Oppanna.com

2014ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ಬಂದ ಕತೆ

ಬರದೋರು :   ವಿಜಯತ್ತೆ    on   08/12/2014    0 ಒಪ್ಪಂಗೊ

ಶ್ರೀಮತಿ ಪಾರ್ವತಿ ಕೂಳಕ್ಕೋಡ್ಳು
ಶ್ರೀಮತಿ ಪಾರ್ವತಿ ಕೂಳಕ್ಕೋಡ್ಳು

ಬಹುಮಾನಿತ ಕಥೆ – ಕಿಟ್ಟಣ್ಣ

ಲೇಖಿಕೆಃ ಶ್ರೀಮತಿ ಪಾರ್ವತಿ ,ಕೂಳಕ್ಕೋಡ್ಳು.

ಕಿಟ್ಟಣ್ಣ ಈಗ ಒಬ್ಬಂಟಿ. ಅವನ ಪ್ರಾಯ ಸರಿ ಸುಮಾರು ಅರುವತ್ತು-ಅರುವತ್ತೈದರ ಆಸು ಪಾಸಿಲ್ಲಿ ಇಕ್ಕುಹೇಳಿ ಕೆಲವುಜೆನ ಅಂದಾಜಿಲ್ಲಿ ಊಹೆ ಮಾಡುದಿದ್ದು.ಆ ಬಗ್ಗೆ ಕಿಟ್ಟಣ್ಣನತ್ರೆ ವಿಚಾರ್ಸಿರೆ; “ಎನ್ನ ವರ್ಷ ಕಟ್ಟಿಗೊಂಡು ಆರಿಂಗೆಂತ ಮಾಡ್ಲಿದ್ದು?” ಅವನ ಮರು ಪ್ರಶ್ನೆ. “ನೀನೇಕೆ ಕಿಟ್ಟಣ್ಣ ಮದುವೆ ಆಯಿದಿಲ್ಲೆ?”. ಕೆಲವು ಜೆನರ ಕುತೂಹಲಕ್ಕೆ; ಮೇಲೆ ಆಕಾಶ ನೋಡಿ ಕೈ ಮುಗಿವದೇ ಅವನ ಉತ್ತರ. ಈ ಮೂಕ ಭಾಷೆ ಉತ್ತರಕ್ಕೆ; ಕೋರ್ಟಿಲ್ಲಿ ಜಡ್ಜ ತೀರ್ಪು ಕೊಡುವ ಹಾಂಗೆ ಒಬ್ಬೊಬ್ಬ ಒಂದೊಂದು ಹೇಳುಗಿದ!.
ಕೆಲವು ಜೆನರ ಊಹೆ “ಅವಂಗೆಂತದೋ ರೋಗ ಇದ್ದು ಹೇಳಿ!.ಇನ್ನು ಕೆಲವು ಜೆನ “ರೋಗವೂ ಇಲ್ಲೆ. ಮಣ್ಣೂ ಇಲ್ಲೆ.ಈಗಳೂ ಒಳ್ಳೆ ಗಟ್ಟಿ-ಮುಟ್ಟಾಗಿದ್ದ.ಅಂಬಗ ಮದುವೆ ಪ್ರಾಯಲ್ಲಿ ಹೇಂಗಿಕ್ಕು!ಅಂತೇ ಶರೀರ ಬೆಳೆಶಿದರಾತೋ?.