ ಬಿಟ್ಟಿದೋ?

ಇದು ವಾರ್ಧಕ ಷಟ್ಪದಿಲಿ ಇದ್ದು.

ಸೂ:

ಈ ಸಮಸ್ಯೆ ವಾರ್ಧಕ ಷಟ್ಪದಿಲಿ ಇದ್ದು.
ಐದೈದು ಮಾತ್ರೆಯ ನಾಕು ಗುಂಪು – ಮೊದಲೆರಡು ಗೆರೆಲಿ.
ಐದು ಮಾತ್ರೆಯ ಆರು ಗುಂಪು, ಕೊನೆಗೊಂದು ಗುರು – ಮೂರ್ನೇ ಗೆರೆಲಿ.ಹೆಚ್ಚಿನ ಮಾಹಿತಿಗೆ:
https://oppanna.com/oppa/shara-kusuma-bhoga-bhamini-shatpadi
http://padyapaana.com

46 thoughts on “ಸಮಸ್ಯೆ 20 : ಚಳಿಗಾಲ ಹೋಗಿ ಬೇಸಗೆಗಾಲ ಬ೦ತು ಮಾವಿನಕಾಯಿ ಮೆಡಿ ಬಿಟ್ಟಿದೋ?

  1. ಎಂತಾರು ಇತ್ತೀಚೆಗೆ ಕೆಲವು ವಾರಂದ ಸಮಸ್ಯಾ ಪೂರಣ ರೈಸುತ್ತ ಇದ್ದು ನಮ್ಮ ಬೈಲಿಲಿ. ಸಂತೋಷ. ಹೀಂಗೆ ಮುಂದುವರುದು ಹೆಚ್ಚು ಹೆಚ್ಚು ಜೆನ ಭಾಗವಹಿಸಲಿ ಹೇದು ಹೇಳ್ವೊ° ಅಲ್ದೊ.

  2. 🙂 🙂 ಎಷ್ಟೇ ಪದ್ಯ ಬಂದರೂ ಒಂದು ಸಾಮ್ಯತೆ ಎಂತ ಹೇದರೆ ದ್ವಿತೀಯಾಕ್ಷರ ಪ್ರಾಸ ‘ ಳ ‘ಕಾರ.. ಅದೆಂತಪ್ಪ??

    1. ಕೇಳುಲಿಂಪದು ಪ್ರಾಸ ಬಂದರೆ
      ಹೇಳಿ ನಿಯಮವ ರೂಪಿಸಿದ್ದವು
      ಗಾಳಿಯೊಟ್ಟಿಗೆ ಹಾರ್ಸಿ ಕಳುಸದೆ ಪಾಲಿಸೆಕ್ಕೆಲ್ಲ
      ಮೇಳವಾದರೆ ಪದಗೊ ಪ್ರಾಸಲಿ
      ತಾಳದೊಟ್ಟಿಗೆ ಪದ್ಯ ರೈಸುಗು
      ಬೋಳು ಕಾಂಗದು ಪದ್ಯ ರಚಿಸಿರೆ ಗಣ್ಯ ಮಾಡದ್ದೆ

      ಈ ಕೆಳಾಣ ಸಂಕೋಲೆಲಿ, ತೆಕ್ಕುಂಜ ಮಾವ, ಗೋಪಾಲ ಮಾವ ಪ್ರಾಸಗಳ ಬಗ್ಗೆ ಹೆಚ್ಚಿನ ಮಾಹಿತಿ ಕೊಟ್ಟಿದವು.
      https://oppanna.com/chodyango/negeyu-kadalaleyaagi

      1. ಅದಿತಿಯಕ್ಕಂಗೆ ಧನ್ಯವಾದ. ಪದ್ಯಲ್ಲೇ ಉತ್ತರಿಸಿದ್ದಕ್ಕೆ ಒಂದೊಪ್ಪ..
        ಹಿಂದಾಣವು(ಮುದ್ದಣ,ಲಕ್ಷೀಶ) ಆದಿಪ್ರಾಸವ ಪ್ರಥಮಾಕ್ಷರ ಬಿಟ್ಟು ದ್ವಿತೀಯಾಕ್ಷರ ಮಾಡ್ಲೆ ಕಾರಣ ಗೊಂತಿದ್ದರೆ ಹೇಳ್ತೀರಾ?

        1. ಆದಿಪ್ರಾಸ ಮೊದಲನೇ ಮತ್ತು ಎರಡನೇ ಅಕ್ಷರ ಎರಡಕ್ಕೂ ಅನ್ವಯ ಆವ್ತು.
          ಮೊದಲನೇ ಅಕ್ಷರಲ್ಲಿ ವ್ಯಂಜನ ಪ್ರಾಸ ಮುಖ್ಯ ಅಲ್ಲ. ಸ್ವರ ಪ್ರಾಸ ಮುಖ್ಯ. ಹೇಳಿರೆ ಹ್ರಸ್ವ ಸ್ವರಂದ ಮೊದಲ ಸಾಲು ಮಾಡಿರೆ ಒಳುದ ೫ ಸಾಲಿಲಿಯೂ ಮೊದಲ ಅಕ್ಷರ ಹ್ರಸ್ವವೇ ಆಗಿರೆಕ್ಕು. ಎರಡನೇ ಅಕ್ಷರಲ್ಲಿ ವ್ಯಂಜನ ಪ್ರಾಸ ಮುಖ್ಯ. ಸ್ವರ ಯಾವುದೂ ಇಪ್ಪಲಕ್ಕು.
          ಉದಾಹರಣೆಗೆ “ಕುಡಿ” ಹೇಳಿ ಮೊದಲ ಪದ ಮೊದಲ ಸಾಲಿಲಿ ಇದ್ದರೆ, ಒಳುದ ಸಾಲಿಲಿ, “ಕೊಡೆ, ನಡಾವಳಿ, ತಡ” ಹೀಂಗೆ ಬಪ್ಪಲಕ್ಕು. ಇಲ್ಲಿ ಮೊದಲ ಸ್ವರ ಹ್ರಸ್ವ ( ಕ್ + ಉ , ಕ್ + ಒ …..). ಎರಡನೇ ಅಕ್ಷರಲ್ಲಿ “ಡ್” ವ್ಯಂಜನ ಪ್ರಾಸಲ್ಲಿ ಇರೆಕ್ಕು. ( ಡ್ + ಅ, ಡ್ + ಓ, ಡ್ + ಈ ….)
          ಅನುಸ್ವಾರ ಮೊದಲು ತಂದರೆ ಮತ್ತೆಯೂ ಹಾಂಗೆ ಇರೆಕ್ಕು. (ಕಂದ, ಚೆಂದ, ಮಂದ….)

