Oppanna.com

ಪರಯಿ ಪೆಟ್ಟ ಪಂದಿರುಕುಲಂ {ಪಂಚಮಳಿಂದುದಯಿಸಿದ ಹನ್ನೆರಡು ಕುಲ}-ಭಾಗ 2

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   12/09/2019    0 ಒಪ್ಪಂಗೊ

ಪರಯಿ ಪೆಟ್ಟ ಪಂದಿರುಕುಲಂ
{ಪಂಚಮಳಿಂದುದಯಿಸಿದ ಹನ್ನೆರಡು ಕುಲ} ಭಾಗ 2

ಕೆಲವು ವರ್ಷ ಕಳುದತ್ತು.ಬ್ರಹ್ಮಚಾರಿಯಾದ ವರರುಚಿ  ಮದುವೆ ಅಪ್ಪಲೆ ಯೋಗ್ಯವಾದ ಕೂಸಿನ ಹುಡ್ಕಲೆ ಸುರು ಮಾಡಿದ°.
ಮದುವೆಗೆ ಇಪ್ಪ ಕನ್ಯೆ ಇದ್ದು ಹೇಳಿ ಗೊಂತಾದ ಮನೆಗೊಕ್ಕೆ ಅವ° ಹೋಕು. ಅಲ್ಲಿ ಹೋಗಿ ಅವರತ್ರೆ ಹೀಂಗೆ ಹೇಳುಗು
“ಆನು ಮಿಂದಿಕ್ಕಿ ಬಪ್ಪಗ ಎನಗೆ ಸುತ್ತಲೆ ಒಂದು ಪಟ್ಟೆ ವಸ್ತ್ರ ಬೇಕು,ಉಂಬಲೆ ನೂರೊಂದು ಬಗೆಯ ವ್ಯಂಜನಂಗೊ ಬೇಕು,ಉಂಡಿಕ್ಕಿ ತಿಂಬಲೆ ಮೂರು ಜೆನ ಬೇಕು, ಮತ್ತೆ ಎನ್ನ ತಾಂಗಿ ನಿಲ್ಸಲೆ ನಾಲ್ಕು ಜನವೂ ಬೇಕು.ಅಷ್ಟು ವ್ಯೆವಸ್ಥೆ ನಿಂಗಳಲ್ಲಿದ್ದರೆ ಆನು ಉಂಬದು”.

ನೂರರಿಂದಲೂ ಹೆಚ್ಚು ಮನೆಗೊಕ್ಕೆ ಹೊಕ್ಕು ಹೆರಟರೂ ಅವಂಗೆ ಇದಕ್ಕೆ ಸರಿಯಾದ ಉತ್ತರ ಸಿಕ್ಕಿದ್ದೇ ಇಲ್ಲೆ. ಎಲ್ಲಾ ಮನೆಗಳಲ್ಲೂ
” ಅಯ್ಯೋ.. ಹೀಂಗಿದ್ದದೆಲ್ಲ ಮಾಡ್ಲೆ ಎಂಗಳಲ್ಲಿ ಎಡಿಯಪ್ಪಾ, ನಿಂಗೊ ಮಿಂದಿಕ್ಕಿ ಬಪ್ಪಗ ನೂರೊಂದು ಬಗೆಯ ಬೆಂದಿ ಮಾಡುದಾದರು ಹೇಂಗೆ? ಅಷ್ಟು ಮಾಡ್ಲೆ ಎಷ್ಟು ಸಾಮಾನು ಬೇಕು? ಮತ್ತೆ ನಿಂಗೊಗೆ ಮೂರು ಜೆನರ ತಿಂಬಲೂ ಕೊಡ್ಲೆಡಿಯ, ಹೊರ್ಲು ತ್ರಾಣ ಇಪ್ಪವು ಎಂಗಳಲ್ಲಿ ಆರೂ ಇಲ್ಲೆ” ಹೇಳಿ ಹಾಂಗೇ ಕಳ್ಸಿದವು.

