ಪರಯಿ ಪೆಟ್ಟ ಪಂದಿರುಕುಲಂ
{ ಪಂಚಮಳಿಂದುದಯಿಸಿದ ಹನ್ನೆರಡು ಕುಲ}
ವರರುಚಿಯ ಹನ್ನೆರಡು ಮಕ್ಕಳೂ ಒಂದೊಂದು ವಿಶೇಶ ಗುಣಂಗಳ ಪಡದಿತ್ತಿದ್ದವು. ಅವರಲ್ಲಿ ಒಬ್ಬ° ನಾರಾಣತ್ತು ಬ್ರಾಂತ (ಬ್ರಾಂತ ಹೇಳಿರೆ ಮರ್ಲ ಹೇಳಿ ಅರ್ಥ)
ಯಾವುದೋ ಕಾಡಿನ ನಡುಕೆ ವರರುಚಿ ದಂಪತಿಗೊ ಬಿಟ್ಟಿಕ್ಕಿ ಹೋದ ಶಿಶುವಿನ ನಾರಾಯಣ ಮಂಗಲಂ ಮನೆಯ ಬ್ರಾಹ್ಮಣ ಕುಟುಂಬದವು ತಂದು ಸಾಂಕಿರೂ ಅವನ ಗುಣಂಗೊ ಯೇವದೂ ಬ್ರಾಹ್ಮರ ಹಾಂಗಿತ್ತಿದ್ದಿಲ್ಲೆ.ಹಾಂಗಾಗಿ ಆ ಮನೆಯವಕ್ಕೆ ಅವಂಗೆ ಬ್ರಾಹ್ಮರಿಂಗೆ ಬೇಕಾದ ಸಂಸ್ಕಾರಂಗಳ ಮಾಡಿದ್ದವಿಲ್ಲೆ.
ದಿನಾಗಳೂ ಒಂದು ದೊಡ್ಡ ಗುಡ್ಡೆಯ ಮೇಗಂಗೆ ದೊಡ್ಡ ಪಾರೆಕಲ್ಲಿನ ಹೇಂಗೋ ಬಂಙ ಬಂದುಕೊಂಡು ಉರುಳ್ಸಿ ಉರುಳ್ಸಿ ತೆಕ್ಕೊಂಡು ಹೋಗಿಕ್ಕಿ ಅಲ್ಲಿಂದ ಅದರ ಕೆಳ ಹಾಕಿಕ್ಕಿ ,ಕಲ್ಲು ಉರುಳುದು ಕಂಡು ದೊಡ್ಡಕೆ ಕೈ ತಟ್ಟಿ ನೆಗೆ ಮಾಡುದು ಅವನ ಅಭ್ಯಾಸ. ಇದು ಪ್ರತೀ ದಿನವೂ ಇದ್ದು.ಕಲ್ಲು ಕೆಳ ಬಿದ್ದ ಕೂಡ್ಲೇ ಅವನೂ ಗುಡ್ಡೆಂದ ಕೆಳ ಇಳುದು ಬಕ್ಕು. ಮತ್ತೆ ಪುನಾ ಅದೇ ಕಲ್ಲಿನ/ ಹಾಂಗೇ ಇಪ್ಪ ಕಲ್ಲಿನ ಗುಡ್ಡೆ ಕೊಡಿಯಂಗೆ ಕೊಂಡೋಪದು, ಅಲ್ಲಿಂದ ಕೆಳಾಂಗೆ….!!
ಹೀಂಗಿದ್ದ ಇವನ ಬುದ್ದಿ ಕಂಡು ಇವನ ಎಲ್ಲೋರು ಬ್ರಾಂತನ್ ” (ಮರ್ಲ) ಹೇಳ್ಲೆ ಸುರು ಮಾಡಿದವು.ನಾರಾಯಣ ಮಂಗಲ ಮನೆಯವು ಅವನ ಸಾಂಕಿದ ಕಾರಣ ಅವ° ನಾರಾಣತ್ತ್ ಬ್ರಾಂತನ್ ಹೇಳಿಯೇ ಗುರುತಿಸುವ ಹಾಂಗಾದ°.