          ಶತಾವಧಾನಿ ಶ್ರೀ ಗಣೇಶರು “ಪದ್ಯಪಾನ”ಲ್ಲಿ ಭಾರಿ ಲಾಯ್ಕಲ್ಲಿ ವಿವರಿಸಿದ್ದವು. ಆನೂ ಕವನ ರಚನೆಲಿ ವಿದ್ಯಾರ್ಥಿಯೇ :-). ಎನಗೂ ಈ ಅನುಮಾನ ಬಂದಿತ್ತು. ಆಗ ಶ್ರೀ ಗಣೇಶರ ಪಾಠಗಳಿಂದ ಪರಿಹಾರ ಆತು.
          http://padyapaana.com/?page_id=637

          1. ನಿ೦ಗೊಗೆ ಕಲಿವಲೆ ಮಾತ್ರ ಅಲ್ಲ , ಇನ್ನೊಬ್ಬ೦ಗೆ ಅರ್ಥ ಅಪ್ಪ ಹಾ೦ಗೆ ಹೇಳಿಕೊಡುವ ಅರ್ಹತೆದೆ ಇದ್ದು. ನಿ೦ಗೊ ಬರದ್ದ್ದು ಒದಿ ಕೊಶಿ ಆತು.

        2. ಶೈಲಜಕ್ಕ ಪ್ರಶ್ನೆ ಕೇಳಿದ್ದದು ಒಳ್ಳೆದಾತು,ಅದಿತಿ ಅಕ್ಕ ಒಳ್ಳೆ ವಿವರಣೆ ಕೊಟ್ಟಿದವು.
          ಕಾವ್ಯವ ಗಮಕಲ್ಲಿ ಓದೊಗ ದ್ವಿತೀಯಾಕ್ಷರ ಪ್ರಾಸಸ್ಥಾನದ ಮಹತ್ವ ಸರಿಯಾಗಿ ಅರ್ಥ ಆವುತ್ತು.ಯಕ್ಷಗಾನ ಸಾಹಿತ್ಯಲ್ಲಿ ಎಲ್ಲಾ ಪದ೦ಗಳೂ ಈ ನಿಯಮಲ್ಲಿದ್ದು.
          ಆದರೆ ಕೆಲವು ಸರ್ತಿ ಈ ನಿಯಮ೦ಗಳ ಮಿತಿ೦ದಾಗಿ ಭಾವದ ತೂಕ ಕಮ್ಮಿ ಆವುತ್ತು ಹೇಳ್ತ ಕಾರಣ೦ದ ಮ೦ಜೇಶ್ವರ ಗೋವಿ೦ದ ಪೈಗಳು ಪ್ರಾಸ ಇಲ್ಲದ್ದೆ ಕವನ ಬರವಲೆ ಶುರು ಮಾಡಿದವು,ಅದು ಮು೦ದುವರುದು ಈಗ ಗದ್ಯವೇ ಪದ್ಯ ಆದ್ದದು ಬೇಜಾರಿನ ಸ೦ಗತಿ.

          1. ಓ… ಎನ್ನ ಪದ್ಯಯಲ್ಲಿ ರಘು ಅಣ್ಣ ಸರಿ ಮಾಡಿದ್ದು ಈಗ ಗೊಂತಾತು… ಹೀಂಗೇ ಮಾರ್ಗದರ್ಶನ ಕೊಡ್ತಾ ಇರೇಕು ಹೇಳಿ ಕೇಳಿಕೆ .

          2. ಶೈಲಜಕ್ಕನ ಪರಿಹಾರದ ನಾಲ್ಕನೆ ಸಾಲಿನ ”ಕೇಳಿದವದಾ” ಸುರುವಾಣ ಶಬ್ದ ಲಘು ಆಯೆಕ್ಕಾತು,ಆದರೆ ಶಬ್ದ ಬದಲ್ಸೆಕ್ಕಾವುತ್ತು.

      2. ವಾಹ್..! ಅದಿತಿ ಅಕ್ಕಂಗೆ ಅಭಿನಂದನೆಗೊ.

