Oppanna.com

“ಎನ್ನಂದ ಮುಂದೆ ಬಂದಿಯೊ ರಾಗಿ ಮುದ್ದೆ-(ಹವ್ಯಕ ನುಡಿಗಟ್ಟು–70)

ಬರದೋರು :   ವಿಜಯತ್ತೆ    on   05/11/2016    7 ಒಪ್ಪಂಗೊ

ಎನ್ನಂದ ಮುಂದೆ“ ಬಂದಿಯೊ ರಾಗಿ ಮುದ್ದೆ…”-(ಹವ್ಯಕ ನುಡಿಗಟ್ಟು-70)

ಮದಲಿಂಗೆ ಪಾಪದ ಪರಮೇಶ್ವರಣ್ಣ ಹೇದೊಬ್ಬᵒ ಇದ್ದಿದ್ದನಾಡ. ನಾಕಡಕ್ಕೆ ಮರದೊಟ್ಟಿಂಗೆ, ಹಟ್ಟಿ,ಮನೆ,ಸಂಸಾರ ಹೇಳಿ ಹೇಂಗೋ ಜೀವನಲ್ಲಿ ಏಗೆಂಡು ಇರುತ್ತಾ ಇಪ್ಪಗ ಅವನ ಮಗಳಿಂಗೆ; ಅದೊಳ್ಳೆ ಚೆಂದದ ಕೂಸಾಗಿದ್ದರಿಂದಲೋ ಗುರುದೇವತಾನುಗ್ರಹಂದಲೋ ಒಳ್ಳೆ ಕುಳವಾರು ಸಿಕ್ಕಿತ್ತು.ಅವᵒ ಶಕ್ತಿ, ಭಕ್ತಿಲಿ ಮಗಳ ಮದುವೆ ಮಾಡಿಕೊಟ್ಟᵒ ಹೇಳುವೊᵒ. ಮದುವೆ ಕಳಾತು, ಮರುವಾರಿಯೂ ಮದುವೆ ಮಕ್ಕೊ ಹೋಗಿ, ಬಂದು, ಆತು. ಮಗಳು-ಅಳಿಯᵒ, ಚೆಂದಕೆ ಬೇಕಾದಾಂಗೆ,ಇರೆಕಾದಾಂಗೆ ಇದ್ದವು ಹೇಳ್ತ ತೃಪ್ತಿಯೂ ಪರಮೇಶ್ವರಣ್ಣಂಗಿದ್ದು. ಕೊಟ್ಟಕೂಸು, ಬೇರೆ ಕುಲಕ್ಕೆ, ವರ್ಗಾವಣೆ ಮಾಡಿರೂ ಮನಸ್ಸಿಂದ ಹೆರಹಾಕಲಿದ್ದೊ! ಇಲ್ಲೆನ್ನೆ?. ಹಾಂಗೆ ಹೇಳ್ತರೆ. ಮಗಳ ಕೊಟ್ಟಾದ ಮತ್ತೆ, ಮತ್ತೂ ಮಮಕಾರ ಜಾಸ್ತಿಯಾಡ ಅಪ್ಪಂಗೆ!!. (ಇದು ಎನ್ನ ಅನುಭವವೂ ಅಪ್ಪು. ಅಬ್ಬಗೆ ಇಲ್ಲೇಳಿ ಅಲ್ಲ.)

ಒಂದಾರಿ ಇದ್ದಕ್ಕಿದ್ದಾಂಗೆ ಪರಮೇಶ್ವರಣ್ಣಂಗೆ ಮಗಳಲ್ಲಿಗೆ ಹೋಗಿ, ಅಳಿಯ-ಮಗಳತ್ರೆ ಮಾತಾಡಿಕ್ಕಿ ಬಪ್ಪೊᵒ ಹೇಳಿ ಆತು. ಅಂಬಗೆಲ್ಲ ಕಾಗದ ಟಪ್ಪಾಲ್ಲಿ ಹಾಕೀರಾತು.ಕಾಗತ ಹಾಕದ್ದೆ ಹೋದರೆ.., ಹೊಸ ಮದುವೆ ಮಕ್ಕೊಲ್ಲೊ!? ಎಲ್ಯಾರು ಸಮ್ಮಾನಂಗೊಕ್ಕೊ ಹೋಗಿದ್ರೆ..

