Oppanna.com

“ಕತ್ತಿ ಚಿನ್ನದ್ದಾದರೂ ಕುತ್ತಿರೆ ಸಾಯದ್ದಿರ”-(ಹವ್ಯಕ ನುಡಿಗಟ್ಟು-88)

ಬರದೋರು :   ವಿಜಯತ್ತೆ    on   18/05/2017    8 ಒಪ್ಪಂಗೊ

“ಕತ್ತಿ ಚಿನ್ನದ್ದಾದರೂ ಕುತ್ತಿರೆ ಸಾಯದ್ದಿರ”-(ಹವ್ಯಕ ನುಡಿಗಟ್ಟು-88)

ಚಿನ್ನ ಹೇಳಿರೆ ಅದೊಂದು ಸಾಮೂಹಿಕ ಹೆಗ್ಗಳಿಕೆ. ಬೆಲೆಬಾಳುವ ಲೋಹ. ಚಿನ್ನಕ್ಕೆ ಮಾರುಹೋಗದ್ದವು ಬಹು ವಿರಳ.ಅತೀ ಪ್ರೀತಿ ಪಾತ್ರದವರ ಚಿನ್ನ ಹೇಳಿ ಸಂಬೋಧನೆ ಮಾಡುವದರನ್ನೂ ನಾವು ನೋಡುತ್ತು.ಅದೇ ವಿಶೇಷತೆಂದಲೇ  ನಮ್ಮ ಭಾಷೆಲಿ ಕುಙ್ಙಿ ಮಕ್ಕೊಗೆ  ’ಬಂಗಾರೂ’ ಹೇಳಿ ಕೊಂಗಾಟದ ಹೆಸರಿದ್ದದು, ಮತ್ತೆ ದೊಡ್ಡಪ್ಪಗಳೂ ಅದೇ ಕೊಂಗಾಟ ಹೆಸರು ಮುಂದುವರಿತ್ತು ಹೇಳುವೊಂ!!. ಆದರೆ ಈ ನುಡಿಗಟ್ಟಿಲ್ಲಿ ನಾವು ಜಾಗ್ರತೆಯಾಗಿರೆಕು ಹೇಳ್ತ ಎಚ್ಚರಿಕೆ ಕೊಡ್ತು.

ಕೆಲವು ವರ್ಷ ಹಿಂದೆ ಒಬ್ಬ ಮದುವೆ ದಲ್ಲಾಳಿ ಇದ್ದಿದ್ದ. ಅವ ಎನ್ನಪ್ಪನ ಮನಗೆ ಒಂದೊಂದಾರಿ ಬಕ್ಕು;ಎಲೆ ತಿಂದಿಕ್ಕಿ ಅಪ್ಪನತ್ರೆ ಪಟ್ಟಾಂಗ ಹೊಡದಿಕ್ಕಿ ಹೋಪಲೆ.ಹೀಂಗೆ ಒಂದಾರಿ ಬಂದಿಪ್ಪಾಗ; “ಇತ್ತೀಚಗೆ ಎಲ್ಲಿಯೂ ಕುಳವಾರು ಹೊಂದುಸಲೆ ಸಿಕ್ಕಿದ್ದಿಲ್ಲಿಯೊ ಚುಬ್ಬಣ್ಣಾ?”. ಕೇಳಿದೊವು ಎನ್ನಪ್ಪ.

“ಇದ್ದು ಶಂಭು ಅಣ್ಣಾ., ಒಂದು ದೊಡ್ಡ ಪಾರ್ಟಿಯ ದೊಡ್ಡ ಕೂಸು!.ಪ್ರಾಯವೂ ದೊಡ್ಡದೇ !!.ಅದೆಲ್ಲಿಯಾರು ಕುದುರೀರೆ ಎನ್ನ ಈ ಎಲೆ ಮರಿಗೆ ಪೀಶಾಕತ್ತಿಗೆ ಚಿನ್ನದಹಿಡಿ ಬತ್ತು”. ಅಕೇರಿಯಾಣ ಶಬ್ಧವ ಕೆಮೀಲಿ ಹೇಳಿದ; ಚುಬ್ಬಣ್ಣಂಗೆ …

“ಚುಬ್ಬಣ್ಣಾ,ಕತ್ತಿ ಚಿನ್ನದ್ದಾದರೂ  ಕುತ್ತೀರೆ ಸಾಯದ್ದಿರ ಮಿನಿಯ!. ಇದಾನು ಎಂತಕೆ ಹೇಳಿದ್ದೇದರೆ…ಪೀಶಕತ್ತಿಯನ್ನೂ ಚಿನ್ನದ ಹಿಡಿಹಾಕಿ ಕೊಡುತ್ತ{ಪೈಸೆಕ್ಕಾರಂಗೊ}ವರನ್ನೂ ನಂಬುಸ್ಸು ಜಾಗ್ರತೆ!”. ಹೇಳಿದೊವು ಎನ್ನಪ್ಪ.

                                   ———-೦———-

                                                                                                     

8 thoughts on ““ಕತ್ತಿ ಚಿನ್ನದ್ದಾದರೂ ಕುತ್ತಿರೆ ಸಾಯದ್ದಿರ”-(ಹವ್ಯಕ ನುಡಿಗಟ್ಟು-88)

  1. ಲಾಯಕ ಆಯಿದು. ಇಂದು ಪುರುಸೊತ್ತು ಆತು

    1. ಒಹೋ ನಿನ ಪುರುಸೊತ್ತಾದ್ದು ಕೊಶಿ ಆತು . ಇಂದು ಹಾಕಿದ್ದರನ್ನು ನೋಡಿ ಅಭಿಪ್ರಾಯ ಹೇಳು. ನಿನ್ನ (ಎನ್ನ) ಕಾಸರಗೋಡಜ್ಜಿಯ ನೆಂಪಾವುತ್ತಿಲ್ಯೊ !.ಅದರ ಓದಿ ಹೇಳು.

  2. ನುಡಿಗಟ್ಟುಗಳ ಸಂಗ್ರಹಿಸಿ, ಸಂದರ್ಭ ಸಹಿತ ಕೊಡ್ತಾ ಇಪ್ಪ ವಿಜಯತ್ತಿಗೆಗೆ ಧನ್ಯವಾದಂಗೊ.

  3. ಅರ್ಥ ಗರ್ಭಿತ ಮಾತು.

    1. ಬೊಳುಂಬು ಗೋಪಾಲಂಗೆ ಧನ್ಯವಾದ. ಇನ್ನೊಬ್ಬ ಕಂಬಾರು ಭಾವಯ್ಯನ ಕಾಂಬಲೇ ಇಲ್ಲೆನ್ನೆ!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×