  3. ಅಬ್ಬಬ್ಬಾ..!!! ಎಂತೆಂತಾ ಪದ್ಯಂಗ… ಇಷ್ಟು ಜನಂಗ ಬರದ ಪದ್ಯಂಗಳ ಓದಿ ಅಪ್ಪಗ ಎನಗೆ ನಿಜಕ್ಕೂ ಚಳಿಗಾಲ ಹೋಗಿ ಬೇಸಗೆಗಾಲ ಬಂತು ಮಾವಿನಕಾಯಿ ಮೆಡಿ ಬಿಟ್ಟಿದೋ ? ಹೇಳಿ ಸಂಶಯ ಬಂದು ಜಾಲ ಕರೇಲಿ ಹೋಗಿ, ಮಾವಿನ ಮರದ ಕೊಡಿ ನೋಡಿದೆ… ಛೆ… ಎಲ್ಲಿಗೆ ಮೆಡಿ ಬಿಡುದು? ಹೂಗೆಲ್ಲಾ ಕರೆಂಚಿದ್ದು… ಛೆ….

    1. ಅಯ್ಯೋ !! ಹೂಗು ಕರಂಚಿರೆ ಮತ್ತೆ ಉಪ್ಪಿನಕಾಯಿ ??

    2. ಶಾಮಣ್ಣಾ ,ಜಾಲ ಕರೇಲಿ ಹೋಗಿ ಆ ಪಡು ದಿಕ್ಕಾಣ ಮಾವಿನ ಮರ ನೋಡಿದ್ದಿಲ್ಲೆಯೋ?ಅದರಲ್ಲಿ ಒಂದೆರಡು ಗೆಲ್ಲು ಹೂಗು ಬಿಟ್ಟಿದಡ !

  4. ಹೊಳೆಮಾವು ಕಶಿಮಾವು ಕಾಟುಮಾವಿನ ಮರಲಿ
    ಚಳಿಗಾಳಿ ಸೋಂಕಿ ಮರ ತುಂಬ ಹೂಗು ಹೋಯಿದು
    ಬೆಳಿಮೋಡದೆಡಕ್ಕಿಲಿ ಕರಿಮುಗಿಲು ಬಂದರೋ ಹೂಗು ಪೂರಾ ಕರಂಚುಗು ।
    ಹುಳಿಹುಟ್ಟುವ ಮೊದಲೇ ಕೊಯಿಶಿಳಿಶುವ ತುರ್ತಿಲಿ
    ಗಳಿಕೆಯ ಹೆಳೆಲಿ ಯಮ್ಟಿಯಾರಿನವು ಕೇಳಿದವು
    ಚಳಿಗಾಲ ಹೋಗಿ ಬೇಸಗೆಗಾಲ ಬಂತು ಮಾವಿನಕಾಯಿ ಮೆಡಿ ಬಿಟ್ಟಿದೋ ?

    1. ಅತ್ತೆ,ಲಾಯ್ಕ ಆಯಿದು.
      ಸಣ್ಣ ತಿದ್ದುಪಡಿಗೊಃ

      ೧ ಚಳಿಗಾಳಿ ಸೋಂಕಿ ಮರ ತುಂಬ ಹೋಯಿದು ಹೂಗು— ಹೇಳಿ ಬದಲ್ಸಿರೆ ಓದುಲೆ ಸುಲಭ.

      ೨. ಬೆಳಿಮೋಡದೆಡಕ್ಕಿಲಿ ಕರಿಮುಗಿಲು ಬಂದರೋ ಹೂಗು ಪೂರಾ ಕರಂಚುಗು । –ದೆಡಕ್ಕಿಲಿ ಲಗ೦ ಆಯಿದು,
      ಬೆಳಿಮೋಡದೆಡೆಲಿ ಕರಿಮುಗಿಲ ಕ೦ಡರೆ ಹೂಗು ಮುಗುಟು ಪೂರ ಕರ೦ಚುಗು — ಹೇಳಿ ಮಾಡ್ಲಕ್ಕು,

      ೩.ಹುಳಿಯಪ್ಪ ಮೊದಲೆ ಕೊಯಿಶಿಳಿಶುತ್ತ ತುರ್ತಿಲ್ಲಿ

      ಗಳಿಕೆಯಾಸೆಲಿ ಯಮ್ಟಿಯಾರಿನವು ಕೇಳಿದವು — ಹೇಳಿ ಬದಲ್ಸಲಕ್ಕು

      1. ಮಾತ್ರೆಗಳ ಸರ್ಕಸ್ಸಿಲಿ ಕವನದ ಲಯದ ಕಡೆಂಗೆ ಗಮನಕೊಡುದು ಕಮ್ಮಿಯಾವುತ್ತು .
        ತಿದ್ದಿಯಪ್ಪಗ ಹೋ! ಅಪ್ಪನ್ನೆ ಹೇಳಿ ಗೊಂತಾವುತ್ತು .
        ಅದೇ ಪದ್ಯವ ತಿದ್ದಿ ಪುನಃ ಬರೆತ್ತೆ .

        ಹೊಳೆಮಾವು ಕಶಿಮಾವು ಕಾಟುಮಾವಿನ ಮರಲಿ
        ಚಳಿಗಾಳಿ ಸೋಂಕಿ ಮರತುಂಬ ಹೋಯಿದು ಹೂಗು
        ಬೆಳಿಮೋಡದೆಡೆಲಿ ಕರಿಮುಗಿಲ ಕಂಡರೆ ಹೂಗು ಮುಗುಟು ಪೂರ ಕರಂಚುಗು ।
        ಹುಳಿಯಪ್ಪ ಮೊದಲೆ ಕೊಯಿಶಿಳಿಶುತ್ತ ತುರ್ತಿಲ್ಲಿ
        ಗಳಿಕೆಯಾಸೆಲಿ ಯಮ್ಟಿಯಾರಿನವು ಕೇಳಿದವು
        ಚಳಿಗಾಲ ಹೋಗಿ ಬೇಸಗೆಗಾಲ ಬಂತು ಮಾವಿನಕಾಯಿ ಮೆಡಿ ಬಿಟ್ಟಿದೋ ?

  5. ಸೆಳಿವ ತಲೆಗೊ೦ದು ಬೈರಾಸು ಕಟ್ಟಿಯೆ ಗುಡ್ದೆ
    ಸುಳುದು ಶುದ್ಧದ ಗಾಳಿ ತಿ೦ಬ ಹೆಳೆಲಿಯೆ ಹೆರಟು
    ಮುಳಿಯ ಪದವಿಲಿ ಕ೦ಡೆಯರಳಿ ಮರದೆಲೆ ಹಸುರ ತಳಿರ ತೋರಣ ಚೆಪ್ಪರ I
    ಜುಳುಜುಳುನೆ ಹರಿವ ಹೊಳೆ ನೀರ ರಾಗಕೆ ಜಾಲು
    ಹೊಳಿವ ತಾಳಕೆ ಮನಸು ಮೇಳೈಸಿ ಕೇಳಿತ್ತು
    ಚಳಿಗಾಲ ಹೋಗಿ ಬೇಸಗೆ ಕಾಲ ಬಂತು ಮಾವಿನ ಕಾಯಿ ಮೆಡಿ ಬಿಟ್ಟಿದೋ?II

  6. ಅಳಿಯ ಬಂದದು ಹೇಳಿ ಮಾವನೆ ಗಡಿಬಿಡಿಲಿ ಕ
    ದಳಿಯ ಹಣ್ಣ ಕೊಚ್ಚಿ ರಸಾಯನವ ಮಾಡಿದವು
    ಬಳುಸಿದರೆ ಸುರುದುಂಗು,ಕೂರುಗು ಮಗಳು ಬಾಗಿಲ ಬುಡಲ್ಲಿ ಹತ್ತರವೇ/
    ಸುಳಿಬೆಲ್ಲ ಮೆಡಿಯೆಸರು ನೀರುದೋಸಗೆ, ಸರಿಯೆ
    ಎಳೆಯೆಳೆಯ ಸೇಮಗೆಯ ಸವಿದು, ಕೇಳುಗು ಮತ್ತೆ
    ಚಳಿಗಾಲ ಹೋಗಿ ಬೇಸಗೆ ಕಾಲ ಬಂತು ಮಾವಿನ ಕಾಯಿ ಮೆಡಿ ಬಿಟ್ಟಿದೋ?/

    (ತಪ್ಪಿದ್ದರೆ ತಿದ್ದಿ)

    1. ಒಳ್ಳೆದಾಯಿದು ಬಾಲಣ್ಣ.
      ಎಅರಡ್ನೆ ಸಾಲಿಲಿ – ದಳಿಯ ಹ।ಣ್ಣ ಕೊಚ್ಚಿ ರ।ಸಾಯನವ….ಇಲ್ಲಿ ಎರಡನೇ ಗುಂಪಿಲಿ ‘ಲಗಂ’ ಬಂತು.
      ದಳಿಯ ಹಣ್ಣ ಕೊರದು ರಸಾಯನ ಮಾಡಿದವು — ಹೇಳಿದರೆ ಹಣ್ಣಿನ ಕೊಚ್ಚಿ ಮಾಡುವಗ ಬಪ್ಪ ರಸ ಬತ್ತಿಲೆ ಅಪ್ಪೋ. ಲಗಂ ಬಂದರೆ ರಾಗ ಹಿಡುದು ಹಾಡುವಗ “ಡಂಕಿದ” ಹಾಂಗೆ ಆವುತ್ತು ಹೇಳುಗು, ರಘು ಭಾವ.

      1. ಅದು ಸರಿ,ಬಾಳೆ ಹಣ್ಣಿನ ರಸಾಯನಕ್ಕೆ ಕೊಚ್ಚುದೇ ಸರಿ ಅಲ್ಲದೋ?
        ಇಲ್ಲಿ ಸರಿ ಮಾಡಲೆ ನೋಡೆಕಷ್ಟೆ .ನಿಂಗಳ ಒಪ್ಪಕ್ಕೆ ಧನ್ಯವಾದಂಗೊ .

  7. ನಿ೦ಗಳ ಒಪ್ಪಕ್ಕೆ ಧನ್ಯವಾದ೦ಗೊ ಅತ್ತೆ.

  8. ಇಳುಶಿಮೆಡಿ ತೊಟ್ಟು ಮುರಿದರಿವ ಸೊನೆ ವಸ್ತ್ರಲ್ಲಿ
    ಬಳುದುಪ್ಪಿನೊಟ್ಟಿಂಗಳಗೆಲಿ ಹಾಕಿ ಮುಚ್ಚಿಟ್ಟು
    ಹಳತಾಗಿ ಚಿರುಟೊಗ ತೊಳದೊಣಗಿಸಿದೊಣ ಮೆಣಸರಿಶಿನ ಸಾಸಮೆಯ ಕಡದು
    ಸಳಸಳನೆ ಕೊದ್ದುಪ್ಪು ನೀರಿಲಿಯೆ ಬೆರುಸೆಕ್ಕು
    ಘಳಿಗೆ ಬಿಡುವಿಲ್ಲೆನಗೆ ಹೇಳಿಯೊಂದರಿ ಬೇಗ
    ಚಳಿಗಾಲ ಹೋಗಿ ಬೇಸಗೆಗಾಲ ಬಂತು ಮಾವಿನಕಾಯಿ ಮೆಡಿ ಬಿಟ್ಟಿದೋ

    1. ಮೆಣಸುಸಾಸಮೆಯೊಟ್ಟಿಂಗೆ ಸೊನೆಯೂ ಸೇರಿದ ಘಮಘಮ ಮೂಗಿಂಗೆತಟ್ಟಿತ್ತದಾ !
      ಉಪ್ಪಿನಕಾಯಿ ಹಾಕುವ ಗಡಿಬಿಡಿ ,ಸಂಭ್ರಮ ಕಣ್ಣಿಂಗೆ ಕಟ್ಟಿದ ಹಾಂಗೆ ಕವನ ಬಯಿಂದು . ಖುಶಿಯಾತು .