ಸರಿ . ಅಪ್ಪ ಬತ್ತೊವೂಳಿ ಕೊಶಿ ಆತು ಮಗಳಿಂಗೆ!. ಎಂತ್ರ ಅಪ್ಪಂಗೆ ಪ್ರೀತಿಯ ಆಹಾರ..? ಆಲೋಚನೆ ಮಾಡಿತ್ತು ಮಗಳು. “ಅಪ್ಪಂಗೆ ’ರಾಗಿಮುದ್ದೆ’ ಹೇಳಿರೆ ಪ್ರೀತಿ ಅಲ್ಲಿ ಹೆಚ್ಚಿಗೆಯೂ ಅದ್ರನ್ನೇ ಮಾಡುದು”. ಹೇಳಿತ್ತು ತನ್ನ ಅತ್ಯೋರತ್ರೆ. “ಇಲ್ಲಿ ಅದರ ಮಾಡುದು ಕಮ್ಮಿ. ನಿನ್ನಪ್ಪಂಗೆ ಪ್ರೀತಿ ಆದರೆ ಅದರನ್ನೇ ಮಾಡ್ಳಕ್ಕು” ಹೇಳಿ ಅತ್ತೆಯ ಒಪ್ಪಿಗೆಯೂ ಬಿದ್ದತ್ತು.

ಪರಮೇಶ್ವರಣ್ಣ ಬಂದᵒ. ಮಗಳು ಜಾಲಿಂಗೆ ಬಂದು ಅಪ್ಪನ ಕೈಚೀಲ ಪಗರಿಯೊಂಡತ್ತು. ಮದಾಲು ಬೆಲ್ಲ-ನೀರು ಆಸರಿಂಗೆ ಬಂತು. ಒಳ ಹಂತಿ ಹಾಕಿ ಉಂಬಲೆ ಬಪ್ಪಲೆ ಹೇಳಿಕೆ ಬಂತು. ಅಳಿಯನೂ ಅವನ ಅಪ್ಪನೂ ಒಳಾಂಗೆ ಉಂಬಲೆ ಕರಕ್ಕೊಂಡು ಹೋದೊವು. ಬಾಳಗೆ ಮದಾಲು ತಾಳು ಬಿದ್ದತ್ತು. ಮತ್ತೆ ಬಿದ್ದತ್ತದ ರಾಗಿ ಮುದ್ದೆಯೂ ಸಾರುದೆ. ಅದರ ಕಂಡಪ್ಪದ್ದೇ ಪರಮೇಶ್ವರಣ್ಣನ ದೊಂಡೆ ಒಳಾಂದ ಬಿದ್ದ ಶಬ್ಧ “ಎನ್ನಂದ ಮುಂದೆ ಬಂದಿಯೊ ರಾಗಿ ಮುದ್ದೆ!?”. ಈ ಪುಣ್ಯಾತ್ಮ  ತನ್ನ ಬಡಪ್ಪತ್ತಿಂಗೆ ಮನೆಲಿ ದಿನಾ ರಾಗಿ ಮುದ್ದೆ,ಸಾರು, ಮಾಡುತ್ತರೆ; ಅನುಕೂಲವಂತರಾದ ಮಗಳ ಮನೆಲಿ ಒಳ್ಳೊಳ್ಳೆ ಅಡಿಗೆ ಉಂಬಲಕ್ಕು ಜಾನ್ಸಿತ್ತಿದ್ದᵒ ಪಾಪ!. ಮಗಳೋ ಅದು ಬರೀ ಸಣ್ಣ ಪ್ರಾಯದ್ದು. ಅದಕ್ಕೆ ಆ ವಿಚಾರ ತಲಗೆ ಹೋತಿಲ್ಲೆ.ಅದ್ರನ್ನೇ ಮಾಡ್ಳೆ ಏರ್ಪಾಡು ಮಾಡಿಗೊಂಡತ್ತು.

