Oppanna.com

ಕೆರೆ ಕಟ್ಟೇಲೊಂದು ಬೈಸಾರಿ..(ಕೊಡಗಿನ ಗೌರಮ್ಮ ಕಥಾಸ್ಪರ್ಧೆಯ 2016ನೇ ಸಾಲಿನ ದ್ವಿತೀಯ ಬಹುಮಾನ ಪಡೆದ ಕತೆ)

ಬರದೋರು :   ವಿಜಯತ್ತೆ    on   19/12/2016    8 ಒಪ್ಪಂಗೊ

ಕೊಡಗಿನ ಗೌರಮ್ಮ ದತ್ತಿನಿಧಿ ಹಾಗೂ ಹವ್ಯಕ ಮಹಿಳಾ ಮಂಡಲ ಸಹಯೋಗಲ್ಲಿ ನಡೆದ ಕಥಾಸ್ಪರ್ಧೆಯ 2016ನೇ ಸಾಲಿನ ದ್ವಿತೀಯ ಬಹುಮಾನ ಶ್ರೀಮತಿ ಅಕ್ಷತಾ ಜಿ. ಭಟ್ ಇವರ ಕಥೆ ಗೆದ್ದುಗೊಂಡಿದು.  

ಕೆರೆ ಕಟ್ಟೇಲೊಂದು ಬೈಸಾರಿ..ಅಕ್ಷತಾ ಜಿ. ಭಟ್

 ಅಬ್ಬಾ ಒಂದರಿಯಣ ಕೆಲಸ ಎಲ್ಲಾ ಮುಗುದತು. ಇನ್ನು ರಜ ನೆಮ್ಮದಿ. ಅಳುಗೊ ಬೇರೆ ಇಂದು ಇಲ್ಲೆ. ಮಕ್ಕೊ ರಜೆ ಹೇಳಿ ಅಜ್ಜನ ಮನೆಗೆ ಓಡಿದ್ದವು. ಇವುದೆ ಅಡಕ್ಕೆ ತೆಂಗಿನಕಾಯಿ ರೇಟು ಕೇಳಿಕ್ಕಿ ಬತ್ತೆ ಹೇಳಿ ಉಂಡಿಕ್ಕಿ ಪೇಟೆಗೆ ಹೋದರೆ ಮೀಟಿಂಗು ಮುಗಿಸಿ ಬಪ್ಪಲೆ ಬೈಸಾರಿ ಗಂಟೆ ಆರು ಕಳೆಯೆಕ್ಕು. ಎಂಥಗೊ ಇಂದು ಉದಿಯಪ್ಪಗಂದ ಅಂಬತ್ತೆಯ ಹತ್ತರೆ ಮಾತಾಡೆಕ್ಕು ಹೇಳಿ ಆವುತ್ತಾ ಇದ್ದು. ಮೊದಲಾದರೆ ಅಂಬತ್ತೆ ಮಧ್ಯಾಹ್ನದ ಹೊತ್ತಿಂಗೆ ಮನೆಗೆ ಬಕ್ಕು. ಆದರೆ ಕೇಶು ಮಾವ ಹೋದ ಮೇಲೆ ಅಂಬತ್ತೆಯ ಮಾತುದೆ ಕಡಮ್ಮೆ ಆಯ್ದು. ಮನೆ ಬಿಟ್ಟು ಹೆರ ಬಪ್ಪದೇ ಕಡಮ್ಮೆ. ಅಲ್ಯಾಣ ಆಳು ಶಂಕ್ರನಲ್ಲಿ ಕೇಳಿರೆ  ಗೊತ್ತುಜ್ಜಿ ಅಕ್ಕೇ..ಆರಾಂಡ್ ಅರೆನ ಬೇಲೆ ಆಂಡ್ ಹೇಳಿ ಹೇಳ್ತು. ವಾರದ ಕೆಳ ಕೇಶು ಮಾವನ ವರ್ಷಾಂತಕ್ಕೆ ಅಂಬತ್ತೆಯ ನೋಡಿದ ಮೇಲೆ ಮತ್ತೆ ಸುದ್ದಿಯೂ ಇಲ್ಲೆ. ಇಂದು ಕೆಲಸ ಹೇಂಗೂ ಮುಗುದತ್ತು. ಒಂದರಿ ಅಂಬತ್ತೆಯ ಮಾತಾಡ್ಸಿ ಬರೆಕ್ಕು ಹೇಳಿ ಹೆರಡುವಾಗ ಹೇಂಗೂ ತೋಟಲ್ಲಿ ಆಗಿ ಹೋಪದು. ಬಪ್ಪಗ ಬಾಳೆಗೊನೆ ಇದ್ದರೆ ಕಡಕ್ಕೊಂಬ ಹೇಳಿ ಬಾಗಿಲಡ್ಡ ಮಾಡಿ ಕೊಟ್ಟಗೇಲಿ ಇದ್ದ ಕತ್ತಿ ತೆಕ್ಕೊಂಡು ಮನೆಯ ಎದುರಣ ತೋಟಕ್ಕೆ ಇಳುದೆ. ತೋಟದ ಈ ಹೊಡೇಲಿ ಎಂಗಳ ಮನೆ ಆದರೆ ಆ ಹೊಡೇಲಿ ಅಂಬತ್ತೆಯ ಮನೆ. ತೋಟಕ್ಕಿಳುದು ಅತ್ತೆ ಇತ್ತೆ ನೋಡಿ ಮುಂದೆ ಹೋಪಗ ಕೆರೆಯ ಹತ್ತರೆ ಆರೋ ಕೂದುಗೊಂಡ ಹಾಂಗೆ ಕಂಡತ್ತು.