- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
“ಇರುಳು ಕಂಡ ಬಾವಿಗೆ ಹಗಲು ಹಾರಿದ ಹಾಂಗೆ”-[ಹವ್ಯಕ ನುಡಿಗಟ್ಟು—20]
ಕೆಲಾವು ವರ್ಷ ಹಿಂದೆ ಅಪ್ಪನ ಪರಿಚಯಸ್ತರು ಆರೋ ಮನಗೆ ಬಂದ ಸಂದರ್ಭ. ಸುಖ, ದುಃಖ ಮಾತಾಡ್ತಾ ಅವರವರ ಹೆಂಡತ್ತಿ,ಮಕ್ಕಳ ವರ್ತಮಾನವೂ ಆತ್ಮೀಯರಲ್ಲಿ ಬಾರದ್ದೆ ಇರಯಿದ!. ಅವು ಎನ್ನಪ್ಪನತ್ರೆ ಮಾತಾಡ್ತಾ “ಎಂತ ಹೇಳಿಯೂ ಸುಖ ಇಲ್ಲೆ ಭಾವ! ಕೊಟ್ಟ ಮಗಳು ಅಪ್ಪನ ಮನೆಲಿ ಬಂದುಕೂದರೆ; ಅದೊಂದು ನಿತ್ಯ ಕರಕ್ಕರೆ ಮಿನಿಯ! ನವಗೆ ಮಗಳ ಸಾಂಕಲೆಡಿಯದ್ದೆ ನಾವು ಮದುವೆ ಮಾಡುಸ್ಸೊ ಹೇಳು?ಇಪ್ಪ ಹಾಂಗೆ ಇದ್ದರೆ ಅದೊಂದು ಚೆಂದ. ಕೂಸಿಂಗೆ ಮದುವೆ ಆಗಿ ಒಂದೆರಡು ತಿಂಗಳಿಲ್ಲೇ ಕೂಸಿನ ಬದುಕು ಹೀಂಗಾತು” ಅವರ ಮಗಳ, ಒಡದು ಹೋದ ದಾಂಪತ್ಯದ ಕಣ್ಣೀರ ಕತೆಯ ಕೇಳಿದ ಎನ್ನಪ್ಪ; “ಮೊದಲೇ ಅವರ ಬುದ್ಧಿ ನೇರ್ಪ ಇಲ್ಲೆ ಹೇಳಿ ಗೊಂತಿದ್ದತ್ತು ಹೇಳ್ತೆ ನೀನು! ಮತ್ತೆಂತಕೆ… ’ಇರುಳು ಕಂಡ ಬಾವಿಗೆ ಹಗಲು ಹೋಗಿ ಹಾರ್ತ ಜೆಂಬಾರ’ ಬೇಕಾತೊ!? ಕೇಳಿದೊವು. “ಎಂತ ಮಾಡ್ಳಿ? ಮಾಣಿಯ ಅಬ್ಬೆಪ್ಪ ಮೊಂಡು ತರ್ಕಿಗೊ ಆದರೂ ಮಾಣಿ ಜೆನ ಸೀದ ಜಾನ್ಸಿಗೊಂಡೆ.ಕೇಳಿಗೊಂಡು ಬಪ್ಪಗ ಕೊಡದ್ದರೆ;ಬಾಕಿ ಆದರೆ ಪ್ರಾಯ ನಿಲ್ಲುತ್ತೊ ಹೇಳು. ಆದರೀಗ ನೋಡೀರೆ ಅಳಿಯ ’ಅಬ್ಬೆಪ್ಪಾರಿ’. ಅವ ಎನ್ನ ಮಗಳ “ಪಾಣಿಗ್ರಹಣ’’ ಮಾಡಿದ್ದಲ್ಲ. ಪ್ರಾಣಿಗ್ರಹಣ ಮಾಡಿದ್ದದು!!.ನಿತ್ಯ ಅವರ ಪೆಟ್ಟು ತಿಂದೊಂಡು ಆನಲ್ಲಿ ಕೂರ್ತಿಲ್ಲೆ ಹೇಳ್ತು ಮಗಳು!!.ನಮ್ಮ ಕರುಳು ಕರಂಚುತ್ತಲ್ಲೊ! ಕರಕ್ಕೊಂಡು ಬನ್ನಿ ಹೇಳಿತ್ತು ಹೆಂಡತ್ತಿ.ಹಾಂಗೇ ಮಾಡಿದೆ.”
