Oppanna.com

“ಹೊಳಗೆ ಸುರುದರೂ ಅಳದು ಸುರಿಯೆಕ್ಕು”-{ಹವ್ಯಕ ನುಡಿಗಟ್ಟು-47}

ಬರದೋರು :   ವಿಜಯತ್ತೆ    on   23/02/2016    5 ಒಪ್ಪಂಗೊ

-“ಹೊಳಗೆ ಸುರುದರೂ ಅಳದು ಸುರಿಯೆಕ್ಕು”-{ಹವ್ಯಕ ನುಡಿಗಟ್ಟು-47}

ಮದಲಿಂಗೆ ಎನ್ನಜ್ಜ; ಆಳುಗಳ ಅಂದಂದ್ರಾಣ ಲೆಕ್ಕ ಬರೆತ್ತದು ಮಾಂತ್ರ ಅಲ್ಲ. ಪ್ರತಿಯೊಂದಕ್ಕೂ ಲೆಕ್ಕಬರದು   ದಾಖಲೆ           ಮಡಗ್ಗು. ಕೊಟ್ಟಲೆಕ್ಕ, ತಂದಲೆಕ್ಕ, ಮಾರಿದ ಲೆಕ್ಕ, ದಾನಮಾಡಿದಲೆಕ್ಕ,ದಕ್ಷಿಣೆ      ಕೊಟ್ಟಲೆಕ್ಕ,ಹೀಂಗಿದ್ದರೊಟ್ಟಿಂಗೆ      ಮನೆಂದ ಬೇರಾರಾದ್ರೂ ಮಕ್ಕೊ-ಹೆಮ್ಮಕ್ಕೊ  ಬಸ್ಸಿಂಗೆ ಹೋಪದಿದ್ದರೆ;    ದಾರಿಖರ್ಚಿಗೆ ಕೊಟ್ಟ ಪೈಸೆಯ      ಲೆಕ್ಕವನ್ನೂ ಖರ್ಚಿ ಪಟ್ಟಿಲಿ ಸೇರ್ಸುಗು.ಒಂದು ವರ್ಷಲ್ಲಿ ಎಷ್ಟು ಖರ್ಚಾತು          ಹೇಳ್ವ ಲೆಕ್ಕ ಬೇಕಿದ ಅವಕ್ಕೆ.         ಒಂದಾರಿ ಹೀಂಗಾತು- ಅಜ್ಜಿಗೆ, ಎಲ್ಲಿಗೋ ಹೋಪಲೆ ದಾರಿ ಖರ್ಚಿಗೆ   ಹೇಳಿ    ಇಂತಿಷ್ಟೂಳಿ ಕೊಟ್ಟವಿದ.ಅಂಬಗ     ಬರಕ್ಕೊಂಬಲೆ ಗಡಿಬಿಡಿ ಆತು ಕಾಣ್ತು. ಅದರ ಬರವ ಹೊತ್ತಿಂಗೆ           ಎಷ್ಟು    ಕೊಟ್ಟದೂ ಹೇಳ್ತ ಲೆಕ್ಕ ಅಜ್ಜಂಗೆ      ಮರದೋತು. ಅಜ್ಜಿ         ವಾಪಾಸು ಬಂದಪ್ಪಗ ಕೇಳಿದೊವು “ನಿನ    ಎಷ್ಟು           ಖರ್ಚಾತು ಎಷ್ಟು ಒಳುತ್ತು?” ಹೀಂಗೆ ಕೇಳ್ವದ್ದೆ ಪಿಸುರೆಳಗಿದ ಅಜ್ಜಿ “ಆ ಲೆಕ್ಕವ  ನಿಂಗೊ        ಕೇಳುತ್ತದು        ಬೇಡ.ಅದೆಷ್ಟಾದರೂ           ಆಗಲಿ…”

ಅಯ್ಯೋ  “ಹೊಳಗೆ ಸುರುದರೂ ಅಳದು ಸುರಿಯೆಕ್ಕು” ಹೇಳುಗು ಮದ್ಲಾಣವು.ಹಾಂಗಿಪ್ಪಗ ನಿನ್ನದೆಂತದು        ಪಿಟ್ಕಾಯೆಣ”.  ಅಜ್ಜನ ಮಾತಿಂಗೆ…,   “ಆತು ಎಲ್ಲಿಗೆ ಬೇಕಾರೂ ಅಳದೇ ಸುರಿತ್ತಕ್ಕಡ್ಡಿಯಿಲ್ಲೆ, ಇದಿಷ್ಟು ಒಳುದ್ದದು      ಎನ್ನ ಕೈಲೇ ಬೇಕು.ಅನಿವಾರ್ಯ ಸಂದರ್ಭಲ್ಲಿ ಎನ ಬೇಕಾವುತ್ತು”.   ಅಜ್ಜಿಯ ಮಾತಿಂಗೆ   “ ಹ್ಞೂಂ…”        ಅರೆಮನಸ್ಸಿನ     ಒಪ್ಪಿಗೆ ಬಿದ್ದತ್ತಷ್ಟೆ.

ಇಲ್ಲಿ ಎನ ಒಂದು ವಿಷಯ ಗೊಂತಾತು. ಆನುದೆ ಈಗ  ಪ್ರತಿಯೊಂದು      ಪೈಸೆಯನ್ನೂ     ಲೆಕ್ಕಾಚಾರ[ಖರ್ಚಾದ್ದು ಗೊಂತಪ್ಪಲೆ] ಮಡಗುವ ಅಭ್ಯಾಸ ಮಾಡಿಗೊಂಡಿದೆ.ಈ ಅಭ್ಯಾಸ ನವಗೆ ಎಸ್ಟಿಮೇಟ್     ಹಾಕಿ ಖರ್ಚು ಮಾಡ್ಳೆ  ಒಳ್ಳೆದಲ್ದೋ ನಿಂಗೊ   ಎಂತಹೇಳ್ತಿ?.

5 thoughts on ““ಹೊಳಗೆ ಸುರುದರೂ ಅಳದು ಸುರಿಯೆಕ್ಕು”-{ಹವ್ಯಕ ನುಡಿಗಟ್ಟು-47}

  1. ಇಡ್ಕುತ್ತಕ್ಕೂ ಲೆಕ್ಕ ಬೇಕು ಹೇಳುಗು ಎಂಗಳ ಅಜ್ಜ.
    ಈಗಾಣ ISO 14001 ಹೇಳ್ತ standardilli ಯೂ ಇದನ್ನೇ ಹೇಳುವದು. ಎಷ್ಟು waste generate ಆವ್ತು ಹೇಳಿ ಗೊಂತಾದರೆ, ಅದಕ್ಕಿಪ್ಪ ಕಾರಣಹುಡ್ಕಿ ಕಮ್ಮಿ ಮಾಡ್ಲಕ್ಕು ಹೇಳ್ತ ಚಿಂತನೆಗೆ ಅವಕಾಶ ಕೂಡಾ ಇದ್ದು. ಒಳ್ಳೆ ನುಡಿಗಟ್ಟು

  2. ಲೆಕ್ಕದ ಬಗ್ಗೆ ಬರೆದ್ದು ಲಾಯಕ ಆಯಿದು .

  3. ಲೆಕ್ಕ ಮಡುಗುವದು ಭಾರೀ ಒಳ್ಳೆ ಅಭ್ಯಾಸ. ಲಾಯಕಾಯಿದು ವಿಜಯಕ್ಕ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×