    2. ತುಂಬ ಲಾಯಕ. ” ಮುಚ್ಚಿಟ್ಟು” -> ಇದಕ್ಕೆ ನಮ್ಮ ಹವಿಕನ್ನಡದ ಶಬ್ಧ ಉಪಯೋಗುಸುಲೆ ಆವುತಿತ್ತರೆ, ಸೂಪರ್ ‘ಹವಿಗನ್ನಡ’ಪದ್ಯ.

      1. ನಿಂಗ್ಳ ಒಪ್ಪಕ್ಕೆ ಧನ್ಯವಾದಗ ಮಾವ :-).

        “ಮುಚ್ಚಿಟ್ಟು” ಹೇಳುವ ಪದ ಪಂಜಸೀಮೆಯ (ಮೂಡ್ಲಾಗ್ಯಣವ್ವು) ಹವ್ಯಕ ಭಾಷೆಲಿ ಬಳಕೆಲಿ ಇದ್ದು.
        ಬೇರೆ ಸೀಮೆಲಿ “ಮುಚ್ಚಿ ಮಡುಗಿಕ್ಕಿ” ಹೇಳಿ ಪ್ರಯೋಗ ಮಾಡ್ತವು.
        ಮತ್ತೊಂದು ಉದಾಹರಣೆ ಹೇಳಿರೆ “ಬೈಸಾರಿ” ಹೇಳುವ ಪದ. “ಬೈಸಾರಿ” ಹೇಳಿರೆ “ಹೊತ್ತೋಪಗ” ಹೇಳಿ ಅರ್ಥ.
        ಎಂಗ ಅಕ್ಕತಂಗೆಯರ ಯಜಮಾನಂದಿರಿಗೆ ಕೇಳಿಯೇ ಗೊತ್ತಿತ್ತಿಲ್ಲೆ. ಇವೆಂತರ “ಬೈಸಾರಿ”, “ಬೈಸಾರಿ” ಹೇಳುದು ಹೇಳಿ ಮಾತಾಡಿಕೊಂಡಿತ್ತಿದ್ದವು. 🙂
        ಒಪ್ಪಣ್ಣನ ಕೇಳಿರೆ ಹೇಳುಗು ಅದು “ಎನಿಗೆ-ನಿನಿಗೆ” ಭಾಷೆ ಹೇಳಿ. 🙂
        ಗಮನಿಸಿ, ಆನು ಈ ಒಪ್ಪವ ಅದೇ ಭಾಷೆಲಿ ಬರ್ದೆ.

        ಆನು ಇಷ್ಟೆಲ್ಲಾ ಹೇಳಿದೆ ಹೇಳಿ ದಯವಿಟ್ಟು ಅನ್ಯಥಾ ಭಾವಿಸೆಡಿ ಮಾವ. ವಾದಕ್ಕಾಗಿ ಅಲ್ಲ, ಹೀಂಗೊಂದು ನಮುನೆ ಭಾಷೆಯೂ ಇದ್ದು ಹೇಳಿ ಬೈಲಿನ ಮೂಲಕ ಎಲ್ಲವ್ಕ್ಕೂ ಗೊತ್ತಾಗಲಿ ಹೇಳಿ ಇಷ್ಟೆಲ್ಲಾ ಬರ್ದದ್ದು.

        1. ಅಪ್ಪಪ್ಪು… ಎನ್ನ ಹೆಂಡತ್ತಿಯೂ ಪಂಜ ಸೀಮೆದೆ.
          ಒಂದರಿ ಅದರ ಅಪ್ಪನ (ಎನ್ನ ಮಾವಗಳ ) ಮನೆಗೆ ಹೋದಿಪ್ಪಗ, ಅದು ಮನೆ ಜಾಲಿಲಿ ನಿಂದು “ಅಪಾಯ… ಅಪಾಯ…” ಹೇಳಿ ಬೊಬ್ಬೆ ಹೊಡದತ್ತು. ಎನಗೆ ಭಯಂಕರ ಹೆದರಿಕೆ ಹೆರ ಓಡಿರೆ, ಎಂತದೂ ಇಲ್ಲೆ… ಅದು “ಅಪ್ಪಯ್ಯ, ಅಪ್ಪಯ್ಯ” ಹೇಳಿ ಅಪ್ಪನ ದಿನಿಗೇಳಿದ್ದಡ….

          1. ಶ್ಯಾಮಣ್ಣ,
            ಹೀಂಗಿಪ್ಪ ತಮಾಷೆ ಘಟನೆಗೊ ತುಂಬ ಇಕ್ಕು ನಿಂಗಳ ಬತ್ತಳಿಕೆಲಿ, ಬೈಲಿಂಗೆ ಹಾಕುತ್ತಿರೋ..?

    3. ಪದ್ಯ ಲಾಯಿಕಾಯ್ದು.

