Oppanna.com

“ಶಂಖಂದ ಬಂದದೇ ತೀರ್ಥ”-{ಹವ್ಯಕ ನುಡಿಗಟ್ಟು-51}

ಬರದೋರು :   ವಿಜಯತ್ತೆ    on   20/03/2016    5 ಒಪ್ಪಂಗೊ

“ಶಂಖಂದ ಬಂದದೇ ತೀರ್ಥ”-{ಹವ್ಯಕ ನುಡಿಗಟ್ಟು-51}

ಈ ಹಿಂದೆ ಹೇಳಿದಾಂಗೆ ಶಂಖಲ್ಲಿ ಎರಡು ವಿಧ. ಒಂದು ಊದುವ ಶಂಖ,ಇನ್ನೊಂದು ತೀರ್ಥ ಶಂಖ.

ಎನ್ನಜ್ಜ,ಕೃಷಿಲಿ,ಒಳ್ಳೆಅನುಭವಿ.ಗೆದ್ದೆಬೇಸಾಯಮಾಡುಗಿದ.ಗಂಧಸಾಲೆ,ಜೀರ್ಸಾಲೆ,ಕಯಮ್ಮೆ,ರಾಜಕಯಮ್ಮೆ, ಹೇಳಿ ಅಂದಿಂಗೆ ತರಹೇವಾರಿ ಭತ್ತದ ತಳಿಗಳೂ ಇಕ್ಕು.ಕೆಲವು ಸರ್ತಿ ಅನುಭವ ಕೇಳಿಗೊಂಬಲೆ ಆರಾರು ಬಕ್ಕು.ಒಂದಾರಿ ಹತ್ತರಾಣ ಒಂದು ಬಂಟ ಬಂದು “ಅಣ್ಣಯ ಭಟ್ರು[ಅಣ್ಣಯ ಹೇಳಿ ಅಜ್ಜನ ಅಡ್ಡಹೆಸರು] ಇದ್ದಿಯೇರೊ?” ಕೇಳಿತ್ತು. ಇದ್ದಿಯೇರೂಳಿ ಮಾವ ಉತ್ತರ ಕೊಟ್ಟಿಕ್ಕಿ “ಎಂಚಿನ ವಿಶೇಷ?” ಕೇಳಿದೊವು.  “ಎನ್ನ ಕಂಡೊಡು ಇವೊಡು ಗಂಧಸಾಲೆ ಮಾಳ್ಪೊಡೂಂದುಂಡು. ಅಯಿನ ಮಾಹಿತಿ ಪಣಿ ಪಿನಿಯಾರ” ಹೇಳಿತ್ತದು. “ಅಯಿನ ಮಾಹಿತಿ ಯಾನೇ ಪನೊಳಿ”. ಹೇಳಿಕ್ಕಿ ಮಾವ ಅದರ ಬೇಸಾಯದ ಕ್ರಮವೂ ಹೇಳಿಕ್ಕಿ. ಅದಕ್ಕೆ ನೀರು ಈಚದರಿಂದ ಹೆಚ್ಚು.ಬೇಸಾಯದ ಅವಧಿಯೂ ಹೆಚ್ಚಿಗೆ. ಬೆಳೆ ಬಂತೂಳಿ ಆದರೆ ಒಳ್ಳೆ ಬೆಳೆಯೂದೆ,ಅಕ್ಕಿ,ಅಶನ ಬಹು ಪರಿಮಳ. ಒದಗು ಹೆಚ್ಚು.ಬೆಣ್ತಿಗ್ಗೆ ಉಪಯೋಗ. ಈಚ ಅಕ್ಕಿ ಒಂದು ಸೇರು ಬೇಕಾದಲ್ಲಿ ಅದು ನಾಲ್ಕು ಕುಡ್ತೆ ಸಾಕು. ಹೀಂಗೆಲ್ಲ ಮಾವ ಹೇಳಿದ್ದರ ಕೇಳ್ಸಿಗೊಂಡ ಬಂಟ ಮರುದಿನ ವಾಪಾಸು ಬಂದು ಅಜ್ಜನ ಭೇಟಿ ಆದಿಕ್ಕಿ; ಆಬಗ್ಗೆ ಮಾತಾಡಿಕ್ಕಿಯೇ ಹೋತು.

