Oppanna.com

“ಅಟ್ಟು- ಉಣ್ಣೆಕ್ಕು,ಕೊಟ್ಟು- ತರೆಕು”-(ಹವ್ಯಕ ನುಡಿಗಟ್ಟು-77)

ಬರದೋರು :   ವಿಜಯತ್ತೆ    on   16/01/2017    7 ಒಪ್ಪಂಗೊ

“ಅಟ್ಟು- ಉಣ್ಣೆಕ್ಕು, ಕೊಟ್ಟು- ತರೆಕು”-(ಹವ್ಯಕ ನುಡಿಗಟ್ಟು-77)

ಆನು ಸಣ್ಣದಿಪ್ಪಗ ಎನ್ನ ಅಪ್ಪನ ಮನೆಲಿ ಗೆದ್ದೆಬೇಸಾಯ ಇದ್ದತ್ತು.ಅಲ್ಲಿ ಬೆಳದ ಬತ್ತವೇ ಆಳುಗೊಕ್ಕೆ ಕೂಲಿ ಕೊಡ್ಳೂ ಮನೆವಕ್ಕೆ ಉಂಬಲೂ ಸಾಕಾಗೆಂಡಿತ್ತು.ಏಣಿಲು ಬೇಸಾಯ ಮುಗುದಪ್ಪಗ (ಸುಗ್ಗಿ ಬೆಳೆಯೂ ಇದ್ದತ್ತು)ಒಂದು ಗೆದ್ದೆಲಿ,ಸೊವುತ್ತೆ,ಮೆಣಸು, ಬದನೆ,ಬಚ್ಚಂಗಾಯಿ, ಹೀಂಗಿರ್ತ್ತೆಲ್ಲ ಅಪ್ಪᵒ ಮಾಡುಗು. ಅಂಬಗೆಲ್ಲ ಪಂಪಿನ ನೀರು ಹಾಕುದು. ಅದಕ್ಕೂ ಕೆಲವು ವರ್ಷ ಮದಲೆ ಜೊಟ್ಟೆ ಮೊಗವದಾಡ.ಮತ್ತೆ ಕರೆಂಟಿನ ಮೋಟರ್ ಬಂತು ಹೇಳುವೊᵒ. ಅಂತೂ ಕೃಷಿಲಿ ಬಹು ಆಸಕ್ತಿ ಅಪ್ಪಂಗೆ.

ಒಂದಾರಿ ಎನ್ನ ಸೋದರಮಾವ ಬಂದಿಪ್ಪಾಗ ಅಪ್ಪನೊಟ್ಟಿಂಗೆ ನೆಟ್ಟಿಗೆದ್ದೆ ಕರೆಂಗೆ ಹೋದೊವು. ಅವರೊಟ್ಟಿಂಗೆ ಆನೂ ತಿರುಗಾಟಕ್ಕೆ ಹೋದೆ.ಅಪ್ಪᵒ ಮೂರ್ನಾಲ್ಕು ಬಚ್ಚಂಗಾಯಿ ಕೊಯಿದು ನೇಲಕ್ಕುರುವೆಲಿ ಹಾಕುದು ಕಂಡು;ಮಾವ “ಇಷ್ಟೆಲ್ಲ ಒಟ್ಟಿಂಗೆ ಕೊಯಿತ್ತೆಂತಕೆ ಭಾವಯ್ಯ” ಹೇಳಿಯಪ್ಪಗ

“ಒಂದೆರಡು ನಿಂಗೊಗೆ ಕೊಂಡೋಪಲೆ” ಎನ್ನಪ್ಪನ ಉತ್ತರ ಬಂದಪ್ಪಗ

“ಬೇಡಪ್ಪ”. ಮಾವನ ಸಂಕೋಚ.

