Oppanna.com

“ಕೂಗದ್ದ ಕುಞ್ಞಿಗೆ ಮಲೆಹಾಲು ಸಿಕ್ಕ”-(ಹವ್ಯಕ ನುಡಿಗಟ್ಟು-89)

ಬರದೋರು :   ವಿಜಯತ್ತೆ    on   25/05/2017    11 ಒಪ್ಪಂಗೊ

 

ಕೂಗದ್ದ ಕುಞ್ಞಿಗೆ ಮಲೆಹಾಲು ಸಿಕ್ಕ-(ಹವ್ಯಕ ನುಡಿಗಟ್ಟು-89)

ಗಡಿನಾಡ ಕನ್ನಡಿಗರಿಂಗೆ , ಮಲೆಯಾಳ ಭಾಷೆಯ ಹೇರಿಕೆಯ ವಿರುದ್ಧ ಮನ್ನೆ ಕಾಸರಗೋಡು ಕಲೆಕ್ಟರೇಟ್ ಆಫೀಸಿನ ಸುತ್ತೂ ಕನ್ನಡಿಗರ ಹೋರಾಟದ ಸಮಯಲ್ಲಿ ಇದು ನೆಂಪಾದ್ದು ವಿಜಯತ್ತಗೆ. ಗಡಿನಾಡ ಕನ್ನಡಿಗರು ಕೂಗಿ, ಕುಟ್ಟಿ,ಬೊಬ್ಬೆ ಹಾಕದ್ದೆ ಸರಕಾರಕ್ಕೆ ಬೆಶಿ ಮುಟ್ಟುಸದ್ದೆ ವಿನಾ ಎಚ್ಚೆತ್ತುಗೊಳ್ತಿಲ್ಲೆ. ಆದರೂ ಫಲಿತಾಂಶ ಇನ್ನು ನೋಡೆಕ್ಕಷ್ಟೆ ಹೇಳುವೊಂ.

ಈ ಗಾದೆ ಸುರುವಾದ್ದೆಂತಕೆ?.ಮದಲಾಣ ಕಾಲಲ್ಲಿ ಕೂಡು ಕುಟುಂಬ.ಕರೆಂಟಿಲ್ಲೆ,ಗೇಸಿಲ್ಲೆ, ಮನೆ ತುಂಬ ಜೆನ ಇಪ್ಪಗ ಹೆಮ್ಮಕ್ಕೊಗೂ ಕೈತುಂಬಾ ಕೆಲಸ.ಈ ಕಾಲದಾಂಗೆ ಕುಟುಂಬಯೋಜನೆ ಇಲ್ಲೆ!. ಒಬ್ಬೊಬ್ಬ ದಂಪತಿಗೆ ಹತ್ತು,ಹನ್ನೆರಡು ಮಕ್ಕೊ ಇಕ್ಕು.ಮಕ್ಕಳ,ಮನೆಯವರ ,ನೆಂಟ್ರಿಷ್ಟರ ಎಲ್ಲಾ ಸುಧರ್ಸೆಂಡು ಮನೆಕೆಲಸವನ್ನೂ ಮಾಡೆಂಡು ಬಪ್ಪಾಗ ಹೆಮ್ಮಕ್ಕೊಗೆ ಸಾಕೋ ಸಾಕಕ್ಕು. ಹಾಂಗಿದ್ದ ಸಂದರ್ಭಲ್ಲಿ ಕುಞ್ಞಿ ಮಕ್ಕೊ ಕೂಗದ್ರೆ, ಅವರ ಕರಕ್ಕೊಂಬಲೆ ಹೆಮ್ಮಕ್ಕೊಗೆ ಗೊಡವೆ ಆಗಿ ಬೇಕೇ?.ಅಜ್ಜಿಯಕ್ಕೊ ಇದ್ದರೆ, “ಆ ಮಾಣಿ ಕೂಗದ್ರೆ, ನೀನವನ ಬುಡಕ್ಕೆ ಬಪ್ಪಲೇ ಇಲ್ಲ್ಯೊ ಕೂಸೇ”ಹೇಳುಗಿದಾ!.  ಆ ಕಾಲಲ್ಲಿ ಹುಟ್ಟಿದ ಗಾದೆ ಇದು. ಇದರ ಪರೋಕ್ಷವಾಗಿ ಹೀಂಗಿದ್ದಕ್ಕೆ ಉಪಯೋಗ ಮಾಡುದು.ಒಟ್ಟಿಲ್ಲಿ ಸರಕಾರ ಆಗಲೀ ಮೇಗಾಣ ಆಫೀಸರಾಗಲೀ  ಬೆಶಿಮುಟ್ಟುಸದ್ದೆ ಒತ್ತಡ ಹಾಕದ್ದೆ ವಿನಾ ಕೆಲಸ ಆಗ ಹೇಳ್ವ ವಿಷಯಕ್ಕೆಲ್ಲ  ಈ ನುಡಿಗಟ್ಟಿನ ಉಪಯೋಗುಸುತ್ತೊವು.

