Oppanna.com

’ತೆರೆ ಮುಗುದು ಸಮುದ್ರ ಮೀವಲಿಲ್ಲೆ’ (ಹವ್ಯಕ ನುಡಿಗಟ್ಟು–5)

ಬರದೋರು :   ವಿಜಯತ್ತೆ    on   24/06/2014    7 ಒಪ್ಪಂಗೊ

’ತೆರೆ ಮುಗುದು ಸಮುದ್ರ ಮೀವಲಿಲ್ಲೆ’(ಹವ್ಯಕ ನುಡಿಗಟ್ಟು-5)
ಕೆಲವು ವರ್ಷ ಹಿಂದೆ ಎನ್ನ ಅಪ್ಪನ ಮನೆಲಿ; ಏವದೋ ಸಂದರ್ಭಲ್ಲಿ ಎಲ್ಲೋರೂ ಸೇರಿ ಗೋಕರ್ಣಕ್ಕೆ ಹೋಪಲೆ ನಿಜ ಮಾಡಿತ್ತಿದ. ಅಷ್ಟೊತ್ತಿಂಗೆ, ಎನ್ನ ಸೋದರತ್ತೆ , “ಎನ್ನ ಮಗಂಗೆ ಮದುವೆ ಆದ ಮತ್ತೇ ಎನಗೆ ದೂರದ ಕ್ಷೇತ್ರಕ್ಕೆಲ್ಲ ಹೋಪಲೆಡಿಗಷ್ಟೆ  ಅಣ್ಣ “  ಆನು  ಬತ್ತಿಲ್ಲೆ ಹೇಳಿತ್ತು  ಅಪ್ಪನತ್ರೆ.
“ಮಗಂಗೆ ಮದುವೆ ಆದಮತ್ತೆ ಸೊಸೆ ಬಸರಿ ಆವುತ್ತು, ಅದರ ಬಿಟ್ಟಿಕ್ಕಿ ಹೋಪಲೆಡಿಯ! ಮತ್ತೆ ಬಾಳಂತನ, ಮತ್ತೆ… ಪುಳ್ಳಿಯ ನೋಡಿಗೊಂಬಲಿದ್ದು,ಹೀಂಗೆಲ್ಲ  ಮತ್ತೂ,ಮತ್ತೂ ಅಡ್ಡಿಗೊ  ಸಂಸಾರ ಸಾಗರಲ್ಲಿ ಒಂದರ ಮೇಲೊಂದು ಬಂದೊಂಡೇ ಇರ್ತು. ಅದೆಲ್ಲ ಮುಗುಶಿಕ್ಕಿ ಹೋಪೆ ಹೇಳಿರೆ ಹೋಪಲಿಲ್ಲೆ. ಒಪ್ಪಕ್ಕ, ತೆರೆ ಮುಗುದು ಸಮುದ್ರ ಮೀವಲಿಲ್ಲೆ ಮಿನಿಯ!” ಹೇಳಿದವು ಎನ್ನಪ್ಪ ಅವರ ತಂಗೆ ಹತ್ರೆ. ಅವು ಮಾತಾಡುವಾಗೆಲ್ಲ ಈ  ನುಡಿಗಟ್ಟಿನ  ಉಪಯೋಗುಸುದು ಕೇಳಿದ್ದೆ.ಪುಣ್ಯ ಕ್ಷೇತ್ರಂಗೊಕ್ಕೆ  ಹೆರಡುವಾಗಂತೂ ಆ,ಅಡ್ಡಿ, ಈ ಅಡ್ಡಿ, ಪೈಸಿನ ತಾಪತ್ರಯ  ಹೇಳಿಯೆಲ್ಲ  ಹೇಳುವಾಗ ’ತೆರೆ ಮುಗುದು ಸಮುದ್ರ ಮೀವಲಿಲ್ಲೆ’  ಹೇಳುಗು. ಸತ್ಕಾರ್ಯಕ್ಕೆ, ಅನಿವಾರ್ಯ ಕೆಲಸಕ್ಕೆಲ್ಲ ಹೆರಡುವಾಗ ಸಮಯದ ತೆರಕ್ಕು,ಅಡ್ಡಿ, ಆತಂಕಂಗೊ ಬಂದರೂ ಅದರ ನಿಭಾಯಿಸಿಗೊಂಡು ಹೋಪಲಿಪ್ಪ ;    ಒಪ್ಪ ಮಾತಿದು.
