Oppanna.com

ಒಂದು ಪ್ರಕರಣದ ಸುತ್ತ -೧೬ : ರಮ್ಯ ನೆಕ್ಕರೆಕಾಡು

ಬರದೋರು :   ಶರ್ಮಪ್ಪಚ್ಚಿ    on   03/09/2020    1 ಒಪ್ಪಂಗೊ

ಒಂದು ಪ್ರಕರಣದ ಸುತ್ತ -೧೬

-ರಮ್ಯ ನೆಕ್ಕರೆಕಾಡು

ಅಂಜಲಿ ಸತ್ತಿದಿಲ್ಯಾ?? ಅಂಬಗ ಅಂದು ಸಿಕ್ಕಿದ ಹೆಣ ಆರಿಂದು?? ಅಂಜಲಿಯ ಎಂತಕೆ ಕೂಡಿಹಾಕಿದ್ದು?? ಎಲ್ಲ ಪ್ರಶ್ನೆ ತಲೆಲಿ ಓಡೆರುದೇ ಶರತ್ಚಂದ್ರಂಗೆ ಅಂಜಲಿ ಬದುಕಿದ್ದು ಹೇಳ್ತ ಖುಷಿಗೆ ಮಾತೇ ಹೆರ ಬೈಂದಿಲ್ಲೆ. ಅಂಜಲಿಯ ಗಟ್ಟಿಯಾಗಿ ಅಪ್ಪಿ ಹಿಡ್ಕೊಂಡ‌. ” ಪುಟ್ಟು.. ನೀನು.. ಎಂಗೆಲ್ಲ.. ದೇವರೇ..” ಹೇಳಿ ಶರತ್ಚಂದ್ರಂಗೆ ನಾಲಗೆ ಮೊಗಚ್ಚದ್ದಷ್ಟು ಸಂತೋಷ ಆತು. “ಆರು ಮಾವ ಎನ್ನ ಕಿಡ್ನಾಪ್ ಮಾಡಿದ್ದು?? ಮೋರೆಯ ಕವರ್ ಮಾಡಿಗೊಂಡಿರ್ತು ಅದು.. ಆರು ಜನ ಹೇಳಿದೆ ಗೊಂತಿಲ್ಲೆ ಎನಗೆ.. ಆನೆಂತ ಮಾಡಿದ್ದೆ ಅದಕ್ಕೆ??” ಹೇಳ್ತ ಅಂಜಲಿಯ ಮುಗ್ಧ ಮಾತಿಂಗೆ ಶರತ್ಚಂದ್ರನ ಕಣ್ಣನೀರಿನ ತಡವಲೆಡಿಗಾತಿಲ್ಲೆ.. “ಎಲ್ಲದಕ್ಕೂ ಉತ್ತರ ಸಿಕ್ಕುತ್ತು ಮಗಳೋ.. ಎಂತಕೂ ಮೊದಲು ಆಸ್ಪತ್ರೆಗೆ ಹೋಪ.. ನಾಗರಾಜ ಡ್ರೈವರ್ ಹತ್ರೆ ಜೀಪು ಇಲ್ಲಿಗೆ ತಪ್ಪಲೆ ಹೇಳು.. ಅಂಜು ನೋಡು ಹೇಂಗಾಯ್ದೆ ನೀನು.. ಆ ಜನ ಎಂತಾರು ತೊಂದರೆ ಕೊಟ್ಟತ್ತಾ ನಿನಗೆ..??” ಹೇಳಿಗೊಂಡೇ ಶರತ್ಚಂದ್ರ ಅಂಜಲಿ ಕೈ ಕಾಲಿನ ಸಂಕೋಲೆ ಪೂರಾ ಬಿಡ್ಸಿದ. “ಇಲ್ಲೆ ಮಾವ.. ಅದು ಉಂಬಲೆ ತಿಂಬಲೆ, ವಾಶ್ ರೂಂ ನ ವ್ಯವಸ್ಥೆ ಎಲ್ಲವೂ ಮಾಡಿದ್ದು.. ಎನ್ನ ಮೈ ಮುಟ್ಟುಲೂ ಬೈಂದಿಲ್ಲೆ.. ಎನ್ನ ಕಿಡ್ನಾಪ್ ಎಂತಕೆ ಮಾಡಿತ್ತು ಹೇಳಿ ಎನಗೆ ಅರ್ಥ ಆವ್ತಿಲ್ಲೆ.. ಎನಗೆ ಅಪ್ಪ ಅಮ್ಮನ ನೋಡೆಕ್ಕು.. ನಾವು ಮನೆಗೆ ಹೋಪ..” ಹೇಳಿಯಪ್ಪಗ ಶರತ್ಚಂದ್ರಂಗೆ ದುಃಖ ಉಮ್ಮಳ್ಸಿತ್ತು. ಇದರತ್ರೆ ಅಕ್ಕ ತೀರಿ ಹೋದ ಸಂಗತಿ ಹೇಂಗೆ ಹೇಳುದು ಹೇಳಿ ಶರತ್ಚಂದ್ರಂಗೆ ತಲೆಬೆಶಿ ಆತು. “ಮೊದಲು ಆಸ್ಪತ್ರೆಗೆ ಹೋಪ.. ಎಲ್ಲೋರ ಅಲ್ಲಿಗೆ ಬಪ್ಪಲೆ ಹೇಳ್ತೆ..” ಹೇಳಿ ಅಂಜಲಿಯ ಕರ್ಕೊಂಡು ಕೆಳ ಹೋದ.
ಕಾನ್ಸ್ಟೇಬಲ್ಸ್ ಆ ಜನರ ಮೋರೆಂದ ವಸ್ತ್ರ ತೆಗೆದವು. ಅಂಜಲಿ ಕೂಡ್ಲೇ, “ಮದನ… ನೀನಾ.. ” ಹೇಳಿ ಆಶ್ಚರ್ಯಲ್ಲಿ ಕೇಳಿತ್ತು. ಶರತ್ಚಂದ್ರ, “ರಾಸ್ಕಲ್.. ನಿನ್ನಿಂದಾಗಿ ಎಂತೆಲ್ಲ ಆಯ್ದು ಹೇಳ್ತ ಕಲ್ಪನೆ ಆದರೂ ಇದ್ದ ನಿನಗೆ.. ನಾಗರಾಜ ನೀನು ಇದರ ಕರ್ಕೊಂಡು ಸ್ಟೇಷನಿಂಗೆ ಹೋಗಿ ಸೆಲ್ ಲಿ ಹಾಕು.. ಆನು ಅಂಜಲಿಗೊಂದು ಸರಿಯಾದ ವ್ಯವಸ್ಥೆ ಮಾಡ್ಸಿಕ್ಕಿ ಬತ್ತೆ.. ಸ್ಟೇಷನಿಂಗೆ ಭಾವ ಬಂದಿಕ್ಕು.. ಅವರ ಸೀದಾ ಆಸ್ಪತ್ರೆಗೆ ಬಪ್ಪಲೆ ಹೇಳು.” ಹೇಳಿಕ್ಕಿ ರಿಕ್ಷಾಲ್ಲಿ ಅಂಜಲಿಯ ಕರಕ್ಕೊಂಡು ಆಸ್ಪತ್ರೇಗೆ ಹೋದ. ವಿಷಯ ಗೊಂತಾಗಿ ಕೇಶವಂದೆ ವೀಣಾಂದೇ ಓಡೋಡಿ ಆಸ್ಪತ್ರೆಗೆ ಬಂದವು.
