- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
“ಕಡುದ ಕೈಗೆ ಉಪ್ಪುಹಾಕದ್ದ ಜಾತಿ”-{ಹವ್ಯಕ ನುಡಿಗಟ್ಟು-43}
ಕಡುದ ಕೈಗೆ ಉಪ್ಪು ಹಾಕೀರೆ ಹೇಂಗಕ್ಕು!?.ಗಾಯ ಆದಲಿಂಗೆ ಉಪ್ಪು ಹಾಕದ್ರೇ ಒಳ್ಳೆದು, ಹೇಳುವಿ ನಿಂಗೊ. ಅಲ್ಲೇ ಇಪ್ಪದಿದ ವಿಷಯ!. ನೆರೆ-ಕರೆ, ನೆಂಟ್ರಿಷ್ಟ್ರು, ಬಂಧು-ಬಳಗ, ಹೇಳಿ ನಮ್ಮ, ಹಾಕು-ಚೋಕಿಂಗೆ, ಆಪತ್ತಿಂಗೆ, ಒದಗುತ್ತೊವು ಬೇಕೂಳಿ ಮದಲಾಣ ಹೆರಿಯೊವು ಹೇಳುಗಿದ. ಅದಕ್ಕಾಗಿ ಎಲ್ಲೋರತ್ರೂ ಒಳ್ಳೆದಲ್ಲಿರೆಕೂಳಿ ಹೇಳ್ತ ಬುದ್ಧಿ ಮಾತು. ಅದು ಮೆಚ್ಚೆಕ್ಕಾದ ವಿಷಯವೂ ಅಪ್ಪು. ಹಾಂಗಾರೆ ನಮ್ಮಲ್ಲಿ ಒಳ್ಳೆವೂ ಇಕ್ಕು. ಕೆಟ್ಟವೂ ಇಕ್ಕು. ಎಲ್ಲೋರ ಗುಣ-ನಡತೆ ಒಳ್ಳೆದಿಕ್ಕು ಹೇಳ್ಲೆ ಬತ್ತಿಲ್ಲೆಯಿದ.ಕೈಲಿಪ್ಪ ಐದು ಬೆರಳೂ ಒಂದೇರೀತಿ ಇಲ್ಲೆನ್ನೆ! ಹೇಳುಗು ಸಹಿಷ್ಣುಗೊ. ಒಬ್ಬ ಪೈಸಲ್ಲಿ ಸೋತ, ಇನ್ನೊಬ್ಬ ಆರೋಗ್ಯಲ್ಲಿ ಸೋತ ಹೇಳಿಯಾದರೆ; ಎಡಿಗಾದ ಹಾಂಗೆ ತಾಂಗುತ್ತೊವೂ ಇಕ್ಕು. ಆ ಹೊಡೆಂಗೇ ಕಣ್ಣೆತ್ತಿ ನೋಡದ್ದೊವೂ ಇಕ್ಕು!. ಈ ಎರಡ್ನೇ ಜಾತಿ ಮನುಷ್ಯರಯಿದ ’ಕಡುದ ಕೈಗೆ ಉಪ್ಪು ಹಾಕದ್ದ ಜಾತಿ’ ಹೇಳುದು. ಅದೆಂತಕೆ ಈ ಮಾತು ಕೇಳಿರೆ….’ ಗಾಯ ಆದಲ್ಲಿ ಅವಂಗೆ ಒಳ್ಳೆತ ಉರಿಯಲೀಳಿ ಮನಸ್ಸಿಲ್ಲಿದ್ದರೂ ಒಂಧೊಡಿ ಉಪ್ಪಿಂಗೆ ಚಿಕ್ಕಾಸಾರೂ ಹಾಕೆಕ್ಕನ್ನೆ!. ಉಪದ್ರವನ್ನಾರೂ ಕೊಡುವೊಂ ಹೇಳೀರೆ ನಯಾಪೈಸೆ ಆದರೂ ಒಂದಾರಿ ಬಿಚ್ಚೆಕ್ಕನ್ನೇಳಿ ಮನಸ್ಸಿನೊಳ ಇದ್ದವರ ಹೀಂಗೆ ಹೇಳ್ತವು.
ಒಳ್ಳೆದಾಯಿದು
ಧನ್ಯವಾದ ಚೆನ್ನೈ ಭಾವಂಗೆ . ನಿನಗೆ ಆದರೂ ಇದರ ಓದಿ ಒಂದು ಅನಿಸಿಕೆ ಹಾಕುವೊಂ ಹೇಳಿ ಕಂಡದು ಸಂತೋಷಾತು.
ನುಡಿಗಟ್ಟುಗೊ ಒಂದರಿ ಚಿಂತನೆಗೆ ಒಡ್ಡುಸುತ್ತು. ಆ ಚಿಂತನೆ ಮನಸ್ಸಿಲ್ಲಿ ಏವತ್ತೂ ಜಾಗೃತವಾಗಿರಳಿ ಎಲ್ಲೋರಿಂಗೂ ಹೇಳ್ಸು ನಾವಿಲ್ಲಿಂದ