ಮೊದಲಾದರೆ ಅಂಬತ್ತೆಯು ಆನುದೇ ಬೈಸಾರಿ ಪಟ್ಟಾಂಗ ಹೊಡವ ಜಾಗೆ ಆಗಿತ್ತದು. ಆದರೆ ಅಂಬತ್ತೆ ಹೆರ ಬಪ್ಪದು ಬಿಟ್ಟ ಮತ್ತೆ ಕೆರೆ ಕಟ್ಟೆಯು ಖಾಲಿ ಖಾಲಿ. ತೋಟಕ್ಕೆ ಇಳುದರುದೇ ಒಂದರಿ ನೋಡಿಕ್ಕಿ ಹೋಪದು ಅಷ್ಟೆ. ಕೆರೆ ಹೇಳಿರೆ ಅದು ತುಂಬಾ ದೊಡ್ಡ ಇದ್ದತ್ತು. ಹಾಂಗಾಗಿ ಅದಕ್ಕೆ ಸುತ್ತೂದೇ ಎನ್ನ ಮಾವಂದೆ ಕೇಶು ಮಾವಂದೆ ಸೇರಿ ಲಾಯ್ಕದ ಕಟ್ಟೆ ಕಟ್ಟಿತ್ತಿದ್ದವು. ವೈಶಾಖಲ್ಲಿ ಎಂಗಳ ಎರಡು ತೋಟಕ್ಕುದೇ ನೀರಾವರಿ ಅದರದ್ದೇ ಆಗಿದ್ದತು. ದೂರಲ್ಲಿ ಕಾಂಬಗ ಅಂಬತ್ತೆ ಕೂದುಗೊಂಡ ಹಾಂಗೆ ಕಂಡರುದೇ  ಇಲ್ಲೆ ಇಲ್ಲೆ, ಅಂಬತ್ತೆ ಆಗಿರ ಎನ್ನ ಭ್ರಮೆ ಹೇಳಿಗೊಂಡು ಕಣ್ಣಿಂಗೆ ಕಂಡ ಬಾಳೆಗೊನೆ ಕಡಿವಗ  ಏ ಇದ ಶಾರದೆ ಎಂಥ ನೀನು ಎನ್ನ ನೋಡಿಕ್ಕಿಯುದೇ ಬಾಳೆಗೊನೆ ಕಡಿವಲೆ ಹೆರಟದು? ಎನಗೆ ಪ್ರಾಯ ಆತು ಹೇಳಿ ನಿನಗುದೇ ಅಷ್ಟು ಸಸಾರವಾ? ನಿನ್ನ ಮಕ್ಕೊ ಅಜ್ಜನ ಮನೆಗೆ ಹೋಯ್ದವು ಹೇಳಿ ಶಂಕ್ರ ಹೇಳಿತ್ತು. ಮತ್ತೇಂತ ಅರ್ಜೆಂಟು? ಎಷ್ಟು ದಿನ ಆತು ನಮ್ಮ ಪಟ್ಟಾಂಗ ಇಲ್ಲಿ ಆಗದ್ದೆ, ಇದು ಆಖೇರಿಯಣ ಪಟ್ಟಾಂಗ ಮಾರಾಯ್ತಿ ಬಾ ಕೂರು ರಜ ಹೊತ್ತು ಅಂಬತ್ತೆಯ ಮಾತು ಕೆಮಿಗೆ ಬಿದ್ದತು. ಅರೇ ಅಪ್ಪನ್ನೇ ಅಂಬತ್ತೆಯೇ ಕೂದ್ದದು ಅಲ್ಲಿ. ಎಷ್ಟು ದಿನ ಆತು ಅಂಬತ್ತೆಯ ಇಲ್ಲಿ ನೋಡದ್ದೇ. ಮಾತೇ ಕಡಮ್ಮೆ ಮಾಡಿತ್ತಿದ್ದ ಅಂಬತ್ತೆ ಇಂದು ದಿನಿಗೇಳಿ ಮಾತಾಡ್ತವು ಹೇಳಿರೆ ಅಬ್ಬಾ ಹೇಳಿ ಗ್ರೇಶಿಗೊಂಡು  ಇಲ್ಲೆ ಅಂಬತ್ತೆ, ನಿಂಗಳ ಇಲ್ಲಿ ಕಾಣದ್ದೆ ತುಂಬಾ ದಿನ ಆತಲ್ದಾ. ಹಾಂಗೆ ನಿಂಗ ಅಪ್ಪಾ ಅಲ್ಲದಾ ಹೇಳಿ ಸಂಶಯ ಬಂತು ಅಷ್ಟೇ, ನಿಂಗಳ ಇಂದು ಇಲ್ಲಿ ಕಂಡು ಖುಷಿ ಆತು ನೋಡಿ ಎನಗೆ ಹೇಳಿಗೊಂಡು ಕೈಲಿದ್ದ ಬಾಳೆಗೊನೆ ಅಲ್ಲೇ ಮಡುಗಿಕ್ಕಿ, ಅಂಬತ್ತೆಯ ಹತ್ತರೆ ಬಂದು ಕೂದೆ. ಅದು ಅಪ್ಪು ನೀನು ಹೇಳುವುದು.ಪಾಕ ಸಮಯ ಆತಲ್ದ ಹೀಂಗೆ ಮಾತಾಡಿ. ಎಂತಗೋ ಬೇಜಾರಾತು ಮನೇಲಿ.ನಿನ್ನ ಮನೆಗೆ ಬಪ್ಪಲೆ ಹೇಳಿ ಹೆರಟೆ. ಅಷ್ಟಪ್ಪಗ ನೀನಲ್ಲಿ ಮೆಟ್ಟು ಇಳಿವದು ಕಂಡತ್ತು. ಹಾಂಗೆ ಇಲ್ಲಿಯೇ ಕೂದೆ  ಹೇಳಿದ ಅಂಬತ್ತೆಯ ಮೋರೆ ಒಂದರಿ ನೋಡಿದೆ ಆನು. ಮೋರೆಲಿ ಎಂಥದ್ದೋ ವಿಚಿತ್ರ ಬದಲಾವಣೆ ಕಂಡತ್ತು ಎನಗೆ. ಮೊನ್ನೆ ವರ್ಷಾಂತಕ್ಕೆ ಹೋಗಿಪ್ಪಗ ಹೀಂಗೆ ಇತ್ತಿದ್ದವಿಲ್ಲೆ. ಯಾವುದೋ ಆವ್ಯಕ್ತ ಕಳೆ ಕಾಣ್ತ ಇದ್ದು ಅಂಬತ್ತೇಲಿ. ಹೇಳಿ ಗ್ರೇಶಿಗೊಂಡು ಮತ್ತೆ ಕೇಳಿದೆ ಎಂಥಾ ಅಂಬತ್ತೆ ಮಕ್ಕೊ ಆರುದೇ ವರ್ಷಾಂತ ಕಳಿಸಿಕ್ಕಿ ಹೋದವು ಫೋನು ಮಾಡಿದ್ದವಿಲ್ಲೆಯಾ? ಹೇಂಗಿದ್ದವಡ್ಡ ಎಲ್ಲರುದೇ? ಅವು ಇಪ್ಪಗ ಮನೆ ಇಡೀ ಗೌಜಿ. ಹೋದರೆ ಮತ್ತೆ ಬೇಜಾರು ಅಲ್ಲದಾ? ಹೇಳಿ ಕೇಳಿದೆ. ಅಂಬತ್ತೆ ಒಂದಾರಿ ಎನ್ನ ಮೋರೆ ಅಂದೆಂಥದ್ದೋ ಭಾವನೇಲಿ ನೋಡಿ ಬೇಜಾರು! ಹಾಂಗಿಪ್ಪ ಮಾತು ಅವು ಹೋಗಿಯಪ್ಪಗಳೇ ಸುರುವಾದ್ದು ಹೆಚ್ಚಪ್ಪಲೂ ಇಲ್ಲೇ ಕಡಮ್ಮೆ ಅಪ್ಪಲುದೇ ಇಲ್ಲೆ. ಮಕ್ಕೊ ! ಅವು ರೆಕ್ಕೆ ಬಲಿತ ಹಕ್ಕಿಗೊ ಶಾರದೆ, ಬೆಳವನ್ನಾರ ಅಷ್ಟೆ ನಮ್ಮ ಕೈಲಿ, ಅಮೇಲೆ ಎಲ್ಲವುದೇ ಗೂಡು ಬಿಟ್ಟ ಹಕ್ಕಿಗೋ ಅವಕ್ಕೆ ಗೂಡುದೇ ಬೇಡ,ಎಂಥದ್ದೂ ಬೇಡ,ಅವರವರದ್ದು ಅವಕ್ಕವಕ್ಕೆ ಹೇಳಿದವು. ಎಂಥಾತು ಅಂಬತ್ತೆ ಬಿಡಿಸಿ ಹೇಳಿ,ನಿಂಗ ಹೀಂಗೆ ಹೇಳಿರೆ ಈ ಬಡ್ಡು ತಲೆಗೆ ಹೊಳವದು ಕಷ್ಟ ಮತ್ತೆ ಕೇಳಿದೆ ಅನು ಅಂಬತ್ತೆಯಲ್ಲಿ. ಹ್ಞಾ ! ಅದರನ್ನೆ ನಿನ್ನ ಹತ್ತರೆ ಹೇಳಿ ಮನಸ್ಸು ಸಮಾಧಾನ ಮಾಡಿಗೊಳ್ತೆ ಹೇಳಿ ಬಂದೆ ಶಾರದೆ.ಈಗೀಗ ಎನಗೆ ಏನೂ ಎಡಿತ್ತಿಲ್ಲೆ ಈ ತೋಟ,ಮನೆ ಹೇಳಿ ನಿಭಾಯಿಸುವದು ಕಷ್ಟ ಆವುತ್ತಾ ಇದ್ದು. ಮೊದಲಾದರೆ ಎಡಿಯದ್ದರುದೇ ಅವು ಇತ್ತಿದ್ದವು.ಅವು ಹೋದ ಮೇಲೆ ಒಬ್ಬಂಗೇ ಮನೇಲಿ ಹೊತ್ತು ಕಳವಲುದೇ ಎಡಿತ್ತಿಲ್ಲೆ. ಶಂಕ್ರ ಇದ್ದು ಆದರೆ ಎಷ್ಟಾದರೂ ಮನೆಯವು ಇದ್ದ ಹಾಂಗೆ ಅವುತ್ತಾ ನೀನೇ ಹೇಳು ಎಂದ ಅಂಬತ್ತೇಲಿ  ಮುಂದೆ ಎಂಥಾತು ? ಅನಂತ,ಸುನೀಲ,ಅನು ಎಲ್ಲಾ ಬಂದಿಪ್ಪಗ ಎಂಥಾರೂ ಹೇಳಿದವಾ ? ಅರಾದರೂ ನಿಲ್ಲುತ್ತವಾ ಇಲ್ಲಿ? ಹೇಳಿ ಕೇಳಿದೆ. ಅದೇ ಮಾರಾಯ್ತಿ ಇದೇ ವಿಷಯ ಅವೆಲ್ಲ ಬಂದಿಪ್ಪಗ ಹೇಳಿದೆ ಅವರ ಹತ್ತರೆ. ಅನಂತ ಹೇಂಗುದೇ ಬೊಂಬಾಯಿಲಿ ಕಂಪೆನಿ ಕೆಲಸ ಬಿಟ್ಟು ಬಪ್ಪದು ಕಷ್ಟ ಹೇಳಿ ಹೇಳಿದ. ಇನ್ನು ಅನು ಕೊಟ್ಟ ಕೂಸು, ಎಂಥದ್ದೂ ಮಾಡ್ತ ಹಾಂಗೆ ಇಲ್ಲೆ. ಇದರ ಮಧ್ಯೆ ಸುನೀಲ ಮಾಡ್ತ ಇಪ್ಪ ಹೋಟೆಲ್ ಉದ್ದಿಮೆ ನಷ್ಟಲ್ಲಿ ನಡೆತ್ತ ಇದ್ದು ಹೇಳಿ ಅವನ ಹೆಂಡತಿ ಹೇಳಿತ್ತು ಹೇಳಿ ಸುನೀಲನ ಹತ್ತರೆ ಕೇಳಿದೆ. ಕುಂಞ ಮಾಣಿ ನೀನು ಇಲ್ಲಿಯೇ ಕೂರು. ನಿನ್ನ ಹೋಟೆಲಿಂದ ಜಾಸ್ತಿ ಉತ್ಪತ್ತಿ ಇಲ್ಲಿ ಅವುತ್ತು ಹೇಳಿ. ಅಪ್ಪಾ ಅದು ಒಳ್ಳೇದೆ ಅಂಬತ್ತೆ. ಎಲ್ಲೆಲ್ಲೋ ಹೋಗಿ ನಷ್ಟಲ್ಲಿ ಕೂಪದಕ್ಕೆ ಇಲ್ಲೇ ತೋಟ ನೋಡಿಗೊಂಡು ಇರಲಿ ಹೇಳಿ ಅನು ಮತ್ತೆ ಹೇಳಿದೆ. ನೋಡು ಆನು ಅಷ್ಟೆ ಹೇಳಿದ್ದು ಅವನ ಮೋರೆ ಕೆಂಪು ಕೆಂಪಾತು. ಎಲ್ಲರೂ ಹೆರ ಇದ್ದರೆ ಆನು ಮಾತ್ರ ತೋಟ ಮನೆ ಹೇಳಿ ಇಲ್ಲೇ ಇರೆಕ್ಕಾ ಅಬ್ಬೆ ?. ಎಂಥ ಇದ್ದು ಈ ಹಳ್ಳಿಲಿ ? ಅದೆಂಥದ್ದೂ ಬೇಡ.