Oppanna.com

“ಅತ್ತಿತ್ತೆ ತಿಷ್ಟಗತಿ ಇಲ್ಲೆ.”

ಬರದೋರು :   ವಿಜಯತ್ತೆ    on   05/07/2015    10 ಒಪ್ಪಂಗೊ

“ಅತ್ತಿತ್ತೆ ತಿಷ್ಟ ಗತಿ ಇಲ್ಲೆ.”-{ಹವ್ಯಕ ನುಡಿಗಟ್ಟು-32}

ಆನು ಸಣ್ಣಾದಿಪ್ಪಾಣ  ಒಂದು ಕತೆ. ಕೆಲಸದಾಳಿನ ಎನ್ನಜ್ಜ ಸಮಾ ಬಯಿವದು ಕಂಡತ್ತು.ಎಂತಕೆ ಬಯಿದ್ದೂಳಿರೆ ಅದು ತೋಟಂದ ತೆಂಗಿನಕಾಯಿ ಕದ್ದು ಬೇಲಿಂದ ಹೆರ  ಹಾಕಿ ಕೆಲಸ ಬಿಟ್ಟಿಕ್ಕಿ ಹೋಪಗ ಅದರ ತೆಕ್ಕೊಂಡು ಹೋದ ಸಂಗತಿಗೆ.  ಅಜ್ಜ ನೋಡಿ ಗೌಜಿ ಮಾಡಿದ್ದು; ಇದು ಮೂರ್ನೇ ಸರ್ತಿ ಆಡ. “ಇನ್ನದರ ತಿಷ್ಠ ಗತಿ ನವ ಬೇಡ”. ಹೇಳಿದ ಅಜ್ಜ ಅದರ ಬಾಕಿದ್ದ ಕೆಲಸದ ಪೈಸವ  ಚುಕ್ತ ಮಾಡಿದೊವು.ಆಳುಗೊ ಹೋಗಿ ಬಿರುದಮತ್ತೆ ಅಜ್ಜಿಯತ್ರೆ ಕೇಳಿದೆ.  “ತಿಷ್ಠಗತಿ ಬೇಡಾಳಿರೆ ಎಂತರಜ್ಜಿ?”.ಅದರ ವಿವರಣೆ ಅಜ್ಜಿ ಕೊಟ್ಟೊವು.

ಇನ್ನೊಂದು ಇತ್ತಿತ್ತಲಾಗಿಯಾಣ ಕತೆ ಕೇಳಿ. ಹಳ್ಳಿ ಮೂಲೆಲಿದ್ದ ಒಪ್ಪಭಾವನ ಮಗ ಇಂಜಿನಿಯರ್. ಎಲ್ಲಿ ಕೆಲಸ..? ಕೇಳುಸ್ಸೇ ಬೇಡ. ಅದು ನಮ್ಮ ಇಂಜಿನಿಯರಕ್ಕಾದ ಇಂಜಿನಿಯರುಗೊ ಪೂರ ಬೆಂಗಳೂರಿಲ್ಲೇ ಇಪ್ಪದನ್ನೆ!.ಬೆಂಗಳೂರಿಲ್ಲಿ ಇಂಜಿನಿಯರಾದರೆ ಕೂಸು ಸಿಕ್ಕಲೂ ಬಙ ಇಲ್ಲೆಯಿದ. ಮದುವೆಯೂ ಆತು ಹೇಳ್ವೊಂ. ಮದ್ವೆ ಆದ್ದೂ ಮತ್ತೊಂದು ಹಳ್ಳಿಮೂಲೆಂದ. ನವದಂಪತಿಗೊ ಬೆಂಗ್ಳೂರ್ ಪೇಟೆಲಿ ಮನೆಮಾಡಿದೊವು.ಮಗಳು-ಅಳಿಯನೊಟ್ಟಿಂಗೆ ಕೂಸಿನ ಅಬ್ಬೆ, ಒಂದತ್ತು ದಿನ ಅವರ ಮನೆಲಿ ಕೂದಿಕ್ಕಿ ಪೇಟೆ ಗಾಳಿ,ಪೇಟೆ ನೆರೆ-ಕರೆ, ಅನುಭವಿಸಿಕ್ಕಿ ಬಂತು. ಗೆಂಡನತ್ರೆ ಅಲ್ಲಿಯಾಣ ಸುಕ,ವೈಭೋಗವ ವರ್ಣಿಸಿತ್ತು. ಒಪ್ಪಭಾವ; ಹೆಂಡತ್ತಿ ಹತ್ರೆ “ಹೇಂಗೆ ನೆರೆಕರೆವು ಇವಕ್ಕೆ ಸಕಾಯಕ್ಕೆ ಬತ್ತ ಹಾಂಗಿದ್ದವೋ?”

