- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
“ಕಟ್ಟುವದು ಕಷ್ಟ,ಮೆಟ್ಟುವದು ಸುಲಭ”-(ಹವ್ಯಕ ನುಡಿಗಟ್ಟು-86)
ಆನು ಸಣ್ಣದಿಪ್ಪಾಗ ಶಾಲಗೆ ರಜೆ ಸಿಕ್ಕೀರೆ ಆಚೀಚ ಮನೆವೆಲ್ಲ ಒಟ್ಟು ಸೇರಿ ಆಡುದು, ಅಜ್ಜನಮನಗೆ ಹೋಪದು, ಹಳ್ಳ-ಹೊಳಗಳಲ್ಲಿ ಮೀಸುದು, ಹೀಂಗೆಲ್ಲ ಚಟುವಟಿಕಗೊ ಇಕ್ಕು. ಈಗಣ ಹಾಂಗೆ ಟಿ.ವಿ, ಕಂಪ್ಯೂಟರು, ಮೊಬೈಲು ಎಲ್ಲಿದ್ದತ್ತು!. ಆಡುವಗ ಜಗಳ, ಕೋಪ, ಮತ್ತೆ ರಜ ಕಳಿವಗ ರಾಜಿ ಹೀಂಗಿದ್ದೆಲ್ಲ ಸಾಮಾನ್ಯ ಹೇಳುವೊᵒ.ಹೊತ್ತೋಪ ಹೊತ್ತಿಂಗೆ ಮಕ್ಕೊಲ್ಲ ಜಾಲ್ಲಿ ಆಡುವಗ; ಎನ್ನಜ್ಜᵒ ಜೆಗಿಲಿಲಿ ಕೂದಂಡು ನೋಡುಗಿದ.
ಒಬ್ಬ ಭಾವᵒ ,ಕಡ್ಡಿ ಮುಗುದ ಹಳೆ ಬೆಂಕಿ ಪೆಟ್ಟಿಗೆಗಳ ಎಲ್ಲಿಂದಲೋ ಹುಡುಕ್ಕಿ ತಂದು , ಜಾಲಿಲ್ಲಿ ಮನೆ ಕಟ್ಟುವ ಆಟಲ್ಲಿ ಮಗ್ನನಾಗಿಪ್ಪಾಗ ; ಮತ್ತೊಬ್ಬᵒ ಬಂದು ,ಕಾಲ್ಲಿ ತಟ್ಟಿ ಇಡುಕ್ಕಿಕ್ಕಿ ಓಡಿದᵒ.ಅಷ್ಟೊತ್ತಿಂಗೆ ಇವᵒ ಬೆರೇ..ನೆ, ಕೂಗೆಂಡು “ನೋಡಿ ಅಜ್ಜಾ, ಆನು ಎಷ್ಟೊತ್ತಿಂದ ಬಙ್ ಬಂದೊಂಡು ಕಟ್ಟಿದ್ದರ ಮೆಟ್ಟಿ ಇಡುಕ್ಕಿದ ಅಣ್ಣ” ಹೇಳುವಗ ಅಜ್ಜᵒ, ಮೆಟ್ಟಿ ಕೆಡಗಿದ ಪುಳ್ಳಿಯ ದೆನಿಗೇಳಿ; ನೋಡು ಕುಞ್ಞ್ , ತಮ್ಮ ಇಷ್ಟೊತ್ತ ಪ್ರಯತ್ನ ಪಟ್ಟು ಮಾಡಿದ್ದರ ನೀನು ಮೆಟ್ಟಿ ಲಗಾಡಿ ತೆಗದೆ ಅಲ್ಲೊ?.ನೀನು ಕಟ್ಟಿದ್ದರ ಅವᵒ ಕೆಡವಿದ್ರೆ ನಿನ ಬೇಜಾರಾಗದೊ?. ಇಬ್ರನ್ನು ಹತ್ತರೆ ಕೂರ್ಸಿ ಅಜ್ಜ ಹೇಳಿದೊವು “ನೋಡಿ ಮಕ್ಕಳೆ, ಇದು ನಿಂಗಳ ಆಟ ಆಗಿಕ್ಕು.ಆದರೆ ಏವದೇ ಕೆಲಸಾಗಲಿ,ಮನೆಯಾಗಲಿ, ಸಂಘ-ಸಂಸ್ಥೆಯಾಗಲಿ, ಅದರ ಕಟ್ಟಿ ಬೆಳೆಶುದು ಕಷ್ಟ. ಆದರೆ ಕೆಲವು ಕಿಡಿಗೇಡಿಗೊ ಕ್ಷಣಲ್ಲಿ ಅದರ ಮೆಟ್ಟಿ ಕೆಡಗುತ್ತವಲ್ಲೊ ಅದು ಸುಲಭ!. ಆದರೂ ಹಾಂಗಿದ್ದ ಕೆಲಸ ಮಾಡ್ಳಾಗ”.ಬುದ್ಧಿ ಹೇಳಿದವಜ್ಜᵒ. ಹೀಂಗಿಪ್ಪ ಚಿಂತನೆ ಮಕ್ಕೊಗೆ ಆಡಿ ಬೆಳೆತ್ತ ಸಮಯಂದಲೇ ಮನದೊಳ ಬೇರೂರೆಕ್ಕೂಳಿ ಅಜ್ಜನ ವಾದ.
———-೦———-
ವಿಜಯಕ್ಕಾ, ಒಳ್ಳೆ ನುಡಿಗಟ್ಟು. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷವನ್ನುದೆ ನೆಂಪು ಮಾಡಿತ್ತು.
ಕಟ್ಟುತ್ತವಕ್ಕೆ ನಾವು ಸಕಾಯ ಮಾಡೆಕು. ಮೆಟ್ಟುತ್ತವರ ಮೆಟ್ಟಿ ಓಡುಸೆಕು.
ಈಗಾಣ ಕಾಲಲ್ಲಿ ಮೆಟ್ಟುತ್ತವೆ ಜಾಸ್ತಿ ಕಂಡು ಬತ್ತ ಇಪ್ಪದು ಬೇಜಾರಿನ ವಿಷಯ.
ಶರ್ಮಭಾವಂಗೆ,ಚೆನ್ನೈಭಾವಂಗೆ, ಪ್ರಸನ್ನಂಗೆ;ಮನಸಾ ಧನ್ಯವಾದಂಗೊ
ಉದಾಹರಣೆ ಸಮೇತ ಒಳ್ಳೆ ನುಡಿಗಟ್ಟು.
ಅಪ್ಪಪ್ಪು …. ಅಂದರೇ ಕೇಡು ಬಗೆತ್ಸು ಹನಿಯಾ ಕಮ್ಮಿ ಅಕ್ಕೋ ಏನೋ. ಒಪ್ಪ
ತುಂಬಾ ಒಳ್ಳೆ ಮಾತು ವಿಜಯಕ್ಕಾ.. ಹೀಂಗಿರ್ತದರ ಮಕ್ಕೊಗೆ ಸಣ್ಣಾದಿಪ್ಪಗಳೆ ಹೇಳಿ ಅರ್ಥ ಮಾಡ್ಸೆಕು.