Oppanna.com

“ಮುಳ್ಳಿಂಗೆ ಬಾಳೆ ಬಿದ್ದರೂ ಬಾಳಗೆ ಮುಳ್ಳು ಬಿದ್ದರೂ ಹರಿವದು ಬಾಳೆಯೆ”-{ಹವ್ಯಕ ನುಡಿಗಟ್ಟು-31}

ಬರದೋರು :   ವಿಜಯತ್ತೆ    on   18/06/2015    11 ಒಪ್ಪಂಗೊ

“ಮುಳ್ಳಿಂಗೆ ಬಾಳೆ ಬಿದ್ದರೂ ಬಾಳಗೆ ಮುಳ್ಳು ಬಿದ್ದರೂ ಹರಿವದು ಬಾಳೆಯೆ”-{ಹವ್ಯಕ ನುಡಿಗಟ್ಟು-31}

 

ಮುಳ್ಳಿಂಗೆ ಬಾಳೆ ಬಿದ್ದರೂ ಬಾಳಗೆ ಮುಳ್ಳು ಬಿದ್ದರೂ ಬಾಳೆ ಹರಿಯದ್ದೆ ಮುಳ್ಳು ಹರಿತ್ತೊ!? ಕೇಳುವಿ ನಿಂಗೊ. ಅಪ್ಪು ಅದಲ್ಲೆ ಇಪ್ಪದೀಗ ಪೇಚಾಟ. ಅಲ್ಲ..,ಒಂದೊಂದಾರಿ  ಮುಳ್ಳಿಂಗೂ ಹರಿವಲಾಗದೊ,ಬಾಳೆಯೇ ಹರಿಯೆಕ್ಕು ಹೇದಿದ್ದೊ ? ಆನು ಕೇಳುದು.ಈ  ಅಸಳೆ  ಹೊಂಬಾಳೆಯನ್ನೆ ಮುಕ್ಕಿ ತಿಂಬದೆಂತಕೆ ಮುಳ್ಳು!. ಗೆಂಡ-ಹೆಂಡತ್ತಿಯ ಞಾಯಲ್ಲಿ ಒಂದು ಹೆಮ್ಮಕ್ಕೊ, ಕೇಟಿದಾಡ…  ಗೆಂಡು ಮಕ್ಕಳೂ ಹೆರ್ಲಾಗದೊ?,ಹೆಮ್ಮಕ್ಕಳೇ ಹೆರೆಕು ಹೇದಿದ್ದೊ?. ಅದು ಪ್ರಕೃತಿಯೇ ಹಾಂಗೆ!. ಅದಕ್ಕೆ ನಾವೆಂತ ಮಾಡುಸ್ಸು?.ಹೇದು ಸಮಜಾಯಿಶಿಕೆ ಅಪ್ಪು.

ಇದೀಗ ಹೀಂಗೆಲ್ಲ..ಉದ್ದಿ- ಉರುಟಿ , ಈ ನುಡಿಗಟ್ಟಿನ ರೂಪಲ್ಲಿ ಹಸಿ ಬಾಳಗೊಕ್ಕೆ ರಜ ಕೆಮಿಮಾತು ಹೇಳುವೊಂ ಹೇದು ಎನ್ನ ಈ ಪೀಟಿಕೆ ಅಷ್ಟೆ.          ಆನು ಸಣ್ಣದಿಪ್ಪಗೆಲ್ಲ  ಕೂಸುಗೊ ಮೀನೆರದೊವು[ಮೈನೆರವದು] ಹೇಳಿಯಾದರೆ, ಹಾಂಗಿದ್ದವಕ್ಕೆ “ಇದಾ..,ಮೋಳೆ;ದೊಡ್ಡಾದ ಮಾಣಿಯಂಗಳತ್ರೆ ದಣಿಯ ಸಲಿಗೆಲಿ ಮಾತಾಡ್ಳಾಗ, ಮೆಯಿ ಮುಟ್ಟ್ಳೇ ಬಿಡ್ಳಾಗ,ಏವದಾರು ಹಲ್ಲು ಕಿಸ್ಕೊಂಡು ಮಾತಾಡ್ಸೆಂಡು ಬಪ್ಪಗ ಅದಕ್ಕೆ ಉತ್ತರ ಕೊಟ್ಟೊಂಡು ಒಯ್ಯಾರ ಮಾಡೆಂಡು ಕೂಬ್ಬಲಾಗ, ಜವ್ವನ್ತಿಗೊ ಒಬ್ಬನೆ ಹೆರ ತಿರುಗೆಂಡು ಹೋಪಲಾಗ,ಕಸ್ತಲಾದ ಮತ್ತಂತೂ ಮನೆ ಮೆಟ್ಟುಕಲ್ಲಿಂದ ಹೆರ ಕಾಲು ಮಡಗಲೆಡಿಯ[ಅಯ್ಯೋ..ಈಗ ನೆಟ್ಟ..ಹಗಲೇ ಬೇಡದ್ದ ಕೆಲಸಂಗೊ ಮಾಡ್ತ ಸಮಯ ಹೇದೊಂಗು ಈಗಾಣೊವು].  ಹೀಂಗೆ ಆಗದ್ದ ಪಟ್ಟಿಗಳ ರಜ ಹೇಳಿಕ್ಕಿ, ಮುಳ್ಳಿಂಗೆ ಬಾಳೆಬಿದ್ದರೂ ಬಾಳಗೆ ಮುಳ್ಳು ಬಿದ್ದರೂ ಹರಿವದು ಬಾಳೆಯೆ ಹೇಳ್ಸು ನೆಂಪು ಬೇಕಿದ” ಹೇಳುಗು, ಮದುವೆ ಮಾಡಿಕೊಡುವನ್ನಾರ  ಹೀಂಗೆ ಅಡಿಗಡಿಗೆ ಬುದ್ಧಿವಾದ ಹೇದೊಂಡಿಕ್ಕಿದ.ಆದರೆ….ಈಗಾಣ ಕಾಲಲ್ಲಿ ಅಬ್ಬೆ ಹೊಟ್ಟೆಂದ ಭೂಮಿಗೆ ಬಿದ್ದ ಲಾಗಾಯ್ತಿಂದ ಕೂಸುಗಳ ಕಣ್ಣಿಂಗೆಣ್ಣೆ ಹಾಕಿ ನೋಡಿಗೊಳೆಕ್ಕು ಮಿನಿಯ!. ಅಪ್ರಾಪ್ತ ಹುಡುಗಿಯ ಅತ್ಯಾಚಾರ ಪಟ್ಟಿಲಿ ಒಂದು ವರ್ಷ,ಎರಡು ವರ್ಷಾಣವೂ ಇರ್ತವು ಹೇಳಿಯಾದರೆ;ಅತ್ಯಾಚಾರ ಮಾಡ್ತವರ  ಮನಸ್ಸು ಹೇಂಗಿದ್ದ   ’ಕಬ್ಬಿಣದ ಗೊಣಸು’ ಆಗಿಂಡಿಕ್ಕು!!!. ಜವ್ವನ್ತಿಗಳ ಹಾರ್ಸೆಂಡು ಹೋದ ಶುದ್ದಿ ಕೇಟಪ್ಪಗಳೇ  “ಅಯ್ಯೊ..ಕಲಿಗಾಲ..” ಹೇದೊಂಗು ನಮ್ಮ ಅಜ್ಜಿ.  ಆದರೀಗ..!.