ಅಣ್ಣ ಮನೇಲಿ ನಿಲ್ಲುತ್ತಯಿಲ್ಲೆ ಅಣ್ಣಂಗು ಎಡಿತ್ತಿಲ್ಲೆ ಹೇಳಿ ಆದರೆ ಈ ಜಾಗೆ ಎಂತಗೇ? ಮಾರ‍್ವದೇ ಒಳ್ಳೆದಲ್ಲದ? ಬಂದ ಪೈಸೆ ಪಾಲು ಮಾಡಿ ಮೂರು ಜನವೂ ಹಂಚಿರೆ ಎನ್ನ ಬಿಸಿನೆಸ್ಸಿಂಗೂ ಉಪಕಾರ ಆವುತ್ತು. ನೀನೆಂತ ಹೇಳ್ತೆ ಅಣ್ಣ? ಹೇಳಿ ಅನಂತನಲ್ಲಿ ಕೇಳಿರೆ ಅವನು ಅದೇ ಸರಿ ಹೇಳ್ದ. ಮರುದಿನವೇ ಆ ಬ್ರೋಕರ್ ಶಾಂತಪ್ಪನಲ್ಲಿ ಹೇಳಿಕ್ಕಿ ಊರು ಬಿಟ್ಟವು. ನೀನೆ ಹೇಳು ಶಾರದೆ ಈ ಮನೆ ತೋಟ ಎಲ್ಲಾ ಬಿಟ್ಟು ಎನಗೆ ಇಪ್ಪಲೆಡಿಗಾ? ಆನು ಮದುವೆ ಆಗಿ ಕಾಲಿಟ್ಟ ಮನೆ ಅಲ್ದ ಇದು. ಈ ಮೂರು ಮಕ್ಕೊ ಇದೇ ತೋಟ ಗುಡ್ಡೇಲಿ ಆಡಿ ಬೆಳೆದವಲ್ದಾ? ಎಲ್ಲರೂ ಬಾಳಿ ಬೆಳೆದ ತುಂಬಿದ ಮನೆ ಆಗಿದ್ದತು ಒಂದು ಕಾಲಲ್ಲಿ. ಅಂಥ ಮನೆ,ತೋಟ ಇನ್ನಾರಿಂಗೋ ಪೈಸೆಗೆ ಕೊಟ್ಟು ಆ ಕಾಂಕ್ರೀಟು ಕಾಡಿಗೆ ಹೋಗಿ ಕೂರೆಕ್ಕಾ? ನಿನ್ನೆ ಜನ ಕರಕ್ಕೊಂಡು ಬೈಂದು ಬ್ರೋಕರ್, ಎಲ್ಲಾ ವ್ಯವಹಾರ ಮುಗೀತ್ತು ಹೇಳಿ ಕಾಣ್ತು,ವ್ಯವಹಾರ ಮುಗಿಯಲಿ ಆನುದೆ ನಿನ್ನ ಕೇಶು ಮಾವನ ಹಾದಿಲಿ ನಡೆತ್ತೆ ಮತ್ತೆ  ಎಂಥ ಬೇಕಾರೂ ಮಾಡಲಿ. ಹೇಳಿದ ಹಾಂಗೆ ನೀನು ಮೂರ್ತಿ ಬಂದ ಮತ್ತೆ ಮೂರು ಸಂಧಿ ಅಪ್ಪಗ ಮನೇಗೆ ಬಾ, ನಾಳೆ ಉದಿಯಪ್ಪಗ ಹೋದರೆ ಆತು, ಉದಿಯಪ್ಪಗ ಅನಂತ,ಸುನೀಲ,ಅನು ಎಲ್ಲರುದೇ ಬಕ್ಕು.ಅಖೇರಿಗೆ ಒಂದು ಇರುಳಿಂಗೆ ಬಾ ಶಾರದೆ ಆನು ಈಗ ಹೋವುತ್ತೆ ಮನೆಗೆ, ಗಂಟೆ ಐದಾತು ಶಂಕ್ರಂಗೆ ಚಾ ಮಾಡಿ ಕೊಡ್ತೆ. ಬಾ ಮರೆಯೆಡ ಹೇಳಿ ಯಾರಿಗೆ ಯಾರುಂಟು….. ಹೇಳಿ ಪದ್ಯ ಹೇಳಿಗೊಂಡು ಎದ್ದು ಹೋದ ಅಂಬತ್ತೆಯನ್ನೆ ನೋಡಿದೆ ಆನು ಒಂದಾರಿ. ಇಲ್ಲೆ ಅಂಬತ್ತೇಲಿ ಏನೋ ಬದಲಾವಣೆ ಆಯಿದು, ಆನು ಮೊದಲು ನೋಡಿದ ಅಂಬತ್ತೆ ಅಲ್ಲ ಇವು, ಎಂಥದೋ ಅಯಿದು ನೋಡುವಾ ಹೇಂಗೂ ಬಪ್ಪಲೆ ಹೇಳಿದ್ದವನ್ನೇ, ಹೋಪ ಅವು ಬಂದ ಮತ್ತೆ ಹೇಳಿ ಕಡುದ ಬಾಳೆಗೊನೆ ಕೈಲಿ ಹಿಡಕ್ಕೊಂಡು ಮನೆಗೆ ನಡದರುದೇ ಮನಸ್ಸಿಲಿ ಅಂಬತ್ತೆಯೇ ಕೂದಿತ್ತಿದ್ದವು.

