Oppanna.com

“ಕರ್ಜೂರ ಹಣ್ಣಪ್ಪಗ ಕಾಕೆಬಾಯಿ ಹುಣ್ಣು”-{ಹವ್ಯಕ ನುಡಿಗಟ್ಟು-35}

ಬರದೋರು :   ವಿಜಯತ್ತೆ    on   19/09/2015    8 ಒಪ್ಪಂಗೊ

’ಕರ್ಜೂರ ಹಣ್ಣಪ್ಪಗ ಕಾಕೆಬಾಯಿ ಹುಣ್ಣು’-{ಹವ್ಯಕ ನುಡಿಗಟ್ಟು-35}

ಕರ್ಜೂರ ಹೇಳಿರೆ ಕಾಕಗೆ ಬಹು ಪ್ರೀತಿಯ, ಇಷ್ಟದ ಹಣ್ಣಾಡ. ಹಣ್ಣಪ್ಪಗ ತಿಂಬೊ ಹೇದು ಕೊದಿಮಾಡೆಂಡು ನಿರೀಕ್ಷೆಲಿದ್ದರೆ ತಿಂಬಲೆಡಿಯೆಕ್ಕೇ?. ಕಾಲಕ್ಕೂ ಆ ಸಮಯಕ್ಕಪ್ಪಗ ಅದರ ಬಾಯಿ ಹುಣ್ಣಪ್ಪದಾಡ!.ಈ ಉಪಮೆ ಹೇಂಗೆ ನೋಡುವೊಂ.

ಸಣ್ಣಾದಿಪ್ಪಂದಲೇ ಬಡಪ್ಪತ್ತಿಲ್ಲಿ ಬೆಳದವ ಕಿಟ್ಟಣ್ಣ; ’ಅರೂಪ’ ಆದ ಬೆಳೆ ಭೂಮಿಯ ಒಳ್ಳೆ ಗೆಯಿಮೆ ಮಾಡ್ಸಿಗೊಂಡು ತಾನೂ ಗೆಯ್ಕೊಂಡು ಕೃಷಿ ಮಾಡ್ಸಿದ್ದು ಕಂಡಪ್ಪಗ  ನೋಡಿದವಕ್ಕೆ ಆರಿಂಗಾರು ಮನಸ್ಸು ತುಂಬಿಬಾರದ್ದಿಕ್ಕೊ ಹೇಳಿ?.ಅಷ್ಟೂ ಅಲ್ಲ.ಅಬ್ಬೆ-ಅಪ್ಪನನ್ನುದೆ ಪ್ರಾಯ ಹೋಕಿಲ್ಲಿಯೂ ಬೇಕಾದ ಹಾಂಗೆ ನೋಡಿಗೊಂಡು ಮತ್ತೆ ಅವರ ದಿನಮಾನವನ್ನೂ ನೇರ್ಪಕೆ ಮಾಡೆಡೆಂಡು ಬಪ್ಪ ಅವನ; ಎಲ್ಲೋರೂ ಹೊಗಳುವವೆ.ಈಗ ಕಿಟ್ಟಣ್ಣಂಗೆ ತೊಂದರೆ ಇಲ್ಲೆ, ಎಲ್ಲಾ ಹಲ-ಫಲಂಗೊ ಫಸಲು ಕೊಡ್ತು. ಮಕ್ಕೊ ಎರಡು ಜೆನಕ್ಕೂ ಕಲ್ತು ಉದ್ಯೋಗ ಸಿಕ್ಕಿದ್ದು. ಆದರೆಂತ…!?.ಎಂತ..ಹೇಳೆಕ್ಕು!? ಅವಂಗೆ ಉಪ್ಪುತಿಂಬಲಾಗಡ!. ಸಕ್ಕರೆಯೂ ವರ್ಜ್ಯ.ಹಾಂಗಿಪ್ಪಗ ಬಾಳೆಹಣ್ಣೂ ಬೇಡ ಹೇಳ್ತ ಡಾಕುಟ್ರ.ತೆಂಗಿನಕಾಯಿಯೂ ಬೆಂದಿಗೆ ಸರಿಯಾಗಿ ಹಾಕಿ ತಿಂಬಲೆಡಿಗೊ!.ಅದೂ ಎಡಿಯ!!.ತನ್ನ ತೋಟಲ್ಲಿ ಆದ ಹಣ್ಣು-ಹಂಪಲಂಗಳ ಕಣ್ಣಿಲ್ಲಷ್ಟೆ ನೋಡೆಂಡು “ಛೇ..,ಎನ್ನ ಹಣೆಬರಹವೇ” ಹೇದು ಮರುಗುತ್ತಂ.  “ಕರ್ಜೂರ ಹಣ್ಣಪ್ಪಗ ಕಾಕೆಬಾಯಿ ಹುಣ್ಣು” ಹೇಳ್ತಾಂಗಾತನ್ನೆ!!. ಹೇಳ್ತು ಅವನ ಹೆಂಡತಿ ಅಚ್ಚುಮಕ್ಕ ಬೇಜಾರಲ್ಲಿ!. ಅಂತೂ ಹಂಬಲಿಸಿ,ಹಂಬಲಿಸಿ ನಿರೀಕ್ಷೆ ಮಡಗೆಂಡು ಕೂದು ಅದು ದಕ್ಕದ್ರೆ  ಹೀಂಗೇ ಹೇಳುವದು.

