Oppanna.com

“ಮಸರಿಲ್ಲದ್ದೆ ಮಜ್ಜಿಗೆ ಇಲ್ಲೆ, ಅಸಲಿಲ್ಲದ್ದೆ ಬಡ್ಡಿ ಇಲ್ಲೆ”-(ಹವ್ಯಕ ನುಡಿಗಟ್ಟು-79)

ಬರದೋರು :   ವಿಜಯತ್ತೆ    on   08/02/2017    2 ಒಪ್ಪಂಗೊ

 

“ಮಸರಿಲ್ಲದ್ದೆ ಮಜ್ಜಿಗೆ ಇಲ್ಲೆ ,ಅಸಲಿಲ್ಲದ್ದೆ ಬಡ್ಡಿ ಇಲ್ಲೆ,”-(ಹವ್ಯಕ ನುಡಿಗಟ್ಟು-79)

ಮಜ್ಜಿಗೆ ಇಲ್ಲದ್ದೆ ಉಂಬಲೆ ಮೆಚ್ಚ. ಅದೂ ಬ್ರಾಹ್ಮಣರಿಂಗೆ ಮಜ್ಜಿಗೆ ಇಲ್ಲದ್ದ ಊಟ ಉಂಡಾಂಗಾಗ!. ಇದು ಸಾರ್ವತ್ರಿಕ ಅನುಭವ. ಅದಕ್ಕಾಗಿಯೇ ಮದಲಿಂಗೆ ಹವ್ಯಕರ ಮನೆಲಿ ಎಂತ ಇಲ್ಲದ್ರೂ ಒಂದು ಕರವ ದನ ಇಕ್ಕು.ಹಟ್ಟಿತುಂಬಾ ದನಗೊ ಇದ್ದರೆ ಅವು ಶ್ರೀಮಂತರೂಳಿ ಲೆಕ್ಕ. ಆದರೀಗ!!. ಹಟ್ಟಿತುಂಬಾ ದನಗಳ ನೋಡೆಕ್ಕಾರೆ ರಾಮಚಂದ್ರಾಪುರ ಮಠಕ್ಕೆ ಹೋಯೆಕ್ಕು.

ಹೀಂಗೊಂದು ದಿನ ಮನೆಲಿ, ಕರವ ದನ ಜಾನ್ಸಿದ್ದರಿಂದ ಬೇಗ ಕರವು ಮತಿ ಆಗಿ ಒಂದು ವಾರ ಆತು.ಚನೆ ಇಳಿಶಿಗೊಂಡಿದ್ದ ದನ ಇನ್ನೊಂದು ನಾಲ್ಕು ದಿನಹೋಕು ಕಂಜಿ ಹಾಕಲೆ. ಕೂಡಿ ಮಡಗಿದ ಮಜ್ಜಿಗೆಯೂ ಮುಗುದು ಉಂಬಲೆ ಮಜ್ಜಿಗೆ ನೀರಿಂಗೆ ತತ್ವಾರಾತು.ಚಾಯ-ಕಾಪಿಗೆ ಆಚಮನೆ ಹಾಲೇ ಉಳ್ಳೊ!.

 ಉಂಬಲೆ ಕೂದಂಡಿದ್ದ ಎಂಗೊ ಮಕ್ಕೊ “ಮಜ್ಜಿಗೆ  ಬೇಕು” ಹೇಳುಗ   “ಹಾಲಿಲ್ಲದ್ದೆ ಮಸರು,ಮಜ್ಜಿಗೆ  ಎಲ್ಲಿಂದ ಮಕ್ಕಳೆ? ಇನ್ನೊಂದೆರಡು ದಿನ ಸುಧರ್ಸಿ” ಅಬ್ಬೆ ಹೇಳಿದೊವು. ಅದಪ್ಪಲ್ಲೊ ಮಕ್ಕೊಗೆ ಮತ್ತೆಯೇ ಮನಸ್ಸಿಂಗೆ ಹೋಪದು!.

ಮದಲಿಂಗೆ  ಕಡಗಟ್ಟು ವೈವಾಟುಗೊ ಪೈಸೆಕ್ಕಾರಂಗೊ-ಪಾಪದವರ ಒಳ ಇಕ್ಕಷ್ಟೆ. ಈಗಾಣಾಂಗೆ ಬೇಂಕುಗಳಲ್ಲಿ ಸಾಲ ಕೇಳ್ಲೂ ಪೈಸೆ ಮಡಗಲೂ ಹೋಪದು ಕಮ್ಮಿ.

ಒಬ್ಬ ಆಢ್ಯನತ್ರೆ ಒಂದರಿ ಹೀಂಗೇ ಮಾತಾಡುತ್ತಾ ಎನ್ನಪ್ಪ ಕೇಳಿದೊವು “ಹೇಂಗೆ ಭಾವಯ್ಯ ವರ್ಷದ  ಆರು ತಿಂಗಳ ಖರ್ಚಿಂಗೆ ಬಡ್ಡಿ ಪೈಸವೇ ಸಾಕಾಗದೋ”

ಆ  ಮನುಷ್ಯ ಮೋರೆ ಹುಳಿ-ಹುಳಿ ಮಾಡೆಂಡು  “ಕೊಂಡೋದ ಖದೀಮಂಗೊ  ಅಸಲನ್ನೇ ಮುಳುಕ್ಸಿಕ್ಕಿ ಓಡಿದೊವು  ಅಸಲಿದ್ದರಲ್ಲೊ ಬಡ್ಡಿಯ ಪ್ರಶ್ನೆ?!!” ಹೇಳುವಗ, ಅಯ್ಯೋ ಹಾಂಗಾತೊ? ಹೇಳಿಕ್ಕಿ ಅಪ್ಪ

“ಅದಪ್ಪು ನಿಂಗೊ ಹೇಳುಸ್ಸು ಸರಿ.ನಿಂಗೊಗೆ ’ಅಸಲಿಲ್ಲದ್ದೆ ಬಡ್ಡಿ ಇಲ್ಲೇಳಿ  ಆದರೆ ಎಂಗಳಲ್ಲಿ ಮಸರಿಲ್ಲದ್ದೆ ಮಜ್ಜಿಗೆ ಇಲ್ಲೆ’ ಹೇಳುವ ಗಾದೆಯೇ ಆಯಿದು.

ಈ ಮೇಲಣ ಮಾತುಗಳ ಬೇರೆ ಕೆಲಾವು ಸಂದರ್ಭಲ್ಲಿ ಬಳಸಿಗೊಳ್ತವು. ಒಟ್ಟಿಲ್ಲಿ ಮೂಲ ವಸ್ತು ಇಲ್ಲದ್ದೆ ಅದರಿಂದ ಮತ್ತಾಣ ಉತ್ಪನ್ನ ಎಲ್ಲಿಂದ!? ಹೇಳುವ ಅರ್ಥಕ್ಕೆ ಉಪಯೋಗ ಮಾಡ್ತವು.

                        ——೦——

2 thoughts on ““ಮಸರಿಲ್ಲದ್ದೆ ಮಜ್ಜಿಗೆ ಇಲ್ಲೆ, ಅಸಲಿಲ್ಲದ್ದೆ ಬಡ್ಡಿ ಇಲ್ಲೆ”-(ಹವ್ಯಕ ನುಡಿಗಟ್ಟು-79)

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×