ಈಗೀಗಾಣ ಸಮಯದ ತೆರಕ್ಕಿನ  ನೋಡುವಾಗ; ಈ ನುಡಿಗಟ್ಟು ನೆಂಪಾವುತ್ತಿದ. ಆರತ್ರೆ ಮಾತಾಡೀರೂ  ಸಮಯ ಸಾಕಾಗದ್ದ, ಪರದಾಟ!.ಮನೆ ಹೆಮ್ಮಕ್ಕಳತ್ರೆ ಮಾತಾಡ್ಸಿರೆ ಮನೆ ಕೆಲಸಕ್ಕೆ ಸಮಯ ಸಾಕಾವುತ್ತಿಲ್ಲೆ, ಗೆಂಡುಮಕ್ಕಳತ್ರೆ ಕೇಳೀರೆ, ಕೃಷಿ, ಬೇರೆಲ್ಲ  ವಯಿವಾಟುಗೊಕ್ಕೆ  ಏನೊಂದೂ ಸಮಯ ಇಲ್ಲದ್ದ ಕೊರತ್ತೆ. ಉದ್ಯೋಗಿಗಳತ್ರೆ ಕೇಳುವದೇ ಬೇಡ.  ಕಸ್ತಲಪ್ಪಗ ಬಂದು, ಹೆಂಡತ್ತಿ ಮಕ್ಕಳ ಮೋರೆ ನೋಡ್ಳೇ ಪುರುಸೊತ್ತಿಲ್ಲದ್ದ ಪರಿಸ್ಥಿತಿ. ಮತ್ತೆ…ಉದೋಗಸ್ಥೆ ಅಕ್ಕ-ತಂಗೆಕ್ಕೊ..?.ಅವಕ್ಕೆ ಒಪ್ಪತ್ತಿನೂಟಕ್ಕೂಸಮಯ ಹೊಂದುಸುತ್ತದೇ ಒದ್ದಾಟ! ಶಾಲಗೆ ಹೋವುತ್ತ ಮಕ್ಕೊಗೆ…? ಅವಕ್ಕೂ ಅಷ್ಟೆ ಆಡಿ ಬೆಳವ ಸಮೆಲಿ  ಆಡ್ಳೆ ಸಮಯ ಇಲ್ಲೆ! ಅಬ್ಬೆ-ಅಪ್ಪನತ್ರೆ ಕೊಂಗಾಟ ಮಾಡ್ಸಿಗೊಂಬಲೆ ಅವು ಕೈಗೆ ಸಿಕ್ಕುತ್ತವಿಲ್ಲೆ!. ಆದರೆ…, ಎಷ್ಟೇ ಗಡಿಬಿಡಿ ಇದ್ದರೂ ಫೋನು ಬಂದರೆ ರಿಸೀವ್ ಮಾಡ್ತು ನಾವು. ಬಸ್ಸಿನ ಹೊತ್ತಿಂಗೆ ಹೆರಟೊಳ್ತು.
ಅಲ್ಲಾ..ಈ ಸಮಯ ಆರ ಕೈಗೂ ಸಿಕ್ಕದ್ದೆ ಎಲ್ಲಿಗೆ ತಪ್ಪುಸೆಂಡು ಹೋವುತ್ತೂಳಿ?
ಅದೇನೇ ಇರಳಿ;  ನಾವು ತೆರೆ ಎಡಕ್ಕಿಲ್ಲಿಯೇ  ಮುಂಗಿ ಏಳುವ ಅಭ್ಯಾಸ ಬೆಳೆಶಿಗೊಳೆಕ್ಕೂಳಿ ಈ ನುಡಿಗಟ್ಟಿನ ಉಪದೇಶ. ಎಂತ ಹೇಳ್ತಿ?