ಹೀಂಗೆ ತಿರುಗಿ ತಿಂಬವಕ್ಕೆ ಆರು ಕೂಸು ಕೊಡುಗು ಹೇಳಿ ಬೇಕನ್ನೆ! ಇವಂಗೆಂತ ಮನೆಯೋ ಮಠವೋ!. ’ಇಂದು ಕಳ್ದು ಎನ್ನ ದಿನ’ ಹೇಳಿಪ್ಪವಕ್ಕೆ ಕೂಸು ಕೊಡುವ ಬದಲು ಮದುವೆ ಆಗದ್ದೆ ಬಾಕಿ ಆದರೆ; ಅದರ ಬಡುದು ಕಟ್ಟಕ್ಕೆ ಹಾಕಲಾಗದೋ” ಹೇಳ್ತ ಕಟು ಮಾತುಗಳ ಕಿಟ್ಟಣ್ಣ ಅವನ ಕೆಮಿಯಾರೆ ಕೇಳಿದ್ದಿದ್ದು.ಹೀಂಗೆ ಎಲ್ಲೋರ ಮಾತಿನ ಪೆಟ್ಟು ಚಾಟಿ ಏಟಿನ ಹಾಂಗೆ ಅವನ ಘಾಸಿಗೊಳಿಸಿರೂ “ಆರೆಂತ ಹೇಳಿರೂ ಎನಗೆಂತ ಚೋದ್ಯ ಇಲ್ಲೆ. ಅವರವರ ಗುಣನಡತೆ ಸ್ವಭಾವ ಅವರವರ ಮಾತಿಲ್ಲೇ ಗೊಂತಾವುತ್ತು”. ಹೇಳಿಯೊಂಡು ಕಿಟ್ಟಣ್ಣ ಎಲ್ಲೋರ ಮಾತಿಂಗು ’ಹಿತ್ತಾಳೆ ಕೆಮಿ’ಯಾಗಿಯೇ ಇಕ್ಕು. ಊರಿನವರ ಮಾತಿಂಗೆ ಉತ್ಪ್ರೇಕ್ಷೆ ತೋರದ್ದ ಹಾಂಗೆ ಅವ ಹಾಂಗೆ ಇಪ್ಪದೂ ಅಪ್ಪು!.
ಕಿಟ್ಟಣ್ಣ ಸಣ್ಣ ಪ್ರಾಯಲ್ಲಿ ಒಳ್ಳೆ ರೂಪವಂತನೂ ಕಟ್ಟುಮಸ್ತಾದ ಒಳ್ಳೆ ಶರೀರದೊಟ್ಟಿಂಗೆ ಕಾಂಬಲೆ ಯೋಗ್ಯತೆಯನ್ನೂ ದೇವರು ಅವಂಗೆ ಕೊಟ್ಟಿದೊವು.ಆ ಕಾಲಲ್ಲಿ ಅವ ಬರೇ ಮೂರ್ನೇ ಕ್ಲಾಸು ಕಲ್ತರೂ ಅವನ ಜ್ಞಾನಕ್ಕೆ ಕಮ್ಮಿ ಇತ್ತಿಲ್ಲೆ. ಕಾರಣ ಅವನ ಅಬ್ಬೆ; ರಾಮಾಯಣ, ಮಹಾಭಾರತ, ಹಾಂಗಿಪ್ಪ ಪುರಾಣ ಕಥಗಳ ಹೇಳಿಯೊಂಡಿದ್ದೊವು.ಅದೇ ಸ್ಪೂರ್ತಿಲಿ,ಕಿಟ್ಟಣ ಯಕ್ಷಗಾನ,ತಾಳಮದ್ದಳೆ,ನಾಟಕಂಗೊಕ್ಕೆ ತಪ್ಪದ್ದೇ ಹೋಗಿಯೊಂಡಿದ್ದರಿಂದಲೂ ಒಳ್ಳೆಯ ಓದುಗನಾದ್ದರಿಂದಲೂ ಪ್ರಾಯಕ್ಕೆ ಬಪ್ಪಗ ಕಿಟ್ಟಣ್ಣ ಪಳಗಿದ ಪಂಡಿತನಾದ.