“ಅದರ ಮಾಂತ್ರ ಕೇಳೆಡಿ. ಪೇಟೆಲಿ ನೆರೆಕರೆಲಿ ಅತ್ತಿತ್ತಲಾಗಿ ತಿಷ್ಠಗತಿ ಇಲ್ಲೆ!. ಹತ್ತರಿದ್ದ ಮನೆವರ ಗುರ್ತವೇ ಇಲ್ಲೆ ಮಿನಿಯ!!.ಆ ಬಾಂಧವ್ಯ  ನಮ್ಮ ಹಳ್ಳಿಲೇ ಉಳ್ಳೊ.

ಒಳ್ಳೆ ಅನ್ಯೋನ್ಯತೆ ಇದ್ದೊವು ಕೆಲವು ಸಮಯ-ಸಂದರ್ಭಲ್ಲಿ; ಅಪ್ಪ-ಮಗನೂ, ಅತ್ತಿತ್ತೆ  ಮೊರಸಿರೆ; “ನೀನೆನ್ನತ್ರೆ ಮಾತಾಡೆಡ ಎನಗೆ ನಿನ್ನ ತಿಷ್ಠಗತಿ ಇಲ್ಲೆ”.ಹೇದೊಂಡು ಈ  ನುಡಿಗಟ್ಟು ಉಪಯೋಗುಸುತ್ತೊವು.ಈಗ ನಿಂಗೊಗೂ ಅರ್ಥ ಆತನ್ನೆ!.

ಹಾಂಗೆ ಹೇಳಿಂಡು ನಮ್ಮೊಳದಿಕೆ ತಿಷ್ಠಗತಿ ಬೇಕು. ನಿಂಗೊಲ್ಲ ಇದರ ಓದಿ ಒಪ್ಪಕೊಡೆಕು.

10 thoughts on ““ಅತ್ತಿತ್ತೆ ತಿಷ್ಟಗತಿ ಇಲ್ಲೆ.”

  1. ಜಯಲಕ್ಷ್ಮಿಯ ಅಭಿಪ್ರಾಯ ಸರಿ. ’ಹೋಕುರಕ್ಕಿಲ್ಲೆ ’ ಹೇಳುವದು ರಜ ಕಡ್ಪದ್ದು. ಅದು ಅವರ ಇಡೀ ಮನಗೇ ಸಂಪರ್ಕ ಇಲ್ಲದ್ದು. ಇದು ರಜಾ ಕಡ್ಪ ಕಮ್ಮಿ. ಹೇಳಿರೆ; ಇದು ವೈಯಕ್ತಿಕ. ಶೈಲಜಂಗೆ ಹೊಸ ಶಬ್ಧ ತಿಳುದಾಂಗಾದ್ದದು ಸಂತೋಷಾತು. ಅದಕ್ಕೇ ಹೀಂಗೆ ಬರೆತ್ತಾಇದ್ದೆ.

  2. “ಅತ್ತಿತ್ತೆ ತಿಷ್ಟ ಗತಿ ಇಲ್ಲೆ.” ಹೇಳಿರೆ “ಹೋಕುಬರಕ್ಕು(ಹೋಕುವರಕ್ಕು)” ಹೇಳುವ ಒಂದು ಶಬ್ದ ನಾವು ಉಪಯೋಗಿಸುತ್ತು…ಅದರ ಅರ್ಥ ಕೊಡ್ತೋಳಿ ಗ್ರೇಶಿದೆ ಆನು. ಆದರೂ ಅದಕ್ಕೆ ಹತ್ತರಾಣ ಅರ್ಥ ಕೊಡ್ತು ಅಲ್ಲದಾ ವಿಜಯತ್ತೆ?