      “ಬಳುದುಪ್ಪಿನೊಟ್ಟಿಂಗಳಗೆಲಿ ಹಾಕಿ ಮುಚ್ಚಿಟ್ಟು” ಇಲ್ಲಿ ಒಂದು ಮಾತ್ರೆ ಹೆಚ್ಚಿದ್ದು.
      “ಬಳುದುಪ್ಪಿನೊಟ್ಟಿಂಗಳಗೆಲಿ ಮುಚ್ಚಿರುಸೆಕ್ಕು ” ಹೇಳಿ ಮಾಡ್ಲಕ್ಕು.
      “ಮುಚ್ಚಿಟ್ಟು” ಹೇಳಿ ಈಗಣ ಕೆಲವರು ಹೇಳುಗಾದರೂ ಪಂಜ ಸೀಮೆ ಭಾಷೆಯ “ಮುಚ್ಚಿರುಸಿ” ಹೇಳುದು ಸರಿಯಾದ ಪ್ರಯೋಗ.

      1. ತಿದ್ದುಪಡಿಗೆ ಧನ್ಯವಾದ ಗೌರಿ.
        ಪದ್ಯವ ತಿದ್ದಿ ಕೆಳ ಹಾಕಿದ್ದೆ.

        ಇಳುಶಿಮೆಡಿ ತೊಟ್ಟು ಮುರಿದರಿವ ಸೊನೆ ವಸ್ತ್ರಲ್ಲಿ
        ಬಳುದುಪ್ಪಿನೊಟ್ಟಿಂಗಳಗೆಲಿ ಮುಚ್ಚಿರುಸೆಕ್ಕು
        ಹಳತಾಗಿ ಚಿರುಟೊಗ ತೊಳದೊಣಗಿಸಿದೊಣ ಮೆಣಸರಿಶಿನ ಸಾಸಮೆಯ ಕಡದು
        ಸಳಸಳನೆ ಕೊದ್ದುಪ್ಪು ನೀರಿಲಿಯೆ ಬೆರುಸೆಕ್ಕು
        ಘಳಿಗೆ ಬಿಡುವಿಲ್ಲೆನಗೆ ಹೇಳಿಯೊಂದರಿ ಬೇಗ
        ಚಳಿಗಾಲ ಹೋಗಿ ಬೇಸಗೆಗಾಲ ಬಂತು ಮಾವಿನಕಾಯಿ ಮೆಡಿ ಬಿಟ್ಟಿದೋ

        1. {ಆನು ಇಷ್ಟೆಲ್ಲಾ ಹೇಳಿದೆ ಹೇಳಿ ದಯವಿಟ್ಟು ಅನ್ಯಥಾ ಭಾವಿಸೆಡಿ ಮಾವ. ವಾದಕ್ಕಾಗಿ ಅಲ್ಲ}..
          ಒಪ್ಪಣ್ಣ ಬೈಲಿಲಿ ಅನಗತ್ಯ ವಾದ ವಿವಾದ ಯೇವತ್ತೂ ಬತ್ತಿಲೆ. ಚರ್ಚೆ ಆಯಿಕ್ಕೊಂಡಿರ್ತು. ಬೈಲಿಂಗೆ ಎಲ್ಲ ಸೀಮೆಯೋರು ಬತ್ತಾ ಇರ್ತವು, ಬರೆಕ್ಕು. ಅಲ್ಲದ್ದರೆ ಎನ್ನ ಹಾಂಗಿಪ್ಪವಕ್ಕೆ ಪಂಜ ಸೀಮೆಲಿಪ್ಪ ಶಬ್ಧ ಪ್ರಯೋಗಂಗೊ ಹೇಂಗೆ ಗೊಂತಪ್ಪದು..? ಪಂಜ ಸೀಮೆಯ ಕೆಲವು ವಿಶೇಷ ಪದಂಗಳ ಒಟ್ಟು ಮಾಡಿ ಅರ್ಥದೊಟ್ಟೀಂಗೆ ಬೈಲಿಂಗೆ ಹಾಕುತ್ತಿರೋ ಅದಿತಿ/ಜಯಗೌರಿ ಅಕ್ಕ.ಸುಮಾರು ಜೆನಕ್ಕೆ ಉಪಯೋಗ ಅಕ್ಕಿದ.

      2. ಪದ್ಯ ಈಗ ಪಷ್ಟಾತು.

  9. ನಮಸ್ಕಾರಂಗೋ,
    ತುಂಬ ಋಣಿ. ಕವನ ಬರೆಯದ್ದೇ ತುಕ್ಕು ಹಿಡುದ ಮಂಡೆಗೆ ಒಳ್ಳೇ ವ್ಯಾಯಮ ಆತು.
    ನಿಂಗಳೆಲ್ಲರ ಪ್ರೋತ್ಸಾಹ ಸದಾ ಇರಲಿ.

  10. ಅಕ್ಕ೦ಗೆ ನಮಸ್ಕಾರ,ಬೈಲಿ೦ಗೆ ಆತ್ಮೀಯ ಸ್ವಾಗತ.ಒಳ್ಳೆ ಪ್ರಯತ್ನ.
    ರಜಾ ಮಾತ್ರೆಗಳ ತಿದ್ದುಪಡಿ ಮಾಡಿದ್ದೆ. (ಎರಡನೆ ಸಾಲಿನ ಶುರುವಾಣ ವಿಸ೦ಧಿ ಒಳುದ್ದು,ಸಾರ ಇಲ್ಲೆ.)
    ಬೈಲಿ೦ಗೆ ಬತ್ತಾ ಇರಿ,ಬರೆತ್ತಾ ಇರಿ.

