Oppanna.com

 ಕೊರೊನ ಕವಿತೆ-ರವಿಶಂಕರ ಶಾಸ್ತ್ರಿ

ಬರದೋರು :   ಶರ್ಮಪ್ಪಚ್ಚಿ    on   29/06/2020    0 ಒಪ್ಪಂಗೊ

 ಕೊರೊನ ಕವಿತೆ

-ರವಿಶಂಕರ ಶಾಸ್ತ್ರಿ

ಈ ಸರ್ತಿ ಊರಿಂಗೆ ಹೋಪಲಾಯ್ದಿಲ್ಲೆ
ಕೊರೊನ ಗಲಾಟೆ, ಮನೆ ಹೆರಟಿದಿಲ್ಲೆ
ದೊಡ್ಡ ರಜೆ ಮುಗಿದತ್ತು ಮನೆಯೊಳವೆ ಕೂದು
ಎಲ್ಲೋರಿಂಗೂ ಬೊಡಿದತ್ತು ಕಾದು-ಕಾದು.
ಈ ಸರ್ತಿ ಎಷ್ಟೊಂದು ಜಂಬ್ರ ಇರ್ತಿತ್ತು
ಉಪನಯನ, ಮದುವೆ ಎಲ್ಲ ಮಿಸ್ಸಾತು
ಹೋಳಿಗೆ, ಪಾಯಸ ಎಲ್ಲ ತಪ್ಪಿತ್ತು
ನೆಂಟ್ರ ನೋಡುವ ಭಾಗ್ಯ ಇಲ್ಲದ್ದೆ ಹೋತು.
ದೊಡ್ಡ ರಜೆ ಹೇಳ್ಯೊಂಡು ಊರಿಂಗೆ ಹೋಗಿ
ಮಾವು,ಹಲಸಿನ ಹಣ್ಣು ತಿಂದು ತೇಗಿ
-ಆ ಭಾಗ್ಯ ಎಲ್ಲಿದ್ದು, ಎಲ್ಲ ಬರೀ ನೆಂಪಾತು,
ವಾಟ್ಸಪ್, ಫೇಸ್ಬುಕ್ಕಿಲಿ ನೋಡಿದ್ದೆ ಬಂತು
ಎಲ್ಲೋರು ಬಗೆಬಗೆಯ ತಿಂಡಿ ಮಾಡಿದವು
ಸ್ಟೇಟಸ್ಸು ಪೋಸ್ಟುಗಳಲ್ಲಿ ಹಾಕಿ ತೋರ್ಸಿದವು
ಖುಷಿಪಟ್ಟೆಯ ಬರೀ ದೂರಂದ ನೋಡಿ
ಕೊರೊನ ಮುಗಿದಪ್ಪಗ ಬತ್ತೆಯಾ ಓಡಿ!
==============================
ಚುಟುಕಂಗೊ
1.ಮಾಣಿಯಾ ಕಂಡಾರೆ ಕೂಸಿಂಗೆ ಇಷ್ಟ
ಬಾಯ್ಬಿಟ್ಟು ಹೇಳುದು ಒಂಚೂರು ಕಷ್ಟ
ಕದ್ದು-ಮುಚ್ಚಿ ಮೆಸೇಜು ಮಾಡದ್ದೆ ಬಿಡ
ಒಟ್ಟಾರೆ ಕ್ಲಾಸಿಂಗೆ ಯಾವಾಗ್ಲೂ ತಡ!
2.
ಈ ಮಾಣಿಯಾ ಮೋರೆ ಗುರ್ತ ಇಲ್ಲೆನ್ನೆ
ಆದರೂ ಎಲ್ಲಿಯೋ ಕಂಡ ಹಾಂಗಿದ್ದನ್ನೆ
ಮೊನ್ನಾಣ ಮದುವೇಲಿ ಕಂಡದಾದಿಕ್ಕು
ಅಲ್ಲದ್ರೆ ಫ್ರೆಂಡ್ ರಿಕ್ವೆಷ್ಟು ಬಂದ ಫೇಸ್ಬುಕ್ಕು!
~~~~*****~~~~
ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)
ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×