- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
–ಅಶನ ಬೇಯಿಂದೋ ನೋಡ್ಳೆ ಒಂದವುಳು ಸಾಕು—(ಹವ್ಯಕ ನುಡಿಗಟ್ಟು-14)
ಮದಲಿಂಗೆ ಅಡಿಗೆ ಮಾಡ್ಳೆ ಸೌದಿ ಒಲೆ. ಅಶನದಳಗೆಲಿ ನೀರು ಮಡಗಿ ಕಿಚ್ಚಾಕಿ ನೀರು ಕೊದಿವಗ ಅಕ್ಕಿ ತೊಳದು ಹಾಕೆಕ್ಕು. ಹಾಂ..! ಮತ್ತದರ ಗೊಡವೆ ಇಲ್ಲದ್ದೆ ಬಿಟ್ಟಿಕ್ಕಿ ಹೋಪ ಹಾಂಗೂ ಇಲ್ಲೆಯಿದ!.ಅಡಿಗಡಿಗೆ ಕಿಚ್ಚು ಮುಂದೆ ಹಾಕೆಕ್ಕು, ಅಶನ ಹದಕ್ಕೆ ಬೆಂತೊ ನೋಡೆಕ್ಕು. ಇಲ್ಲದ್ರೆ ಕಿಚ್ಚು ಹೊತ್ತೆಂಡಿದ್ರೆ ಮುದ್ದೆ ಆಗಿ ಹೋಕು, ಅಥವಾ ಕಿಚ್ಚು ನಂದಿತ್ತು ಹೇದಾದರೆ;ನರುನುರುತ್ತಟೆ ಅಕ್ಕು!. ಹೀಂಗೆ ಬೆಂತೋ ನೋಡ್ಳೆ ಸೌಟಿಲ್ಲಿ ತೆಗದು ಒಂದವುಳಿನ ನಮ್ಮ ಕೈಬೆರಳಿಲ್ಲಿ ನುರುದು ನೋಡುವದಿದ!.ಅಳಗೆಲಿಪ್ಪದರ ಎಲ್ಲವನ್ನೂ ನೋಡೆಡನ್ನೆ!. ಈಗಾಣ ದಿನಲ್ಲಿ ಕುಕ್ಕರಿಲ್ಲಿ ಹಾಕಿ ಗ್ಯಾಸ್ ಒಲೆಲಿ ಮಡಗಿ ಅದು ಕೂಗಿ ಎಚ್ಚರಿಕೆ ಕೊಟ್ಟಪ್ಪಗ ಓಫ್ ಮಾಡಿರಾತು ಹೇಳುವೋ೦!. ಹಾಂಗಾಗಿ ಇಂತಾ ಮಾತುಗೊ ಇನ್ನಾಣವಕ್ಕೆ ಅರ್ಥವೇ ಆಗದೋ? ಎಂತೋಪ್ಪ!. ಅದಿರಳಿ, ಈ ನುಡಿಗಟ್ಟಿನ ಕೆಲಾವು ಸಂದರ್ಭಲ್ಲಿ ಉಪಯೋಗುಸುತ್ತವು. ತೆಂಗಿನಕಾಯಿ ಕೊಯಿವಗ ಕೊನೆಂದ ಒಂದು ತೆಗದು ನೋಡಿರೆ ಸಾಕು,ಒಂದು ಇಡೀ ಬೆಳಗೆ, ಹಾಂಗೇ ಒಬ್ಬ ಮನುಷ್ಯನ ಚುರುಕುತನ ಅಳವಲೆ, ಅವನ ಪ್ರಾಮಾಣಿಕತೆ,ನಿಷ್ಟೆ, ನೋಡ್ಳೆ, ಕಾರ್ಯಚಟುವಟಿಕೆಯ ಒಂದು ನೋಡೀರೆ ಸಾಕು, ಒಬ್ಬನ ಮಾತಿನ ವೈಖರಿಗೆ,ಹೀಂಗೆ ಕೆಲಾವು ಸಂದರ್ಭಲ್ಲಿ ಉಪಯೋಗುಸುದಲ್ಲದ್ದೆ, ಒಂದಬ್ಬೆ ಮಕ್ಕಳ ಹೋಲುಸುವಗ, ಹಾಂಗೇ ಒಂದು ಸಮುದಾಯವ ಹೋಲುಸುತ್ತಲ್ಲಿ, ಈ ನುಡಿಗಟ್ಟಿನ ಉಪಯೋಗುಸುತ್ತವು.
ಚಿಕ್ಕ,ಚೊಕ್ಕ ವಿವರಣೆ ಲಾಯಕಾಯಿದು ವಿಜಯಕ್ಕ.
ಅಪ್ಪು ಅಕ್ಕ . ಒಂದು ರಾಶಿಯ , ಒಂದು ಗುಂಪಿನ, ಒಬ್ಬನ ಒಂದು ಗುಣ ಸಮಗ್ರ ಚಿತ್ರವ ತೋರಿಸುತ್ತು. ಹೇಳಿದ ಹಾಂಗೆ ಅಳಗೆಯ ಅಡುಗೆ ಕಾಣದ್ದೋರಿಂಗೆ ಇದು ಗೊಂತಾಗ !