ಸ್ವಯಂವರ ಭಾಗ 47
ಹೊತ್ತೋಪಾಣ ಹೊತ್ತಿಂಗೆ ಸೂರ್ಯ ಪಡುಹೊಡೆಂಗೆ ಹೋಪಗ ಕಾಂಬ ಕೆಂಪು ಕೇಸರಿ ಬಣ್ಣದ ಬೆಣಚ್ಚಿಲ್ಲಿ ಕೇಸರಿ ಬಣ್ಣದ ಚೂಡೀದಾರ್ ಹಾಕಿದ ಸುಪ್ರಿಯನ ಚಂದ ಕಂಡುಕೊಂಡಿದ್ದತ್ತು. ಸಣ್ಣಾದಿಪ್ಪಗಲೇ ರಜ ಹಠ,ತರ್ಕ ಹೆಚ್ಚಿಪ್ಪ ಕೂಸಿಂಗೆ ಹೆಚ್ಚು ಪ್ರೆಂಡುಗಳೂ ಇಲ್ಲೆ. ಅಣ್ಣ ಸುರೇಶನೇ ದೊಡ್ಡ ಫ್ರೆಂಡು.
ಅವ° ಅತ್ತೆಯ ಮನಗೆ ಬಪ್ಪಗ ಸುಪ್ರಿಯನೂ ಅವನೊಟ್ಟಿಂಗೆ ಬಂದು ಕೊಂಡಿದ್ದತ್ತು. ಹಾಂಗೇ ಹಿರಿಯರ ಮನಸಿಲ್ಲಿ ಮೂಡಿದ ಒಂದು ಆಶೆ ಸುದೀಪಂಗೆ ಸುಪ್ರಿಯ° ಹೇಳಿ. ಸುದೀಪಂಗೂ ವಿರೋಧ ಇತ್ತಿದ್ದಿಲ್ಲೆ. ಅಂದರೂ ಅದು ಅವನತ್ರೆ ಈಗೀಗ ಯಾವಗಲೂ ಪೆದಂಬು ಮಾತಾಡಿದಾಂಗೆ ಮಾಡುಗ, ಮನಸಿಂಗೆ ನಾಟುವ ಮಾತಾಡುಗ ಅವಂಗೆ ಇದರೊಟ್ಟಿಗೆ ಜೀವನ ಪೂರ್ತಿ ಬದ್ಕುದೇಂಗೇಳಿ ಒಂದೊಂದರಿ ಆಗಿಂಡಿದ್ದತ್ತು.
ಅವ° ಬಿಎಎಂಎಸ್ ಕಲ್ತು ಡಾಕ್ಟರ° ಆಗಿ ಪ್ರೇಕ್ಟೀಸು ಸುರು ಮಾಡಿಯಪ್ಪಗಳೇ ಅಬ್ಬೆ ಅಪ್ಪ°
“ಇನ್ನು ಆದಷ್ಟು ಬೇಗ ಮದುವೆ ಮಾಡ್ಸುವ°. ಮಾಬಲನತ್ರೆ ಯೇವಗವ ಬದ್ಧ ಮಾಡುದು ಹೇಳಿ ಕೇಳೆಕು ಹೇಳಿತ್ತಿದ್ದವು. ಅಂಬಗ ಅವನೇ ಅದಕ್ಕೆ ಕಲ್ತಾಗಲಿ ಹೇಳಿದ°.
ಡಿಗ್ರಿಗೆ ಸೇರುಗ ಎಲ್ಲ ರಜಾ ಸರಿಯಿದ್ದ ಸುಪ್ರಿಯ° ಅಕೇರಿಯಾಣ ವರ್ಷಕ್ಕೆ ಎತ್ತಿಯಪ್ಪಗ ಸುದೀಪನ ತುಂಬಾ ನಿರ್ಲಕ್ಷ್ಯ ಮಾಡ್ತು ಹೇಳಿ ಅವಂಗೆ ಸರೀ ಗೊಂತಾತು. ಕಾಂಬಲೆ ಚಂದದ,ಶ್ರೀಮಂತರ ಕೂಸಿಂಗೆ ಬರೇ ಒಬ್ಬ ಆಯುರ್ವೇದ ಡಾಕ್ಟರನ ಮದುವೆಪ್ಪಲೆ ಮನಸ್ಸಿರ ಹೇಳಿ ಗ್ರೇಶಿದ ಅವ° ಒಂದೆರಡು ವಾರ ಮೊದಲು ಅಬ್ಬೆ ಅಪ್ಪನ ಕೂರ್ಸಿ ಈ ವಿಶಯ ಅವಕ್ಕೆ ಸರೀ ಅರ್ಥಪ್ಪಾಂಗೆ ಹೇಳಿಯೂ ಬಿಟ್ಟ°.