  ಅಂಬತ್ತೆ …

 ಎನ್ನ ಮದುವೆ ಆಗಿ ಬಪ್ಪಗ ಅಂಬತ್ತೆಗೆ ನಲುವತ್ತು ವರ್ಷ ಮತ್ತು ಆಗಿಕ್ಕಷ್ಟೆ. ಎಂಗೊಗುದೇ ಅಂಬತ್ತೆಯ ಮನೆಯವಕ್ಕುದೆ ರಕ್ತ ಸಂಬಂಧ ಇಲ್ಲದ್ದರುದೇ ಭಾವನಾತ್ಮಕ ಸಂಬಂಧ ಗಟ್ಟಿಯಾಗಿದ್ದತ್ತು. ಎನ್ನ ಯಾಜಮಾನ್ರು ಒಬ್ಬನೇ ಮಾಣಿ ಅಲ್ಲದ್ದೇ ಎನ್ನ ಅತ್ತೆ ಮಾವ ಹೋದ ಮತ್ತೆ ಅಂಬತ್ತೆಯ ಮನೆಯ ಊಟದ ಋಣವೇ ಎನಗಿದ್ದು ಹೇಳಿ ಆಗಾಗ ಹೇಳಿಗೊಂಡು ಇರ್ತವು ಅವು. ಎನ್ನ ಮದುವೆ ಆಗಿ ಬಂದಪ್ಪಗ ಹೆಮ್ಮಕ್ಕ ಇಲ್ಲದ್ದ ಮನೇಲಿ ಎದುರುಗೊಂಡವು ಈ ಅಂಬತ್ತೆಯೇ. ಅಂಬಗ ಅಂಬತ್ತೆಯ ಮಕ್ಕೊ ಮೂರು ಜನವುದೇ ಕಾಲೇಜಿಗೆ ಹೋಯ್ಕೊಂಡು ಎನ್ನ ಸಮಾನ ಪ್ರಾಯದವು ಆದ ಕಾರಣ ಎನ್ನ ಉದಾಸನವೂ ಕಳಕ್ಕೊಂಡು ಇದ್ದತು. ಮಕ್ಕೊ ಹುಟ್ಟಿಯಪ್ಪಗ ಬಾಣಂತನ ಮುಗಿಶಿ ಬಂದ ಎನ್ನ ಅವರ ಮಗಳ ಹಾಂಗೆ ನೋಡಿತ್ತಿದ್ದವು ಅಂಬತ್ತೆ. ಕಾಂಬಲೆ ಗಿಡ್ಡ ದೇಹ, ಬಾಡಂಗಟ್ಟೆ ಬದನೆಯ ಹಾಂಗೆ ಕಂಡರುದೇ ಮನಸ್ಸು ಮಾತ್ರ ಶುದ್ಧ ಹಸುವಿನ ಹಾಲು ಅಂಬತ್ತೆಯದು. ದೂರದ ಘಟ್ಟದ ಮೇಲಣ ಹಳ್ಳಿ ಅಂಬತ್ತೆಯ ಹುಟ್ಟೂರು. ಹುಟ್ಟಿಯಪ್ಪಗಳೇ ಅಮ್ಮನ ಕಳಕ್ಕೊಂಡು ಚಿಕ್ಕಮ್ಮನೊಟ್ಟಿಂಗೆ ಹೆಣಗಾಡಿ ಸೋತರುದೇ ನೆಂಟಸ್ತಿಕೆ ಬಾರದ್ದೆ ಅಖೇರಿಗೆ ಪ್ರಾಯಲ್ಲಿ ಇಪ್ಪತ್ತು ವರ್ಷ ವ್ಯತ್ಯಾಸವಿದ್ದ ವೈದಿಕಕ್ಕೆ ಹೋಪ ಕೇಶು ಮಾವನ ಮಡದಿಯಾಗಿ ಘಟ್ಟ ಇಳಿದವು ಅಂಬತ್ತೆ. ಮದುವೆ ಆದ ಅಂಬತ್ತೆಯ ಸ್ಥಿತಿ ಬಾಣಲೆಂದ ಬೆಂಕಿಗೆ ಬಿದ್ದ ಹಾಂಗೆ ಆಗಿತ್ತು. ಅಲ್ಲಿ ಚಿಕ್ಕಮ್ಮನ ಕಾಟ ಆದರೆ ಇಲ್ಲಿ ತುಂಬಿದ ಮನೆ ಗಯ್ಯಾಳಿ ಅತ್ತೆ,ನಾದಿನಿ,ಅತ್ತಿಗೆಕ್ಕಳ ಹಿಂಸೇಲಿ ಬೆಂದರುದೆ ಬಾಯಿ ಬಿಡದ್ದೇ ಸಂಸಾರ ಮಾಡಿಕೊಂಡು ಇತ್ತಿದ್ದವು. ಮೊಗ್ಗಾಗಿದ್ದ ಅಂಬತ್ತೆ ವರ್ಷ ಕಳೆವಾಗ ಹೂವಾಗಿ ಅರಳಿತ್ತು. ನಂತ್ರ ಅನಂತ,ಸುನೀಲ,ಅನುವಿನ ಆಗಮನ, ನಾದಿನಿ ಮೈದುನಂದಿರ ಮದುವೆ,ಸಂಸಾರ,ಪಾಲು ಒಂದು ಹೊಡೇಲಿ ಆದರೆ ಇನ್ನೊಂದು ಹೊಡೇಲಿ ಸಂಸಾರದ ಹಿರಿಯ ಕೊಂಡಿಗೊ ಮುರುದು ಬಿದ್ದಪ್ಪಗ ದೊಡ್ಡ ಮನೆಯ ಯಜಮಾನ್ತಿ ಆತು ಅಂಬತ್ತೆ. ಮೊದಲಣ ನಾಚಿಕೆ ಎಲ್ಲಾ ಕಡಮ್ಮೆ ಆಗಿ ಯಜಮಾನ್ತಿ ಗತ್ತು ಸುರುವಾಗಿ ಹೋತು ಅಂಬತ್ತೆಗೆ. ಕೇಶು ಮಾವ ವರ್ಷವಿಡೀ ಅನುಪತ್ಯ ಹೇಳಿ ತಿರುಗಿಕೊಂಡು ಇದ್ದರುದೇ ಮನೆ ತೋಟದ ಜವಾಬ್ದಾರಿ ನಿಭಾಯಿಸಿ ಮಕ್ಕಳೆಲ್ಲರನ್ನುದೇ ಒಂದು ಹಂತಕ್ಕೆ ತಂದು ನಿಲ್ಲಿಸಿದ್ದತು ಅಂಬತ್ತೆ. ಅಂಬತ್ತೆಯೇ ತುಂಬಾ ಸರ್ತಿ ಎಂಥದ್ದೂ ವಿಷಯ ಇಲ್ಲದ್ದರೆ ತನ್ನ ಜೀವನದ ಕಥೆಯೇ ಹೇಳಿಕೊಂಡು ಇದ್ದತ್ತು.ಎನ್ನ ಮಕ್ಕೊಗೆ ಈ ಅಂಬತ್ತೆಯ ಜೀವನ ಕಥೆ ಅವರ ಶಾಲೆಯ ಪಾಠಕ್ಕಿಂತ ಹೆಚ್ಚು ಬಾಯಿ ಪಾಠ ಆಯಿದು ಕೇಳಿ ಕೇಳಿ. ಮುಂದೆ ಅಂಬತ್ತೆಯ ದೊಡ್ಡ ಮಾಣಿ ಅನಂತಂಗೆ ಬೊಂಬಾಯಿಲಿ ಯಾವುದೋ ಕಂಪೆನಿ ಕೆಲಸ ಸಿಕ್ಕಿದರೆ, ಸುನೀಲ ಕಲಿವಲೆ ಮಂದಬುದ್ದಿ ಆಗಿತ್ತಿದ್ದರಿಂದ ಪಿಯುಸಿ ಆದಪ್ಪಗಳೇ ಹೋಟೆಲ್ ಮಡುಗುತ್ತೆ ಹೇಳಿ ಪೈಸೆ ತೆಕ್ಕೊಂಡು ಬೆಂಗ್ಳೂರಿಂಗೆ ಹೋಗಿ ಹೋಟ್ಲು ಮಡಗಿ ಅಲ್ಲೇ ಒಂದು ಕೂಸಿನ ಮದುವೆ ಆದ. ಇನ್ನು ಮನೆಯ ಮುದ್ದು ಕೂಸು ಅನುವಿಂಗೆ ಡಿಗ್ರಿಯಪ್ಪಗಳೇ ಪಾಣಿಗ್ರಹಣದ ಜವಾಬ್ದಾರಿ ಮಾಡಿ ಕಳಿಶಿತ್ತಿದ್ದವು.