ಕಿಟ್ಟಣ್ಣನ ಪಾಂಡಿತ್ಯವನ್ನೂ ಶಾರೀರವನ್ನೂ ಗುರುತಿಸಿದ ಊರ ಜೆನಂಗೊ; ಕ್ರಮೇಣ ಅವಂಗೆ ನಾಟಕಂಗಳಲ್ಲಿ ಅಭಿನಯಿಸಲೋ,ಯಕ್ಷಗಾನಲ್ಲಿ ಹಾಡ್ಳೊ,ಅರ್ಥ ಹೇಳ್ಲೋ ಅವಕಾಶಕೊಡ್ಲೆ ಸುರುಮಾಡಿದವು.ಕಿಟ್ಟಣ್ಣ ವೇಷಹಾಕಿ ಅರ್ಥ ಹೇಳ್ಲೆ ಸ್ಟೇಜಿಗೇ ಬರಲಿ,ಮೇಜಿಲ್ಲಿ ಹತ್ತಿಕೂದು ಜಾಗಟೆ ಹಿಡುದು ಹಾಡ್ಲೇ ಸುರು ಮಾಡಲಿ ಅವನ ಕಂಡ ಕೂಡ್ಳೇ ಇಡೀ ಸಭಗೆ ಸಭೆಯೇ ಮಂತ್ರಮುಗ್ಧರಕ್ಕು!.ಆ ಸಮಯಲ್ಲಿ ಒಂದು ಸಾಸಮೆಕಾಳು ಬಿದ್ದರೂ ಅಲ್ಲಿ ಗೊಂತಕ್ಕು!.ಹಾಂಗಿಪ್ಪ ಅವನ ಪಾಂಡಿತ್ಯವನ್ನೂ ರೂಪವನ್ನೂ ಕಂಡು ದೊಡ್ಡ ದೊಡ್ಡೋರ ಕೂಸುಗೊ ಕೂಡಾ ಅಂದಿಂಗೆ ಕಿಟ್ಟಣ್ಣಂಗೆ ಕಣ್ಣುಹಾಕಿದ್ದು, ಅವನತ್ರೆ ಪ್ರೇಮ ಭಿಕ್ಷೆ ಬೇಡಿದ್ದೂ ಇಕ್ಕು.
ಆದರೆಂತ? ಯಾವುದೇ ಪ್ರತಿಭೆ ಪೂರ್ಣ ಪ್ರಮಾಣಲ್ಲಿ ಹೆರ ಬರೆಕಾರೆ; ಅದಕ್ಕೆ ತಕ್ಕ ವೇದಿಕೆಯೂ ಅವಕಾಶವೂ ಖಂಡಿತಾ ಬೇಕೇ ಬೇಕು.ಆದರೆ ಅಲ್ಲಿಯೂ ಶ್ರೀಮಂತ ಕುಳಂಗಳ ರಾಜಕೀಯಂದಾಗಿ ಬಡ ಕಿಟ್ಟಣ್ಣಂಗೆ,ಕ್ರಮೇಣ ಏವ ಅವಕಾಶವೂ ಸಿಕ್ಕದ್ದೆ ಹೋತು.
ಕಿಟ್ಟಣ್ಣ ಹುಟ್ಟಿದ್ದು ಒಪ್ಪತ್ತಿನ ಊಟಕ್ಕು ಗತಿಇಲ್ಲದ್ದ ಬಡಕುಟುಂಬಲ್ಲಿ. ಅವನ ಅಪ್ಪ ರಾಮಭಟ್ಟ. ಅಬ್ಬೆ ಸುಬ್ಬಮ್ಮ. ಯಾವುದೇ ರೀತಿಯ ಕುಟುಂಬ ಯೋಜನಗೊ ಇಲ್ಲದ್ದ ಕಾಲ ಅದು.ಕಾರಣ ಹೆಮ್ಮಕ್ಕೊ ಹೆರುವಷ್ಟೂ ಹೆರ್ಲೇಬೇಕಾದ ಅನಿವಾರ್ಯತೆ!.ಆ ಕಾಲಲ್ಲಿ ಆರಿಂಗಾದರೂ ಕಮ್ಮಿ ಮಕ್ಕೊ ಇಪ್ಪದು ಹೇಳಿರೆ; ಒಂದೋ ಅವು ಹೆತ್ತದೇ ಕಮ್ಮಿ. ಅಲ್ಲದ್ರೆ ಹುಟ್ಟಿದ ಮಕ್ಕೊ ಒಂದಲ್ಲ ಒಂದು ಕಾರಣಂದ ಸತ್ತಿಕ್ಕು. ಎಂಟು, ಹತ್ತು ಮಕ್ಕೊ ಹೆಚ್ಚಿನವಕ್ಕೂ ಮಾಮೂಲೇ.