ಅವನ ಅಪ್ಪ° ಅದರ ಒಪ್ಪಿದವು. ಅಬ್ಬಗೆ ಮಾತ್ರ ಒಪ್ಪಲೆ ಸುರುವಿಂಗೆ ಮನಸ್ಸು ಬಯಿಂದಿಲ್ಲೆ. ಎಷ್ಟಾದರು ಅಣ್ಣನ ಮಗಳಲ್ಲದಾ. ಮನಸಿಲ್ಲಿ ಕಟ್ಟಿ ಮಡುಗಿದ ಆಶೆ ಅವರದ್ದು
“ಸಣ್ಣಾದಿಪ್ಪಗಲೇ ನಿನಗೆ ಅದು ಹೇಳಿ ಮನಸ್ಸಿಲ್ಲಿ ಜಾನ್ಸಿ ಮಡುಗಿದ್ದು ಎಂಗೊ.ಅದರ ಅಬ್ಬೆಪ್ಪನೂ ಹಾಂಗೇ. ಈಗ ಅದು ಹಾಂಗೆ ಮಾಡ್ತು ಹೇಳಿ ನಾವಾಗಿ ಅದರ ಬೇಡ ಹೇಳಿರೆ ಹೇಂಗಕ್ಕು?” ಅಬ್ಬೆ ಹೇಳಿದವು
“ಹಾಂಗಲ್ಲ ಅಬ್ಬೇ..ಎನ್ನೊಟ್ಟಿಂಗೆ ಬದ್ಕೆಕಾದ್ದು ಆರು? ಸುಪ್ರಿಯ ಅಲ್ಲದಾ? ಅವು ಅಲ್ಲನ್ನೇ.ಅದಕ್ಕೆ ಎನ್ನ ಇಷ್ಟ ಇಲ್ಲದ್ರೆ ಮತ್ತೆ ನಿಂಗೊಗೂ ಬಂಙ.ಈಗ ಬದ್ಧ ಎಂತೂ ಕಳ್ದಿಲ್ಲೆನ್ನೇ. ನಿಂಗೊ ನಿಂಗೊ ಮನಸಿಲ್ಲಿ ಗ್ರೇಶಿದ್ದಿ, ಮಾತಾಡಿದ್ದಿ ಅಷ್ಟೇ ಅಲ್ಲದಾ….ಅದರ್ಲಿ ಎಂತಪ್ಪಲಿಲ್ಲೆ”
“ಅಲ್ಲದೋ°.. ಅದಕ್ಕೆ ನಿನ್ನ ಒಪ್ಪಿಗೆ ಆದರೆ ನೀನದರ ಮದುವೆಪ್ಪಲೆ ಒಪ್ಪುವೆಯಾ..ಅದರ ಹೇಳಿಕ್ಕಿ ಈಗ ನಿನಗೇ ಮನಸಿಲ್ಲದ್ರೆ ಈಗಲೇ ಬೇರೆ ಆಲೋಚನೆ ಮಾಡುವ°”
“ಅದು ಅಕ್ಕು ಹೇಳಿರೆ ಎನ್ನದೆಂತ ಅಡ್ಡಿಯಿಲ್ಲೆ. ಆದರೆ ಅದು ಅಷ್ಟು ಸುಲಭಲ್ಲಿ ಒಪ್ಪ ಹೇಳಿ ಎನ್ನ ಮನಸ್ಸು ಹೇಳ್ತು”
“ಅಂತೇ ಏನಾರು ಹೇಳೆಡ. ಅದು ಒಪ್ಪದ್ದೆಂತ. ನಿನಗೆ ಹಾಂಗೆ ಭ್ರಮೆ ಅಷ್ಟೇ” ಅಬ್ಬಗೆ ಮತ್ತೂ ಆಶೆ ಕಡುದ್ದಿಲ್ಲೆ..
