Oppanna.com

ಕವನ ದ್ವಿತೀಯ – ಎಂಥಾ ಕಾಲ ಬಂತೋ ಮಾಣಿ

ಬರದೋರು :   ಸಂಪಾದಕ°    on   07/07/2021    0 ಒಪ್ಪಂಗೊ

ಕೃಷ್ಣಾನಂದ ಭಟ್, ಕೂಜಳ್ಳಿ.

ಎಂಥಾ ಕಾಲ ಬಂತೋ ಮಾಣಿ ನಿಂಗಳ ಕಾಲ್ದಲ್ಲಿ
ಇಂಥದ್ದೆಲ್ಲ ನೋಡಿದ್ವಿಲ್ಲೆ ನಂಗಳ ಬದ್ಕಲ್ಲಿ.

ಹಬ್ಬ ಹರಿದಿನ ಮರ್ತೇಹೋತು ವಂದೇ ವರ್ಷಕ್ಕೆ
ಬೀಗ ಹಾಕಿ ಬಂದ್ ಮಾಡ್ಬುಟ್ಟೊ ದೇವಸ್ಥಾನಕ್ಕೆ
ಮಕ್ಕಗಂತೂ ಶಾಲೆ ಇಲ್ಲೆ ಮನೆಲೇ ಪಾಠದ ಶಿಕ್ಷೆ
ಎತ್ ಹಾಕ್ತೊ ಮುಂದಿನ್ ಕ್ಲಾಸಿಗ್ ಮಾಡ್ದೆ ಪರೀಕ್ಷೆ.

ಯಾರ್ನೂ ಮೂಟ್ವಾಂಗಿಲ್ಲೆ ಹಿಂದೆಮುಂದೆ ಬಪ್ಪಾಂಗಿಲ್ಲೆ
ಆಶೀರ್ವಾದ, ನಮಸ್ಕಾರ ಎಲ್ಲದೂ ದೂರದಿಂದ್ಲೆ .
ಕರೆಯೂದಿಲ್ಲೆ,ಹೋಪೂದಿಲ್ಲೆ ಎಲ್ಲಾ ರದ್ದಾತು
ಸಂಬಂಧದ ಕೊಂಡಿಯೆಲ್ಲಾ ಕಳಚ್ ಬಿದ್ದೋತು.

ಯಾರೂ ತಿರ್ಗುಲಾಗ ಹೇಳೀ ಮಾಡ್ದ ಲಾಕ್ಡೌನು
ಕಳ್ವಂಟ್ಗೇಲೀ ಅಂಗಡಿಶೆಟ್ಟಿ ಕೊಟ್ಟ ಮನೆ ಸಾಮಾನು.
ಹಾಳುಮೂಳು ಸಾಮಾನೀಗೆ ಅಂವ ಹೇಳದ್ದೆ ರೇಟು
ಕಣ್ಮುಚ್ಕ ತಕಂಬರ ಹೇಳ್ವಾಂಗಿಲ್ಲೆ ಏನೂ ಬಾಯ್ಬಿಟ್ಟು.

ಪೇಟೆ ಜೀವನ ಸಾಕಾಗೋತು ಈಗಿನ್ ಪೋರ್ಗಕ್ಕೆ
ಅಂತೂ ಇಂತೂ ಬೆಲೆ ಬಂತು ಹಳ್ಳಿ ಹೈದಂಗೆ
ಕೆಲಸ ಕಳ್ಕಂಡ್ ಪೇಟೇಲೀಗ ಬದುಕುಲಾಗ್ತಿಲ್ಲೆ
ಹಳ್ಳೀ ಮನೆಗ್ ಬಂದ್ರೆ ಅವ್ಕೆ ಮಯ್ಯೇ ಬಗ್ತಿಲ್ಲೆ

ದೂರದೂರಿಗ್ ಹೋಪಾಂಗಿಲ್ಲೆ ಇಂದಿನ ದಿನ್ದಲ್ಲಿ
ಹದಿನಾಕ್ ದಿವ್ಸ ಕಳ್ಯಕಾಗ್ತು ಕ್ವಾರಂಟೈನಲ್ಲಿ.
ಸ್ಯಾನಟೈಜ್ರು,ಮಾಸ್ಕು ಬಂತು ಹಳ್ಳಿಮೂಲೆಲಿ
ಹೊಸಾದೆಲ್ಲಾ ಕಲ್ಯಕಾತು ನಂಗ್ಳ ತಲೇಲಿ.

ಮನೆಲ್ ಕೂತು ಕೆಲ್ಸ ಮಾಡ್ದ್ರೂ ಬತ್ತು ಪಗಾರ
ಹಗ್ಲೂರಾತ್ರಿ ಎಲ್ಲಾ ದುಡ್ಯ ಅದೇ ಬೇಜಾರು.
ಲ್ಯಾಪ್ಟಾಪ್ ಆತು ಕುಲದೇವ್ರು ಇವ್ರ ಕಾಲೀಗೆ
ಊಟ,ಆಸ್ರೀ ಕೊಡಕಾತು ರೂಮಿನ್ ಬಾಗ್ಲೀಗೆ.

ಬೀದಿಯೆಲ್ಲಾ ಖಾಲಿಖಾಲಿ,ಸ್ಮಶಾನ ಸದಾ ಹೌಸಫುಲ್ಲು
ಚಟ್ಟಕಟ್ಟೂ ಜನಾ ಇಲ್ಲೆ,ಹೆಣಮುಟ್ಟೂಲ್ ಬಪ್ಪೋರಿಲ್ಲೆ.
ಡಾಕ್ಟರ್ದಿಕ್ಕ ಚಿತ್ರಗುಪ್ತ,ಆಸ್ಪತ್ರೆಯಾತು ಯಮಲೋಕ
ಯಂತಾಮಾಡೊ ತಿಳೀತಿಲ್ಲೆ ಯಲ್ಲಾಕಡೆ ರೌರವನರ್ಕ.

ಯಂತಾ ಕಾಲ ಬಂತೋ ಮಾಣಿ ನಿಂಗಳ ಕಾಲ್ದಲ್ಲಿ
ಇಂಥದ್ದೆಲ್ಲ ನೋಡೀವಿಲ್ಲೆ ನಂಗಳ ಬದ್ಕಲ್ಲಿ.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×