- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
ಕೊಡಗಿನಗೌರಮ್ಮ ಪ್ರಶಸ್ತಿ 2017
ವಿಜಯಲಕ್ಷ್ಮಿ ಕಟ್ಟದಮೂಲೆ ಇವಕ್ಕೆ 2017ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ
ಕೊಡಗಿನಗೌರಮ್ಮ ದತ್ತಿನಿಧಿ ಹಾಂಗೂ ಹವ್ಯಕ ಮಹಾಮಂಡಲ ಸಹಯೋಗಲ್ಲಿ, ಅಖಿಲಭಾರತ ಮಟ್ಟಲ್ಲಿ ಹಮ್ಮಿಕೊಂಡು ಬಪ್ಪ, 2017 ನೇ ಸಾಲಿನ, ಈ ಸ್ಪರ್ಧಾವೇದಿಕೆಯ 22ನೇ ವರ್ಷದ ಪ್ರಶಸ್ತಿ; ಶ್ರೀಮತಿ ವಿಜಯಲಕ್ಷ್ಮಿ ಕಟ್ಟದ ಮೂಲೆಯವರ ದೇಶಭಕ್ತಿ ಕತಗೆ ಬಯಿಂದು. ಇವಕ್ಕೆ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ನೆಡೆಶುವ ಸಾಹಿತ್ಯ ಸ್ಪರ್ಧೆಯ ಪ್ರಬಂಧಲ್ಲಿ,ಕತೆಲಿ ಬಹುಮಾನ ಬಯಿಂದು.
ಕತೆ,ಕವನ, ಲೇಖನಂಗಳ ಪತ್ರಿಕಗೊಕ್ಕೆ ಬರೆತ್ತಿದ್ದು, ಕೆಲವು ಸಾಹಿತ್ಯ ಗೋಷ್ಟಿಲಿಯೂ ಆಕಾಶವಾಣಿಲಿಯೂ ಭಾಗವಹಿಸಿದ ಈ ತಂಗಗೆ ಅಭಿನಂದನೆ.
ದ್ವಿತೀಯ– ಶ್ರೀಮತಿ ಶಾರದಾ ಕಾಡಮನೆಯವರ ಸೂರ್ಯಕಿರಣ ಕತಗೆ ಎರಡನೇ ಬಹುಮಾನ ಬಯಿಂದು. ಹಿಂದೆ ಈ ವೇದಿಕೆಲಿ ಮೆಚ್ಚುಗೆ ಕತೆ ಬಯಿಂದು. ಎರಡು ಕವನ ಸಂಕಲನ ಪ್ರಕಟಮಾಡಿದ ಶಾರದೆ; ಮಡಿಕೇರಿ, ಮಂಗಳೂರು ಆಕಾಶವಾಣಿಲಿಯೂ ಬದಿಯಡ್ಕಲ್ಲಿ ಆದ ವಿಶ್ವತುಳುವರೆ ಆಯನೊಲ್ಲಿ ಯೂ ಹಾಡಿದ ಶಾರದಗೆ ಇನ್ನುಮುಂದಾಣ ವರ್ಷಲ್ಲಿ ಪ್ರಥಮ ಸಿಕ್ಕಲಿ ಹೇಳಿ ಹಾರೈಕೆ.
ತೃತೀಯ ವಿಜೇತೆ– ಶ್ರೀಮತಿ ಅಂಜಲಿ ಹೆಗಡೆಯವರ ಕಥೆಯಾದವಳು ಕತಗೆ ಮೂರನೇ ಬಹುಮಾನ ಬಯಿಂದು. ಮೂಲತಃ ಸಿದ್ದಾಪುರದ ಇವು ಸಾಫ್ಟ್ ವೇರ್ ಇಂಜಿನಿಯರ್ ಆಗಿ ಬೆಂಗಳೂರಿಲ್ಲಿಪ್ಪ ಇವು ಛಾಯಾಗ್ರಹಣ ಆಸಕ್ತಿ ಬೆಳೆಶೆಂಡಿದೊವು. ಕಥೆ,ಕವನ,ಲಲಿತ ಪ್ರಬಂಧ ಬರೆತ್ತಲ್ಲದ್ದೆ,ದಾರಾವಾಹಿಗೊಕ್ಕೆ ಸಂಭಾಷಣೆ ಬರೆತ್ತ ತಂಗಗೆ ನಮ್ಮ ಅಭಿನಂದನಗೊ.