“ಆತಬ್ಬೇ…ನೀನು ಬೇಜಾರ ಮಾಡೆಡ. ಹೇಂಗೂ ಅದಕ್ಕೆ ಕಲ್ತಪ್ಪಲೆ ಇನ್ನೂ ಒಂದೆರಡು ತಿಂಗಳಿದ್ದನ್ನೇ. ಮತ್ತೂ ಕಲಿಯೆಕು ಹೇಳಿರೆ ಮತ್ತೆ ಆಲೋಚನೆ ಮಾಡುವೊ°” ಸುದೀಪ ಅಷ್ಟು ಹೇಳಿಕ್ಕಿ ಅಲ್ಲಿಂದ ಎದ್ದು ಹೋದ°.
ಅದಾಗಿ ಒಂದು ವಾರಾತಷ್ಟೆ ಇದಾ ಸುಪ್ರಿಯ° ,ಅಣ್ಣ, ಅಬ್ಬೆಯೊಟ್ಟಿಂಗೆ ಅಲ್ಲಿಗೆ ಬಂತು!! ಹಾಂಗೆ ಅತ್ತಗೆ ಹೆಚ್ಚು ಕೊಶಿ.
ತೋಟಕ್ಕೆ ಹೋದ ಸುದೀಪ° ಮನಗೆ ಬಪ್ಪಗ ಇವರ ಕಂಡು ಅವಂಗೂ ಕೊಶಿ. ಸುಪ್ರಿಯನೂ ಬಯಿಂದು ಹೇಳಿ ಗೊಂತಪ್ಪಗ ಅವನ ಮನಸಿಂಗೆ ತಂಪಾದ ಹಾಂಗಾತು. ಒಂದರಿ ಅದರತ್ರೆ ಮಾತಾಡೆಕು ಹೇಳಿ ಅವನ ಒಳಮನಸ್ಸುದೆ ಕಾದು ಕೂದೊಂಡಿದ್ದತ್ತು. ಅದು ಬಯಿಂದು ಹೇಳಿದ್ದಲ್ಲದ್ದೆ ಅದರ ಕಾಣದ್ದೆ ಇಪ್ಪಗ ಎಲ್ಲಿಗೆ ಹೋದಿಕ್ಕೂಳಿ ಆತು.
ಬಾಕಿ ಎಲ್ಲೋರು ಪಟ್ಟಾಂಗ ಹೊಡವಗ ಇದೆಲ್ಲಿ ಹೋತೂಳಿ ಅವಂಗೆ ಗೊಂತಾಗದ್ದೆ, ಅಲ್ಲಿಪ್ಪವರತ್ರೆ ಸೀದಾ ಕೇಳ್ಲೆಡಿಯದ್ದೆ ನಿಂದವನ ಮನಸ್ಸು ಅವನ ಅಬ್ಬಗಲ್ಲದ್ದೆ ಬೇರಾರಿಂಗೆ ಅರ್ಥಕ್ಕು!
“ಸುಪ್ರಿಯ° ಕಾಪಿ ಕುಡಿವಲೆ ಬಯಿಂದಿಲ್ಲೆ . ಹಿಂದೆ ಹಟ್ಟಿಯತ್ರೆ ಇದ್ದಾ ಕಾಣ್ತು. ಹೋಗಿ ದಿನಿಗೇಳು ಸುದೀ….” ಅಬ್ಬೆ ಅಷ್ಟು ಹೇಳಿಯಪ್ಪಗ ಮನಸ್ಸಿನ ಮೂಲೆಲಿಪ್ಪ ಕೆಂಪು ಗುಲಾಬಿ ಮುಕ್ಕೆ ಅರ್ಧ ಅರಳಿ ನೆಗೆ ಮಾಡುವ ಹಾಂಗಿದ್ದ ಅನುಭವಾತು.