ಹೆಸರಿಂಗೆ ತಕ್ಕ ಹಾಂಗೆ ತಲೆ ಕಸವೆಲ್ಲ ಬಿಕ್ಕಿ ಹಾಕಿಂಡು, ವಿಚಿತ್ರ ರೀತಿಲಿ ಮಾತಾಡಿಂಡಿಪ್ಪ ಅವನ ಕೈಲಿ ಒಂದು ಸಣ್ಣ ಪಾತ್ರ ಇದ್ದತ್ತು.ಹೊತ್ತೋಪಾಣ ಹೊತ್ತಿಲ್ಲಿ ಆ ಪಾತ್ರಲ್ಲಿ ಹಿಡಿವಷ್ಟು ಅಕ್ಕಿ(ಬಹುಶಃ ನಾಲ್ಕು ಹಿಡಿ ಆಗಿರೆಕು) ಭಿಕ್ಷೆ ಬೇಡಿಕ್ಕಿ ಇರುಳಪ್ಪಗ ಎಲ್ಲಿಗೆತ್ತಿದನೋ ಆ ಜಾಗೆಲಿ ಇಂಗಾಳು ಕಂಡರೆ ಅಲ್ಲೇ ಮೂರು ಕಲ್ಲು ಮಡುಗಿ ಆ ಅಕ್ಕಿಯ ಬೇಶಿ, ಹೆಜ್ಜೆ ಉಂಡಿಕ್ಕಿ ಅಲ್ಲೇ ಮನುಗಿ ಒರಗುದು ಅವನ ಕ್ರಮ. ಅವನ ಎಡದ ಕಾಲಿಂಗೆ ಆನೇಕಾಲು ರೋಗವು ಇದ್ದತ್ತು.
ಹೀಂಗೇ ಒಂದು ದಿನ ಹಗಲಿಡೀ ಗುಡ್ಡೆ ಹತ್ತಿ ಕಲ್ಲು ಉರುಳ್ಸಿಕ್ಕಿ ,ಕತ್ತಲಪ್ಪಗ ಭಿಕ್ಷೆ ಬೇಡಿ ಆ ಅಕ್ಕಿಯ ಬೇಶಲೆ ಇಂಗಾಳು ಹುಡ್ಕಿಂಡು ಹೆರಟ°.ನೆಡದು, ನೆಡದು ಅವ° ಎತ್ತಿದ್ದದು ಒಂದು ಸ್ಮಶಾನಕ್ಕೆ.ರಜ್ಜ ಹೊತ್ತು ಮದಲೇ ಅಲ್ಲೊಂದು ಹೆಣ ಸುಟ್ಟಿದವು ಹೇಳುದಕ್ಕೆ ಸಾಕ್ಷಿಯಾಗಿ ಇಂಗಾಳು ತುಂಬಿದ ಚಿತೆ ಇದ್ದತ್ತು.
ನಾರಾಣತ್ತು ಬ್ರಾಂತಂಗೆ ಆರನ್ನೂ ಹೆದರಿಕೆ ಇಲ್ಲೆ.ಯೇವ ಹೇಸಿಗೆಯೂ ಇಲ್ಲೆ.ಹಾಂಗಾಗಿ ಆ ಚಿತೆಂದಲೇ ನಾಲ್ಕು ಸೌದಿ ತೆಗದು ಅಲ್ಲೇ ಇಪ್ಪ ಮೂರು ಕಲ್ಲಿಲ್ಲಿ ಒಲೆ ಮಾಡಿ ,ಹೆಜ್ಜೆ ಮಡುಗಿ ಉಂಡಿಕ್ಕಿ, ಆನೆಕಾಲು ರೋಗ ಇಪ್ಪ ಅವನ ಕಾಲಿನ ಆ ಒಲೆಯೊಳಾಂಗೆ ನೀಡಿಕ್ಕಿ ಅದೇ ಜಾಗೆಲಿ ಮನುಗಿದ°.
ನೆಡು ಇರುಳಪ್ಪಗ ಭದ್ರಕಾಳಿ ಅದರ ಪರಿವಾರದೊಟ್ಟಿಂಗೆ ಬಂತು.ಹೆಣ ಸುಟ್ಟ ದಿನ ಭದ್ರಕಾಳಿಯೂ ಪರಿವಾರವೂ ಅಲ್ಲಿ ಬಂದು ನೃತ್ಯ ಮಾಡುದು ಕ್ರಮ ಆಡ.