ಅದು ಹೋದ ಮೇಲೆ ಮಾವ, ಅಜ್ಜಿ ಹತ್ರೆ “ನೋಡಬ್ಬೆ ಅಪ್ಪ ಹೇಳಿದ ಮಾಹಿತಿಯನ್ನೇ ಆನುದೆ ಹೇಳಿದ್ದು. ಆದರೆ ಅದಕ್ಕೆ ಸಮಧಾನ ಆದ್ದು ಅಪ್ಪನ ಮಾತಿಲ್ಲಿ”. ಹೇಳುವಗ ಅಜ್ಜಿ “ನೀನು ಎಷ್ಟೊರುಷಾತು ಬೇಸಾಯ ಮಾಡ್ಸುದು. ನಿನ ಅನುಭವ ಕಮ್ಮಿಯೇನಲ್ಲ. ಆದರೆ ಶಂಖಂದ ಬಂದದೇ ತೀರ್ಥ ಹೇಳುವಾಂಗೆ; ನೀನು ನಿನ್ನಪ್ಪನ ಅನುಭವವ ಕಲ್ತು ಹೇಳಿರೂ, ಅವೇ ಖುದ್ದಾಗಿ ಹೇಳಿದ್ದೇ ಅದಕ್ಕೆಸಮಧಾನ ಆದ್ದದು.”

ಅಪ್ಪು ಕೆಲವು ವಿಷಯಕ್ಕೆ ಹೇಳುವವು ಹೇಳಿರೇ ಅದಕ್ಕೊಂದು ತೂಕ!. ಉದಾಃ ಶ್ರೀ ಗುರುಗೊ ಹೇಳಿದ ಸಂದೇಶವೋ ಅನುಭವಾಮೃತವೋ ಬೇರೆವು ಹೇಳಿರೆ ನಮಗದು ರುಚಿಸುತ್ತಿಲ್ಲೆ!. ಸ್ವಾರಸ್ಯವೂ ಆವುತ್ತಿಲ್ಲೆ.

ಶಂಖಂದ ಬಂದದೇ ತೀರ್ಥ.ಅಲ್ಲೊ!?

5 thoughts on ““ಶಂಖಂದ ಬಂದದೇ ತೀರ್ಥ”-{ಹವ್ಯಕ ನುಡಿಗಟ್ಟು-51}

  1. ಅಪ್ಪು ., ಶಂಖತೀರ್ಥ ಹೃದಯಕಲಶವನ್ನೂ ಪಾವನಗೊಳುಸುತ್ತು. ಹರೇ ರಾಮ

  2. ಹೇಳುವವು ಹೇಳೆಕ್ಕಾದ ಮಾತಿನ ಹೇಳಿದರೆ ಅದೇ ತೀರ್ಥ !

  3. ತೀರ್ಥದ ಶಂಖ ಹೇಳಿರೆ ಪೂಜಗೆ ಮಡುಗುವ ಶಂಖ .ಅದು ಎಡಮುರಿಯೋ ಬಲ ಮುರಿಯೋ ಮೊಗಚ್ಚಿ ಮಡುಗಿಯಪ್ಪಗ ಬಲದ ಹೊಡೆಂಗೆ ಅದರ ಮುರಿ. ಪೂಜೆ ಮಾಡುವವ ನೀರು ಹಾಕಿ, ಗಂಗೇಚ ,ಯಮುನೆಚೈವ,ಗೋದಾವರಿ ,ಸರಸ್ವತಿ. ಹೇಳಿ ಆವಾಹನೆ ಮಾಡಿರಲ್ಲೊ ಅದು ತೀರ್ಥ ಅಪ್ಪದು! ಅದರ ಪೂಜೆ ಸನ್ನಾಯಕ್ಕೂ ಪೂಜೆ ಮಾಡುವ್ವಕ್ಕೂ ತಳುಕ್ಕೊಂಬಲಿಲ್ಲಿಯೋ .ಹಾಂಗೇ ಶಂಖದ ಸ್ಥಾನಲ್ಲಿ ಇಪ್ಪವರನ್ನೂ .ನಾವು ಕಾಣೆಕ್ಕಪ್ಪದು! ತೀರ್ಥ ಕೊಡೆಕಾರೆ ಪೂಜೆ ಮಾಡುವವರ ಪಾಲೂ ಅದಲ್ಲಿದ್ದಲ್ಲೋ. ಒಟ್ಟಿಲ್ಲಿ ಗಂಗೆ,ಯಮುನೆ,ಗೋದಾವರಿ,ಸರಸ್ವತಿ,ನರ್ಮದೆ,ಸಿಂಧು,ಕಾವೇರಿ ಈ ಪುಣ್ಯ ನದಿಗಳ ಹೆಸರು ಹೇಳಿ ಪೂಜೆ ಮಾಡಿದ ಶಂಖದ ತೀರ್ಥ ಒಳ್ಳೆದು .ಹೀಂಗಿರೆಕು.

  4. ಶಂಖಲ್ಲಿ ಎಡ ಮುರಿ ಬಲ ಮುರಿ ಹೇಳಿ ಇದ್ದಲ್ಲದೋ? ಇದರಲ್ಲಿ ಏವ ಶಂಖಂದ ಬಂದ ತೀರ್ಥ ಒಳ್ಳೆದು?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×