ಆದರೂ ಆ ಕೊಶಿಯ ಹೆರ ತೋರ್ಸದ್ದೆ ಅವ° ಸೀದಾ ಅದರ ಹುಡ್ಕಿಂಡು ಮನೆಯ ಹಿಂದಂಗೆ ಹೋದ°.
ಎಂತೋ ತಲೆಬೆಶಿ ಮಾಡುವ ಹಾಂಗೆ ಅದರ ಮೋರೆ ಬಾಡಿದ್ದು ಕಾಂಬಗ ‘ಪಾಪ’ ಹೇಳಿ ಆತು ಅವಂಗೆ. ಹೆಚ್ಚು ಹತ್ತರೆ ಹೋಗದ್ದೆ ಚಿಟ್ಟೆಯ ಕರೇಲಿ ನಿಂದೊಂಡು ಅದರ ದಿನಿಗೇಳಿದ° . ಫಕ್ಕನೆ ತಿರುಗಿ ನೋಡಿದ ಅದರ ಕಣ್ಣಿಲ್ಲಿ ನೀರು ಕಂಡು ಆಶ್ಚರ್ಯ ಆತವಂಗೆ.
‘ಅಷ್ಟು ಸುಲಭಲ್ಲಿ ಕೂಗುಸುಲೆಡಿಯದ್ದ ಕೂಸು ಸುಪ್ರಿಯ°. ಈಗ ಒಬ್ಬನೇ ನಿಂದು ಕಣ್ಣೀರು ಹಾಕೆಕಾರೆ ಎಂತಾಯಿದು? ಪಾಪ ,ಎಂತ ಬೇಜಾರೋ ಏನೋ?’ ಹೇಳಿ ಗ್ರೇಶಿಂಡು ಹತ್ತರೆ ಬಂದ°
“ಎಂತ ಇಲ್ಲಿ ಒಬ್ಬನೇ ನಿಂದುಕೊಂಡದು? ಅಲ್ಲಿ ಎಲ್ಲರೂ ಕಾಯ್ತವು”
ಅವನ ಪ್ರೀತಿಯ ಮಾತಿಂಗೆ ಮನಸ್ಸು ತುಂಬಿಬಂತು. ಎಂತ ಹೇಳೆಕೂಳಿ ಗ್ರೇಶಿಂಡಿಪ್ಪಗಳೇ ಅಲ್ಲಿಗೆ ಅಣ್ಣ ಬಂದ°
“ಬೇಗ ಬಾ..ಪುಟ್ಟತ್ತೆಯ ಈಗ ಮನೆಲಿ ಬಿಟ್ಟಿಕ್ಕಿ ಬರೆಕಾಡ. ಅಲ್ಲಿ ದನ ಕಂಜಿ ಹಾಕಿದ್ದಾಡ. ಮಾವ ‘ಬೇಗ ಬಾ’ ಹೇಳಿ ಪೋನ್ ಮಾಡಿದವು”
“ಅಲ್ಲಿಗೆ ಹೋಗಿ ವಾಪಾಸು ಮನಗೆ ಬಪ್ಪಗ ನೆಡಿರುಳಕ್ಕು. ನಾಳಂಗೆ ಕ್ಲಾಸಿದ್ದೆನಗೆ…..” ಸುಪ್ರಿಯ ರಾಗ ಎಳದತ್ತು. ಅತ್ತೆ ಮನಗೆ ಬಂದು ಸುದೀಪನತ್ರೆ ಮಾತಾಡುವ ಅವಕಾಶವೂ ತಪ್ಪಿತ್ತನ್ನೇಳಿ ಬೇಜಾರವುದೆ ಆತು.