ಈ ರಾಮಭಟ್ಟ-ಸುಬ್ಬಮ್ಮಂಗೂ ಒಂಭತ್ತು ಜೆನ ಮಕ್ಕೊ. ಹುಟ್ಟಿಸಿದ ಮಕ್ಕಳ ಹುಲ್ಲು ಮೇಶಲಾವುತ್ತೋ?,ಅಷ್ಟೂ ಮಕ್ಕಳೊಟ್ಟಿಂಗೆ ಅಬ್ಬೆ-ಅಪ್ಪನ ಹೊಟ್ಟೆ ತುಂಬುಸಲೆ ರಾಮಭಟ್ಟಂಗೆ ಹಗಲಿರುಳು ಆರಾರದ್ದೋ ಜಾಗೆಲಿ,ಮನೆಲಿ ಗಾಣದೆತ್ತಿನ ಹಾಂಗೆ ದುಡಿಯೆಕ್ಕಾದ ಪರಿಸ್ಥಿತಿ.ಆದರೆ ಎಷ್ಟೇ ದುಡುದರೂ ಕೂಡಾ ಅವಕ್ಕೆ ಯಾವಾಗಲೂ ಒಪ್ಪತ್ತಿನ ಊಟಕ್ಕೂತತ್ವಾರವೇ!.
ಆ ತುಂಬು ಕುಟುಂಬಲ್ಲಿ ಕಿಟ್ಟಣ್ಣ ;ನಡೂಗಾಣವ.ನಾಲ್ಕು ಜೆನ ಅಣ್ಣ-ತಮ್ಮಂದ್ರು, ನಾಲ್ಕು ಜೆನ ಅಕ್ಕ-ತಂಗೆಕ್ಕೊ.ಅವಕ್ಕೆ ಅವರದ್ದೇ ಆದ ಆಸ್ತಿ ಬದುಕ್ಕು ಏವದೂ ಇಲ್ಲದ್ದ ಕಾರಣಂದ ಎಲ್ಲಿಗೆ ಹೋದರೆ ಹೊಟ್ಟೆ ತುಂಬುಗು ಹೇಳುವ ನಿರೀಕ್ಷೆಲಿ ಅವು ಅಂಬಗಂಬಗ ಊರೂರು ಬದಲಿಸಿಗೊಂಡಿತ್ತಿದ್ದವು.ಅದರ ಕಂಡು ಅವರ ಗುರ್ತದ ತ್ಯಾಂಪಣ್ಣ ಹೇಳುವ ಬಂಟ “ಈ ಪರಬ್ಬೆರೇನ್,ಈ ಎಲ್ಯೆಲ್ಯ ಜೋಕ್ಲೆನ್ ಲೆತ್ತೊಂದು ಓಡೆ ಓಡೆ ಮಾತಾ ಪೋವಾರ್ ಭಟ್ರೆ? ಈರೆಗ್ ಎನ್ನ ಜಾಗೆಡೇ ಕಂಡದ ಬರೀಟ್ ಏನೊಂಜಿ ಕಾರಿ ಕಟ್ಟದ್ ಕೊರ್ಪ್ಪೆ. ಎನ್ನ ಬೇಲೆದಾಕ್ಲೆನ್ ತೂವೊಂದ್ ಮೂಲೇ ಕುಲ್ಲುಲೆ.ನಿಕ್ಕಲೆನ ಬಂಜಿ ಜಿಂಜಾಯರ ತಕ್ಕ ಇತ್ತಿ ಬಾರ್ ಏನ್ ಕೊರೊಲಿ”. ಹೇಳಿ ಅಂದಿಂಗೆ ಮೂವತ್ತು –ನಲುವತ್ತು ಮುಡಿ ಭತ್ತ ಬಿತ್ತುವ ಗೆದ್ದೆಯ ಎಜಮಾನ ಹೇಳುವಗ ರಾಮಭಟ್ಟಂಗೆ ಸಂತೋಷ ತಡೆಯ!.ದೇವರೇ ಎನಗೆ ಬಂಟನ ರೂಪಲ್ಲಿ ಬಂದು ಸಹಾಯ ಮಾಡಿದ್ದು ಹೇಳಿಯೇ ಗ್ರಹಿಸಿಯೊಂಡವು.ಮುಂದೆ ರಾಮಭಟ್ಟನ ಕುಟುಂಬ ಶಾಶ್ವತವಾಗಿ ಅಲ್ಲೇ ನೆಲೆ ಊರಿತ್ತು.
ಬಂಟ ಕೊಡುವ ಅಕ್ಕಿ,ಇವು ಬೆಳೆಶಿಗೊಂಡಿದ್ದ ನೆಟ್ಟಿಕಾಯಿ, ಒಂದೆರಡು ದನಗಳಹಾಲು,ಮಜ್ಜಿಗೆಂದಾಗಿ ಮುಂದೆಂದೂ ಅವಕ್ಕೆ ಊಟಕ್ಕೆ ಕೊರತ್ತೆ ಆಯಿದಿಲ್ಲೆ.ಆದರೆ ರಾಮಭಟ್ಟಂಗೆ ಮಕ್ಕೊಗೆಲ್ಲಾ ದೊಡ್ಡ ಮಟ್ಟಿನ ವಿದ್ಯಾಭ್ಯಾಸ ಕೊಡ್ಳಾತಿಲ್ಲೆ. ಅಂದ್ರಾಣ ಕಾಲಕ್ಕೆ ಅದು ದೊಡ್ಡ ವಿಷಯವೂ ಅಲ್ಲ.ಆದ್ರೆ ಮಕ್ಕೊ ಪ್ರಾಯಕ್ಕೆ ಬಪ್ಪಗ ಮಾತ್ರ ಮಕ್ಕೊಗೆಲ್ಲ ಒಂದೊಂದು ಮದುವೆ ಹೇಳಿ ಮಾಡ್ಸಿಯೇ ಮಾಡ್ಸಿದೊವು.ಆದರೆ ಕಿಟ್ಟಣ್ಣ ಮಾಂತ್ರ ಎನಗೆ ಮದುವೆ ಬೇಡ ಹೇಳಿ ಕೂದ.ಅವರ ಅಷ್ಟೂ ಮದುವಗೊಕ್ಕೆ ತ್ಯಾಂಪಣ್ಣ ಬಂಟನೇ ಖುದ್ದಾಗಿ ನಿಂದು ಎಡಿಗಾದಷ್ಟೂ ಎಲ್ಲಾರೀತಿಯ ಸಹಾಯ ಮಾಡಿದ್ದಾಡ. “ಅದು ಮಾಡಿದ ಸಹಾಯ ಮಾಂತ್ರ ನಾವು ಎಂದೆಂದಿಂಗೂ ಮರವಲಾಗ ಮಕ್ಕಳೆ” ಹೇಳಿ ರಾಮಭಟ್ಟ ಇದ್ದಷ್ಟು ದಿನವೂ ಹೇಳುಗಡ. ಅದಲ್ಲದ್ದೆ ದೇವರೊಟ್ಟಿಂಗೆ ಆ ತ್ಯಾಂಪಣ್ಣನನ್ನೂ ಸ್ಮರಿಸದ್ದ ದಿನವೇ ಇರಡ್ಡ.