ಹೇಂಗೆ ಒಪ್ಪಕ್ಕಂಗಳ ರಕ್ಷಣೆ ಮಾಡ್ಳಕ್ಕು!?. ಅಂತೂ ಈ ಮಾತೊಂದು ಹೇಳುವೊಂ. “ನೀನು ಹಸಿ ಬಾಳೆ.ನಿನ್ನ ಮೇಗೆ ಮುಳ್ಳುಬಿದ್ದರೂ ನೀನು ಹೋಗಿ ಮುಳ್ಳಿಂಗೆ ಬಿದ್ದರೂ ನೀನೇ ಹರಿವದು” ಹೇಳಿ ಜಾಗ್ರತೆ ಹೇಳಿಂಡಿಪ್ಪಲೇ ಬೇಕು. ಎಂತ ಹೇಳ್ತಿ?.

11 thoughts on ““ಮುಳ್ಳಿಂಗೆ ಬಾಳೆ ಬಿದ್ದರೂ ಬಾಳಗೆ ಮುಳ್ಳು ಬಿದ್ದರೂ ಹರಿವದು ಬಾಳೆಯೆ”-{ಹವ್ಯಕ ನುಡಿಗಟ್ಟು-31}

  1. ವಿವರಣೆ ಲಾಯಕ ಆಯಿದು ವಿಜಯಕ್ಕ

  2. ತುಂಬಾ ಸರ್ತಿ ಕೇಳಿದ ಮಾತಿನ ಸುಂದರ ವಿವರಣೆ. ದುಷ್ಟರ ಸಂಗ ಮಾಡುಲಾಗ ಹೇಳುದರ ಎನ್ನ ಅಪ್ಪ ಈ ವಾಕ್ಯಲ್ಲಿ ವಿವರಿಸಿಕೊಂಡಿತ್ತಿದ್ದವು.

  3. ಅಪರೂಪಕ್ಕೆ ಒಪ್ಪಕೊಟ್ಟ ಶಾಮಣ್ಣಂಗೆ ,ಚೆನ್ನೈಭಾವಂಗೆ ,ತೆಕ್ಕುಂಜೆ ಕುಮಾರಮಾವಂಗೆ ಧನ್ಯವಾದಂಗೊ

  4. ಕಿಚ್ಚಿನ ನಾವು ಮುಟ್ಟಿರೂ, ಕಿಚ್ಚು ನಮ್ಮ ಮುಟ್ಟಿರೂ….. ಹೊತ್ತುದು ನಮ್ಮದೇ ಚರ್ಮ ಹೇಳುದು ಕೇಳಿದ್ದೆ ….

  5. ಒಳ್ಳೆ ಕೆಮಿಮಾತು.

  6. ವಿವರಣೆ ಲಾಯಕಾಯಿದು ವಿಜಯಕ್ಕ.

  7. ಬುದ್ಧಿವಾದದ ಒಳ್ಳೆ ನುಡಿಗಟ್ಟು. ಅರ್ಥ ಮಾಡಿಂಡು ಅನುಸರಿಸಿದರೆ ಗೌರವಲ್ಲಿ ಬಾಳಲಕ್ಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×