ಹಾಂಗೇ ಊರೂರು ಸುತ್ತಿ ಒಂದು ದಿನ ಯೇವದೋ ಒಂದು ಗುರ್ತಯಿಲ್ಲದ್ದ ಊರಿಂಗೆ ಎತ್ತಿದ°. ಮಧ್ಯಾಹ್ನದ ಹೊತ್ತು. ಊಟಕ್ಕೆ ಹೋಪಲೆ ಯೇವದಾದರು ಬ್ರಾಹ್ಮರ ಮನೆಯಿದ್ದೋಳಿ ಆರತ್ರೋ ಕೇಳಿಯಪ್ಪಗ ಅಲ್ಲೇ ಹತ್ತರೆಯಿಪ್ಪ ಸಣ್ಣ ಮನೆಯ ತೋರ್ಸಿದವು. ಅವ° ಅತ್ಲಾಗಿ ನೆಡದ°.

ಮನಗೆ ಬಂದ ಅತಿಥಿಗೆ ಆ ಮನೆ ಯೆಜಮಾನ ಆಸರಿಂಗೆ ಕೊಟ್ಟಿಕ್ಕಿ
“ಇಲ್ಲೇ ಹತ್ತರೆ ಕೆರೆಯಿದ್ದು .ಮಿಂದಿಕ್ಕಿ ಬಂದರೆ ಉಂಬಲಕ್ಕು,ಅಡಿಗೆ ಆಯಿದು” ಹೇಳದ°.ವರರುಚಿಗೆ ಆ ಮನೆಯವರ ನಡವಳಿಕೆ ಕೊಶಿಯಾತು. ಆ ಬ್ರಾಹ್ಮಣಂಗೆ ಮಗಳಿದ್ದೋಳಿ ಅವಂಗೆ ಗೊಂತಿಲ್ಲದ್ರೂ ಎಲ್ಲಾ ಮನೆಗಳಲ್ಲೂ ಹೇಳುವಾಂಗೆ ಇಲ್ಲಿಯೂ “ಸುತ್ತಲೆ ಪಟ್ಟೆ ವಸ್ತ್ರ, ನೂರೊಂದು ಬಗೆ ಬೆಂದಿ,ತಿಂಬಲೆ ಮೂರು ಜೆನ,ಹೊರ್ಲೆ ನಾಲ್ಕು ಜೆನ….’ ಹೇಳಿದ°.

ಆ ಬ್ರಾಹ್ಮಣಂಗೆ ರಜ ಹೆದರಿಕೆ ಆತು.
” ಅಯ್ಯೋ ಎಂಗೊ ಇಲ್ಲಿ ಇಪ್ಪದೇ ಮೂರು ಜೆನ. ಮತ್ತೆ ನಿಂಗೊಗೆ ತಿಂಬಲೆ, ಹೊರ್ಲೆ ಎಲ್ಲ ಜೆನ ಎಲ್ಲಿದ್ದು! ಎಂಗಳಿಂದ ಅದೆಲ್ಲ ಪೂರೈಸ. ಆದರೂ ಮಧ್ಯಾಹ್ನ ಹೊತ್ತಿಲ್ಲಿ ಬಂದ ನಿಂಗೊ ಹಾಂಗೇ ಹೋಪಲಾಗ” ಹೇಳಿದ°.
ಅಷ್ಟಪ್ಪಗ ಮನೆಯ ಒಳಾಂದ ಒಂದು ಚೆಂದದ ಸ್ವರ ಕೇಳಿತ್ತು
“ಅವು ಕೇಳಿದ ವ್ಯೆವಸ್ಥೆ ಎಲ್ಲ ಇಲ್ಲಿ ಇದ್ದೂಳಿ ಹೇಳಿಯಪ್ಪಾ°. ಅವು ಮಿಂದಿಕ್ಕಿ ಬರ್ಲಿ..”
“ನೀನೆಂತರ ಮಗಳೂ ಮರ್ಲು ಹೇಳುದಾ? ಅವ° ಮಿಂದಿಕ್ಕಿ ಬಪ್ಪಗ ನೂರೊಂದು ಬಗೆಯ ಅಡಿಗೆ ಮಾಡ್ಲೆಡಿಗೊ ನವಗೆ.ಸಾಲದ್ದಕ್ಕೆ ಅಬ್ಬೆಯೂ ಇಲ್ಲೆ ಇಂದು”

“ನಿಂಗೊ ಎಂತದೂ ಹೆದರೆಡಿ ಅಪ್ಪಾ°” ಹೇಳಿತ್ತು ಆ ಬುದ್ಧಿವಂತೆಯಾದ ಮಗಳು.