ಮದುವೆ ಆದ ಮೇಲೆ ಕಿಟ್ಟಣ್ಣನ ಅಣ್ಣ-ತಮ್ಮಂದ್ರು ಮನೆಂದ ಹೆರ ಹೋಗಿ ಒಂದೊಂದು ಮನೆಹೇಳಿ ಮಾಡಿಗೊಂಡು ಪರಿಕರ್ಮಕ್ಕೊ ಅಡಿಗಗೆ ಹೋಗಿಯೋ ರೈಟಂಗಳ ಹಾಂಗೆ ನಿಂದೋ ಜೀವನ ಮಾಡ್ಳೆ ಸುರುಮಾಡಿದೊವು.ಕಿಟ್ಟಣ್ಣ ಮಾಂತ್ರ ಅಬ್ಬೆಪ್ಪಂಗೆ ಆಸರೆಯಾಗಿ ಅಲ್ಲೇಇದ್ದುಗೊಂಡು ಬಂಟಂಗೂ ಸಹಾಯಮಾಡಿಗೊಂಡು ಕಾಲಕಳಕ್ಕೊಂಡಿತ್ತಿದ್ದ. ಕ್ರಮೇಣ ಹೆರಿಯೋರೆಲ್ಲ ತೀರಿಹೋದೊವು.ಬಂಟನೂ ಹೋತು.ಅದೇ ಸಮಯಲ್ಲಿ ಭೂ ಮಸೂದೆ ಕಾನೂನು ಬಂತು.ಅಂಬಗ ರೌಡಿಯ ಹಾಂಗಿದ್ದ ಬಂಟನ ಮಗ; ಮದಾಲು ಕಿಟ್ಟಣ್ಣನ ಹೆದರ್ಸಿ ಅದರ ಜಾಗೆಂದ ಏಳ್ಸಿ ಮನೆಯ ವಶಮಾಡಿಗೊಂಡತ್ತು.ಅದರ ಎದುರ್ಸುವ ತಾಕತ್ತು ಕಿಟ್ಟಣ್ಣಂಗೆ ಇಲ್ಲದ್ದ ಕಾರಣ; ಅವ ಗಂಟುಮೂಟೆ ಕಟ್ಟಿಗೊಂಡು ಅಲ್ಲಿಂದ ಹೆರಟ.ಮನೆಲಿದ್ದ ನಾಲ್ಕು ಒಟ್ಟೆ ಪಾತ್ರ,ಹರ್ಕಟೆ ವಸ್ತ್ರಂಗಳ ಅವನ ಅಣ್ಣಂದ್ರು ವಸೂಲು ಮಾಡಿಗೊಂಡು ಹೋದೊವು.
ಈಗ ಕಿಟ್ಟಣ್ಣಂಗೆ ಒಳುದ್ದು ಸುತ್ತಿದ ವಸ್ತ್ರ ಮಾಂತ್ರ!. “ಈ ಪ್ರಾಯಲ್ಲಿ ಆನೆಲ್ಲಿಗೆ ಹೋಪದು? ಹೇಂಗೂ ಒಬ್ಬಂಟಿ!.ವರ್ಷವೂ ಅರುವತ್ತೈದು ಕಳುತ್ತು.ಆರೋಗ್ಯವೂ ಸರಿ ಇಲ್ಲೆ.ಅಣ್ಣ-ತಮ್ಮಂದ್ರು,ಅಕ್ಕ-ತಂಗೆಕ್ಕೊ ಇದ್ದವನ್ನೆ.ಅವರಲ್ಲೆ ರಜ ರಜ ದಿನ ಅತ್ಲಾಗಿ ಇತ್ಲಾಗಿ ಇದ್ದರಾತು”. ಹೇಳಿ ನಿಶ್ಚೈಸಿದ ಕಿಟ್ಟಣ್ಣ ಎಲ್ಲೋರ ಮನಗೂ ಸುರುವಿಲ್ಲಿ ಒಂದೊಂದು ವಾರಕ್ಕೆ ಹೋದ.