  3. ಹೊಸ ಶಬ್ದ ತಿಳುಕ್ಕೊಂಡಾಂಗೆ ಆತು… ಧನ್ಯವಾದಂಗ ಅತ್ತೆ…

  4. ಸರಿ ಚೆನ್ನೈಭಾವ, ಶರ್ಮಭಾವಂಗೆ, ಪ್ರಕಾಶಂಗೆ ಒಪ್ಪಕೊಟ್ಟ ಎಲ್ಲರಿಂಗು ಧನ್ಯವಾದಂಗೊ

  5. ತಿಷ್ಠಗತಿಗೊಂದು ಒಪ್ಪ. ತಿಷ್ಠವೋ ತಿಷ್ಟವೋ. ಒಪ್ಪಣ್ಣ° ಅದರ ತಿಷ್ಟ ಹೇದರೇ ಇಷ್ಟ ಹೇಳುಗು ನೋಡಿ.

  6. ತುಂಬಾ ಸಣ್ಣ ಇಪ್ಪಗ ಇದರ ಕೇಳಿದ ನೆಂಪು ಈಗ ಬತ್ತು.
    ಈಗ ಮರದು ಹೋದ ಒಂದು ನುಡಿಗಟ್ಟಿನ, ವಿವರಣೆ ಸಹಿತ ಕೊಟ್ಟ ವಿಜಯತ್ತಿಗೆಗೆ ಧನ್ಯವಾದಂಗೊ

  7. ಎನಗೆ ನಿನ್ನ ತಿಷ್ಠಗತಿಯು ನಿನಗೆ ಎನ್ನ ತಿಷ್ಠಗತಿಯು ಇಬ್ಬರಿಂಗೆ ಒಪ್ಪಣ್ಣ ಬಯಲಿನ ತಿಷ್ಠಗತಿಯು ಇರಲಿ ಅತ್ಹೋ!!!!!!!!!!

  8. ನರಸಿಂಹಣ್ಣಂಗೂ,ಗೋಪಾಲಂಗೂ ಧನ್ಯವಾದಂಗೊ. ಗೋಪಾಲ, ಕೆಲವು ಅಚ್ಚಕನ್ನಡಂದ ಗ್ರಾಮ್ಯ ಭಾಷಗೆ ಬಪ್ಪಾಗ ಮೋಡಿ ರೂಪ ಆವುತ್ತದ ಬಹುಷಃ ಹಾಂಗಾದ್ದಾಯಿಕ್ಕು.

  9. ತಿಷ್ಟ =ತಿಷ್ಥ=ನಿಲ್ಲು ,ಗತಿ= ಚಲನೆ ; ಅತ್ತಿತ್ತ ಹೋಪದು ,ಬಪ್ಪದು ಇಲ್ಲೇ ; ಹೋಗಿ ಕೂಪದು ಇಲ್ಲೇ; ಒಟ್ಟಾರೆ ಸಂಪರ್ಕ ಇಲ್ಲೇ ಹೇಳಿ ಅರ್ಥ ಹೇಳಿ ತೋರ್ತು. ಆನು ಈ ಶಬ್ದ ಇಷ್ಟಗತಿ ಹೇಳಿ ಗ್ರಹಿಸಿತ್ತಿದ್ದೆ. ಚಿಕ್ಕಮ್ಮ ಬರೆದ ಕಾರಣ ಸರಿಯಾದ ರೂಪ ಗೊಂತಾತು. ಧನ್ಯವಾದ.

  10. ಬೆಂಗಳೂ ರಿಂಗೆ ಹೋದ್ದದು ಆರು ಹೇದು ಸಂಶಯ. ಇರಳಿ. ನಮ್ಮೊಳದಿಕೆ ತಿಷ್ಟಗತಿ ಇದ್ದನ್ನೆ:ಒಳ್ಳೆದಾಯಿದು ವಿಜಯಕ್ಕ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×