- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
“ಮಂಗನ ಕೈಲಿ ಮಾಣಿಕ್ಯ ಕೊಟ್ಟಾಂಗೆ”-(ಹವ್ಯಕ ನುಡಿಗಟ್ಟು-105)
ನಮ್ಮಲ್ಲಿ ಏವದೇ ಬೆಲೆಬಾಳುವ ವಸ್ತುವಿನ ಸಣ್ಣ ಮಕ್ಕಳ ಕೈಗೆ ಕೊಟ್ಟರೆ “ಮಂಗನ ಕೈಲಿ ಮಾಣಿಕ್ಯ ಕೊಟ್ಟಾಂಗೆ” ಹೇಳ್ತವು. ಎನ್ನಪ್ಪᵒ ಈ ಮಾತಿನ ಹೆಚ್ಚಾಗಿ ಉಪಯೋಗುಸುದು ಕೇಳಿದ್ದೆ.ಅಪ್ಪನತ್ರೊಂದಾರಿ ಈ ಬಗ್ಗೆ ಕೇಳುವಗ “ಮಂಗಂಗೆಂತ ಗೊಂತು ಮಾಣಿಕ್ಯದ ಬೆಲೆ.ಅದಕ್ಕೆ ಕಲ್ಲೂ ಒಂದೆ,ಮಾಣಿಕ್ಯವೂ ಒಂದೇ ಹಾಂಗೇ ಸಣ್ಣ ಮಕ್ಕಳೂ” ಹೇಳಿದ್ದೊವು.
ಡಾರ್ವಿನನ ವಿಕಾಸ ವಾದಲ್ಲಿ ಮಂಗನ ಮತ್ತಾಣ ಸೃಷ್ಟಿ ಮಾನವ!. ಬಹುಶಃ ಹಾಂಗಾಗಿಯೇ ಮನುಷ್ಯನ ಅದರಲ್ಲೂ ಮಕ್ಕಳ ಹೆಚ್ಚಾಗಿ ಮಂಗಂಗೆ ಹೋಲುಸುತ್ತೊವು.ಮಕ್ಕೊಗೆ ಬೆಲೆಬಾಳುವ ವಸ್ತುವಿಲ್ಲಿ ಜಾಗ್ರತೆ ಇರ. ಬೇರೆ ಸಾದಾಸೀದ ವಸ್ತುವಿನಾಂಗೆ ಅದರ ನೋಡುಗು.ಚಿನ್ನದೊಡವೆಯ ಸಣ್ಣಮಕ್ಕಳ ಕೈಗೆ ಕೊಟ್ಟತ್ತ್ಕಂಡ್ರೆ; ಅದರ ಆಟದ ಸಾಮಾನಿನಾಂಗೇ ಉಪಯೋಗಿಸಿಯೊಂಗು.
ಒಳ್ಳೆಯ ವಸ್ತುವಿನ ಅಪಾತ್ರರಿಂಗೆ ಕೊಟ್ಟರೂ ಈ ಮಾತಿನ ಬಳಕೆ ಮಾಡ್ತವು. ಹಾಂಗೇ ರಾಜ್ಯದ ಆಡಳಿತವೂ ಆವುತ್ತಾ ಇದ್ದು. ನಿನ್ನೆ ಜೆನರ ವಿರೋಧದ ನಡುವೆಯೂ ಟಿಪ್ಪು ಜಯಂತಿ ಆಚರಣೆ ಕೇಳುವಗ ಈ ಮಾತು ನೆಂಪಾತು.
—–೦——
ಸುಭಾಷಿತ ಬರವವು ಪುಣಚ ಡಾಕ್ಟ್ರು. ಬರಗು. ಎಂತಾರು ತೊಂದರೆ ಇಕ್ಕು ಶಿವರಾಮಣ್ಣ.
ಸುಭಾಷಿತಂಗೊ ಬಾರದ್ದೆ ಸುಮಾರು ಸಮಯ ಆತು. ಅದರ ಇಲಾಖೆಯವಕ್ಕೆ ಒಂದರಿ ನೆಂಪು ಮಾಡಿ ವಿಜಯಕ್ಕ.
ಸರಿಯಾದ ಮಾತು ಶರ್ಮಭಾವ
ಕರ್ನಾಟಕ ಸರಕಾರದ ಆಢಳಿತ ವೈಖರಿ ನೋಡುವಾಗ, ಈ ಗಾದೆ ತುಂಬಾ ಸೂಕ್ತ ಹೇಳಿ ಕಾಣುತ್ತು.
ಧನ್ಯವಾದ ಶಿವರಾಮಣ್ಣ .ನಿಂಗಳಾಂಗಿದ್ದವರ ಪ್ರೋತ್ಸಾಹ .ಸತ್ಚಿಂತನೆ ಇದ್ದರೇ ಅದಕ್ಕೊಂದು ತೂಕ. . .
ಗಾದೆ ರೂಪಲ್ಲಿಪ್ಪ ಗೊಂತಿಲ್ಲದ್ದ ಎಷ್ಟೋ ವಿಷಯಂಗಳ ತಿಳಿಶಿ ಕೊಟ್ಟದ್ದಕ್ಕೆ ವಿಜಯಕ್ಕಂಗೆ ಧನ್ಯವಾದಗಳು. ವಿಜಯಕ್ಕನ ಜ್ಞಾನ bhandaranda ಹೀಂಗಿಪ್ಪ ಗಾದೆಗಳ ನಿರೀಕ್ಷೆ ಇನ್ನೂ madutte