ಅವೆಲ್ಲ ಅವನ ಚೆಂದಕೆ ನೋಡಿಗೊಂಡಪ್ಪಗ ಕಿಟ್ಟಣ್ಣ ಸಂತೋಷಲ್ಲಿ ; “ಇದಕ್ಕೇ ಹೇಳ್ವದಿದ ಒಡಹುಟ್ಟು ಒಡಹುಟ್ಟುಗಳೆ!ಇನ್ನೊಬ್ಬ ಎಷ್ಟಾದರೂ ಇನ್ನೊಬ್ಬನೇ” ಮನಸ್ಸಿಲ್ಲೇ ಗ್ರೇಶಿಗೊಂಡ. ಆದರೆ.. ಅವ ಯಾವಾಗ ಎರಡನೆ ಸರ್ತಿ ಅವರಲ್ಲಿಗೆ ಹೋದನೋ ಅಂಬಗ ಅಲ್ಲಿ ಎಲ್ಲೋರ ಮೋರೆಲೂ ಅಸಮಾಧಾನ ಛಾಯೆ ಕಾಂಬಲೆ ಸುರುವಾತು!.ಆದರೆ ಅದರ ಕಂಡರೂ ಕಾಣದ್ದ ಹಾಂಗೆ ಮಾಡಿಗೊಂಡು “ಅದರಲ್ಲೆ ತಪ್ಪೆಂತ ಇಲ್ಲೆ ಅವೆಲ್ಲಾ ಅವರವರ ತಲೆಬೆಶಿಲಿಕ್ಕು” ಹೇಳಿ ಸಮಾಧಾನ ಮಾಡಿಗೊಂಡ.ಮುಂದೆ ಮೂರನೇ ಸರ್ತಿಲಿ “ಕಿಟ್ಟಣ್ಣಾ ನೀನು ಹೀಂಗೆ ಮನೆ-ಮನೆ ಎಷ್ಟು ಸಮಯ ತಿರುಗುವೆ? ನಿನಗೆ ನಿನ್ನದೇ ಆದ ಒಂದು ಗೂಡು ಮಾಡಿಗೊಂಡು ಗೈದು ತಿಂಬಲಾಗದೋ?ನಿನ್ನ ಆರೋಗ್ಯ ಸರಿ ಇಲ್ಲದ್ರೆ ಅದಕ್ಕೆ ಎಂಗೊ ಎಂತ ಮಾಡೆಕ್ಕು?ಅದಕ್ಕಿಪ್ಪ ವ್ಯವಸ್ಥೆ ನೀನೆ ಮಾಡಿಗೊಳೆಕ್ಕು” ಹೇಳುವ ಸಲಹೆ ಕೊಟ್ರೆ; ನಾಲ್ಕನೆ ಸರ್ತಿ ಹೋಗಿಯಪ್ಪಗ ನೀನು ಹೀಂಗೆ ಅಂಬಗಂಬಗ ಬಂದುಗೊಂಡಿದ್ರೆ ಎಂಗೊಗೆ ಉಪದ್ರ ಆವುತ್ತು.ನಿನ್ನದಾರಿ ನೀನೆ ನೋಡಿಗೊ.ಇನ್ನು ಮೇಲಿಂದ ನೀನು ಬರೆಕ್ಕು ಹೇಳಿ ಇಲ್ಲೆ”. ಹೇಳುವ ಕಠೋರ ಮಾತುಗಳೇ ಕೇಳಿ ಬಂತು!. ಅಲ್ಲಿಗೆ ಕಿಟ್ಟಣ್ಣಂಗೆ ಒಡಹುಟ್ಟುಗಳ ಮೇಲಿದ್ದ ಪ್ರೀತಿಯ ಒರತ್ತೆ ಬತ್ತಿಯೇ ಹೋತು!.ಮುಂದೇನು ಹೇಳುವ ಪ್ರಶ್ನೆ ಭೂತಾಕಾರವಾಗಿ ಕಾಡ್ಳೆ ಸುರುವಾತು!!.
{ಇನ್ನೂ ಇದ್ದು}

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×