 

8 thoughts on ““ಕರ್ಜೂರ ಹಣ್ಣಪ್ಪಗ ಕಾಕೆಬಾಯಿ ಹುಣ್ಣು”-{ಹವ್ಯಕ ನುಡಿಗಟ್ಟು-35}

  1. ಅದೇಕೆ ಕರ್ಜೂರ ಹಣ್ಣಂಪದ ಮದಲೆ ಕಿಸ್ಕಾರಣ್ಣೋ ಮಣ್ಣ ತಿಂದು ಬಾಯಿಹುಣ್ಣು ಬಾರದ್ದಾಂಗೆ ನೋಡಿಗೊಂಬಲೆ ಕಾಕಗೆ ಅರ್ತಿದಿಲ್ಲೇದು!

    ಒಂದು ಲೆಕ್ಕಲ್ಲಿ ಒಳ್ಳೆದೇ ಆತು. ಇಲ್ಲದ್ದರೆ ಕರ್ಜೂರ ಹಣ್ಣಪ್ಪಗ ಕ್ರಯ ಆಕಾಶಕ್ಕೇರಿತ್ತು ಹೇದಾವುತ್ತಿತ್ತು ನವಗೆ!!

  2. ಅಪ್ಪು, ಬೊಳುಂಬು ಭಾವ ಹೇದಾಂಗೆ ನುಡಿಗಟ್ಟುಗಳ ಸಂಗ್ರಹ ಶತಕ ದಾಟಲಿ. ಒಪ್ಪ ಕಾರ್ಯ ವಿಜಯತ್ತೆ.

  3. ಹರೇರಾಮ ಗೋಪಾಲ,ಶರ್ಮ ಭಾವ ಹೇಳಿದಾಂಗೆ ಎನ್ನಪ್ಪ ಹೇಳಿಂಡಿದ್ದಿದ್ದು ಕರ್ಜೂರಹಣ್ಣಪ್ಪಗ ಹೇಳಿ. ಬಹುಶಹಃ ಗೇರೆಹಣ್ಣುದೆ ಕರ್ಜೂರವುದೆ ಒಂದೇ ಸಮಯಕ್ಕೆ ಅಪ್ಪದಲ್ಲೋ?.

  4. ಒಳ್ಳೆದಿದ್ದು ಚಿಕ್ಕಮ್ಮ. ಗೇರೆ ಹಣ್ನಪ್ಪಗ ಕಾಕೆ ಬಾಯಿಗೆ ಹುಣ್ಣು .
    ಕಡ್ಲೆ ಇಪ್ಪಾಗ ಹಲ್ಲಿಲ್ಲೇ, ಹಲ್ಲು ಇಪ್ಪಾಗ ಕಡ್ಲೆ ಇಲ್ಲೇ
    ಹೀಂಗೆ ಹೇಳುಗು ಮೊದಲಾಣವು.

  5. ಉದಾಹರಣೆ ಸಹಿತ ನುಡಿಗಟ್ಟಿನ ವಿವರಣೆ ಲಾಯಿಕ ಆಯಿದು.
    ವಿಜಯತ್ತಿಗೆಯ ಸಂಗ್ರಹಲ್ಲಿ ಇನ್ನೂ ಇಕ್ಕು. ಮಾವ (ಅತ್ತಿಗೆಯ ಅಪ್ಪ) ಮಾತಾಡುವಾಗ ನುಡಿಗಟ್ಟುಗೊ ಒಂದಾದ ನಂತರ ಒಂದು ಬನ್ದೊಂಡು ಇತ್ತಿದ್ದದು ನೆಂಪು ಬತ್ತು. .

  6. ಬೊಳುಂಬು ಗೋಪಾಲಂಗೆ ಧನ್ಯವಾದಂಗೊ .ಎನ್ನ ಹಿಂದೆ ಬಯಲಿನ ತಮ್ಮಂದ್ರು, ತಂಗೆಕ್ಕೊ, ಅಳಿಯಂದ್ರು, ಪ್ರೋತ್ಸಾಹ ಮಾಡುತ್ತಿಪ್ಪಗ ಹೀಂಗೇ ನೆಂಪಾದ ಹಾಂಗೆ ಹಾಹುತ್ತಾ ಇರುತ್ತೆ ಗೋಪಾಲ.

  7. ನೆಲಕಡ್ಳೆ ಇಪ್ಪಗ ಹಲ್ಲಿಲ್ಲೆ ಹೇಳ್ತ ಗಾದೆ ಮಾತು ನೆಂಪಾತು ವಿಜಯಕ್ಕ. ವಿವರಣೆ ಲಾಯಕಾತು. ಹವ್ಯಕ ನುಡಿಗಟ್ಟುಗೊ ೩೫ಕ್ಕೆ ಎತ್ತಿದ್ದಕ್ಕೆ ಅಭಿನಂದನೆಗೊ. ನುಡಿಗಟ್ಟುಗೊ ಗಟ್ಟಿಗೆ ಚೆಂದಕೆ ಬತ್ತಾ ಇದ್ದು. ಶತಕವನ್ನೂ ದಾಂಟಿ ಮುಂದುವರಿಯಲಿ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×