Oppanna.com

“ಹೊತ್ತುತ್ತ ಕಿಚ್ಚಿಂಗೆ ತುಪ್ಪ ಎರದಾಂಗೆ”–(ಹವ್ಯಕ ನುಡಿಗಟ್ಟು-81)

ಬರದೋರು :   ವಿಜಯತ್ತೆ    on   26/03/2017    2 ಒಪ್ಪಂಗೊ

 

-ಹೊತ್ತುತ್ತ ಕಿಚ್ಚಿಂಗೆ ತುಪ್ಪ ಎರದಾಂಗೆ-(ಹವ್ಯಕ ನುಡಿಗಟ್ಟು-81)

ಎಂಟು ವರ್ಷದ ಹರಿ ಹಾಂಗೂ ನಾಲ್ಕು ವರ್ಷದ ಹರ್ಷ, ಎರಡು  ಮಾಣಿಯಂಗೊ ಅಣ್ಣ-ತಮ್ಮಂದ್ರು ಸರೀ ಉರುಡಪ್ಪತ್ತ ಕಾದಿಯೊಂಡೊವು.ಹರಿಯ ಮೋರಗೆ ಹರುಂಕಿ, ಗಾಯ ಮಾಡಿದ ಹರ್ಷ. ಅವರ ಅಜ್ಜಿ ಬಂದು ಬಿಡುಸಿ ದೊಡ್ಡವನ ಎಳದು ಹತ್ತರೆ ಕೂರ್ಸೆಂಡವು. ಮಾಣಿಯ ಅಬ್ಬೆ, “ಹರಿ, ಎಂತಕೆ ತಮ್ಮನತ್ರೆ ಕಾದುತ್ತೆ?”, ಹೇಳಿ ಅಲ್ಲಿಗೆ ಬಂದು ದೊಡ್ಡವನ  ಕುಂಡಗೆರಡು ಬೀಸಿತ್ತು,

“ಹರ್ಷನೇ ಇವನತ್ರೆ ಹೋಂಟಿ ಹೋರೆಂಡು ಬಂದದು ಕೂಸೆ!.ಮದಾಲು ಮದಾಲು ತಮ್ಮಲ್ಲೊ ಹೇಳೆಂಡು ಸುಮ್ಮನೆ ಕೂದತ್ತು ಮಾಣಿ, ಮತ್ತೆ ಸುಖಾಸುಮ್ಮನೆ ಬೇನೆ ತಿಂಬಲೆ ಆರಾರು ತಯಾರಿಕ್ಕೊ?. ’ಹೊತ್ತುತ್ತ ಕಿಚ್ಚಿಂಗೆ ತುಪ್ಪ ಎರದಾಂಗೆ’  ಮಾಡೆಡ ನೀನು. ನೆಡೆ ಆಚಿಗೆ ಕರಕ್ಕೊಂಡೋಗವನ. ಇವ ಎನ್ನತ್ರೆ ಇರಳಿಲ್ಲಿ” ಅಜ್ಜಿ ಹೇಳಿತ್ತು.

ಎಲ್ಲಾ ಮನಗಳಲ್ಲೂ ಅಜ್ಜಿಯಕ್ಕೊಗೆ; ಮದಾಲು ಹುಟ್ಟಿದ ದೊಡ್ಡ ಪುಳ್ಳಿಯತ್ರೇ(ಅವಂಗೆ ಅಜ್ಜನ ಹೆಸರು!!) ಹೆಚ್ಚಿಗೆ ಪ್ರೀತಿಯಿದ. ಆದರೆ ಅಬ್ಬಗೆ ಸಣ್ಣವನತ್ರೆ ಕೊಂಗಾಟ.

ಈ ನುಡಿಗಟ್ಟಿಂಗೆ ಮಕ್ಕಳ ಉದಾಹರಣೆ ಕೊಟ್ಟರೂ ಪ್ರಾಮಾಣಿಕರ ಪರವಾಗಿ ನಿಲ್ಲದ್ದೆ; ಅಪ್ರಮಾಣಿಕರ ಪರವಾಗಿ ನಿಂದು, ಪ್ರಾಮಾಣಿಕರಿಂಗೆ ಬೇದ ಮಾಡಿ  ಮಾತಾಡುವಗೆಲ್ಲ ಇದರ ಬಳಸುತ್ತೊವು.

———೦——

 

2 thoughts on ““ಹೊತ್ತುತ್ತ ಕಿಚ್ಚಿಂಗೆ ತುಪ್ಪ ಎರದಾಂಗೆ”–(ಹವ್ಯಕ ನುಡಿಗಟ್ಟು-81)

  1. ಅಪ್ಪು,ಲಡಾಯಿಗೆ ಹೆಚ್ಚಾಗಿ ಬಳಸುತ್ತೋವುಇದರ.ಮತ್ತೆ, ಮತ್ಸರಿಗೊಕ್ಕೆ ದುರಾಲೋಚನೆ ಕುತ್ತಿಕೊಟ್ಟು ದೊಡ್ದದು ಮಾಡುಸ್ಸಕ್ಕೂ ಹೇಳುತ್ತೊವು. ಸೇಡಿಗುಮ್ಮೆ ಗೋಪಾಲನ ಅನಿಸಿಕೆಗೆ ಧನ್ಯವಾದಂಗೊ

  2. ಯಾವುದಾದರೂ ಲಡಾಯಿಯ ದೊಡ್ಡ ಮಾಡುದಕ್ಕೆ ಹೇಳುವ ನುಡಿಗಟ್ಟು. ಹೊಸ ರೀತಿಲಿ ಪ್ರಸ್ತುತ ಪಡಿಸಿದ್ದು ಚಿಕ್ಕಮ್ಮನ ಪ್ರತಿಭೆ.ಲಾಯಕ ಆಯಿದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×