ಅದು ಬಂದು ನೋಡುಗ ಒಬ್ಬ° ಮನುಶ್ಯ ಒಲೆಯೊಳಾಂಗೆ ಕಾಲು ನೀಡಿ ಮನುಗಿದ್ದ°.ಅದೂದೆ ಈ ಸ್ಮಶಾನಲ್ಲಿ,ಸಾಲದ್ದಕ್ಕೆ ನೆಡುಇರುಳು..ಕಾಳಿಗೆ ಆಶ್ಚರ್ಯ ಆತು. ಹೀಂಗಿದ್ದ ಜೆನಂಗಳೂ ಇದ್ದವೋ!?
ಅವನ ಇಲ್ಲಿಂದ ಓಡ್ಸದ್ರೆ ನೃತ್ಯ ಮಾಡ್ಲೆಡಿಯ ಹೇಳಿ ನಾರಾಣತ್ ಬ್ರಾಂತನ ಹತ್ತರೆ ಬಂದು ನಿಂದತ್ತು.ಇವ° ಮನುಗಿದಲ್ಲಿಂದಲೇ ತಲೆ ತಿರುಗಿಸಿ ಅದರ ನೋಡಿದ°. ಅದರ ಉಗ್ರ ರೂಪ ಕಂಡರೂ ಅವಂಗೆಂತಾಯಿದಿಲ್ಲೆ.
“ನೀನಾರು? ಎಂತಕಿಲ್ಲಿ ಮನುಗಿದ್ದು? ಇಲ್ಲಿಂದ ಬೇಗ ಎದ್ದಿಕ್ಕಿ ಹೋಗು. ಇದೆನ್ನ ಜಾಗೆ” ಕಾಳಿಯ ಮಾತು ಕೇಳಿ ಅವಂಗೆ ನೆಗೆ ಬಂತು.
“ಇದೇಂಗೆ ನಿನ್ನ ಜಾಗೆ ಅಪ್ಪದು? ನಿನ್ನ ಜಾಗೆ ಆದರೂ ಆನೆಂತಕೆ ಎದ್ದು ಹೋಯೆಕು?”
ಕಾಳಿಗೆ ಅವನ ಮಾತು ಕೇಳಿ ಕೋಪ ಬಂತು. ಕಾಳಿಯ ಹೆಸರು ಕೇಳುಗಳೇ ಜೆನಂಗೊ ಹೆದರ್ತವು.ಇನ್ನು ರೂಪ ಕಂಡರೆ ಬೋಧ ತಪ್ಪಗು.ಇವಂಗೆ ಮಾತ್ರ ಯೇವ ಹೆದರಿಕೆಯೂ ಇಲ್ಲೆನ್ನೇ.ಅಂಬಗ ರೆಜ ಹೆದರ್ಸಿ ಓಡ್ಸುವ°. ಇಲ್ಲದ್ರೆ ನೃತ್ಯ ಮಾಡ್ಲೆಡಿಯ ಹೇಳಿ ಜಾನ್ಸಿಕ್ಕಿ
“ಇಲ್ಲಿಂದ ಈಗಲೇ ಎದ್ದು ಹೋಗದ್ರೆ ನಿನ್ನ ಹೆದರ್ಸಿ ಓಡ್ಸುವೆ” ಹೇಳಿತ್ತು.
ಅದೆಂತ ಹೇಳಿರೂ ಈ ಬ್ರಾಂತಂಗೆ ನಾಟಿದ್ದೇ ಇಲ್ಲೆ.
“ಉಂಡ ಜಾಗೆಲಿ ಮನುಗುದು ಎನ್ನ ಅಭ್ಯಾಸ. ನೀನು ಎಂತ ಬೇಕಾರೂ ಮಾಡು” ಹೇಳಿಕ್ಕಿ ಅವ° ಸುಮ್ಮನೇ ಕೂದ°.
ಕಾಳಿ ಉಗ್ರ ರೂಪ ತೋರ್ಸಿ ಹೆದರ್ಸಿತ್ತು.ಒಟ್ಟಿಂಗೆ ಅದರ ಗಣಂಗಳೂ ಸೇರಿದವು.ಕೆಂಪು ಕೆಂಪು ನೆತ್ತರು ಹರಿವ ನಾಲಗೆ ತೋರ್ಸಿಂಡು ಇವನ ಹತ್ತರೆ ಬಂದು ನಿಂದರು ಅವ° “ಹ್ಹ…ಹ್ಹ..” ಹೇಳಿ ನೆಗೆ ಮಾಡಿಂಡೇ ಇತ್ತಿದ್ದ°.