7 thoughts on “’ತೆರೆ ಮುಗುದು ಸಮುದ್ರ ಮೀವಲಿಲ್ಲೆ’ (ಹವ್ಯಕ ನುಡಿಗಟ್ಟು–5)

  1. ಹರೇರಾಮ, ಗೋಪಾಲ,ತೆಕ್ಕುಂಜೆ ಮಾವ, ನರಸಿಂಹಣ್ಣ, ಲಕ್ಷ್ಮಿ, ಎಲ್ಲರಿಂಗೂ ಧನ್ಯವಾದ. ಲಕ್ಷ್ಮೀ , ನಿನ್ನ ಅರ್ಥೈಕೆಯೂ ಎಷ್ಟು ಸರಿ ಅಲ್ಲೋ!!.ಅವರವರ ಭಾವನಗೆ ತಕ್ಕಂತೆ ಹೇಳಿಇಪ್ಪದೆಷ್ಟು ಪ್ರಸ್ತುತಃ . ನಮ್ಮ ಸನಾತನಂದ ಹರುದು ಬಂದ ಹೇಳಿಕಗೊ(ನುಡಿಗಟ್ಟು) ಸಾವಿರಾರು ಜೆನಕ್ಕೆ ಸತ್ಪರಿಣಾಮ ಮಾಡೆಕ್ಕು ಅಲ್ದಾ.

  2. ಒಹ್ ಭಾರಿ ಲಾಯ್ಕ ನುಡಿಗಟ್ಟು ವಿಜಯಕ್ಕ ,ಆನು ಯಾವಾಗಲು ಒಂದು ಮಾತು ಹೇಳುವ ಕ್ರಮ ಇದ್ದು ಎನ್ನ ಮಕ್ಕೊಗೆ( ಆನುದೇ ಅದರ ಅನುಸರಿಸುತ್ತೇ ಕೂಡ ),ನಾವು ನಮ್ಮ ಎಲ್ಲ ಆಸೆ ಆಕಾಂಕ್ಷೆಗಳ ಮುಗಿಸಿ ನಂತರ ಆರಿಂಗಾದರೂ ಸಹಾಯ ಮಾಡುವ ಹೇಳಿ ಭಾವಿಸಿರೆ ಜೀವನ ಇಡೀ ಒಂದು ತುಂಡು ನಯಾ ಪೈಸೆ ಕೂಡ ಸಹಾಯ ಮಾಡುಲೆ ಎಡಿಯ ನಮಗೆ ದೇವರು ಕೊಟ್ಟದರಲ್ಲಿಯೇ ರಜ್ಜ ಬೇರೆಯೋರಿನ್ಗೂ ಕೊಡಕ್ಕು ಹೇಳಿ ಈ ಮಾತಿಂಗೆ ಒಂದು ಚಂದದ ನುಡಿಗಟ್ಟು ಚಂದದ್ದು ಎನಗೆ ಸಿಕ್ಕಿತ್ತು ಧನ್ಯವಾದಂಗ ವಿಜಯಕ್ಕ

    1. “ಒಂದು ತುಂಡು ನಯಾ ಪೈಸೆ” ಇದು ಕೂಡಾ ಒಂದು ನುಡಿಕಟ್ಟು ಆತೋ ಹೇಳಿ … 🙂

      1. ಅಪ್ಪಲ್ಲದ ?ಹೀಂಗೆ ನಾವು ದಿನ ನಿತ್ಯದ ಮಾತಿಲಿ ಗೊಂತೆ ಇಲ್ಲದ್ದೆ ಎಷ್ಟೋ ಬಳಕೆ ಮಾಡುತ್ತು ,ಒಂದು ತುಂಡು ನಯಾ ಪೈಸೆ ಹೇಳುದರ ಎನ್ನ ಅಜ್ಜ ಹೆಚ್ಚಾಗಿ ಬಳಕೆ ಮಾಡಿಕೊಂಡು ಇತ್ತಿದವು ,ಗುರುತಿಸಿದ್ದಕ್ಕೆ ಧನ್ಯವಾದಂಗ ಶ್ಯಾಮಣ್ಣ

  3. ಅಪ್ಪು.ತೆರೆ ಎಡಕ್ಕಿಲ್ಲಿಯೇ ಮುಂಗಿ ಏಳುವ ಅಭ್ಯಾಸ ಮಾಡೆಕ್ಕು.ಸಮಯದ ಹೊಂದಾಣಿಕೆ ಮುಖ್ಯ.

  4. ಅಪ್ಪು, ತುಂಬ ಅರ್ಥಪೂರ್ಣ ನುಡಿಗಟ್ಟು

  5. ಒಳ್ಳೆ ನುಡಿಗಟ್ಟು . ತುಂಬಾ ಅರ್ಥ ಇದ್ದು ಇದಕ್ಕೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×