Latest posts by ವಿಜಯತ್ತೆ (see all)
- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
–2015 ನೇ ಸಾಲಿನ ಕೊಡಗಿನ ಗೌರಮ್ಮಕತಾಸ್ಪರ್ದಗೆ ಕತೆ ಆಹ್ವಾನ-
ಕೊಡಗಿನ ಗೌರಮ್ಮ ದತ್ತಿನಿಧಿ ಹಾಂಗೂ ಗೋಕರ್ಣಮಂಡಲ ಮಾತೃಮಂಡಳಿ ಸಹಯೋಗಲ್ಲಿ ಪ್ರತಿ ವರ್ಷದಹಾಂಗೆ ಈ ಸರ್ತಿಯೂ ಹವ್ಯಕ ಹೆಮ್ಮಕ್ಕೊಗೆ ಒಂದು ಸಣ್ಣಕತಾಸ್ಪರ್ಧೆ ಆಯೋಜಿಸಿದ್ದು. ಅದರ ನಿಯಮಾವಳಿಗೊಃ-
- ಅಖಿಲ ಭಾರತ ಮಟ್ಟಲ್ಲಿ,
- ಹವ್ಯಕ ಹೆಮ್ಮಕ್ಕೊ[ವಯೋಮಿತಿ ಇಲ್ಲೆ.ಕೂಸುಗಳೂ ಬರವಲಕ್ಕು],
- ಹವ್ಯಕ ಭಾಷೆ[ಏವದೇ ಸೀಮೆಯ ಹವ್ಯಕ ಭಾಷೆ ಅಡ್ಡಿಇಲ್ಲೆ],
- ಈವರೆಗಿನ ಪ್ರಥಮ ವಿಜೇತೆಯರಿಂಗೆ ಅವಕಾಶ ಇಲ್ಲೆ,
- ಈ ವರೆಗೆ ಪ್ರಕಟ ಆಗದ್ದ ಸಾಮಾಜಿಕ ಕತೆ,
- ಸಾದಾರಣ ಎಂಟು ಪುಟಕ್ಕೆ ಮೀರದ್ದೆ ಕಾಗದದ ಒಂದೇ ಹೊಡೆಂಗೆ ಸ್ಪುಟವಾಗಿ[ಟೈಪ್ ಮಾಡಿದ್ದಾದರೆಉತ್ತಮ] ಬರದು,ಹೆಸರು,ವಿಳಾಸ ಬೇರೆ ಕಾಗದಲ್ಲಿ ಬರದು ಪಿನ್ ಮಾಡಿರೆಕು
ಬಹುಮಾನಂಗೊಃ-ಪ್ರಶಸ್ತಿಪತ್ರದೊಟ್ಟಿಂಗೆ,ಪಥಮ-ಎರಡುಸಾವಿರ,ದ್ವಿತೀಯ-ಒಂದುಸಾವಿರ,ತೃತೀಯ-ಏಳುನೂರೈವತ್ತು ರೂಪಾಯಿ.
ಅಕ್ಕ,ತಂಗೆಕ್ಕೊ, 31/8/15 ರ ಮೊದಲು ಕಳಿಸೆಕ್ಕಾದ ವಿಳಾಸಃ-
-ವಿಜಯಾಸುಬ್ರಹ್ಮಣ್ಯ,
ಕಾರ್ಯದರ್ಶಿ,ಕೊಡಗಿನ ಗೌರಮ್ಮ ಕತಾಸ್ಪರ್ಧೆ,
ನಾರಾಯಣ ಮಂಗಲ, ಕುಂಬಳೆ-671321,ಕಾಸರಗೋಡು ಜಿಲ್ಲೆ,
ಮೊಃ ೦೮೫೪೭೨೧೪೧೨೫
—–೦——
ಕೊಡಗಿನ ಗೌರಮ್ಮ ಬರದ ಕಥಾ ಸಂಕಲನವ ಓದುತ್ತಾ ಹೋಪಗ ಅವರ ಭಾಷೆ , ವಸ್ತು , ದೃಷ್ಟಿಕೋನ೦ಗಳ ನೋಡಿ ಆಶ್ಚರ್ಯ ಆತು . ಸರಿಸುಮಾರು ಒಂದು ಶತಮಾನದ ಹಿಂದೆ ಈ ಚಿಂತನೆಗೋ ಸಮಾಜಕ್ಕೆ ಹೊಸತ್ತೇ ಆಗಿಕ್ಕು . ತನ್ನ ಅಲ್ಪಾಯುಷ್ಯದ ಜೀವಿತಾವಧಿಲಿ ಅವು ಮಾಡಿದ ಸಾಹಿತ್ಯ ಸೃಷ್ಟಿ ನಿಜಕ್ಕೂ ಮಾರ್ಗದರ್ಶಿ .
ಗೌರಮ್ಮನ ಹೆಸರು ಮುಂದಾಣ ಪೀಳಿಗೆಗೊಕ್ಕೂ ಹಸುರಾಗಿ ಇಪ್ಪ ಹಾಂಗೆ , ನಮ್ಮ ಸಮಾಜದ ಲೇಖಕಿಯರಿಂಗೆ ಬರವ ಆಸಕ್ತಿ ಹೆಚ್ಚು ಅಪ್ಪ ಹಾಂಗೆ ,ಹೆಚ್ಚು ಹೆಚ್ಚು ಸಾಹಿತ್ಯ ರಚನಾಸಕ್ತರಿ೦ಗೆ ಒಂದು ಒಳ್ಳೆ ವೇದಿಕೆಯಾಗಿಪ್ಪ ಈ ದತ್ತಿನಿಧಿಯ ಪ್ರಯತ್ನ ಯಶಸ್ವಿಯಾಗಲಿ ಹೇಳಿ ಹಾರೈಕೆಗೋ .
ಹರೇ ರಾಮ ಚೆನ್ನೈ ಭಾವ , ಗೋಪಾಲಕೃಷ್ಣ , ಧನ್ಯವಾದಂಗೊ ನಿಂಗಳ ಗೊಂತಿಲ್ಲಿ ಆರಾರು ಬರೆತ್ತವು ಇದ್ದರೆ ತಿಳಿಶಿಕ್ಕಿ .
yashasvi ಆಗಲಿ
ಹರೇ ರಾಮ. ಯಶಸ್ವಿ ಆಗಲಿ.