“ಅಟ್ಟು- ಉಣ್ಣೆಕ್ಕು, ಕೊಟ್ಟು- ತರೆಕು. ಹೇಳಿ ಒಂದು ಮಾತಿದ್ದು. ಅಡಿಗೆ ಮಾಡಿ ಉಣ್ಣೆಕ್ಕು,ಹೇಳುವ ಅರ್ಥಲ್ಲೇ ನಾವು ಕೃಷಿಮಾಡಿ ಉಣ್ಣೆಕ್ಕು,ಅಥವಾ ತಿನ್ನೆಕ್ಕೂಳಿಯೂ ಆವುತ್ತು.ನಿಂಗೊ ಕೊಟ್ಟದರ ಎಂಗೊ ತಪ್ಪ ಹಾಂಗೇ ಎಂಗೊ ಕೊಟ್ಟದರ ನಿಂಗಳೂ ಕೊಂಡೋಯೆಕ್ಕು”. ಹೇಳುವಗ , ಮಾವ ಸುಮ್ಮನಾದೊವು.

ಅಂಬಗ ಈ ಮಾತಿನ ಒಳಾರ್ಥ, ನಿಜ ತಿರುಳು  ಎನಗೆ   ದಾಖಲಾಗದ್ರೂ ಮತ್ತೆ ಬುದ್ದಿ ಬಪ್ಪಗ, ಅಪ್ಪ ಮಾತಾಡುವಗೆಲ್ಲ  ಹೇಳುವ  ಹಲವಾರು ನುಡಿಗಟ್ಟುಗೊ ಒಂದೊಂದೇ ತಲಗೆ ಹೋವುತ್ತದು ಅಪ್ಪಾದ ಮಾತು.

——-೦——–

7 thoughts on ““ಅಟ್ಟು- ಉಣ್ಣೆಕ್ಕು,ಕೊಟ್ಟು- ತರೆಕು”-(ಹವ್ಯಕ ನುಡಿಗಟ್ಟು-77)

  1. ಅಕ್ಕು ಚೆನೈಭಾವಂಗೆ, ರಜ ಉಪ್ಪಿನಕಾಯಿ ಎನ್ನೆತ್ರೆ ಇಪ್ಪದರಿಂದ ಕೊಡ್ಳೆ ಸಂತೋಷವೆ. ಆ ಹೆಳೆಲಿಯಾರು ಬನ್ನಿ.

    1. ವಿಜಯಕ್ಕ ಹೇಳಿದ ಬೇಸಾಯ ಎಂಗಳ ಮನೇಲೂ ಪ್ರಾಕಿಂಗೆ ಅಪ್ಪ ಮಾಡಿಯೊಂಡು ಇತ್ತಿದ್ದವು. ಈಗ ಹಳ್ಲಿಲಿ ಹಸಿಮೆಣಸಿಂಗು ಪೇಟೆಗೆ ಹೋಯೆಕ್ಕು.

      1. ಆದಪ್ಪು ಕೂಲಿ ಸಮಸ್ಯೆಂದಾಗಿ ಕೃಷಿ ಭೂಮಿ ಪೂರಾ ಹಡಿಲು. ಹೆಚ್ಚಿನಕಡೆಲೂ ಬೆಳೆ ಬತ್ತಗೆದ್ದೆಲಿ ಮನೆ!. ಮದಲಾಣವು ಬತ್ತಬೆಳೆತ್ತ ಗೆದ್ದೆಲಿ ಮನೆ ಕಟ್ಟವು. ಬರೆಯೋ ಗುಡ್ಡೆಯೋ ತಟ್ಟು ತೆಗದು ಮನೆ ಕಟ್ಟುಗಷ್ಟೆ.

  2. ಅಪ್ಪು ದುಡುದು ತಿಂಬದರ, ಹಂಚಿ ತಿಂಬದರ ಮಹತ್ವ ಸಾರುವ ಸಂದೇಶವಿದು. ಗೋಪಾಲಂಗೂ ಅನುಪಮಂಗೂ ಧನ್ಯವಾದಂಗೊ

  3. ಸರಿ ,ಒಳ್ಳೆ ಮಾತು.ಪ್ರತ್ಯುಪಕಾರದ ಮಹತ್ವ ತಿಳಿಸುತ್ತು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×