ತೀರ್ಪುಗಾರರು– ನಿವೃತ್ತ ಪ್ರಾಧ್ಯಾಪಕ ಡಾ.ಮಹಾಲಿಂಗಭಟ್ ,MA.phD ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನ ನಿವೃತ್ತ ಸಂಸ್ಕ್ರತ ಹಾಂಗೂ ಕನ್ನಡ ಪ್ರೊಫೆಸರ್ ಅಲ್ಲದ್ದೆ, ph-D ವಿದ್ಯಾರ್ಥಿಗೊಕ್ಕೆ ಮಾರ್ಗದರ್ಶನ ಆಗಿತ್ತೊವು.
ಇನ್ನೊಬ್ಬರು ನಿವೃತ್ತ ಅಧ್ಯಾಪಕ, ಪ್ರಖ್ಯಾತ ಸಾಹಿತಿ, ಶಿಕ್ಷಣ ತಜ್ಞ ಶ್ರೀಯುತ ವಿ.ಬಿ.ಕುಳಮರ್ವ, ಹಾಂಗೂ ನಿವೃತ್ತ ಕನ್ನಡ ಪ್ರೊಫೆಸರ್,ಕಣ್ಣೂರು ವಿಶ್ವವಿದ್ಯಾನಿಲಯದ, ಭಾರತೀಯ ಭಾಷಾ ಅಧ್ಯಯನ ಕೇಂದ್ರದ ನಿರ್ದೇಶಕರೂ ಆದ ಡಾ.ಯು.ಮಹೇಶ್ವರಿ.
ಈ ಮೂರುಜೆನ ತೀರ್ಪಗಾರರಿಂಗೂ ನಮ್ಮ ಕೊಡಗಿನಗೌರಮ್ಮ ಕಥಾಸ್ಪರ್ಧೆಯ ವೇದಿಕೆಂದ ಧನ್ಯವಾದಂಗಳ ಹೇಳುತ್ತೆ.
(ವಿ.ಸೂ:- ಕೊಡಗಿನಗೌರಮ್ಮ ಪ್ರಶಸ್ತಿ ಹೇಳಿರೆ, ಪ್ರಥಮ ಬಹುಮಾನ. ದ್ವಿತೀಯ, ತೃತೀಯ ಪ್ರೋತ್ಸಾಹಕಬಹುಮಾನ. ಪ್ರಶಸ್ತಿ ಬಂದವು ಈ ವೇದಿಕೆಯ ಸ್ಪರ್ಧೆಲಿ ಇನ್ನು ಭಾಗವಹಿಸಲಿಲ್ಲೆ.ಇತರ ಎರಡು ಬಹುಮಾನಿತರು ಮುಂದಿನ ವರ್ಷಲ್ಲಿ ಭಾಗವಹಿಸಲಕ್ಕು. )
ವರದಿ-ವಿಜಯಾಸುಬ್ರಹ್ಮಣ್ಯ, ಸಂಚಾಲಕಿ, ಕೊಡಗಿನಗೌರಮ್ಮ ಕಥಾಸ್ಪರ್ಧೆ.
~~~***~~~
ಅಭಿನಂದಿಸಿದ ಎಲ್ಲೋರಿಂಗು ಧನ್ಯವಾದಂಗೊ.
ಪ್ರಶಸ್ತಿ ವಿಜೇತೆ ಕಟ್ಟದಮೂಲೆ ಅಕ್ಕಂಗೂ, ಬಹುಮಾನ ಸಿಕ್ಕಿದ ಅಕ್ಕಂದಿರಿಂಗೂ, ಭಾಗವಹಿಸಿದ ಎಲ್ಲರಿಂಗೂ ಅಭಿನಂದನೆಗೊ.
ಇದರ ಅಚ್ಚುಕಟ್ಟಾಗಿ ನಿರ್ವಹಣೆ ಮಾಡ್ತಾ ಇಪ್ಪ ಸಂಚಾಲಕಿ ವಿಜಯತ್ತಿಗೆಗೆ ಧನ್ಯವಾದಂಗೊ.
ಕೊಡಗಿನ ಗೌರಮ್ಮ ಪ್ರಶಸ್ತಿ ಸಿಕ್ಕಿ ದವಕ್ಕೆ ಅಭಿನಂದನೆಗೊ.
ಬಹುಮಾನ ಪಡದವಕ್ಕೆ ಅಭಿನಂದನೆಗೊ. ಕಥೆಗೊ ಎಲ್ಲ ಬೈಲಿಂಗೆ ಬರಳಿ.
ವಿಜೇತರಿಂಗೆ ಅಭಿನಂದನೆಗೊ.