- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
“ಹಳೆ ಕೈ ಹೊಟ್ಟಗೊಳ್ಳೆದು,ಹೊಸ ಕೈ ಹೊಳಪಿಂಗೊಳ್ಳೆದು” {ಹವ್ಯಕ ನುಡಿಗಟ್ಟು-46}
ನಮ್ಮ ನಾಣಂ[’ನಾರಾಯಣ’. ಅಜ್ಜನ ಹೆಸರು. ಅಜ್ಜಿಗೆ ಹಾಂಗೆ ದೆನಿಗೇಳುಲೆಡಿಗೊ?ಅಜ್ಜಿ ಒಟ್ಟಿಂಗೆ ಎಲ್ಲೋರು ನಾಣ ಹೇಳುದು]ಗೆ,ಕೂಸಿನ ಹುಡುಕ್ಕಿ,ಹುಡುಕ್ಕೀ ಇವಾರಿ ಮದುವೆ ಆತು ಹೇಳುವೊಂ.ನಾಣ ಒಂದು ಕಾಸಗಿ ಯು.ಪಿ.ಶಾಲೆಲಿ ಮಾಸ್ಟ್ರು. ಆ ಒಪ್ಪಕ್ಕನೂ ಅದೇ ಶಾಲೆ ಟೀಚರು. ಅತ್ತೂ –ಇತ್ತೂ ಕೊಂಡೊಪದು, ಕೊಡುವದೂಳಿ ಮಾತು ಒರಪ್ಪಿ ಅಪ್ಪಗ ಮಾಣಿ ಮನೆವಕ್ಕಾದ ಸಂತೋಷ ಅಷ್ಟಿಷ್ಟಲ್ಲ!. ಕಾರಣ, ಕೂಸು ಬಹು ಚೆಂದ!. ಮದುವೆ ಗೌಜಿಲಿ ಕಳಾತು. ಎನ್ನ ಎಜಮಾಂತಿ ಚೆಂದದ ಚೆಲುವೆ ಹೇಳಿ ನಾಣಂಗೆ ಒಣ ಜಂಬ. ಸೊಸೆ ಚೆಂದದ ಚೆಲುವೆ ಹೇಳಿ ಅತ್ಯೋರಿಂಗೂ ಹೆಮ್ಮೆ!.
ದಿನ ಉರುಳಿತ್ತು. ಮದ-ಮದಾಲು ಸೊಸೆ ಹತ್ರೆ ಕೆಲಸ ಹೇಳದ್ರೂ ಮತ್ತೆ-ಮತ್ತೆ ಮಾಡ್ಸದ್ದೆ ಕೂಬ್ಬಲೆಡಿತ್ತೋ?.ಸುರು-ಸುರುವಿಂಗೆ ಹೇದಾಂಗೆ ಮಾಡೆಂಡಿದ್ದ ಸೊಸೆ; ಈಗೀಗ “ಎನ ಶಾಲೆಂದ ಬಂದಪ್ಪಗ ಬಚ್ಚುತ್ತು” ಹೇದು ರಾಗ ತೆಗವಲೆ ಸುರುಮಾಡಿತ್ತು. ’ಒತ್ತಾಯಕ್ಕೆ ಶಂಭಟ್ಟನ ರುಜು’ ಹೇದೊಂಡು ಮಾಡೀರೂ ಮಾಡಿದ ಪಾಕಾಯಿತನ ತಿಂಬಲೆ ಮೆಚ್ಚ!.ಒಂದೋ ಉಪ್ಪು ಹೆಚ್ಚ,ಅಲ್ಲದ್ರೆ ಮೆಣಸು ಹೆಚ್ಚ!. ಅಶನ ಹೇಳುಸ್ಸು ಬೆಂದರೆ; ಬೆಂದು ಅಂಬಲಿ!, ಇಲ್ಲದ್ರೆ ಮುಗುಳಕ್ಕಿ!!. ಈ ಸನ್ನಿವೇಶ ಕಂಡ ಮಾವನೋರು “ಹಳೆ ಕೈ ಹೊಟ್ಟಗೊಳ್ಳೆದು, ಹೊಸಕೈ ಹೊಳಪಿಂಗೊಳ್ಳೆದು” ಹೇಳ್ಳೆ ಸುರುಮಾಡಿದೊವು.
ಒಪ್ಪಕೊಟ್ಟ ಚೆನ್ನೈ ಭಾವಂಗೂ ಗೋಪಾಲಂಗೂ ಧನ್ಯವಾದಂಗೊ. ಬರದ ಶುದ್ದಿಯ ಮುಂದೆ ಒಪ್ಪ ಕೊಡ್ತ ಕಾಲಮಿಲ್ಲಿ ‘೦’ ಕಂಡ್ರೆ ಮುಂದಾಣದ್ದು ಬರವಲೆ ಉತ್ಸಾಹ ಬತ್ತಿಲ್ಲೆಯಿದ .
ಒಳ್ಳೆ ಕತೆ, ಒಳ್ಳೆ ನುಡಿಗಟ್ಟು , ಒಳ್ಳೆ ವಿವರಣೆ .
ಮಾವನೋರ ಮಾತು ಕೇಟು ನೆಗೆ ಬಂದದಪ್ಪು ಸುರುವಿಲ್ಲಿ ಒಂದರಿ. ನುಡಿಗಟ್ಟು ಇಪ್ಪದರ ಇಪ್ಪಾಂಗೆ ವಿಜಯತ್ತೆ ಹೇದ್ದಂತೂ ಲಾಯಕ ಆಯಿದು. ಹರೇ ರಾಮ.