Oppanna.com

ಮಂಗಳವು ಪುಣ್ಯಕೋಟಿಗೆ

ಬರದೋರು :   ವಿಜಯತ್ತೆ    on   21/01/2013    8 ಒಪ್ಪಂಗೊ

ಮದಾಲು ವಂದಿಸಿ  ಶ್ರೀಗುರುಗಳ
ಮತ್ತೆ ಹಾಕುವೆ  ತುಳಸಿ ಮಾಲೆಯ
ಮುಂದೆ ಸುಖ ಸಂತೋಷ ಒದಗಿ ಬರಲೇಳಿ
ಮತ್ತೆ ಪೂಜೆ ಅಬ್ಬೆ ಅಪ್ಪನ
ನಿತ್ಯ ನೆನೆವೆ ಶ್ರೀರಾಮಚಂದ್ರನ
ಉತ್ತಮವಾಗಿ ಗೋಮಾತಗೆ ತಲೆಬಾಗಿ ಕೈ ಮುಗಿವೆ/೧//

 ಉದಯಕಾಲದಿ ನಿತ್ಯ ವಿಧಿಗಳ
ಮದಾಲು ತೀರಿಸಿ ಬಪ್ಪೆ ಬೇಗವೆ
ಒದಗೊದಗಿ ಗೋಮಾತೆಯರ ನಮಿಸುತ್ತೇ/
ಕಪಿಲೆ ಗಂಗಗೆ ತುಂಗೆ ಭದ್ರಗೆ
ಗೌರಿ ಕಾಳಿಗೆ ಪುಣ್ಯಕೋಟಿಗೆ
ಆರತಿಯ ಬೆಳಗುತ್ತ ಅಕ್ಷತೆಯ ನೀಡುತ್ತೆ//೨//

 ಹರಸಿ ಗೋಮಾತೆಯರೆ ಎಂಗಳ
ಕರೆಸಿ ಬೆಸಗೊಂಡೆಂಗೊ ನಿಂಗಳ
ಪರಿಹರಿಸಿ  ತೊಳೆಯಿ ಬಪ್ಪ ಕಷ್ಟ ಕೋಟಲೆಯ//
ಮನೆಒಳ ಸಂತಾನ ಭಾಗ್ಯವ
ಮನಸ್ಸಿನೊಳ ಇಷ್ಟಾರ್ಥ ಸಿದ್ಧಿಯ
ಮನಸ್ಸಿಟ್ಟು ಬೇಡುತ್ತಿಯೊಂ ನಿಂಗಳ ಭಕ್ತಿಭಾವಂದ//೩//

 ನೆತ್ತರಿನೊತ್ತಡ ಹದಕ್ಕೆ ಬರಲೀ
ಮತ್ತೆ ಸಿಹಿಮೂತ್ರ ಗುಣ ಕಾಣಲಿ
ಒತ್ತೊತ್ತಿ ಕರಗಿ ಹೋಗಲಿ ರೋಗಂಗೊ ಗೋಅರ್ಕಂದ//
ಮೈತೊರಿಕ್ಕಗೆ ಕಜ್ಜು ಸಿಬ್ಬಿಂಗೆ
ಮೈಯ ಚೆಂದಕೆ ಮೋರೆ ಕಾಂತಿಗೆ
ಸಾಬೂನು ಶಾಂಪುಗೊ ಇದ್ದು ಊರ ಹಸುಗೋಮಯಂದ//೪//

 ರಾಘವೇಶ್ವರಗುರುಗೊ ತೋರ್ಸಿದ
ಅರ್ಕದ ತರತರ ಮದ್ದುಗಳಿಂದ
ಓಡಿ ಹೋಗಲಿ ಎಲ್ಲ ವಿಧದ ಕ್ಯಾನ್ಸ್ರರ್ ರೋಗಂಗೊ
ಆದಿ ನಂದಿನಿ ನಿನ್ನ ಅಬ್ಬೆಯು
ಕಾಮಧೇನುವೆ ಆಗಿ ಮೆರದ್ದದು
ಯೋಗಿ ವರ್ಯರು ಪೂಜೆಮಾಡಿದ ಜಗದಂಬೆ//೫//

ಮಂಗಳವು ಪುಣ್ಯಕೋಟಿಗೆ
ಮಂಗಳವು ಕಾಮಧೇನುಗೆ
ಮಂಗಳವು ಊರತಳಿ ಸಕಲ ಸಂತತಿಗೆ
ಮಂಗಳವು ವಿಶ್ವಮಾತಗೆ
ಮಂಗಳವು ಕಾಮದುಘಕ್ಕೆ
ಮಂಗಳವು ಗೋಪುಷ್ಟಿ  ಯೋಜನಗೇ//೬//
~~~***~~~

8 thoughts on “ಮಂಗಳವು ಪುಣ್ಯಕೋಟಿಗೆ

    1. ಕಂಪ್ಯೂಟರ್ ಹಾಳಾಗಿ ಸುಮಾರು ದಿನ ಆತು. ಬೈಲಿಂಗೆ ಬಪ್ಪಲಾಯಿದಿಲ್ಲೆ. ಹೇಂಗಿದ್ದಿ ವಿಜಯತ್ತೆ?

  1. ಪುಣ್ಯಕೋಟಿಗೆ ನಮನ ಲಾಯಿಕಾಯಿದು ವಿಜಯತ್ತೆ.

  2. ಗೋಮಾತೆಗೆ ನಮನ ಲಾಯಕಾಯಿದು.

  3. ಭಕ್ತಿಭಾವಂದ ಪುಣ್ಯಕೋಟಿಗೆ ನಮನ ಪದ್ಯ ಲಾಯಕ ಆಯ್ದು ವಿಜಯತ್ತೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×