ರಜ ಹೊತ್ತಿಲ್ಲಿ ವರರುಚಿ ಮಿಂದಿಕ್ಕಿ ಬಂದ°. ಅವಂಗೆ ಸುತ್ತಲೆ ಪಟ್ಟೆ ವಸ್ತ್ರ ಬೇಕನ್ನೇ. ಬ್ರಾಹ್ಮಣನ ನೋಡಿದ°.
ಅವ° ವಸ್ತ್ರ ತಂದು ಕೊಟ್ಟ°. ಕೌಪೀನ ವಸ್ತ್ರ ಅದು. ವರರುಚಿಗೆ ಬೇಕಾದ್ದದೂ ಅದುವೇ ಆಗಿತ್ತು.
“ಉಂಬಲೆ ಬನ್ನೀ. ಬಾಳೆ ಮಡುಗಿ ಆಯಿದು” ಬ್ರಾಹ್ಮಣ ಹೇಳಿಯಪ್ಪಗ ವರರುಚಿ ಅವನೊಟ್ಟಿಂಗೆ ಹೋಗಿ ಉಂಬಲೆ ಕೂದ°. ತಾಳು,ಅಶನ ಬಳ್ಸಿಕ್ಕಿ ಶುಂಠಿ ತಂಬುಳಿ ತಂದು ಬಳ್ಸಿದವು. ಶುಂಠಿ ತಂಬುಳಿ ಇದ್ದರೆ ನೂರೊಂದು ವಿಧದ ಅಡಿಗೆಗೆ ಸಮ ಆಡ.

ವರರುಚಿ ಸಂತೋಶಲ್ಲಿ ಹೊಟ್ಟೆ ತುಂಬ ಉಂಡು  ಕೈ ತೊಳದಿಕ್ಕಿ ಬಂದಪ್ಪಗ ಎಲೆತಟ್ಟೆ ಎದುರೇ ತಂದು ಮಡುಗಿದವು‌. ಆಶ್ಚರ್ಯಂದಲೇ ಎಲೆ ತಿಂದು ತುಪ್ಪಿಕ್ಕಿ ಬಪ್ಪಗ ಮನುಗುಲಿಪ್ಪ ಮಂಚವನ್ನು ತೋರ್ಸಿದವು.
ಅವ° ಸಂತೋಶಲ್ಲಿ ರಜ ಹೊತ್ತು ವಿಶ್ರಾಂತಿಯನ್ನು ಪಡದು ಆ ಮನೆಂದ ಹೆರಡುವ ಆಲೋಚನೆ ಮಾಡಿದ°.

ಹೆರಟಪ್ಪಗ ಆ ಮನೆ ಯಜಮಾನನತ್ರೆ ಕೇಳಿದ°
“ಎನಗೆ ಬೇಕಾದಾಂಗಿದ್ದ ವ್ಯವಸ್ಥೆ ಮಾಡಿಕೊಟ್ಟದಾರು? ಆನು ಸುರುವಿಂಗೆ ಕೇಳಿಯಪ್ಪಗ ನಿಂಗೊ ಎಡಿಯ ಹೇಳಿದ್ದಿ,ಮತ್ತೆ ಎಡಿಗು ಹೇಳಿ ಬೇಕಾದಾಂಗೆ ಮಾಡಿ ಕೊಟ್ಟಿದಿ.ಇದರ ಹಿಂದೆ ಇಪ್ಪ ಜಾಣ್ಮೆ ಆರದ್ದು?”

“ಅದೆನ್ನ ಮಗಳು” ಬ್ರಾಹ್ಮಣಂಗೆ ವರರುಚಿಗೆ ತೃಪ್ತಿ ಆತನ್ನೇ ಹೇಳಿ ಸಮದಾನ ಆತು.
ವರರುಚಿಗೂ ಅಷ್ಟು ಬುದ್ಧಿವಂತಿಕೆ ಇಪ್ಪ ಕೂಸಿನ ಮದುವೆ ಆದರಕ್ಕೋಳಿ ಒಂದು ಆಶೆಯುದೆ.
ಮನಸಿಲ್ಲಿಪ್ಪದರ ಹಾಂಗೇ ಕೇಳಿದ°.