ಅದರಿಂದ ಮತ್ತೆ, ಈ ಹೇಳಿಕೆ ಸುರುವಾತಿದ.  ನಾವು ದಿನಾ ತಿಂತ ಆಹಾರ ಬಿಟ್ಟು ಬೇರೆ ತಿಂಬೊ ಜಾನ್ಸೆಂಡು ಹೋವುತ್ತು.  ಆದರೆ  ಅದೇ  ಪಾಕಾಯಿತನವೇ ಸಿಕ್ಕೀರೆ, ಈ ನುಡಿಗಟ್ಟಿನ ಹೇಳ್ತವು.ನುಡಿಗಟ್ಟು ಹೇಳಿರೆ ಹಾಂಗೇ ಅಲ್ಲೊ, ಹಿಂದಾಣ ಕಾಲಂದಲೇ ಅನುಭವಿಸಿದ, ಜಾನಪದೀ ಸಾಲುಗೊ.

—–೦—–

7 thoughts on ““ಎನ್ನಂದ ಮುಂದೆ ಬಂದಿಯೊ ರಾಗಿ ಮುದ್ದೆ-(ಹವ್ಯಕ ನುಡಿಗಟ್ಟು–70)

  1. ಧನ್ಯವಾದ ಶ್ರೀ ದೇವಿ, ಅಪರೂಪಕ್ಕೆ ಬಯಲಿಂಗೆ ಬಂದ ಸೊಸಗೆ; ರಾಗಿಮುದ್ದೆ ಬೇಡ. ರಾಗಿಮಣ್ಣಿಯೋ ಹಲುವವೋ ಮಾಡುವನೋ ಕಾಣುತ್ತು!.

  2. ವಿಜಯತ್ತೇ, ಲಾಯ್ಕ ಆಯಿದು. ಎನ್ನ ದೊಡ್ಡಪ್ಪ ಹೇಳುಗು ಮದಾಲು. ಮಗಳೇ! ಆನು ಇಲ್ಲಿ ಉಂಬದು ಹೆಜ್ಜೆ ಹೇಳಿ ನಿನ್ನಲ್ಲಿಗೆ ಬಂದಿಪ್ಪಗ ಹೆಜ್ಜೆ ಬಳ್ಸೆಡಾ! ಹೇಳಿ. ಅವರ ಆರೋಗ್ಯಕ್ಕೆ ಒಳ್ಳೆದು ಹೇಳಿ ನಿತ್ಯ ತಿಂಬದು ಅವರ ಇಷ್ಟದ್ದೋ ಹೇಳಿ ಎಷ್ಟೋ ಸರ್ತಿ ನಾವು ತಪ್ಪು ತಿಳ್ಕೊಳ್ತು. ನಿಂಗೊ ಕೊಟ್ಟ ಉದಾಹರಣೆ ಶೋಕಾಯಿದು.

  3. ನೆಗೆ ಬತ್ತು ನಿಂಗಳ ಕತೆ ಕೇಟು!

    ನೆಗೆ ಹೇದರೆ ಚಿಂತನೆಗೆ ಎಡೆ ಆಯೇಕ್ಕಾದ್ದಪ್ಪೋ!

  4. ಲೈಕಾಯ್ದು ದೊಡ್ಡಮ್ಮ.ಅಜ್ಜ ಹೇಳಿಂಡಿದ್ದಿದ್ದ ನುಡಿಕಟ್ಟು ನೆಂಪಾತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×