                             ———–೦———-

 

 

11 thoughts on ““ಕೂಗದ್ದ ಕುಞ್ಞಿಗೆ ಮಲೆಹಾಲು ಸಿಕ್ಕ”-(ಹವ್ಯಕ ನುಡಿಗಟ್ಟು-89)

    1. ಸರಿಯಾಗಿ ಹೇಳಿದೆ ಚೆನ್ನೈಭಾವಾ . ನಮ್ಮ ಈ ಕೆಲವೆಲ್ಲ ಬೆಷಿಗೊ ಇನ್ನು ಏವಗ ಆನೆ ಚರ್ಮದವಕ್ಕೆ ಮುಟ್ಟುತ್ತೋ? “ಎತ್ತು ಏರಿಗೆಳೆದರೆ ಗೋಣ ನೀರಿಂಗೆಳೆತ್ತು” ಹೇಳಿದಾಂಗೆ ಕಾಣುತ್ತು ಇಂದ್ರಾಣ ಪರಿಸ್ಥಿತಿ.

  1. ಹಕ್ಕು ಕೇಳುವಗ ಒಪ್ಪದ್ದೇ ಇಪ್ಪಗ, ಒರಂಜೆಕಾಗಿ ಬಪ್ಪದು ನಮ್ಮ ಕರ್ಮ ಹೇಳೆಕಾಗಿ ಬತ್ತಿಲ್ಲೆಯೊ ಅಕ್ಕ ?

    1. ಮತ್ತೆ ವಿನಯತೆ ಇಲ್ಲೇ ಅಲ್ಲೋ . ಮತ್ತೆ, ಹಕ್ಕು ಸಾಧುಸುದು . ಈಗಾಣ ಭಾಷೇಲಿ ಹರತಾಳ ಅಲ್ಲೋ?. “ನಾವು ನಿಮ್ಮಲ್ಲಿ ಯಾಚನೆಗೆ ಬಂದಿಲ್ಲ. ನಮ್ಮ ಹಕ್ಕನ್ನು ಉಳಿಸೋದಕ್ಕೆ ಹೋರಾಡುತ್ತೇವೆ”. ಹೇಳಿ ಮನ್ನೆ ಬೊಬ್ಬೆ ಹಾಕಿದ್ದು ನಾವು.ಅಂಬಗ ಇದು ನೆಂಪಾತಿದ ವಿಜಯತ್ತಗೆ.

  2. ಸರಿಯಾದ ಸಮಯಕ್ಕೆ ಸರಿಯಾದ ನುಡಿಗಟ್ಟು. ಒರಂಜದ್ದೆ ಇದ್ದರೆ ಏವ ಕಾರ್ಯವುದೆ ಆಗ. ನಿನಗೆ ಬೇಕಾರೆ ನೀನು ಕೇಳಿ ತೆಕ್ಕೊಳೆಕು. ಇಲ್ಲದ್ರೆ ಆರುದೆ ನಿನ್ನ ಮೂಸಿಯೂ ನೋಡವು.

    1. ಬೊಳುಂಬು ಗೋಪಾಲಂಗೆ. ಇಲ್ಲಿ ಹಕ್ಕು ಕೇಳುದು ಗೋಪಾಲ. ಒರೆಂಜುದು ಹೇಳುದರ ಅರ್ಥ ರಜಾ ವೆತ್ಯಾಸ ಇದ್ದು.ಒರೆಂಜುದು ಹೇಳಿರೆ; ಯಾಚಿಸುದು.ಆಗಲಿ ಸ್ಪಂಧಿಸಿದ್ದು ಕೊಶಿಯಾತು.

  3. ಕೂಗದ್ದ ಮಕ್ಕೊಗೆ ಹಾಲು ಸಿಕ್ಕ. ಕಾಸರಗೋಡಿಲ್ಲಿ ಎಷ್ಟು ಕಕೂಗಿದರೂ ಕೇಳೆಕ್ಕಾದವಕ್ಕೆ ಕೇಳ್ತಿಲ್ಲೆ. ಎಲ್ಲರೂ ಒಟ್ಟು ಸೇರಿ ಕೂಗುವ ಆ ಶಕ್ತಿಯ ದೇವರು ಕೊಡಲಿ ಹೇಳಿ ಮದಾಲು ಕೂಗುವೊ°.
    ಒಳ್ಳೆ ನುಡಿಗಟ್ಟು.

    1. ಭಾವಯ್ಯ ನಿಂಗಳೆಲ್ಲರ ಶುಭಹಾರೈಕೆ ನಿಜವಾಗಲಿ .ನಮ್ಮ ಶ್ರೀಗುರು ದೇವರ ಅನುಗ್ರಹ ಸಿಕ್ಕಲಿ. ಮಲೆಯಾಳಿಗಳ ಮಲತಾಯಿ ಧೋರಣೆಗೆ ಅಂತಿಮಕಾಲ ಬಂದು ಗಡಿನಾಡ ಕನ್ನಡಿಗರಿಂಗೆ ನ್ಯಾಯ ಒದಗಲಿ.

  4. ಅಪ್ಪು. ಆ ಕಾಲವೇ ಲಾಯಕ ಇದ್ದತ್ತು. ಹೋರಾಟ ಇನ್ನೂ ಜೋರು ಬೇಕಕ್ಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×