- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
“ಮರ ಬಿಟ್ಟ ಮಂಗನಾಂಗೆ”- (ಹವ್ಯಕ ನುಡಿಗಟ್ಟು-106)
ಕೆಲಾವು ವರ್ಷ ಮದಲೆ ಆನು ಸಣ್ಣಾದಿಪ್ಪಗ ಶಾಲಗೆ ರಜೆ ಸಿಕ್ಕಿತ್ತೂಳಿ ಆದರೆ ಮಕ್ಕೊಗೆ ಅಜ್ಜನ ಮನಗೋ ಅತ್ತೆಕ್ಕಳ ಮನಗೋ ಹೋಪ ತುಡಿತ!.ಏವಗ ರಜೆ ಸಿಕ್ಕುತ್ತೂಳಿ ಹೋಪಲೆ ಮೂರುಕಾಲ್ಲಿ ನಿಂಬದು!!. ಹೋಪಲೆಡಿಯದ್ರೆ ಏನೋ ಕಳಕ್ಕೊಂಡಾಂಗಪ್ಪದು.ಆದರೆ…ಇತ್ತೀಚಗೆ ಹಾಂಗೆ ಹೋಪ ಏವುರ ಏವ ಮಕ್ಕೊಗೂ ಇಲ್ಲೆ ಹೇಳುವೊಂ.ಇದೆಲ್ಲದಕ್ಕೂ ಕಾರಣ ಕೊಡುತ್ತರೆ;ಆಧುನಿಕದ ಕಾಲಹರಣವಾದ ಟಿ.ವಿ, ಮೊಬೈಲುದೆ ಕಂಪ್ಯೂಟರುದೆ!!!.ಇರಳಿ.
ಆನು ಹೈಸ್ಕೂಲು ಕಲಿತ್ತಿಪ್ಪಾಗ ಒಂದಾರಿ ಎಂಗೊಗೆ ರಜೆ ಸಿಕ್ಕಿಯಪ್ಪಾಗ ತಮ್ಮನ(ಮೂರು ವರ್ಷದ) ಬಿಟ್ಟು ಎಂಗೊಲ್ಲ ನಾಲ್ಕು ಜೆನವೂ ಅಜ್ಜನ ಮನಗೆ ಹೋದಿಯೊಂ..ಒಂದು ವಾರಕ್ಕೆ ಹೋದವಾದರೆ; ಎರಡು ದಿನ ಅಪ್ಪಾಗ ಎನ್ನಪ್ಪᵒ ಬಂದವು ಎಂಗಳ ಕರಕ್ಕೊಂಡೋಪಲೆ!.
“ಆ ಪಕಾಚ(ಪ್ರಕಾಶ) ನಿಂಗೊಲ್ಲ ಇಲ್ಲದ್ದೆ ಮನೆಲಿ, ಮರ ಬಿಟ್ಟ ಮಂಗನಾಂಗಾಯಿದು.ನಿಂಗಳ ಕರಕ್ಕೊಂಡು ಹೋಪಲೆ ಬಂದದಾನು”. ಹೇಳಿದೊವು. ಇಲ್ಲಿ ಓದುಗರಿಂಗೆ ಇದರ ಅರ್ಥ ಆದಿಕ್ಕು. ತನಗಾಸರೆ ಇದ್ದವು,ಪ್ರೀತಿಪಾತ್ರರು ತತ್ಕಾಲ ಅಥವಾ ತುಂಬಾಸಮಯ ದೂರ ಹೋದರೆ, ಈ ಗಾದೆಯ ಬಳಸುತ್ತೊವು.ಹೇಳಿರೆ..,ಮಂಗಂಗೆ ಮರವೇ ಪ್ರಿಯ.ಮರ ಬಿಟ್ಟು ಅದು ಜೀವಿಸುವದು ಹೇಂಗೆ!?.ಈಗಾಣ ಜನರೇಶನಿಲ್ಲಿ ಹೇಳ್ತರೆ; ಮಕ್ಕೊಗೆ,ಜವ್ವನಿಗರಿಂಗೆ, ಮೊಬೈಲು, ಕಂಪ್ಯೂಟರ್, ಬಿಟ್ಟು ಹೋದರೆ, ಪ್ರಾಯಸ್ತರಿದ್ದಲ್ಲಿ ಟಿ.ವಿ. ಹಾಳಾದರೆ; ಮರ ಬಿಟ್ಟ ಮಂಗಂಗಳೇ ಸರಿ!. ಎಂತ ಹೇಳ್ತಿ?.
——೦—–
ಬದಲಾವಣೆ ಬೇಕು ನಿಜ….ಆದರೆ………
ಒಳ ಹೋಪಲೆ, ಲಾಗಹಾಕಲೆ ಮದಲಾಣಾಂಗೆ ಎಡಿತ್ತಿಲ್ಲೆನ್ನೆ!!!!
ಲಾಯಕ aayidu
ಅಬ್ಬಬ್ಬ!!!. ಹನ್ನೆರಡು ದಿನಾತು ಇದರ ಹಾಕಿ. ಬೊಳುಂಬು ಗೋಪಾಲ ನೀನಾದರೂ ಗಮನಿಸಿದೆನ್ನೆ!.ತುಂಬಾ ಧನ್ಯವಾದಂಗೊ..
ಒಳ್ಳೆ ನುಡಿಗಟ್ಟು. ಈಗಾಣ ಕಾಲದ ಜವ್ವನಿಗರಿಂಗೆ, (ಮಕ್ಕೊಗುದೆ ಹೇಳುವೊ), ಅವರ ಮೊಬೈಲು ಇಲ್ಲದ್ರೆ, ಅಥವಾ ಕಂಪ್ಯೂಟರ್ ಹಾಳಾದರೆ ಈ ಗಾದೆ ಮಾತು ಸರಿಗಟ್ಟು ಅಕ್ಕೊ ಹೇಳೀ.
ಬೈಲಿಂಗೆ ಬಾರದ್ದೆ ಸುಮಾರು ದಿನ ಆಗಿತ್ತು. ಬೈಲಿನವೆಲ್ಲ ಎಲ್ಲಿ ಹೋದವೊ ?
ಹಾಂ ಅಪ್ಪು ಗೋಪಾಲ. ಮೊಬಯಿಲು, ಕಂಪ್ಯೂಟರಿಂಗೆ ಖಂಡಿತಾ ಇದು ಲಗಾವು ಆವುತ್ತು.ಅದರ ನೆಂಪು ಮಾಡಿದ್ದು ಒಳ್ಳೆದಾತು. .