- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
“ಉರಿತ್ತ ಹುಣ್ಣಿಂಗೆ ಉಪ್ಪು ಹಾಕಿದಾಂಗೆ”-(ಹವ್ಯಕ ನುಡಿಗಟ್ಟು-107)replica watches UK
“ನೀನು ಉರಿತ್ತ ಹುಣ್ಣಿಂಗೆ ಉಪ್ಪಾಕಿದಾಂಗೆ ಮಾತಾಡೆಡ ಅದರತ್ರೆ!”. ಒಂದಿನ ಅಜ್ಜಿ ಆರತ್ರೋ ಹೇಳುದು ಕೇಳಿತ್ತು.ಎಂತಕೆ ಹಾಂಗೆ ಹೇಳುದು!. ಏವ ವಿಷಯಕ್ಕೆ!!. ಎನ ಕುತೂಹಲ ಹುಟ್ಟಿತ್ತು. ಅಜ್ಜಿ ಮಾತ್ರ ಇಪ್ಪಾಗ ಕೇಳಿದೆ.
“ಆಚಮನೆ ಚುಬ್ಬಿಯ ಮಾಣಿ ತೀರಿಹೋದ ಶುದ್ದಿಯ ನಿನ್ನ ಅತ್ತೆ ಕೇಳುತ್ತದ ಅದರತ್ರೇ; ಓಪಾಸು ,ಓಪಾಸು ಅದರತ್ರೆ ಕೇಳ್ಲಾಗ. ಅದು ರಜಾ ಹಳತ್ತಾಗಲಿ. ಅದ್ರಷ್ಟಕೇ ಆ ಬೇಗೆ ಕಮ್ಮಿಯಾಗಲಿ. ಈಗ ಅದರ ಮನಸ್ಸಿಲ್ಲಿ ಅದು ಉರಿತ್ತ ಹುಣ್ಣು!.ಆ ಹುಣ್ಣು ರಜಾ ಮಾಸೆಕ್ಕು. ಅದುವೇ ಆಗಿ ಆ ಶುದ್ದಿ ತೆಗದರೆ ಅದಕ್ಕೆ ಸಮದಾನ ಮಾಡ್ಳಡ್ಡಿ ಇಲ್ಲೆ. ನಾವೇ ಆಗಿ ಅದರ ಕೆಣಕ್ಕಿ ಕೆರಳುಸಲಾಗ.ಹಸಿ ಹುಣ್ಣಿಂಗೆ ಉಪ್ಪು ಉದುರುಸಿರೆ; ಅದು ಮತ್ತೂ ಹೆಚ್ಚೆಚ್ಚು ಉರಿವದು” ಹೇಳಿದವು ಅಜ್ಜಿ.
ಒಳ್ಳೆಯ ಎಚ್ಚರಿಕೆ ಮಾತಿದೂಳಿ ಕಂಡತ್ತೆನಗೆ.
—–೦——