- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
–ಹುಟ್ಟುಗುಣ ಗಟ್ಟ ಹತ್ತಿರೂ ಹೋಗ-(ಹವ್ಯಕ ನುಡಿಗಟ್ಟು-82)
“ಅರುಣಕ್ಕ ಅಮೇರಿಕಂದ ನಿನ್ನೆ ಬಯಿಂದಾಡ. ಅದರ ಮಗ ಆಚಕರೆ ತೋಟಂದ ದೆನಿಗೇಳಿದಾಳಿ; ತೋಡಿಂಗೆ ವಸ್ತ್ರ ಒಗವಲೆ ಹೋದೋಳು ಆಚಕರಗೆ ಮೇಗೆ ಹತ್ತಿ ಮಾತಾಡಿಕ್ಕಿ ಬಂದೆ ಅತ್ತೆ. ಅದಿತಿಗೆ,ಸೊಸೆ ವಾರುಣಿಯ ಹೊಸ ಶುದ್ದಿ ಸಿಕ್ಕಿತ್ತು.
“ಅಪ್ಪೊ, ಎಂತಾಡ ಅದರ ವಿಶೇಷ ವರ್ತಮಾನಂಗೊ?. ಅಮೇರಿಕಲ್ಲಿ ಹೇಂಗಾವುತ್ತಾಡ?.” ಅದಿತತ್ತೆಯ ಕುತೂಹಲ!.
“ಅಮೇರಿಕದ ಶುದ್ದಿ ಹೇಳಿ ಮುಗಿಯ,ಆಚಕರೆ ಅಣ್ಣ ಆಸರಿಂಗೆ ಕೊಂಡಾಳಿ ಹೇಳಿದ್ದೂ ಅದಕ್ಕೆ ಕೇಪಿದ್ದಿಲ್ಲೆ. ಆನು ಕೇಳಿದ್ದಕ್ಕೆ ಒಂದಕ್ಕೂ ಉತ್ತರ ಇಲ್ಲೆ. ಅದುವೇ ವೀಡಿಯೋ ಸ್ವಿಚ್ ಹಾಕಿದಾಂಗೆ ಹೇಳೆಂಡು ಹೋವುತ್ತು. ಅಲ್ಲಿಗೆ ಹೋಗೆಂಡು ಬಂದಪ್ಪಗ ಅದು ಬದಲಕ್ಕು ಜಾನ್ಸಿದ್ದೆ ಅತ್ತೆ. ಆದರೆ ಅದರ ಮದಲಾಣ ಅಭ್ಯಾಸ ಬಿಟ್ಟಿದಿಲ್ಲೆ!!.”
“ ಅಯ್ಯೋ ನಿನ ಪೊಡುಂಬು. ಹುಟ್ಟುಗುಣ ಗಟ್ಟ ಹತ್ತೀರೂ ಹೋಪಲಿದ್ದೊ? ಹೇಳುಗು ಮದಲಾಣವು. ಹಾಂಗೇ ಸಮುದ್ರ ಹಾರಿ ಬೇರೆ ದೇಶಕ್ಕೆ ಹೋಗಿ ಬಂದರೂ ಹುಟ್ಟುಗುಣ ಬಿಟ್ಟು ಹೋಗ ಮಿನಿಯಾ”.
ಅದಪ್ಪು ಈ ಅತ್ತೆ-ಸೊಸೆ ಮಾತಾಡಿದಾಂಗೆ,ಕೆಲವು ಜೆನಕ್ಕೆ, ವಿದ್ಯೆಲಿ ಸುಧಾರಣೆ ಆದರೂ ವಿಚಾರಲ್ಲಿ ಬದಲೊವು. ಮನುಷ್ಯರ ಸ್ವಭಾವ, ಗುಣನಡತೆ ಬದಲಾಗ. ಈ ಗಾದೆ ಮಾತುಗೊಲ್ಲ ಮದಲಾಣವರ ತಲೆ ತಲಾಂತರದ ಅನುಭವದ ಮಾತುಗೊ.
——–೦——–
ಎಲ್ಲಿಹೋದರೂ ನಿಜ ಸ್ವಭಾವ ಬಿಟ್ಟುಹೋಗ.
ಅದಪ್ಪು ಗೋಪಾಲ, ಎಲ್ಲಿ ಹೋದರೂ ನಿಜ ಸ್ವಭಾವ ಬೇರೆ ಬದಲ