ವರರುಚಿಯ ಹಾಂಗಿದ್ದ ಮಹಾ ವಿದ್ವಾಂಸ ಮಗಳ ಕೇಳಿರೆ  ಅದಕ್ಕಿಂತ ಸಂತೋಶ ಬೇರೆಂತಯಿದ್ದು?
ಹಾಂಗೇ ಆದಷ್ಟು ಬೇಗ ಅವರ ಮದುವೆಯೂ ಕಳುದತ್ತು.ಅನುಕೂಲಳಾದ ,ಬುದ್ಧಿವಂತೆಯಾದ ಹೆಂಡತಿಯತ್ರೆ ವರರುಚಿಗೆ ಭಾರೀ ಪ್ರೀತಿ . ಪುರ್ಸೊತ್ತಿಪ್ಪಗ ಎಲ್ಲ ಅದರೊಟ್ಟಿಂಗೆ ಪಟ್ಟಾಂಗ,ಹೊಸ ಹೊಸ ವಿಶಯಂಗಳ ವಿಮರ್ಶೆ.ಎಲ್ಲಾ ವಿಶಯಲ್ಲೂ ಅದು ಜಾಣೆ ಹೇಳಿ ಗೊಂತಪ್ಪಗ ಅವನ ಮನಸ್ಸು ಸಂತೋಶಲ್ಲಿ ಉಬ್ಬಿತ್ತು. ಇಷ್ಟು ಒಳ್ಳೆ ಹೆಂಡತಿ ಸಿಕ್ಕಿದ್ದು ಎನ್ನ ಪೂರ್ವ ಜನ್ಮದ ಪುಣ್ಯ ಹೇಳಿಯೇ ಗ್ರೇಶಿದ°. ಹೀಂಗೇ ಅದರ ಎಷ್ಟು ಪ್ರೀತಿಸಿರೂ ಅವಂಗೆ ಕಮ್ಮಿ ಹೇಳಿಯೇ ಆಗಿಂಡಿದ್ದತ್ತು. ಅಷ್ಟೊಳ್ಳೆ ಕ್ರಮದ ಕೂಸಾಗಿದ್ದತ್ತು ಅದು.

ಮಧುರ ದಾಂಪತ್ಯದ ಸರಸ ಸಲ್ಲಾಪದ ಒಂದು ಹೊತ್ತಿಲ್ಲಿ ವರರುಚಿ ಹೆಂಡತಿ ತಲೆ ಬಾಚುಗ ಹತ್ತರೆ ಬಂದು ಅದರ ಕೈಂದ ಬಾಚಣಿಗೆ ತೆಕ್ಕೊಂಡು
“ಇಂದು ನಿನ್ನ ತಲೆ ಬಾಚಿ ಕಟ್ಟುದು ಆನು” ಹೇಳಿದ°. ಹೆಂಡತಿಗೆ ಗೆಂಡನ ಪ್ರೀತಿ ಕಂಡು ಹೃದಯ ತುಂಬಿ ಬಂತು. ದ್ವಾಪರ ಯುಗಲ್ಲಿ ಶ್ರೀಕೃಷ್ಣ ದೇವರು ಯಾವ ರೀತಿಲಿ ಗೋಪಿಕೆಯರ ಜೊತೆಲಿ ಇತ್ತಿದ್ದನೋ ಅದೆಲ್ಲವೂ ಎನ್ನ ಗಂಡನ ಪ್ರೀತಿಲಿ ಇದ್ದು ಹೇಳಿ ಆ ಸಾಧ್ವಿ ಜಾನ್ಸಿತ್ತು.

ಗೆಂಡ ತಲೆ ಬಾಚಲೆ ಹೆರಟ°. ಹೆಂಡತಿಯ ತಲೆಕಸವು ಕಪ್ಪಾಗಿ ,ನೊಂಪಾಗಿ, ರೇಷ್ಮೆನೂಲಿನ ಹಾಂಗಿದ್ದತ್ತು. ಇವ° ಬಾಚುಗ ಎಲ್ಲ ನೆತ್ತಿಗೆ ಬಾಚಣಿಗೆ ಹೋಪಗ ಅಲ್ಲೆಂತೋ ತಡ್ಪಿದ ಹಾಂಗಾಗಿಂಡಿದ್ದತ್ತು. ಎರಡು ಮೂರು ಸರ್ತಿ ಹಾಂಗೇ ಅಪ್ಪಗ ಅವ° ಬಾಚುದು ನಿಲ್ಸಿ ಅದರ ತಲೆಯ ನೋಡಿದ°!.
ಅಲ್ಲಿ ದೊಡ್ಡ ಗಾಯದ ಗುರ್ತ!!!!!

