Oppanna.com

“ಕಟ್ಟುವದು ಕಷ್ಟ, ಮೆಟ್ಟುವದು ಸುಲಭ”-(ಹವ್ಯಕ ನುಡಿಗಟ್ಟು-86)

ಬರದೋರು :   ವಿಜಯತ್ತೆ    on   03/05/2017    5 ಒಪ್ಪಂಗೊ

 

“ಕಟ್ಟುವದು ಕಷ್ಟ,ಮೆಟ್ಟುವದು ಸುಲಭ”-(ಹವ್ಯಕ ನುಡಿಗಟ್ಟು-86)

ಆನು ಸಣ್ಣದಿಪ್ಪಾಗ ಶಾಲಗೆ ರಜೆ ಸಿಕ್ಕೀರೆ ಆಚೀಚ ಮನೆವೆಲ್ಲ ಒಟ್ಟು ಸೇರಿ ಆಡುದು, ಅಜ್ಜನಮನಗೆ ಹೋಪದು, ಹಳ್ಳ-ಹೊಳಗಳಲ್ಲಿ ಮೀಸುದು, ಹೀಂಗೆಲ್ಲ ಚಟುವಟಿಕಗೊ ಇಕ್ಕು. ಈಗಣ ಹಾಂಗೆ ಟಿ.ವಿ, ಕಂಪ್ಯೂಟರು, ಮೊಬೈಲು ಎಲ್ಲಿದ್ದತ್ತು!. ಆಡುವಗ ಜಗಳ, ಕೋಪ, ಮತ್ತೆ ರಜ ಕಳಿವಗ ರಾಜಿ ಹೀಂಗಿದ್ದೆಲ್ಲ  ಸಾಮಾನ್ಯ ಹೇಳುವೊ.ಹೊತ್ತೋಪ ಹೊತ್ತಿಂಗೆ ಮಕ್ಕೊಲ್ಲ  ಜಾಲ್ಲಿ ಆಡುವಗ; ಎನ್ನಜ್ಜ  ಜೆಗಿಲಿಲಿ ಕೂದಂಡು  ನೋಡುಗಿದ.

ಒಬ್ಬ ಭಾವ ,ಕಡ್ಡಿ ಮುಗುದ ಹಳೆ ಬೆಂಕಿ ಪೆಟ್ಟಿಗೆಗಳ ಎಲ್ಲಿಂದಲೋ ಹುಡುಕ್ಕಿ ತಂದು , ಜಾಲಿಲ್ಲಿ ಮನೆ ಕಟ್ಟುವ ಆಟಲ್ಲಿ ಮಗ್ನನಾಗಿಪ್ಪಾಗ ; ಮತ್ತೊಬ್ಬ ಬಂದು ,ಕಾಲ್ಲಿ ತಟ್ಟಿ ಇಡುಕ್ಕಿಕ್ಕಿ ಓಡಿದ.ಅಷ್ಟೊತ್ತಿಂಗೆ ಇವ ಬೆರೇ..ನೆ, ಕೂಗೆಂಡು  “ನೋಡಿ ಅಜ್ಜಾ, ಆನು ಎಷ್ಟೊತ್ತಿಂದ ಬಙ್ ಬಂದೊಂಡು ಕಟ್ಟಿದ್ದರ ಮೆಟ್ಟಿ ಇಡುಕ್ಕಿದ ಅಣ್ಣ” ಹೇಳುವಗ  ಅಜ್ಜ, ಮೆಟ್ಟಿ ಕೆಡಗಿದ ಪುಳ್ಳಿಯ ದೆನಿಗೇಳಿ; ನೋಡು ಕುಞ್ಞ್ , ತಮ್ಮ ಇಷ್ಟೊತ್ತ ಪ್ರಯತ್ನ ಪಟ್ಟು ಮಾಡಿದ್ದರ ನೀನು ಮೆಟ್ಟಿ ಲಗಾಡಿ ತೆಗದೆ ಅಲ್ಲೊ?.ನೀನು ಕಟ್ಟಿದ್ದರ  ಅವ ಕೆಡವಿದ್ರೆ ನಿನ ಬೇಜಾರಾಗದೊ?. ಇಬ್ರನ್ನು ಹತ್ತರೆ ಕೂರ್ಸಿ ಅಜ್ಜ ಹೇಳಿದೊವು “ನೋಡಿ ಮಕ್ಕಳೆ, ಇದು ನಿಂಗಳ ಆಟ ಆಗಿಕ್ಕು.ಆದರೆ ಏವದೇ ಕೆಲಸಾಗಲಿ,ಮನೆಯಾಗಲಿ, ಸಂಘ-ಸಂಸ್ಥೆಯಾಗಲಿ, ಅದರ ಕಟ್ಟಿ ಬೆಳೆಶುದು ಕಷ್ಟ. ಆದರೆ ಕೆಲವು ಕಿಡಿಗೇಡಿಗೊ ಕ್ಷಣಲ್ಲಿ ಅದರ ಮೆಟ್ಟಿ ಕೆಡಗುತ್ತವಲ್ಲೊ ಅದು ಸುಲಭ!. ಆದರೂ ಹಾಂಗಿದ್ದ ಕೆಲಸ ಮಾಡ್ಳಾಗ”.ಬುದ್ಧಿ ಹೇಳಿದವಜ್ಜ. ಹೀಂಗಿಪ್ಪ ಚಿಂತನೆ ಮಕ್ಕೊಗೆ ಆಡಿ ಬೆಳೆತ್ತ ಸಮಯಂದಲೇ  ಮನದೊಳ ಬೇರೂರೆಕ್ಕೂಳಿ ಅಜ್ಜನ ವಾದ.

                        ———-೦———-

 

 

5 thoughts on ““ಕಟ್ಟುವದು ಕಷ್ಟ, ಮೆಟ್ಟುವದು ಸುಲಭ”-(ಹವ್ಯಕ ನುಡಿಗಟ್ಟು-86)

  1. ವಿಜಯಕ್ಕಾ, ಒಳ್ಳೆ ನುಡಿಗಟ್ಟು. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷವನ್ನುದೆ ನೆಂಪು ಮಾಡಿತ್ತು.
    ಕಟ್ಟುತ್ತವಕ್ಕೆ ನಾವು ಸಕಾಯ ಮಾಡೆಕು. ಮೆಟ್ಟುತ್ತವರ ಮೆಟ್ಟಿ ಓಡುಸೆಕು.
    ಈಗಾಣ ಕಾಲಲ್ಲಿ ಮೆಟ್ಟುತ್ತವೆ ಜಾಸ್ತಿ ಕಂಡು ಬತ್ತ ಇಪ್ಪದು ಬೇಜಾರಿನ ವಿಷಯ.

  2. ಉದಾಹರಣೆ ಸಮೇತ ಒಳ್ಳೆ ನುಡಿಗಟ್ಟು.

  3. ತುಂಬಾ ಒಳ್ಳೆ ಮಾತು ವಿಜಯಕ್ಕಾ.. ಹೀಂಗಿರ್ತದರ ಮಕ್ಕೊಗೆ ಸಣ್ಣಾದಿಪ್ಪಗಳೆ ಹೇಳಿ ಅರ್ಥ ಮಾಡ್ಸೆಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×