“ಅಂಬಗ ನೀನಿಲ್ಲಿ ನಿಲ್ಲು, ನಾಳೆ ಆನು ಕ್ಲಿನಿಕ್ ಗೆ ಹೋಪದು ಅಲ್ಲಿಗೆ ಅಲ್ಲದಾ.ಕಾಲೇಜ್ ಹತ್ತರೆ ಬಿಡುವೆ”
ಸುಪ್ರಿಯಂಗೆ ಅದರ ಕೆಮಿಯನ್ನೇ ನಂಬಲೆಡಿಯದ್ದಷ್ಟು ಆಶ್ಚರ್ಯ ಆತು. ಸುದೀಪ ಭಾವನ ಬಾಯಿಂದ ಈ ಮಾತಾ…!! ಓಹ್ ..ಎಷ್ಟು ಕೊಶಿಯಾತು ದೇವರೇ..ನಿನಗೆ ಎನ್ನ ಪ್ರಾರ್ಥನೆ ಕೇಳಿತ್ತು’ ಹೇಳಿ ಮನಸಿಲ್ಲಿ ಜಾನ್ಸಿಂಡು ಅಷ್ಟು ಸುಲಭಲ್ಲಿ ಒಪ್ಪಿರೆ ಅದಕ್ಕೆ ಕಾದು ನಿಂದದೂಳಿ ಆವ್ತಿಲ್ಯಾಳಿ ಗ್ರೇಶಿ
“ಅದು ಸರಿಯಾಗ. ಅಂತೇ ನಿನಗೆ ತೊಂದರೆ ಕೊಟ್ಟ ಹಾಂಗಾವ್ತು” ಹೇಳಿತ್ತು.
“ಅವ° ಎಂತ ನಿನ್ನ ತಲೆಲಿ ಹೊತ್ತೊಂಡು ಹೋಪದಲ್ಲ…” ಅಣ್ಣ ಸುದೀಪನ ಹೆಗಲು ತಟ್ಟಿ ಕುಶಾಲು ಮಾಡಿಯಪ್ಪಗ ಸುಪ್ರಿಯಂಗೆ ಅವನ ಮೋರೆ ನೋಡ್ಲೆ ನಾಚಿಕೆ ಆತು.
“ಇದೆಂತ ಮಾಡುದಿಲ್ಲಿ! ಕಾಪಿ ಕುಡಿವಲೆ ಸಾನೂ ಬಯಿಂದಿಲ್ಲೆ. ಬೇಗ ಹೋಯೆಕಾಡ ಕೂಸೇ…” ಅಮ್ಮನೂ ಅಲ್ಲಿಗೆ ಬಂದಪ್ಪಗ ಸುಪ್ರಿಯ ಮೆಲ್ಲಂಗೆ ಜಾರಿತ್ತಲ್ಲಿಂದ.
“ಅಮ್ಮಾ…. ಇಲ್ಲಿ ಬಾ..ಸುಪ್ರಿಯ ಇಂದಿಲ್ಲಿ ನಿಲ್ಲಲಿ ಹೇಳ್ತ° ಇವ°. ನಾಳಂಗೆ ಇವ ಹೋಪಗ ಒಟ್ಟಿಂಗೆ ಕರಕ್ಕೊಂಡು ಹೋಕಾಡ. ಈಗ ನಮ್ಮೊಟ್ಟಿಂಗೆ ಕರಕ್ಕೊಂಡು ಹೋದರೆ ಅತ್ತೆಯ ಮನೆಲಿ ಬಿಟ್ಟು ನಮ್ಮ ಮನಗೆತ್ತುಗ ಸುಮಾರು ಹೊತ್ತಕ್ಕು. ನಾಳಂಗೆ ಕೋಲೇಜಿಂಗೆ ಹೋಪಲೆಡಿಯ ಅದಕ್ಕೆ. ಇಲ್ಲದ್ರೆ ನಾಳಂಗೆ ರಜೆ ಮಾಡೆಕು…..”