“ಅಯ್ಯೋ ಇದೆಂತಾದ್ದು ನಿನ್ನ ತಲೆಲಿ? ಇಷ್ಟು ದೊಡ್ಡ ಕಲೆ ಒಳಿಯೆಕಾರೆ ಎಂತದೋ ಸಜ್ಜಿಲಿ ತಾಗಿರೆಕನ್ನೇ” ಎದೆಯ ಒಳ ಎಲ್ಲಿಯೋ ಒಂದು ನಡುಕ ಸುರುವಾತವಂಗೆ.

ಹೆಂಡತಿ ತಲೆ ಒಂದರಿ ಒದ್ದಿಕ್ಕಿ ಮೆಲ್ಲಂಗೆ ಹೇಳಿತ್ತು
“ಅದೊಂದು ಕತೆ..!! ಆನು ನಿಜವಾಗಿಯೂ ಆರ ಮಗಳು ಹೇಳಿ ಎನಗೆ ಗೊಂತಿಲ್ಲೆ, ಆನಿದ್ದದು ಎನ್ನ ಸಾಂಕಿದ ಅಪ್ಪ° ,ಅಬ್ಬೆಯೊಟ್ಟಿಂಗೆ. ಒಂದು ದಿನ ಎನ್ನ ಅಬ್ಬೆ ಹೊಳೆಗೆ ಮೀವಲೆ ಹೋದಿಪ್ಪಗ ಒಂದು ಬಾಳೆದಂಡಿನ ತೆಪ್ಪದ ಒಳ ತಲಗೆ ದೊಂದಿ ಕಟ್ಟಿ ಮನುಶಿದ ನವಜಾತ ಶಿಶು ಸಿಕ್ಕಿತ್ತಾಡ. ಮದುವೆ ಕಳುದು ತುಂಬ ವರ್ಷಾದರೂ ಮಕ್ಕೊ ಆಗದ್ದ ಎನ್ನ ಅಬ್ಬೆ ಆ ಹೆಣ್ಣು ಶಿಶುವಿನ ಅಲ್ಲಿಂದ ಕರಕ್ಕೊಂಡು ಮನಗೆ ಹೋಗಿ,ತಲಗೆ ಕುತ್ತಿದ ದೊಂದಿಯ ಕೋಲೆಲ್ಲ ತೆಗದು ,ಒಳ್ಳೆ ವೈದ್ಯರ ಕೈಲಿ ಮದ್ದು ಮಾಡ್ಸಿ ಗುಣ ಅಪ್ಪಾಂಗೆ ಮಾಡಿ ,ಅವರ ಸ್ವಂತ ಮಗಳ ಹಾಂಗೆ ಪ್ರೀತಿಲಿ ನೋಡ್ಯೊಂಡವು. ಸಣ್ಣ ಬಾಬೆ ಆಗಿಪ್ಪಗ ಆದ ಗಾಯಾದ ಕಾರಣ ಎಷ್ಟು ಸಮಯ ಮದ್ದು ಮಾಡಿರೂ ಕಲೆ ಹೋಯಿದೇಯಿಲ್ಲೆ. ಮತ್ತೆ ತಲೆಕಸವು ದಪ್ಪಕೆ ಇದ್ದ ಕಾರಣ ಹೆರ ಆರಿಂಗೂ ಗೊಂತಾವ್ತಿಲ್ಲೆನ್ನೇಳಿ ಸಮದಾನ ಆತು”.