ಎಲ್ಲರೂ ಒಂದು ಹಂತಕ್ಕೆ ಬಂದಪ್ಪಗ ಮನೇಲಿ ಕೇಶು ಮಾವ ಅಂಬತ್ತೆ ಎರಡೇ ಜನ ಕಾಳ-ಬೋಳ ಹೇಳ್ತ ಹಾಂಗೆ ಒಳುದವು. ಮತ್ತೆ ಮತ್ತೆ ಕೇಶು ಮಾವನ ವೈದಿಕ ಕೆಲಸಕ್ಕೆ ಹೋಪದು ನಿಲ್ಲಿಸಿ ಎಲ್ಲಿಯಾದರೂ ಅನುಪತ್ಯಕ್ಕೆ ಊಟಕ್ಕೆ ಮಾತ್ರ ಹೋಯಿಕ್ಕೊಂಡು ಇತ್ತಿದ್ದವು. ಹಾಂಗೆ ಒಂದರಿ ಅನುಪತ್ಯಕ್ಕೆ ಹೋಯಿಕ್ಕಿ ಬಂದು ಮನುಗಿದ ಕೇಶು ಮಾವ ಮತ್ತೆ ಏಳದ್ದೆ ಚಿರನಿದ್ರೆಗೆ ಜಾರಿ ಹೋಗಿಯಪ್ಪಗ ಅಂಬತ್ತೆ ಮತ್ತೆ ಕಂಗಾಲಾತು. ಸೂತಕದ ಛಾಯೆ ಕಳೆದು ಮಕ್ಕೊ ಎಲ್ಲರೂ ಹೆರಟು ನಿಂತವು ಅವರವರ ಪಾಡಿಂಗೆ. ಅಮ್ಮಾ ನೀನೊಬ್ಬನೇ ಹೇಳಿ ಬೇಜಾರು ಮಾಡ್ಯೇಡ ಹತ್ತರೆ ಶಾರದತ್ತೆ,ಮೂರ್ತಿ ಮಾವ ಇದ್ದವಲ್ದ. ಎಂಥಾರೂ ಇದ್ದರೆ ಫೋನು ಮಾಡು ಹೇಳಿ ಹೆರಟ ಮಕ್ಕಳ ನೋಡಿ ಅಂಬತ್ತೆಯ ಕಣ್ಣಿಲಿ ಹನಿ ನೀರು ಮಾತ್ರ ಇಣುಕಿದ್ದತು. ಮತ್ತೆ ಪ್ರತಿ ಮಾಸಿಕಕ್ಕೆ ಬಪ್ಪದು, ಕಳಿಸಿ ಹೋಪದು ಹೀಂಗೆ ಮಕ್ಕೊ ಮಾಡಿಗೊಂಡು ಇದ್ದರುದೇ ಕೇಶು ಮಾವ ಹೋದ ಮತ್ತೆ ಅಂಬತ್ತೇಲಿ ಮೊದಲಣ ಮಾತಿಲ್ಲೆ ನಗುವಿಲ್ಲೆ. ಎಂಥ ಕೇಳಿರುದೇ ಮೌನಿಯಾಗಿದ್ದತ್ತು. ಮೊನ್ನೆ ವರ್ಷಾಂತದ ದಿನ ಮಂತ್ರಾಕ್ಷತೆಗೆ ಅಪ್ಪಗ ಮಾತ್ರ ಎಂಥದ್ದೋ ನೆಂಪಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದವು ಅಂಬತ್ತೆ. ಕೇಶು ಮಾವ ಹೋದ ಮತ್ತೆ ಬದಲಾದ ಅಂಬತ್ತೆ ಹೀಂಗೆ ಮಾತಾಡಿದ್ದೇ ಇಂದು. ಎಂಥದ್ದೇ ಅಗಲಿ ಮತ್ತೆ ಹೋಯೆಕ್ಕು, ಅವು ಬರಲಿ ಹೇಳಿ ಗ್ರೇಶಿಕೊಂಡು ಜಾಲಿನ ತಲೆಂಗೆ ಎತ್ತಿದ್ದಷ್ಟೇ ಶಾರೀ…ಏ ಶಾರೀ ಎಲ್ಲಿ ಹೋಯ್ದೆ ಮಾರಾಯ್ತಿ ? ಅನೊಂದರಿ ಅಂಬತ್ತೆಯ ಮನೆಗೆ ಹೋಯಿಕ್ಕಿ ಬತ್ತೆ. ನೀ ಬತ್ತರೆ ಬಾ ಹೇಳಿದ ಅವರ ಸ್ವರ ಕೆಮಿಗೆ ಬಿದ್ದತು.  ಅಂಬತ್ತೆಯ ಮನೆಗಾ…! ಆನು ಈಗ ಅಂಬತ್ತೇಲಿ ಮಾತಾಡಿ ಬಂದೆ, ಎಂಥ ಈಗ ಹೋಪದು ಮತ್ತೆ ಬಪ್ಪಲೆ ಹೇಳಿದ್ದವು, ಒಟ್ಟಿಂಗೆ ಹೋಪ ಆಗದಾ ? ಹೇಳಿ ಕೇಳಿದೆ.  ಇದಾ ಬೇಡಾ ಶಾರೀ ಯಾವಗಲೂ ಕುಶಾಲು ಅಲ್ಲ ಆತ,ಶಂಕ್ರ ಫೋನು ಮಾಡಿ ಹೇಳಿತು. ಉಂಡಿಕ್ಕಿ ಮಧ್ಯಾಹ್ನ ಮನುಗಿದ ಅಂಬತ್ತೆ ಎಷ್ಟು ದಿನಿಗೇಳಿರುದೇ ಹಂದುತ್ತವಿಲ್ಲೆ ಹೇಳಿ.ಆನು ಶಶಿಯ ಹತ್ತರೆ ಅವನ ಮೆಡಿಕಲ್ ಕಿಟ್ ತೆಕ್ಕೊಂಡು ಬಪ್ಪಲೆ ಹೇಳಿದ್ದೆ. ನೀನು ಬತ್ತರೆ ಬಾ ಇಲ್ಲದ್ದರೆ ಕೂರು ಹೇಳಿ ಕೋಪಲ್ಲಿ ಹೇಳಿಗೊಂಡು ಅಂಬತ್ತೆ ಮನೆಗೆ ಹೆರಟವು. ಓಹ್.. ಎಂಥದ್ದೋ ಅಯ್ದು ಆದರೆ ಆನು ಅಂಬತ್ತೇಲಿ ಮಾತಾಡಿದ್ದು? ಎಂಥ ಹೇಳಿ ನೋಡಿಕೊಂಡು ಬಪ್ಪ ಹೇಳಿ ಅವರ ಹಿಂದೆಯೇ ಅಂಬತ್ತೆಯ ಮನೆಗೆ ಓಡಿದೆ.

