Oppanna.com

“ಸಂಕ ದಾಂಟುವನ್ನಾರ ನಾರಾಯಣ,ಮತ್ತೆ ತೂರಾಯಣ”-(ಹವ್ಯಕ ನುಡಿಗಟ್ಟು-83)

ಬರದೋರು :   ವಿಜಯತ್ತೆ    on   06/04/2017    8 ಒಪ್ಪಂಗೊ

 

“ಸಂಕ ದಾಂಟುವನ್ನಾರ ನಾರಾಯಣ,ಮತ್ತೆ ತೂರಾಯಣ”-(ಹವ್ಯಕ ನುಡಿಗಟ್ಟು-83)

ಆಚಮನೆ ಅಚ್ಚುಮಕ್ಕ ಹೆರಿಗೆ ಸಂಕಟಲ್ಲಿ ಪೇಚಾಡಿಗೊಂಡಿಪ್ಪಗ ಅದರ ಗಂಡ ಎಲ್ಲಾ ದೈವ ದೇವರಕ್ಕೊಗೂ ಹರಕ್ಕೆ ಹೇಳಿ ನಂಬಿಯೊಂಡ. ಹೆಂಡತಿಯ ಹೆರಿಗೆಯಾಗಿ,ಹಿಳ್ಳೆ-ಬಾಳಂತಿ ಎರಡಪ್ಪಗ; ಹೇಳಿದ ಹರಕ್ಕೆಲ್ಲಾ ಮರದೋಗಿ  ಮೂಲೆ ಸೇರುಗಡ. ಈ ಸಂಗತಿಯ ಈಚಮನೆ ಚುಬ್ಬಕ್ಕ ಹೇಳೆಂಡು ನೆಗೆಮಾಡುಗು.

ಹಾಂಗೇ ದೇವರ ಮೇಗೆ ಭಕ್ತಿ ಕಮ್ಮಿಯಾದ ಮಾದವಂಗೂ ಹೊಳೆಯ ಸಂಕ ದಾಂಟ್ಳೆ ಹೆದರಿಕೆ ಅಕ್ಕು. ಹೊಳೆಯ ಸಂಕ ದಾಂಟುವನ್ನಾರ ನಾರಾಯಣ,ನಾರಾಯಣ ಹೇಳುಗವ.ಎಂತಕದು ಕೇಳ್ತೀರೊ?.ಅವನ ಅಜ್ಜಿ ಸಣ್ಣಾದಿಪ್ಪಗ ಹೇಳಿಕೊಟ್ಟಿದು “ಇದ ಮಗಾ ನಮ್ಮ ಕಷ್ಟ ಕಾಲಲ್ಲಿ ನಾರಾಯಣ ಜೆಪ ಮಾಡೀರೆ ಅದರ ಕೇಳ್ಸಿಯೊಂಡ ದೇವರು ನಮ್ಮ ಸಕಾಯಕ್ಕೆ ಬಕ್ಕು”.ಅಜ್ಜಿ ಹೇಳ್ತ ಸಮಯಲ್ಲಿ ಆ ಮಾತಿನ ಗಾಳಿಗೆ ತೂರಿ ಬಿಟ್ಟರೂ ಹೀಂಗೆ ಹೆದರುವ ಸಮಯಲ್ಲಿ ಅದು ನೆಂಪಾವುತ್ತು ಮಾದವಂಗೆ.

ಹಾಂಗೇ ಇನ್ನೊಬ್ಬ.., “ಮಾಣಿಯ ಕಲುಶಲೆ ರಜ ಕಡಗಟ್ಟು ಬೇಕಾತು ಭಾವಾ” ಹೇದು ದಮ್ಮಯ ಹಾಕಿ, ಕಡಗಟ್ಟು ಬೇಡಿ ಮಾಣಿಯ ಕಲುಶಿದ. ಮಾಣಿ ಕಲ್ತು ಕೆಲಸ ಸಿಕ್ಕೀರೂ ಬೇಡಿದ ಕಡಗಟ್ಟು ತೀರ್ಸಲೆ ನೆಂಪಾಗ ಪುಣ್ಯಾತ್ಮಂಗೆ.

ನಮ್ಮಲ್ಲಿ ದೈವ,ದೇವರಕ್ಕಳ ಭಕ್ತಿ ಬೇಕು.ನೆಂಟರಿಷ್ಟರ ವಿಶ್ವಾಸ ಬೇಕು. ಹಾಂಗೇ ಅದರ ಒಳುಶಿಗೊಳ್ತ ಮನಸ್ಸೂ ಬೇಕು; ಹೇಳ್ತ ಮಾತಿನ  ಮರ್ಮವ  ಹೇಳ್ತು. ಈ ನುಡಿಗಟ್ಟು.  

                 ———-೦———-

 

8 thoughts on ““ಸಂಕ ದಾಂಟುವನ್ನಾರ ನಾರಾಯಣ,ಮತ್ತೆ ತೂರಾಯಣ”-(ಹವ್ಯಕ ನುಡಿಗಟ್ಟು-83)

  1. ತೂರುವುದು ಹೇಳಿದರೆ ಇಡ್ಕುವದು ಹೇಳಿ ಯೂ ಇಕ್ಕಲ್ ದ

    1. ತೂರುವದು ಹೇಳಿರೆ, ಹವ್ಯಕ ಭಾಷೆಲಿ ಮಲಶೋಧನೆ, ನುಗ್ಗುವದು ಹೀಂಗಿದ್ದ ಅರ್ಥಂಗೊ ಇದ್ದು. ಎನ ಗೊಂತಿದ್ದಾಂಗೆ ಇಡ್ಕುವದು ಹೇಳಿ ಇಲ್ಲೆ.

  2. ತುರಾಯಣ ಹೇಳಿದ್ದಕ್ಕೆ ಕುಡುಕರಿಂಗೆ ಹೇಳಿ ಮಡುಗುವದೋ? ಹೇಂಗೆ ಪ್ರಕಾಶ?. ತುರಾಯಣಕ್ಕೆ ತೂರಾಡುದು ಹೇಳುವ ಅರ್ಥ ಮಾಂತ್ರ ಅಲ್ಲದೋಳಿ!. ಬೇರೆ ಹಲವಿದ್ದು. ಆದರೆ ಈ ನುಡಿಗಟ್ಟಿನ ಅರ್ಥ…ಕಷ್ಟ ಕಾಲಲ್ಲಿ ಮಾಂತ್ರ ದೇವರ ಸ್ಮರಣೆ ಬಪ್ಪದು ಕೆಲವು ಜೆನಕ್ಕೆ!, ಹಾಂಗಪ್ಪಲಾಗಾಳಿ ನೀತಿ.

  3. ಇದು} ಕುಡುಕರಿಂಗೆ ಮಾಂತ್ರ ಹೇಳಿ ಮಡಗುವ

  4. ಮರೆದೆನಭ್ಯುದಯದಲಿ ನಿಮ್ಮನು ಮರೆಯೇನಾಪತ್ತಿನಲಿ ..ಹೇಳಿ ಕನಕದಾಸರು ಹಾಡಿದ್ದು ನೆಂಪಾತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×