    ಕೆಳ ಸೆಸಿಯ ತೋಟಲ್ಲಿ ಗುಜ್ಜೆ ಬೆಳದಿಪ್ಪದರ
    ಒಳ ಬಂದು ಕುಂಞಿ ಮಾಣಿಯು ಹೇಳಿಯಪ್ಪಗಳೆ
    ಸೊಳೆ ಮಂಡಗೆಯ ಭರಣಿಯೊಟ್ಟಿ೦ಗೆಯು೦ಬವೊಳ ಹೊಗೆಯಟ್ಟದಿ೦ದಿಳುಶೊಗ
    ಕೇಳಿದವದಾ ಮೂಲೆಚಾವಡಿಲಿ ಮನುಗಿಪ್ಪ
    ಬೆಳಿತಲೆಯ ಮುದಿಯಜ್ಜಿ ನೆಂಪಿಲ್ಲಿ ದೆನಿಗೇಳಿ
    ಚಳಿಗಾಲ ಹೋಗಿ ಬೇಸಗೆಗಾಲ ಬಂತು ಮಾವಿನಕಾಯಿ ಮೆಡಿ ಬಿಟ್ಟಿದೋ

  11. ಕೆಳಾಣ ಸೆಸಿ ತೋಟಲ್ಲಿ ಗುಜ್ಜೆ ಬೆಳದ್ದದರ
    ಒಳ ಬಂದು ಕುಂಞಿ ಮಾಣಿ ಹೇಳಿದ್ದದೇ ತಡ
    ಸೊಳೆ ಮಂಡಗೆಯೊಟ್ಟಿಂಗೆ ಭರಣಿದೆ ವುಂಬೊಳಾಣ ಹೊಗೆಯಟ್ಟಂದಿಳಿವಗ
    ಕೇಳಿದವದಾ ಮೂಲೆಚಾವಡಿಲಿ ಮನುಗಿಪ್ಪ
    ಬೆಳಿತಲೆ ಮುದಿಯಜ್ಜಿ ನೆಂಪಿಲ್ಲಿ ದೆನಿಗೇಳಿ
    ಚಳಿಗಾಲ ಹೋಗಿ ಬೇಸಗೆಗಾಲ ಬಂತು ಮಾವಿನಕಾಯಿ ಮೆಡಿ ಬಿಟ್ಟಿದೋ

  12. ಅಳಿಗಾಲವೋ? ಭರಣಿಗೆಲ್ಲೊರಗಿ ಸೊರವಿಲ್ಲೆ

    ಇಳಿಶಿ ಕೈೊವಲೇಳಿದರೆ ಹತ್ತೊ ಕುಳವೆಯಿಲ್ಲೆ

    ಹಳೆಮುತ್ತಿನೂರ ಸುತ್ತಲೋದರೆ ಸಂಟ್ಯಾರ ಸಾಲ್ಮರವದಿಲ್ಲೆ ಶಿವ ಶಿವ !

    ವಳಚ್ಚಿಲಿನಾ ಕಾಟುಮಾವಿ೦ಗೆ ಸಾಟಿಲ್ಲೆ

    ಕಳಕಳ್ಸುಗತ್ತೆ ವಾರ್ಧಕಲೀ ಚಿಂತೆಲೀ

    ಚಳಿಗಾಲ ಹೋಗಿ ಬೇಸಗೆಗಾಲ ಬ೦ತು ಮಾವಿನಕಾಯಿ ಮೆಡಿ ಬಿಟ್ಟಿದೋ?

    1. ಈ ತರಲ್ಲಿ ಬರದರೆ ಹೆಚ್ಹು ಅರ್ಥಪೂರ್ಣ ಅಕ್ಕು ಹೇಳಿ ಸಲಹೆ ಕೊಟ್ಟ ಮುಳಿಯದಣ್ಣನ್ಗೆ ಧನ್ಯವಾದನ್ಗೊ

      ಅಳಿಗಾಲವೋ? ಭರಣಿಗೊರಗಿ ಸೊರವೇಯಿಲ್ಲೆ

      ಇಳಿಶಿ ಕೊಯ್ವಲೆ ಹೇಳಿದರೆ ಹತ್ಲೆ ಕುಳವಿಲ್ಲೆ

      ಹಳೆಮುತ್ತಿನೂರ ಸುತ್ತಲು ಹುಡ್ಕಿ ಸಂಟ್ಯಾರ ಸಾಲ್ಮರವದಿಲ್ಲೆ ಶಿವನೇ !

      ವಳಚಿಲಿನ ಕಾಟುಮಾವಿ೦ಗೆ ಸಾಟಿಲ್ಲೇಳಿ

      ಕಳಕಳಿಸುಗತ್ತೆ ವಾರ್ಧಕ್ಯಲ್ಲಿ ತಲೆಬೆಶಿಲಿ

      ಚಳಿಗಾಲ ಹೋಗಿ ಬೇಸಗೆಗಾಲ ಬ೦ತು ಮಾವಿನಕಾಯಿ ಮೆಡಿ ಬಿಟ್ಟಿದೋ?

  13. ಕಳೆಭರಿತ ಪರಿಸರವು ಮದಿಮ್ಮಾಳ ತೆರಲಿಯೆ
    ಕುಳಿತ ಪಿಕಸಂಕುಲದ ಗಾನಸುಧೆಯಬ್ಬರವು
    ಗಳಗಳನೆ ಕೂಗುತೋಡುವ ಚಳಿಯ ಗಮನಿಸಿದೆಯಾನೊಂದಿನ
    ಗಳೆಹಿಡುದು ತೋಟಂದ ಬಪ್ಪಗಳೆ ದಿನುಗೊಂಡ
    ದಳಿಬುಡದ ದೂರವಾಣಿಯ ಹಿಡುದು ಕೇಳಿದೆನು
    ಚಳಿಗಾಲ ಹೋಗಿ ಬೇಸಗೆಗಾಲ ಬ೦ತು ಮಾವಿನಕಾಯಿ ಮೆಡಿ ಬಿಟ್ಟಿದೋ?

    1. ತಪ್ಪಿದ್ದರ ಚೂರು ತಿದ್ದಿ ಬರದ್ದೆ.ಸಹಾಯ ಮಾಡಿದ ಮುಳಿಯ ರಘು ಅಣ್ಣಂಗೆ ಧನ್ಯವಾದಗೊ.

      ಕಳೆಭರಿತ ಪರಿಸರವು ಮದಿಮಾಳ ಚೆಂದಲ್ಲಿ
      ಕುಳಿತ ಪಿಕಸಂಕುಲದ ಗಾನಸುಧೆಯಬ್ಬರವು
      ಗಳಗಳನೆ ಕೂಗುತೋಡುವ ಚಳಿಯ ಗಮನಿಸಿದೆಯಾನೊಂದು ಹಾಡುಹಗಲು
      ಗಳೆಹಿಡುದು ತೋಟಂದ ಬಪ್ಪಗಳೆ ದಿನುಗೊಂಡ
      ದಳಿಬುಡದ ದೂರವಾಣಿಯ ಹಿಡುದು ಕೇಳಿದೆನು
      ಚಳಿಗಾಲ ಹೋಗಿ ಬೇಸಗೆಗಾಲ ಬ೦ತು ಮಾವಿನಕಾಯಿ ಮೆಡಿ ಬಿಟ್ಟಿದೋ?

  14. ತೆಳಿಹೆಜ್ಜೆ ಮೇಗಂದ ಕಲ್ಲುಪ್ಪು ತುಪ್ಪವೋ
    ಹುಳಿಮಜ್ಜಿಗೆಯೊ,ಕೂಟಿ ಮೆಡಿಯುಪ್ಪಿನಾಯೆಸರ
    ತೆಳುವಾಗಿ ಬೆರಳಿಂದ ನಚ್ಚಿಗೊಂಡುಂಡರದುವೆ ರುಚಿ ಬೇರೆಂತ ಬೇಕು ?
    ಕಳುದೊರಿಶ ಬೇಕಷ್ಟು ಸೊನೆಮೆಡಿಯು ಸಿಕ್ಕಿತ್ತು
    ಹೊಳೆಕರೆಯ ದೊಡ್ಡಾಮರಂದ ಕೊಯ್ಸೆಕ್ಕಿನ್ನು
    ಚಳಿಗಾಲ ಹೋಗಿ ಬೇಸಗೆಗಾಲ ಬಂತು ಮವಿನಕಾಯಿ ಮೆಡಿ ಬಿಟ್ಟಿದೋ ?

    1. ಮೊದಲ ಮೂರು ಸಾಲು ಓದುವಾಗ ಬಾಯಿಲಿ ನೀರು ಬ೦ತು ಮಾವ 🙂

    2. ಹು..ಹು..ಹೆಜ್ಜೆ ತೆಳಿ ಉಪ್ಪಿನಕಾಯಿ…ರಸಭರಿತ ಊಟ ಆತು ಮಾವ.

    3. teli hejje, huli majjige, medi uppinakaayi heluvaagale baayili neeru tumbuttu 🙂

  15. ಹೊಳೆಕರೆಯ ಹಳೆಮನೆಯ ಬಿಟ್ಟಿಕ್ಕಿ ಕಾಲಿಟ್ಟೆ
    ಥಳುಕು ಬಳುಕಿನ ಪೇಟೆಗೆ ದಶಕಗಳ ಮೊದಲೇ
    ಕಳದು ಹೋಯ್ದೆನಗಿಲ್ಲಿ ಮರಮಣ್ಣು ಕಾಡಿನೊಟ್ಟಿಂಗೆ ಸಂಬಂಧವೆಲ್ಲ
    ಮಳಿಗೆಯೊಳ ಕಾಂಬಗುಪ್ಪಿನಕಾಯಿ ಮನಸಿನೊಳ
    ಬೆಳದಿದ್ದ ಮನೆಯಮರ ನೆಂಪಾಗಿ ಯೋಚಿಸಿದೆ
    ಚಳಿಗಾಲ ಹೋಗಿ ಬೇಸಗೆಗಾಲ ಬಂತು ಮಾವಿನಕಾಯಿ ಮೆಡಿ ಬಿಟ್ಟಿದೋ

    1. ಒಳ್ಳೆ ಪೂರಣ ಅದಿತಿಯಕ್ಕ೦ದು.

      ಹೊಳೆಕರೆಯ ಹಳೆಮನೆಯ ಬಿಟ್ಟಿಕ್ಕಿ ನೆಡದಾಯ್ದು
      ಥಳುಕು ಬಳುಕಿನ ಪೇಟೆ ಹೊಡೆ ದಶಕಗಳ ಮದಲೆ

      ಹೇಳಿರೆ ಇನ್ನೂ ಲಾಯ್ಕಕ್ಕು ಅಲ್ಲದೊ?

      1. ಅಪ್ಪು ಸರಿ ನಿ೦ಗ ಹೇಳಿದ್ದು. ಹಾ೦ಗೆ ಬರೆದರೆ ಲಾಯ್ಕ ಆವ್ತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×