ಅಂಬತ್ತೆಯ ಮನೆ ಚಿಟ್ಟೇಲಿ ಶಂಕ್ರ ತಲೆಗೆ ಕೈ ಮಡಗಿಕೊಂಡು ಕೂದಿದ್ದತು. ಶಂಕ್ರ ದಾನೆ ಆಂಡ್ ಮಾರಾಯ ಯಾನ್ ಇತ್ತೆ ಪಾತೆರ್ದ್ ಪೋಯಿನೆ ಆರೆಡಾ ಜೋಕ್ಲು ಬರ್ಪೆರ್ ಎಲ್ಲೆ ಇನಿ ಇಲ್ಲಡೆ ಬಲ ಬೈಯಡ್ ಹೇಳಿದ ಎನ್ನ ಒಂದರಿ ವಿಚಿತ್ರ ದೃಷ್ಟಿಲಿ ನೋಡಿತ್ತು ಶಂಕ್ರ. ಅಕ್ಕೆ ಇರೆಡ ಪಾತೆರಿಯೆರ ? ದಾನೆ ನಿದ್ರೆಡ್ದ್ ಲಕ್ಕ್‌ದ್ ಬತ್ತರಾ.ಮಧ್ಯಾಹ್ನ ವನಸ್ ಮಲ್ತ್ ಜೆತ್ತಿನಾರ್ ಲಕ್ಕ್ ದಿಜ್ಜೆರ್ ಯಾನ್ ಮುಲ್ಪನೆ ಬಜ್ಜೆಯಿ ಕಳೆವೊಂದು ಟಿವಿ ತೂವೊಂದಿತ್ತೆ. ಅವು ಯಾಪ ಆರ್ ಲಕ್ಕ್ ನೆ ! ಚಾಯೊಗು ಪೊರ್ತಾಂಡ್ ಪಂಡ್‌ದ್ ಲಕ್ಕಾಯರ ಪೋಂಡ ಸುದ್ದಿ ಇಜ್ಜಿ ಅಂಚಾ ಅಣ್ಣೆರೆಗ್ ಫೋನ್ ಮಲ್ತೆ.ಜೋಕ್ಲು ಬರ್ಪಿ ವಾರ ಬರ್ಪೆರ್‌ಗೆ ಕಾಂಡೆ ಫೋನ್ ಬತ್ತ್ ಇತ್ತ್ಂಡ್ ಈರ್ ತೂಂಡ ಇಂಚ ಪನ್ಪರ್ ಹೇಳಿದ ಶಂಕ್ರನ ಸೋಜಿಗಲ್ಲಿ ನೋಡಿದೆ ಆನು. ಶಾರೀ ನಿನ್ನ ತಲೆ ಹರಟೆ ಮತ್ತೆ ಸುರು ಮಾಡೇಡ ಶಶಿ ಬಂದ ಹೇಳಿ ಕಾಣ್ತು. ರಜ ಬಿಸಿ ನೀರು ಬೇಕಾರೆ ಮಡುಗು ಹೇಳಿ ಅವರ ಬೈಗುಳ ಕೇಳಿ ಮೆಲ್ಲಂಗೆ ಒಳ ಹೋಪಗ ಶಶಿ ಅವನ ಕಿಟ್ ತೆಕ್ಕೊಂಡು ಬಂದ, ಅಂಬತ್ತೆಯ ಪರೀಕ್ಷೆ ಮಾಡಿ ಸಪ್ಪೆ ಮೋರೆ ಮಾಡಿ  ಮೂರ್ತಿ ಮಾವ ಅಂಬತ್ತೆ ಎಂಗಳ ಬಿಟ್ಟು ಹೋಗಿ ರಜ ಹೊತ್ತಾತು. ಹಾರ್ಟ್ ಅಟ್ಯಾಕ್ ಆದ್ದು ಹೇಳಿ ಕಾಣ್ತು. ಎಂಥದ್ದೋ ಬೇಜಾರಲ್ಲಿ ಉಂಡಿಕ್ಕಿ ಮನುಗಿದಲ್ಲಿಯೇ ಅಟ್ಯಾಕ್ ಆಯಿದು.ಅವರ ಮಕ್ಕೊಗೆ ತಿಳಿಸಿ ಹೇಳಿದ ಶಶಿಯ ಮಾತು ಕೇಳಿ ಎನಗೆ ಶಾಕ್ ಆತು. ಮಧ್ಯಾಹ್ನ ಮನುಗಿದವು ಎದ್ದಿದವಿಲ್ಲೆ  ಹೇಳಿ ಶಂಕ್ರ ಹೇಳಿರೇ, ಒರಕ್ಕಿಲಿ ಹಾರ್ಟ್ ಅಟ್ಯಾಕ್ ಅಯಿದು ಹೇಳಿ ಶಶಿ ಹೇಳ್ತ.ಹಾಂಗಾರೆ ಕೆರೆ ಕಟ್ಟೇಲಿ ಕೂದು ಮಾತಾಡಿದ ಅಂಬತ್ತೆ ಆರು ? ಇದು ಅಖೇರಿಯಣ ಪಟ್ಟಾಂಗ ಹೇಳಿದ ಅರ್ಥ ಎಂಥ ? ಶಂಕ್ರ ನೋಡಿರೆ ಅಂಬತ್ತೆಯ ಮಕ್ಕೊ ಬಪ್ಪ ವಾರ ಬತ್ತವು ಹೇಳಿತ್ತು. ಆದರೆ ಅಂಬತ್ತೆ ನಾಳೆ ಮಕ್ಕೊ ಬತ್ತವು ಅಷ್ಟನ್ನಾರ ನೀನಿರು ಎನ್ನೊಟ್ಟಿಂಗೆ,ಆನುದೆ ಕೇಶು ಮಾವನ ದಾರಿ ಹಿಡಿಯುತ್ತೆ ಹೇಳಿದ ಅಂಬತ್ತೆ ಆರು ? ಓಹ್..! ಅಪ್ಪು ಅಂಬತ್ತೆಯ ಭೌತಿಕ ಜೀವ ಹೋದರುದೆ ಅಂಬತ್ತೆಯ ಆತ್ಮ ಮನೆ ತೋಟವ ಬಿಟ್ಟು ಹೋಯಿದಿಲ್ಲೆ. ಪಾಪ ಮನೆ ತೋಟ ಕೈ ತಪ್ಪಿ ಹೋವುತ್ತು ಹೇಳ್ತ ಬೇಜಾರು ಅಂಬತ್ತೆ ಎಂಗಳ ಬಿಟ್ಟಿಕ್ಕಿ ಹೋಪಲೆ ಕಾರಣ ಆತ ? ಇಲ್ಲೆ ಬೇಡ ಇನ್ನಾರ ಹತ್ತರೆಯುದೇ ಕೆರೆ ಕಟ್ಟೆಯ ಬೈಸಾರಿಯ ಎಂಗಳ ಮಾತುಕತೆ ಬಗ್ಗೆ ಹೇಳ್ತಿಲ್ಲೆ. ಅಂಬತ್ತೆಯ ಅಖೇರಿಯಣ ಪಟ್ಟಾಂಗ ಹಾಂಗೇ ಇರಲಿ ಎನ್ನ ಹತ್ತರೆ. ಅಂಬತ್ತೆಯ ಮುಗ್ದ ಮಾತು, ನಂತರಣದ ಯಜಮಾನಿಕೆ ಮತ್ತೆ ಉತ್ತರ ಬಾಲ್ಯದ ನಿರಾಸೆ, ನೋವು,ಒಂಟಿತನ ಎನ್ನ ಕಣ್ಣೆದುರಿಂಗೇ ಬಂದು ಕಣ್ಣಿಲಿ ನೀರು ಬಂತು ಆದರೆ ಹೆರ ಟಿವಿಲಿ ಮಾತ್ರ ಅಂಬತ್ತೆಯ ಇಷ್ಟದ ಯಾರಿಗೆ ಯಾರುಂಟು…  ದಾಸವಾಣಿ ಕೇಳಿ  ಏ ಶಾರೀ ಆ ಟಿವಿ ಒಂದಾರಿ ನಿಲ್ಲಿಸು ಮಾರಾಯ್ತಿ ಎಂಥಾ ಕರ್ಮ ಅದು ಹೇಳುವ ಅವರ ಬೊಬ್ಬೆಗೆ ಪದ್ಯದ ಮುಂದಿನ ಸಾಲಿನ ಹಾಂಗೆ ನೀರ ಮೇಲಣ ಗುಳ್ಳೆ ಒಡದು ಹೋತಲ್ಲ ಹೇಳಿಗೊಂಡು ಟಿವಿ ಆಫ್ ಮಾಡಿ ಮುಂದೆ ಆಯೆಕ್ಕಾದ ಕೆಲಸ ಮಾಡಲೆ ಹೆರಟೆ ಅಂಬತ್ತೆಯ ಒಟ್ಟಿಂಗೆ ನಡೆದ ಅಖೇರಿಯಣ ಕೆರೆ ಕಟ್ಟೆಯ ಬೈಸಾರಿಯ ಪಟ್ಟಾಂಗದ ನೆಂಪಿಲಿ.

~~~***~~~

ಅಕ್ಷತಾ ಜಿ. ಭಟ್
“ಅಕ್ಷರ”
W/o  ಗಣರಾಜ್ ಭಟ್
ಕಯ್ಯಂಕೂಡ್ಲು ಮನೆ
ಕಾಟುಕುಕ್ಕೆ ಅಂಚೆ
ಕಾಸರಗೋಡು ತಾಲೂಕು
ಕಾಸರಗೋಡು ಜಿಲ್ಲೆ- 671552
ಸಂಪರ್ಕ ದೂರವಾಣಿ : 09481390241, 07022407717

 

8 thoughts on “ಕೆರೆ ಕಟ್ಟೇಲೊಂದು ಬೈಸಾರಿ..(ಕೊಡಗಿನ ಗೌರಮ್ಮ ಕಥಾಸ್ಪರ್ಧೆಯ 2016ನೇ ಸಾಲಿನ ದ್ವಿತೀಯ ಬಹುಮಾನ ಪಡೆದ ಕತೆ)

  1. ಬೊಳುಂಬು ಗೋಪಾಲಣ್ಣ, ಕತೆಗಾರ್ತಿ ನುಡಿಲಿ ( ತಂತ್ರಾಂಶ) ಕಳುಸಿದ್ದಿದ.ಅದರ ಬರಹಕ್ಕೆ ತರ್ಜುಮೆ ಮಾಡ್ಳೆ ಎನಗೊಂತಾವುತ್ತಿಲ್ಲೆ, ಅದು ಕೋಪಿ-ಪೇಸ್ಟ್ ಆವುತ್ತಿಲ್ಲೆ. ಮತ್ತೆ ಅದರ ಪ್ಯಾರಾ ಮಾಡುದು ರಿಪೇರಿ ಮಾಡುದು ಲೇಖಕಿಗೇ ಬಿಟ್ಟದು
    ಅಭ್ಯಾಸ ಅಪ್ಪಗ ಸರಿಮಾಡುಗಾಯಿಕ್ಕು .

  2. ಈ ಕತೆಯ ಬಯಲಿಂಗೆ ಹಾಕಲೆ ಸಕಾಯ ಮಾಡಿದ ಶರ್ಮಭಾವಂಗು ಓದಿ ಒಪ್ಪಕೊಟ್ಟ ಬೊಳುಂಬು ಗೋಪಾಲಣ್ಣಂಗೆ, ಪಟ್ಟಾಜೆ ಶಿವರಾಮಣ್ಣಂಗು ಧನ್ಯವಾದಂಗೊ

  3. ಕಥೆ ಲಾಯಕಾಯಿದು. ಅಂಬತ್ತೆಯ ಗ್ರೇಶಿ ತುಂಬಾ ಬೇಜಾರಾತು. ಈಗಾಣ ಕಾಲಲ್ಲಿ ನೆಡವ ನೈಜ ಘಟನೆ. ಅಕ್ಷತಂಗೆ ಅಭಿನಂದನೆಗೊ.
    ಮಧ್ಯ ಮಧ್ಯ ಪ್ಯಾರಾ ಮಾಡಿದ್ದಿದ್ದರೆ ಓದಲೆ ಸುಲಭ ಆವ್ತಿತು. ಇನ್ನುದೆ ಕಥೆಯ ಪರಿಣಾಮ ಲಾಯಕಕ್ಕು ವಿಜಯಕ್ಕ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×