ಎಂತ ಮಾಡಿರೂ ಹೆದರ್ತಾಯಿಲ್ಲೇಳಿಯಪ್ಪಗ ಕಾಳಿ ಸೋತತ್ತು.ಇನ್ನಿಲ್ಲಿ ನಿಂದು ಪ್ರಯೋಜನ ಇಲ್ಲೇಳಿ ಅದು ವಾಪಾಸು ಹೋಪಲೆ ಹೆರಟತ್ತು.ಹೋಪ ಮದಲು ಈ ಮಹಾನ್ ವ್ಯೆಕ್ತಿಗೆ ಒಂದೆರಡು ವರ ಕೊಡುವೊ° ಹೇಳಿ ಆತದಕ್ಕೆ.ಪುನಾ ಅವನತ್ರಂಗೆ ಬಂದು ನಿಂದತ್ತು.
“ನೀನಿನ್ನೂ ಹೋಯಿದಿಲ್ಯಾ?” ಕೇಳಿದ° ಅವ°.
“ಇಲ್ಲೆ, ನಿನ್ನ ಹಾಂಗಿದ್ದ ಜೆನರ ಆನು ಸುರೂ ನೋಡಿದ್ದು.ನಿನ್ನ ಧೈರ್ಯ ಕಂಡು ಎನಗೆ ಆಶ್ಚರ್ಯವೂ, ಸಂತೋಶವೂ ಆಯಿದು. ಹಾಂಗಾಗಿ ನಿನಗೆ ಬೇಕಾದ ವರ ಕೇಳು” ಹೇಳಿತ್ತು.
“ಎನಗೆ ಯೇವ ವರವೂ ಬೇಡ, ನೀನು ನಿನ್ನಷ್ಟಕೆ ಹೋಗು”
“ಹಾಂಗೆ ಹೇಳೆಡ, ನಿನಗೆ ಅಗತ್ಯ ಇಪ್ಪ ವರ ಕೇಳು, ಕೊಡುವ ಶಕ್ತಿ ಎನಗಿದ್ದು” ಕಾಳಿ ಹಾಂಗೆ ಕೇಳಿಯಪ್ಪಗ ಅವ° ಹೇಳಿದ°
“ಎನ್ನ ಆಯುಶ್ಯ ಇನ್ನೆಷ್ಟು ದಿನ ಇದ್ದು ಹೇಳ್ಲೆಡಿಗೋ?”
ಕಾಳಿ ಅಂಬಗಳೇ ವರ್ಷ,ತಿಂಗಳು, ವಾರ,ದಿನ ,ಗಂಟೆ,ಘಳಿಗೆ ಸಹಿತ ಲೆಕ್ಕ ಮಾಡಿ ಹೇಳಿತ್ತು.ಬ್ರಾಂತ ಕೇಳಿದ°
“ಇದರಿಂದ ಒಂದು ದಿನ ಹೆಚ್ಚು ಬದುಕುವ ಹಾಂಗೆ ಮಾಡ್ಲೆಡಿಗೋ ನಿನಗೆ” ಕಾಳಿಯ ಮೋರೆ ಕುಂಞಿ ಕುಂಞಿ ಆತು.
“ಇದು ಮಾಂತ್ರ ಎನ್ನಂದೆಡಿಯ,ಅದು ನಿಂಗೊ ಹುಟ್ಟುವ ಮದಲೇ ದೇವರು ನಿಗೆಂಟು ಮಾಡಿರ್ತ.ಅದರ ಬದಲ್ಸುವ ಶಕ್ತಿ ಎನಗಿಲ್ಲೆ'”
“ಅಂಬಗ ಒಂದು ದಿನ ಮದಲೇ ಸಾವ ಹಾಂಗೆ ಮಾಡ್ಲೆಡಿಗೋ?”