ಬೆಡ್ ಮೇಲೆ ಕೂದುಗೊಂಡಿತ್ತ ಅಂಜಲಿಯ ಕಂಡಪ್ಪದ್ದೇ ಕೇಶವಂಗೆ ಸ್ವರ್ಗ ಸಿಕ್ಕಿದಷ್ಟು ಸಂತೋಷ ಆತು. ಹೇಳಿಗೊಂಬಲೆಡಿಯದ್ದ ಹಾಂಗೆಪ್ಪ ಭಾವನೆ..!! ಮಗಳ ಗಟ್ಟಿಯಾಗಿ ಹಿಡ್ಕೊಂಡು ಕೂಗುವ ದೃಶ್ಯ ಹೇಂಗಿಪ್ಪ ಕಲ್ಲು ಮನಸ್ಸನ್ನುದೇ ಕರಗುಸುವ ಹಾಂಗಿತ್ತು. ಅಪ್ಪ ಮಗಳು ಮತ್ತೊಂದರಿ ಹೀಂಗೆ ಭೇಟಿ ಅಕ್ಕು ಹೇಳಿ ಒಂದು ಸಣ್ಣ ಕಲ್ಪನೆಯೂ ಇಲ್ಲದ್ದ ವೀಣಾ ಈ ಸಂಭ್ರಮವ ಕಣ್ತುಂಬಿಗೊಂಡತ್ತು. ಅಪ್ಪ ಮಗಳ ಈ ಬಾಂಧವ್ಯಕ್ಕೆ ನಡುಕೆ ಹೋಗಿ ಅಡ್ಡಿ ಮಾಡುದು ಹೇಳಿ ವೀಣಾ ತಳೀಯದ್ದೇ ಶರತ್ಚಂದ್ರನ ಎದೆಗೆ ತಲೆಯೆರಗ್ಸಿ ನಿಂದತ್ತು. ಒಟ್ಟಾರೆ ಈ ಸಂಭ್ರಮಕ್ಕೆ ಆಸ್ಪತ್ರೆಯ ನಾಕು ಗೋಡೆ ಸಾಕ್ಷಿ ಆಗಿತ್ತು. “ಅಮ್ಮ ಎಂತಕಪ್ಪ ಬೈಂದಿಲ್ಲೆ?? ಆನು ಸಿಕ್ಕಿದ್ದು ಅಮ್ಮಂಗೆ ಖುಷಿಯೇ ಆಯ್ದಿಲ್ಲೆಯಾಳಿ.. ಆನು ಅಮ್ಮನ ಎಷ್ಟು ಮಿಸ್ ಮಾಡಿಗೊಂಡಿದೆ..!! ಅಮ್ಮಂಗೆ ಎನ್ನ ಮೇಲೆ ಪ್ರೀತಿಯೇ ಇಲ್ಲೆ.. ಅಮ್ಮನತ್ರೆ ಮಾತಾಡೆ ಆನು..” ಹೇಳಿ ಮೋರೆ ಬೀಗ್ಸಿತ್ತು ಅಂಜಲಿ. ಕೇಶವನ ಹೃದಯ ಹಿಂಡಿದಾಂಗಾತು. ಇದಕ್ಕೆ ಆನು ಎಂತ ಹೇಳುದು ಹೇಳಿ ಅರೆಡಿಯದ್ದೆ ಶರತ್ಚಂದ್ರನ ಮೋರೆ ನೋಡಿದ. ಶರತ್ಚಂದ್ರ ಕೇಶವನ ನೋಡಿ ಆನು ನಿಭಾಯಿಸುತ್ತೆ ಹೇಳುವಾಂಗೆ ಕಣ್ಣು ಮುಚ್ಚಿ, “ಅಂಜು.. ಅಮ್ಮ ಮನೆಲಿ ನಿನಗೇಳಿ ಕಾಯ್ತಾ ಇದ್ದು.. ಎನ್ನ ಮಗಳು ಈಗ ಬತ್ತು ಹೇ..” ಹೇಳಿ ಶರತ್ಚಂದ್ರನ ದುಃಖ ಮಾತಿನ ಮುಂದುವರ್ಸುಲೆ ಬಿಟ್ಟಿದೇಲ್ಲೆ. ಮಾವ ಹೀಂಗೆ ಎಕ್ಕಿ ಎಕ್ಕಿ ಕೂಗುದರ ಇಷ್ಟ್ರೊರೆಗೆ ನೋಡದ್ದ ಅಂಜಲಿಗೆ ಎಂತ ಆವ್ತಾ ಇದ್ದು ಹೇಳಿ ಅರೆಡಿಯದ್ರುದೇ ಎದೆಬಡಿತ ಮಾತ್ರ ಜೋರಾಗಿ ಬಡ್ಕೊಂಬಲೆ ಸುರಾತು. ವೀಣಾ ಓಡಿ ಬಂದು ಅಂಜಲಿಯ ಅಪ್ಪಿ ಹಿಡ್ದು ಕೂಗಿತ್ತು. “ಎಂತ ಅತ್ತೆ.. ನಿಂಗೆಲ್ಲ ಎಂತಕೆ ಹೀಂಗೆ ಕೂಗುದು.. ಎನಗೆ ಜೋರು ಹೆದರಿಕೆ ಆವ್ತು..” ಹೇಳಿ ಅಂಜಲಿ ಎಲ್ಲರ ಮೋರೆಯ ಬದಲ್ಸಿ ಬದಲ್ಸಿ ನೋಡಿತ್ತು. ಕೇಶವ ಕೂಗಿಗೊಂಡೇ, “ಇಲ್ಲೆ ಮಗಳೊ ಅಮ್ಮ.. ದೇವರು ಕರಕ್ಕೊಂಡ.. ಇನ್ನು ಬತ್ತಿಲ್ಲೆ.. ಬತ್ತಿಲ್ಲೆ..ಬ..ತ್ತಿ..” ಹೇಳಿ ಕಣ್ಣಿನ ಒತ್ತಿ ಹಿಡ್ಕೊಂಡ. ಅಂಜಲಿ,”ಎಂತ.. ಅಮ್ಮ.. ಎಂತರ.. ” ಹೇಳಿ ತೊದಲಿಗೊಂಡು ಕೇಳುವಾಗ ಕಣ್ಣ ನೀರು ದಿರಿ ದಿರಿನೆ ಅರ್ದತ್ತು. ಶಾಂತ ಇನ್ನಿಲ್ಲೆ ಹೇಳ್ತ ಸತ್ಯ ಅಂಜಲಿಗೆ ಅರಿವಾದರೂ ಅದರ ಮನಸ್ಸು ಆ ಸತ್ಯ ಒಪ್ಪಿಗೊಂಬಲೆ ತಯಾರಿಲ್ಲೆ ಹೇಳಿ ಅದರ ಭಾವನೆಯೇ ಹೇಳಿತ್ತು. “ಅಪ್ಪು ಮಗಳೋ.. ಅಮ್ಮಂಗೆ ನಿನ್ನ ಮೇಲೆ ಪ್ರೀತಿ ಇಲ್ಲೆ ಹೇಳಿ ಅಲ್ದ ನೀನು ಹೇಳಿದ್ದು.. ಅಮ್ಮಂಗೆ ನಿನ್ನ ಮೇಲೆ ಇತ್ತದು ಪ್ರೀತಿ ಅಲ್ಲ.. ಅದಕ್ಕಿಂತ ಹೆಚ್ಚಿಂದು, ಹೆಸರೇ ಕೊಡ್ಲೆಡಿಗಾಗದ್ದ ಭಾವನೆ.. ಅದುವೇ ನಿನ್ನ ಅಮ್ಮನ ಮೇಲಂಗೆ ಕರಕ್ಕೊಂಡತ್ತು. ನೀನು ಇನ್ನಿಲ್ಲೆ ಹೇಳಿ ಆರೋ ಮಾಡಿದ ಮೋಸದ ಜಾಲ ನಿನ್ನ ಅಮ್ಮನ ಕರಕ್ಕೊಂಡತ್ತು..” ಹೇಳಿ ನಡೆದ ಘಟನೆಯ ಪೂರಾ ಕೇಶವ ಅಂಜಲಿಗೆ ತಿಳಿಸಿದ. ” ಆನೆಂತ ಪಾಪಿ.. ಅಮ್ಮನ ಕಡೆಗಾಲಲ್ಲಿ ಅಮ್ಮಂಗೆ ಬೇಜಾರಾಪ್ಪಾಂಗೆ ನಡಕ್ಕೊಂಡೇ.. ಎನ್ನ ಹಾಂಗೆದ್ದ ವರ್ತನೆ ಅಮ್ಮಂಗೆ ಎಷ್ಟು ಬೇನೆ ಕೊಟ್ಟಿಕ್ಕು.. ಇನ್ನು ಎನ್ನ ಅಮ್ಮ ಪುನಾ ಬಾರ..” ಹೇಳಿ ಕೂಗಿಗೊಂಡೇ ಸಂಕಟಲ್ಲಿ ಮಾತಾಡಿತ್ತು ಅಂಜಲಿ. ” ಆ ಸಂದರ್ಭ ಹಾಂಗಿತ್ತು.. ನಿನ್ನ ತಪ್ಪಿಲ್ಲೆ.. ನೀನು ಬೇಕೋಳಿ ಮಾಡಿದ್ದಲ್ಲ ಹೇಳ್ತ ಸತ್ಯ ಅಕ್ಕಂಗೂ ಗೊಂತಿತ್ತು.. ಅಕ್ಕ ಎಲ್ಲಿಗೂ ಹೋಯ್ದಿಲ್ಲೆ.. ನಮ್ಮೊಟ್ಟಿಂಗೆ ಇಲ್ಲಿಯೇ ಕಾಣದ್ದಾಂಗೆ ಇಕ್ಕು.. ನೀನು ಕೂಗೆರೆ ಅಕ್ಕಂಗೆ ಬೇಜಾರಕ್ಕು.. ಸಮಾಧಾನ ಮಾಡಿಗೊ.. ಅಕ್ಕ ಯಾವಗ್ಳೂ ನಿನ್ನೊಟ್ಟಿಂಗಿಕ್ಕು ಅಂಜು..” ಹೇಳಿ ಶರತ್ಚಂದ್ರ ಅಂಜಲಿಗೆ ಸಮಾಧಾನ ಮಾಡಿದ. ವೀಣಾ, “ಅಪ್ಪು ಅಂಜು.. ಇವು ಹೇಳಿದ್ದು ಸತ್ಯ.. ಅತ್ತಿಗೆ ಯಾವಗ್ಳೂ ನಿನ್ನೊಟ್ಟಿಂಗಿಕ್ಕು.. ಎಂಗ ಎಲ್ಲ ನಿನ್ನೊಟ್ಟಿಂಗಿದ್ದೆಯ.. ಅಮ್ಮನ ನೆನಪು ನಿನಗೆ ಯಾವಗ್ಳೂ ಬಕ್ಕು.. ಆದರೆ ಅಮ್ಮ ಇಲ್ಲೆ ಹೇಳ್ತ ಕೊರತೆ ಬಾರದ್ದಾಂಗೆ ನಿನ್ನ ಆನು ನೋಡಿಗೊಳ್ತೆ.. ಅತ್ತೆ ಹೇಳ್ತದು ಸಂಬಂಧದ ಹೆಸರು ಮಾತ್ರ.. ಆನು ಎಂದಿಗೂ ನಿನ್ನ ಅಮ್ಮನೇ.. ನಿನಗೆ ಅಮ್ಮ ಇಲ್ಲೆ ಹೇಳಿ ಆರೂ ಹೇಳುಲಾಗ, ಎನಗೆ ಮಕ್ಕ ಇಲ್ಲೆ ಹೇಳಿ ಆರೂ ಹೇಳುಲಾಗ.. ಹಾಂಗೆ ಬದುಕಿ ತೋರ್ಸೆಕ್ಕು ನಾವು.. ” ಹೇಳಿ ಅಂಜಲಿಯ ಕಣ್ಣ ನೀರುದ್ದಿತ್ತು. ಅಂಜಲಿ ವೀಣಾನ ಪ್ರೀತಿಲಿ ಗಟ್ಟಿ ಹಿಡ್ಕೊಂಡತ್ತು.
” ನಿನಗೆ ಈ ದುಃಖ ಪಕ್ಕಕ್ಕೆ ಮರವಲೆಡಿಗಾಗ.. ಈ ಸಮಯಲ್ಲಿ ಆನು ಹೀಂಗೆ ತನಿಖೆ ಮಾಡುದು ಸರಿಯಲ್ಲ.. ಆದರೆ ಈ ಪ್ರಕರಣಕ್ಕೆ ಒಂದು ಸರಿಯಾದ ಅಂತ್ಯ ಸಿಕ್ಕೆಕ್ಕು. ಇದೆಲ್ಲ ಹೇಂಗಾತು ಅಂಜಲಿ?? ಅಲ್ಲಿ ಸಿಕ್ಕಿದ ಹೆಣ ಆರಿಂದಂಬಗ??” ಹೇಳಿ ಶರತ್ಚಂದ್ರ ಅಂಜಲಿಯತ್ರೆ ಕೇಳಿದ. ಅಂಜಲಿ, ” ಎನಗೆ ಎಂತಾತು ಹೇಳಿ ಈಗಳೂ ತಲೆಗೆ ಹೋತಿಲ್ಲೆ. ಬ್ರೋಕರ್ ಮಾವ ಹೇಂಗೆ ತೀರಿದ್ದು?? ಆ ಹುಡುಗಿ ಆರು?? ಊಹ್ಞುಂ ಎಂತಾಳಿ ಅರ್ಥಾವ್ತಿಲ್ಲೆ.” ಹೇಳಿತ್ತು. “ಅಲ್ಲ ಅಂಜಲೀ.. ಗೋಪಾಲಣ್ಣ ತೀರಿ ಹೋದ ಟೈಮ್ ದೇ ನೀನು ಅಲ್ಲಿಗೆ ಹೋದ ಟೈಮ್ ದೇ ಹತ್ರತ್ರೆ ಒಂದೇ.. ಅಂಬಗ ಅದು ಹೇಂಗೆ?? ನೀನು ಅಲ್ಲಿಗೆ ಹೋಪಗ ಗೋಪಾಲಣ್ಣ ಇತ್ತಿದವಾ..” ಹೇಳಿ ಶರತ್ಚಂದ್ರ ಕೇಳಿದ. ಅಂಜಲಿ ಅಂದ್ರಣ ಘಟನೆಯ ವಿವರ್ಸುಲೆ ಸುರು ಮಾಡಿತ್ತು.
ಅರವಿಂದನೊಟ್ಟಿಂಗೆ ಮಾತಾಡ್ಲೆ ಅಂಜಲಿಗೆ ಚೂರುದೆ ಮನಸ್ಸಿತ್ತಿಲ್ಲೆ. ಅವನ ಕೈಂದ ಹೇಂಗಪ್ಪ ತಪ್ಸಿಗೊಂಬದು ಹೇಳಿ ಯೋಚನೆ ಮಾಡಿಗೊಂಡಿದ್ದ ಅಂಜಲಿಗೆ ಸಡನ್ನು ನೆಂಪಾದ್ದು ಗೋಪಾಲಣ್ಣ ಮನೆಲಿ ಬಿಟ್ಟು ಹೋದ ಕೈ ಚೀಲ. ಗೋಪಾಲಣ್ಣನ ಮನೆಗೆ ಹೋಗಿ ಆ ಚೀಲವ ಕೊಟ್ಟಿಕ್ಕು ಹೇಳಿ ಅಪ್ಪ ಹೇಳಿದ ಕೆಲಸವನ್ನೇ ನೆಪ ಮಾಡಿಗೊಂಡು ಅಂಜಲಿ ಅರವಿಂದನ ಹತ್ರಂದ ಪೀಂಕಿತ್ತು. ಗೋಪಾಲಣ್ಣನ ಮನೆಗೆ ಹೋಪಗ ಅಂಜಲಿಯ ತಲೆಲಿಡೀ ಅರವಿಂದನ ಮದುವೆ ಆಗದ್ದೇ ವಿಧಿಯೇ ಇಲ್ಲೆ, ಹೇಂಗೆ ತಪ್ಸಿಗೊಂಬದು ಹೇಳ್ತ ಸಂಗತಿಯೇ ಕೊರಕ್ಕೊಂಡಿತ್ತು. ಗೋಪಾಲಣ್ಣನ ಮನೆ ಎತ್ತಿದ್ದೂ ಗೊಂತಾಗದ್ದಷ್ಟು ಕಳದೋಗಿತ್ತು ಅಂಜಲಿ. ಮನೆ ಚಾವಡಿಗೆ ಹೊಕ್ಕಿಯಪ್ಪಗ ಎದುರೆ ಬಂದದು ಮದನ. ಮನಸ್ಸಿಲಿಡೀ ಮದುವೆ ವಿಷಯ ಓಡಿಗೊಂಡಿತ್ತ ಕಾರಣ ಅಂಜಲಿಗೆ ಫಾರಿನಿಲಿತ್ತ ಮದನ ಊರಿಂಗೆ ಯಾವಾಗ ಬಂದದು ಹೇಳಿ ಕೇಳುವ ಸೌಜನ್ಯವೂ ಇತ್ತಿಲ್ಲೆ. ಗೋಪಾಲಣ್ಣನ ಒಂದರಿ ವಿಚಾರ್ಸಿತ್ತು. ಅಪ್ಪಂಗೆ ರಜ್ಜ ತಲೆಬೇನೆ ಹಾಂಗಾಗಿ ಒರಗಿದ್ದವು ಹೇಳಿ ಮದನನೇ ಗೋಪಾಲಣ್ಣನ ಕೈಚೀಲವ ತೆಕ್ಕೊಂಡ. ಅಂಜಲಿ ಸೀದಾ ಮನೆಗೆ ಹೋಗಿ ಕೋಣೆ ಬಾಗಿಲು ಹಾಕಿ ಮನಸ್ಸಿಂಗೆ ತೃಪ್ತಿ ಅಪ್ಪಷ್ಟು ಕೂಗಿತ್ತು. ಮತ್ತೆ ಅಂಜಲಿ ಸ‌ಹನಾಂಗೆ ಫೋನು ಮಾಡಿ ಅರವಿಂದನ ಮದುವೆ ಅಪ್ಪಲೆ ಇಷ್ಟ ಇಲ್ಲೆ ಹೇಳಿತ್ತು. ಸಹನಾ ದಾರಿದೀಪಕ್ಕೆ ಹೋಪಲೆ ಕೊಟ್ಟ ಪ್ಲ್ಯಾನ್ ಲಾಯ್ಕಿದ್ದರುದೆ, ಅಂಜಲಿಗೆ ಅಬ್ಬೆ ಅಪ್ಪನ ಬಿಟ್ಟು ಅವರತ್ರೆ ಹೇಳದ್ದೇ ನಡಿರುಳು ಎದ್ದಿಕ್ಕಿ ಹೋಪಲೆ ಮನಸ್ಸೇ ಬೈಂದಲ್ಲೆ. ನಡಿರುಳು ಸುಮಾರು ಒಂದು ಗಂಟೆ ಹೊತ್ತಿಂಗೆ ಮಂಚಲ್ಲಿ ಕೂದು ಕೂಗಿಗೊಂಡಿತ್ತ ಅಂಜಲಿಗೆ ಆರೋ ಇಬ್ರು ಕೋಣೆ ಒಳಂಗೆ ಬಂದದು ಕಂಡತ್ತು. ಆರು ಹೇಳಿ ಗೊಂತಾಪ್ಪ ಮೊದಲೇ ಬೋಧ ತಪ್ಸಿದವು. ಅಂಜಲಿಗೆ ಎಚ್ಚರಿಗೆ ಅಪ್ಪಗ ಅದೊಂದು ಪಾಳು ಬಿದ್ದ ಕಟ್ಟಡಲ್ಲಿ ಕಟ್ಟಿ ಹಾಕಿದ ಅವಸ್ಥೆಲಿ ಇತ್ತು.
“ಸೋ ನಿನಗೂ ಎಂತ ಕ್ಲೂ ಸಿಕ್ಕದ್ದಾಂಗೆ ಕಿಡ್ನಾಪ್ ಮಾಡಿದ್ದ.. ಅಂಬಗ ಮದನನೊಟ್ಟಿಂಗಿತ್ತ ಇನ್ನೊಂದು ಜನ ಆರು?? ಮನೆಯ ಹಿಂದೆ ಸಿಕ್ಕಿದ ಹೆಣ ಆರಿಂದು..??” ಹೇಳುದು ಶರತ್ಚಂದ್ರಂಗೆ ಒಂದು ಹೊಸ ಪ್ರಶ್ನೆ ಆತು.

-ಮುಂದುವರೆತ್ತು..

 

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

One thought on “ಒಂದು ಪ್ರಕರಣದ ಸುತ್ತ -೧೬ : ರಮ್ಯ ನೆಕ್ಕರೆಕಾಡು

  1. ಕಥೆ ಲಾಯಿಕಲ್ಲಿ ಓದ್ಸಿಗೊಂಡು ಹೋವುತ್ತಾ ಇದ್ದು . ಮುಂದಾಣ ಕಂತಿಂಗೆ ಕಾಯ್ತಾ ಇದ್ದೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×