ಹೆಂಡತಿ ಅಷ್ಟು ಕತೆ ಹೇಳಿ ನಿಲ್ಸಿಯಪ್ಪಗ ವರರುಚಿಯ ಮೋರೆ ಎಲ್ಲ ಕೆಂಪು ಕೆಂಪಾತು. ತಲೆ ಬಾಚಲೆ ತೆಗದ ಹಣಿಗೆ ಕೈಂದ ಉದುರಿತ್ತು. ಅವನ ಮನಸಿಲ್ಲಿ ಯಕ್ಷಿಣಿಗಳ ಮಾತು ನೆಂಪಾತು. ಅಂದು ಅವು ಹೇಳಿದ ಅದೇ ಪರವನ ಮಗಳು ಇಂದು ಬ್ರಾಹ್ಮಣನ ಮಗಳಾಗಿ ಎನ್ನ ಕೈ ಹಿಡುದ್ದು ಹೇಳಿ ಆ ಮಹಾ ಪಂಡಿತಂಗೆ ಅರ್ಥಪ್ಪಲೆ ಹೆಚ್ಚು ಹೊತ್ತು ಬೇಕಾಯಿದಿಲ್ಲೆ.

ಇಷ್ಟು ಸಮಯ ಪೂಜೆ, ಮಂತ್ರ,ತಂತ್ರ..ಹೇಳಿ ಬ್ರಾಹ್ಮಣ ವಿದ್ವಾಂಸ ಆಗಿ ಮೆರದ ಜಾಗೆಲಿ ಒಂದು ಪರಯಿ(ಪರವನ ಮಗಳು) ಯ ಗಂಡ ಆಗಿ ಬದ್ಕುಲೆ ಮನಸ್ಸು ಒಪ್ಪಿದ್ದಿಲ್ಲೆ. ಹಾಂಗೆ ಹೇಳಿ ಏನೂ ಗೊಂತಿಲ್ಲದ್ದ ಆ ಹೆಂಡತಿಯ ಬಿಟ್ಟರೂ ಚ್ಯುತಿಯಾದ ಕುಲಧರ್ಮ ಮತ್ತೆ ಸಿಕ್ಕುತ್ತಿಲ್ಲೆ. ಹಾಂಗಾಗಿ ಅಂಬಗಳೇ ಮನಸಿಲ್ಲಿ ಒಂದು ಗಟ್ಟಿ ತೀರ್ಮಾನ ಮಾಡಿಕ್ಕಿ ಹೆಂಡತಿ ಹತ್ರೆ

“ನಾವು ಇಲ್ಲಿಂದ ಈ ಕ್ಷಣವೇ ಹೆರಡುವ°. ನಮಗಿನ್ನು ಮನೆ ಮಠ ಹೇಳುವ ಮೋಹ ಇಲ್ಲೆ. ಎಲ್ಲವನ್ನೂ ಬಿಟ್ಟಿಕ್ಕಿ ದೇಶಾಂತರ ಹೋಪೋ°” ಹೇಳಿದ°.

ಪತಿವ್ರತೆಯಾದ ಆ ಹೆಂಡತಿ ಗಂಡನತ್ರೆ “ಏನು,ಏಕೆ?” ಹೇಳುವ ಪ್ರಶ್ನೆ ಕೇಳದ್ದೆ ಆ ಕ್ಷಣವೇ ಅವನೊಟ್ಟಿಂಗೆ ಹೆರಟತ್ತು.
ಖ್ಯಾತ ವಿದ್ವಾಂಸ ಹೇಳಿ ಮಹಾರಾಜನ ಕೈಂದ ಕೂಡ ಸನ್ಮಾನ ಗಳಿಸಿದ ಆ ಪಂಡಿತ ಶ್ರೇಷ್ಠ ಕುಲಧರ್ಮಕ್ಕೆ ಆದ್ಯತೆ ಕೊಟ್ಟು ,ಪೈಸೆ,ವಸ್ತ್ರ, ಒಡವೆ ಎಲ್ಲವನ್ನೂ ಬಿಟ್ಟಿಕ್ಕಿ ಖಾಲಿ ಕೈಲಿ ,ಹೆಂಡತಿಯನ್ನು ಕರಕ್ಕೊಂಡು ಗುರಿ ಇಲ್ಲದ್ದೆ ಮುಂದೆ ಪ್ರಯಾಣ ಮಾಡ್ಲೆ ಸುರು ಮಾಡಿದ°

 

ಇನ್ನೂ ಇದ್ದು…..

 

ಕಳುದವಾರದ್ದರ (ಭಾಗ-1) ಓದೆಕ್ಕಾದರೆ ಈ ಲಿಂಕಿಲ್ಲಿ ಹೋಗಿ:-

 

 

ಪ್ರಸನ್ನಾ ಚೆಕ್ಕೆಮನೆ
ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×