ಕಾಳಿ ಅದಕ್ಕೂ “ಎಡಿಯ” ಹೇಳಿತ್ತು.ಬ್ರಾಂತ ದೊಡ್ಡಕೆ ನೆಗೆ ಮಾಡಿದ°
“ಒಂದು ದಿನದ ಆಯುಸ್ಸು ಹೆಚ್ಚು, ಕಮ್ಮಿ ಮಾಡ್ಲೆಡಿಯದ್ದ ನೀನೆಂತರ ವರ ಕೊಡ್ತೆ ಹೇಳುದು? ಅದೆಡಿಯದ್ದ ನಿನಗೆ ಬೇರೆಂತ ಮಾಡ್ಲೂ ಎಡಿಯ, ತಳಿಯದ್ದೆ ಬಂದ ದಾರಿಲೇ ಹೋಗು,ಎನಗೆ ಉದಿಯಪ್ಪಗ ಎದ್ದು ಕಲ್ಲು ಉರುಳ್ಸಲೆ ಹೋಯೆಕು”
“ಎಂತಾರೊಂದು ವರ ಕೇಳು,ಅದಲ್ಲದ್ದೇ ಎಷ್ಟೋ ವರಂಗೊ ಇದ್ದನ್ನೇ .ನಿನಗೆ ಉಪಕಾರಪ್ಪ ಹಾಂಗಿದ್ದದೆಂತಾರಿದ್ದರೆ ಕೇಳು,ಆನು ಖಂಡಿತ ಕೊಡ್ತೆ”
“ಅಂಬಗ ನೀನೆನಗೆ ವರ ಕೊಡದ್ದೆ ಹೋವ್ತೇಯಿಲ್ಲೆ ಅಲ್ದಾ? ಅಂಬಗ ಆನೊಂದು ವರ ಕೇಳ್ತೆ ,ಕೊಡ್ಲೆಡಿಗಾ?”
ಕಾಳಿಗೆ ತುಂಬ ಸಂತೋಶಾತು.ಹೇಂಗಾರು ಇವ° ವರ ತೆಕ್ಕೊಂಬಲೆ ಒಪ್ಪಿದನ್ನೇ.
“ಖಂಡಿತ ಕೊಡ್ತೆ,ಬೇಗ ಕೇಳು”
“ನಿನಗೆ ವರ ಕೊಡುವ ಶಕ್ತಿ ಇದ್ದರೆ ಎನ್ನ ಎಡದ ಕಾಲಿಲ್ಲಿಪ್ಪ ಆನೆಕಾಲು ರೋಗವ ಬಲದ ಕಾಲಿಂಗೆ ಮಾಡು.ಬೇರೆಂತದೂ ಬೇಡ,ಮತ್ತೆ ನಿನಗೆ ಹೋಪಲಕ್ಕು”
ಕಾಳಿಗೆ ಒಂದರಿ ಆಶ್ಚರ್ಯ ಆದರೂ ಯಾವುದೇ ವರ ಅಗತ್ಯ ಇಲ್ಲೆ,ದೇವರು ಕೊಟ್ಟದರ್ಲಿ ಆನು ಸಂತೃಪ್ತ ಹೇಳುವ ಅವನ ಮನಸಿಂಗೆ ಮೆಚ್ಚಿಕ್ಕಿ ಎಡದ ಕಾಲಿನ ರೋಗ ಬಲದ ಕಾಲಿಂಗೆ ಅಪ್ಪಾಂಗೆ ವರ ಕೊಟ್ಟಿಕ್ಕಿ ಹೋತದು.
ಮರದಿನ ಉದಿಯಪ್ಪಗಲೇ ನಾರಾಣತ್ತ್ ಬ್ರಾಂತ ಯೇವಗಾಣಾಂಗೆ ಕಲ್ಲು ಉರುಳ್ಸಿಂಡು ಗುಡ್ಡೆ ಹತ್ತಿದ°, ಅಲ್ಲಿಂದ ಕೆಳ ಹಾಕಿದ°. ಮತ್ತೆ ಪುನಾ ಕಲ್ಲು ಹೊತ್ತ°, ಉರುಳ್ಸಿದ°……ಹೀಂಗೇ ಅವನ ಬದುಕು ಮುಂದುವರಿತ್ತಾ ಇದ್ದತ್ತು.