ಮೇಗೆ ಹೇಳಿದ ಸಂಗತಿ, ಒಂದೆರಡು ಮನೆಯ ಕತೆ ಅಲ್ಲ!. ಈಗೀಗ ಹಲವಾರು ಮನೆ ಕತೆ-ವ್ಯಥೆ!!.ಕೆಲವು ಉದಾಹರಣೆಲಿ ಒಂದೇ ಹೊಡೆಯಾಣ ಪೆಟ್ಟಿಂಗೆ ಇನ್ನೊಂದು ಹೊಡೆ ಬೇನೆ ತಿಂಬದಾದರೆ; ಇನ್ನು ಕೆಲವು ಎರಡೂ ಹೊಡೆಯೋರು ಕೈ ಕೈ ಹರ್ಕತ್ತು ಮಾಡಿ ಮುರುಸಿದ್ದಾಗೆಂಡಿಕ್ಕು.ಅಂತೂ ಸೋಲುದು ಕೂಸುಗಳೇ ಹೇಳ್ವದರ ಮರವಲೆಡಿಯ!.
ಈ ನುಡಿಗಟ್ಟು ಮದುವೆ ವಿಷಯಕ್ಕೆ ಮಾಂತ್ರ ಅನ್ವಹಿಸಿದ್ದಲ್ಲ. ಗೊಂತಿದ್ದು-ಗೊಂತಿದ್ದೂ ನಾವು ಎಡವಿ ಬೀಳ್ಲಾಗ ಹೇಳಿ ಎಚ್ಚರಿಕೆ ಕೊಡುವ ಹೇಳಿಕೆಯಿದು. ಕೆಲವು ವಿಷಯಂಗಳಲ್ಲಿ ಅತೀವ ಚಿಂತನೀಯ ಹೇಳುಗು ಎನ್ನಪ್ಪ. ಗ್ರಹಚಾರ ಸುತ್ತುವಾಗ ನಾವು ಎಷ್ಟೇ ಚಿಂತನೆ ಮಾಡಿರೂ ಸೋಲುತ್ತು. ಹಾಂಗೆ ಹೇದೊಂಡು ಜಾಗ್ರತೆ ಮಾಡದ್ರೂ ಆಗಯಿದ. ನಿಂಗೊ ಎಂತ ಹೇಳ್ತಿ?
ಹರೇರಾಮ, ಸರಿ ಪಾರ್ವತಿ,ಇರುಳು ಕಂಡ ಬಾವಿಗೆ ನೇರವಾಗಿ ಆರೂ ಹೋಗಿ ಬೀಳ್ತವಿಲ್ಲೆ . ಅಷ್ಟು ವಿವೇಕಶೂನ್ಯತೆ ಇಪ್ಪಲಾಗ ಹೇಳ್ವದಕ್ಕಾಗಿಯೇ ಈ ನುಡಿಗಟ್ಟು. ಒಪ್ಪ ಕೊಟ್ಟ ಪಾರ್ವತಿಗೆ, ಮಂಜುನಾಥ ಪ್ರಸಾದಂಗೆ ಧನ್ಯವಾದಂಗೊ
ಇದು ಒಳ್ಳೆ ಒಂದು ಮಾತು ಅಕ್ಕ ಇದರ ಮನಸ್ಸಿಲ್ಲಿ ಮಡಗಿಯೊಂಡಿದ್ದರೆ ಯಾವಾಗಲೂ ಒಳ್ಳೇದು
ಸತ್ಯವಾದ ಮಾತು ವಿಜಯಕ್ಕ .ಇರುಳು ಕ೦ಡ ಬಾವಿಗೆ ಹಗಲು ಹೋಗಿ ಆರೂ ಬೇಕೂ ಹೇಳಿ ಬೇಳ್ತೊವಿಲ್ಲೆ .ಆದರೆ ಕೆಲವು ಸರ್ತಿ ಹಾ೦ಗಿದ್ದ ಪರಿಸ್ಥಿತಿ ಬ೦ದು ಹೋವುತ್ತು.ಹಾ೦ಗಾಗಿ ಜೀವನಲ್ಲಿ ಜಾಗ್ರತೆ ಇದ್ದಷ್ಟು ಸಾಲ ಅಲ್ಲದಾ ?.