- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
ಗೆಂದೆಯ ನೊರೆಹಾಲು-(ಹವ್ಯಕ ಕವನ)
ಮಲೆನಾಡ ಗೆಂದೆ ದನ ಹಟ್ಟಿಲಿಪ್ಪಾಗ|
ನೋಡೆಕ್ಕದರ ಎನ್ನಬ್ಬೆ ಕಂಜಿ ಬಿಡುವಾಗ||
ಜಿಗಿಜಿಗಿದು ಓಡಿಯೊಂಡು ಬಂದಬ್ಬೆ ಹತ್ರಂಗೆ|
ಹಾಕಿತ್ತದರ ಪುಟ್ಟುಬಾಯಿ ಅಬ್ಬೆ ಕೆಚ್ಚಲಿಂಗೆ||೧||
ಗುದ್ದಿಯೊಂಡು ಎಳದೆಳದು ಸೊರೆಶಿತ್ತು ಹಾಲು|
ಕರದತ್ತೆನ್ನಬ್ಬೆ ಎರಡು ಮಲೆ ಪಾಲು||
ದೊಡ್ಡಚೆಂಬು ತುಂಬ ನೊರೆಹಾಲು ತುಂಬಿತ್ತು|
ಬೆಶಿಹಾಲು ಕುಡಿವಾಶೆ ಎನ್ನೊಳಾಂದ ಬಂತು||೨||
ನೋಡಿತ್ತಬ್ಬೆ ಎನ್ನ ಮೋರೆ,ಹೇಳಿತ್ತೆನಗೆ|
ಒಂದಿಷ್ಟು ಸುರಿತ್ತೆ ಒಡೆ ದೊಡ್ಡ ಬಾಯಿ||
ಕುಡಿಶಿಕ್ಕಿ ಹೇಳಿತ್ತಬ್ಬೆ ಎನ್ನ ಕೆಮಿಲಿ|
ನೋಡು, ನಿನ್ನಾ ಹೊಟ್ಟೆ ಬೇನೆ ನಾಳೆ ಖಾಲಿ||೩||
ಹೊಟ್ಟೆಬೇನೆ ಕಮ್ಮಿಯಾತು ರಜ ಹೊತ್ತಿಲ್ಲಿ|
ಅಂದಿರುಳು ಬಂತು ಒಳ್ಳೇತ ಒರಕ್ಕಲ್ಲಿ||
ರಕ್ತ ಭೇದಿಗೆ ಹಿಡುದತ್ತದ ಅಬ್ಬೆಯ ಸೂತ್ರ|
ಇದಕ್ಕೆ ನಮ್ಮ ಗೆಂದೆ ದನದ್ದೆ ದೊಡ್ಡ ಪಾತ್ರ||೪||
——-೦——-
ಫೋಟೋ: ಅಂತರ್ಜಾಲಂದ
ಹರೇರಾಮ ಗೋಪಾಲ
ಒಳ್ಳೆ ಪದ
ಕಂಬಾರು ಭಾವಂಗೆ ಧನ್ಯವಾದ
ಲಾಯಕ ಆಯಿದು
ದನ ಕಂಜಿಯ ಪಟ ಹಾಕಿ ಸೆಟ್ ಮಾಡಿದ ಶರ್ಮಭಾವಂಗೂ ಒಪ್ಪಕೊಟ್ಟ ಏತಡ್ಕ ನರಸಿಂಹಣ್ಣಂಗೂ ಧನ್ಯವಾದಂಗೊ.
ಸೂಪರ್ ವಿಜಯಕ್ಕ.