ಹೀಂಗೇ ಗುಡ್ಡೆ ಕೊಡಿಯಂಗೆ ಹೋದ ಬ್ರಾಂತ° ಒಂದು ಸರ್ತಿ ಹೋದವ° ಕೆಳ ಇಳುದ್ದನೇ ಇಲ್ಲೆ.ಅವ° ವಾಪಸು ಬಕ್ಕು ಹೇಳಿ ಅವನ ಸಾಂಕಿದ ನಾರಾಯಣ ಮಂಗಲ ಮನೆಯವು ದೀಪ ಹೊತ್ಸಿ ಮಡುಗಿ ಸುಮಾರು ದಿನ ಕಾದು ಕೂದವಾಡ. ಆದರೆ ಅವನ ಮತ್ತೆ ಆರೂ ಕಂಡಿದವೇ ಇಲ್ಲೆ. ಅವ° ಕಾಣೆಯಾದ್ದು ಮೀನ ತಿಂಗಳಿನ ಮೂಲಾ ನಕ್ಷತ್ರದ ದಿನ.ನಾರಾಯಣ ಮಂಗಲ ಮನೆಯವು ಬ್ರಾಹ್ಮಣರಾದರೂ ಬ್ರಾಂದ° ಸರಿಯಾದ ಬ್ರಾಹ್ಮಣ ಅಲ್ಲದ್ದ ಕಾರಣ ಅವಂಗೆ ಶ್ರಾದ್ಧ ಮಾಡದ್ದೆ ಅವ° ಕಾಣೆಯಾದ ದಿನ “ನಮಸ್ಕಾರ ಊಟ್ಟ್” ಹೇಳಿ ಬ್ರಾಹ್ಮರಿಂಗೆ ವಿಶೇಷ ಭೋಜನ ಕೊಡುವ ಆಚರಣೆ ಮಾಡಿದವಾಡ.{ಆ ಕಾರ್ಯಕ್ರಮ ಆ ಮನೆಲಿ ಇಂದಿಗೂ ನಡೆತ್ತಾ ಇದ್ದು ಹೇಳಿ ಐತಿಹ್ಯಮಾಲಾ ಪುಸ್ತಕಲ್ಲಿ ಇದ್ದು.}
ಪಾಲೆಕ್ಕಾಡು ಜಿಲ್ಲೆಯ ಕುಂತೀ ಹೊಳೆಯ ಹತ್ತರೆ ನಾರಾಣತ್ತ್ ಬ್ರಾಂತ ‘ರಾಯರನೆಲ್ಲೂರ್’ ಗುಡ್ಡೆಯ ಕೊಡಿಯಂಗೆ ಕೊಂಡೋಗಿಂಡಿತ್ತಿದ್ದ ಕಲ್ಲು ಈಗಲೂ ಇದ್ದಾಡ. ಆ ಗುಡ್ಡೆಯ ಕೊಡೀಲಿ ನಾರಾಣತ್ತ್ ಬ್ರಾಂತನ ಸ್ಮಾರಕವಾಗಿ ಕೇರಳ ಸರಕಾರ ಒಂದು ಕಲ್ಲಿನ ವಿಗ್ರಹವ ಸ್ಥಾಪನೆ ಮಾಡಿದ್ದು.
ಕೇರಳದ ಪ್ರಸಿದ್ಧ ಕವಿ ಮಧುಸೂಧನನ್ ನಾಯರ್ ಬರದ
“ಪಂದ್ರಂಡ್ ಮಕ್ಕಳೇ ಪೆಟ್ಟೊರಮ್ಮೇ
ನಿಂಡೆ ಮಕ್ಕಳಿಲ್ ಞಾನಾಣ್ ಬ್ರಾಂತನ್
ಪಂದ್ರಂಡ್ ರಾಶಿಯುಂ ನೀಟ್ಟುಮಮ್ಮೇ
ನಿಂಡೆ ಮಕ್ಕಳಿಲ್ ಞಾನಾಣನಾಥನ್……”
ಈ ಕವಿತೆ ತುಂಬಾ ಜನಪ್ರಿಯತೆ ಗಳಿಸಿ “ಪರಯಿ ಪೆಟ್ಟ ಪಂದಿರುಕುಲಂ” ಕತೆಯ ಬಗ್ಗೆ ಓದುವವಕ್ಕೆ, ಕೇಳುವವಕ್ಕೆ ಒಂದು ರೀತಿಯ ಕುತೂಹಲಪ್ಪ ಹಾಂಗೆ ಮಾಡ್ತು.
ಪ್ರಸನ್ನಾ ವಿ ಚೆಕ್ಕೆಮನೆ
ಧರ್ಮತ್ತಡ್ಕ
- ಒಲುಮೆಯ ಸಿರಿದೀಪ - October 22, 2021
- ಸ್ವಯಂವರ ಭಾಗ 51-ಪ್ರಸನ್ನಾ ವಿ ಚೆಕ್ಕೆಮನೆ - June 1, 2020
- ಸ್ವಯಂವರ ಭಾಗ 50-ಪ್ರಸನ್ನಾ ವಿ ಚೆಕ್ಕೆಮನೆ - May 25, 2020
ನಿಜ, ಒಳ್ಳೆ ಕುತೂಹಲ ಹುಟ್ಟುಸಿತ್ತು ಕತೆ. ಹೊಸ ನಮೂನೆಯ ಕಥೆ.