“ಅದಕ್ಕೆ ಒಪ್ಪಿಗೆ ಇದ್ದರೆ ನಿಲ್ಲಲಿ. ಮನಗೋಗಿ ಎಂತ ಮಾಡ್ಲಿದ್ದದು! ನಾಳಂಗೆ ಇಲ್ಲಿಂದಲೇ ಹೋದರಾತು. ಆನು ಅತ್ತಿಗೆ ಹತ್ತರೆ ಮಾತಾಡಿಕ್ಕಿ ಬತ್ತೆ. ಅದುವೇ ಸುಲಭ. ಇಲ್ಲದ್ರೆ ಇರುಳು ಒರಕ್ಕು ಕೆಟ್ಟುಕೊಂಡು,ನಾಳಂಗೆ ಬೇಗ ಎದ್ದು ಹೆರಡುಗ ಬಚ್ಚುಗು. ನಿನಗೂ ಅದರ ಬಿಟ್ಟಿಕ್ಕಿ ಕೆಲಸಕ್ಕೆ ಹೋಪಲೆ ತಡವಕ್ಕು.ಬೇಕಾರೆ ಅಪ್ಪನತ್ರೆ ಕೇಳಿಕ್ಕು” ಅಮ್ಮ ಸೆರಗು ಸೊಂಟಕ್ಕೆ ಕುತ್ತಿಂಡು ಹೇಳಿಯಪ್ಪಗ ಸುರೇಶ° ಸುದೀಪನ ಮೋರೆ ನೋಡಿ ಕಣ್ಣು ಹೊಡದ°.
“ಒಳ್ಳೆ ಚಾನ್ಸ್ ಮಾರಾಯಾ..ನಾಳಂಗೆ ಕೋಲೇಜಿಂಗೆ ಹೇಳಿಕ್ಕಿ ಸಿನೆಮಕ್ಕ ಮಣ್ಣೋ ಕರಕ್ಕೊಂಡು ಹೋಯೆಕು..ನಿನ್ನ…..” ಅವ ಸಣ್ಣಕೆ ಹೇಳಿರೂ ಅದು ಅಲ್ಲಿಗೆ ಬಂದ ಪುಟ್ಟತ್ತಗೆ ಕೇಳಿತ್ತು
“ಮಾವನ ಮಗಳ ಅಲ್ಲದ ಸಿನೆಮಾಕ್ಕೆ ಕರಕ್ಕೊಂಡು ಹೋಪದು. ಮದುವೆಂದ ಮದಲೇ ಹೋದರೆ ರುಚಿ ಹೆಚ್ಚಾಡ….ಅಲ್ದೋ….ಹ್ಹ….ಹ್
ಸುದೀಪನೂ ಸುರೇಶನೂ ಅವರ ಮಾತು ಕೇಳಿ ದೊಡ್ಡಕೆ ನೆಗೆ ಮಾಡಿದವು.
ಹಾಂಗೆ ಅನಿರೀಕ್ಷಿತವಾಗಿ ಸುಪ್ರಿಯ ಆ ದಿನ ಅತ್ತೆಮನೆಲಿ ನಿಲ್ಲೆಕಾಗಿ ಬಂತು.
ಅಪರೂಪಕ್ಕೆ ಬಂದ ಸೊಸೆಗೆ ಅತ್ತೆ ಭಾರೀ ಪ್ರೀತಿಲಿ ಸಮ್ಮಾನ ಮಾಡಿದವು. ಅವರ ಪ್ರೀತಿ ಕಾಂಬಗ ಸುಪ್ರಿಯಂಗೆ ವಿಜಯ ಹೇಳಿದ ಕತೆಯ ತಂಗಮ್ಮನ ನೆಂಪಾಗಿ ಮನಸ್ಸು ತಳಮಳ ಆಗಿಂಡಿದ್ದತ್ತು. ಇಷ್ಟು ಪ್ರೀತಿಸುವ ಅತ್ತೆ ಸಿಕ್ಕೆಕಾರೆ ಪುಣ್ಯ ಮಾಡೆಕು..
“ಎಂತೋ ಆಲೋಚನೆ ಮಾಡುವ ಹಾಂಗೆ ಕಾಣ್ತು. ಬಂದ ಲಾಗಾಯ್ತು ನೋಡ್ತೆ. ಆಕಾಶ ತಲಗೆ ಬಿದ್ದವರ ಹಾಂಗೆ ಮಾಡ್ತಾಯಿದ್ದೆ? ಎಂತಾಯಿದು ನಿನಗೆ? ಎನ್ನತ್ರೆ ಹೇಳ್ಲಕ್ಕಾರೆ ಹೇಳು” ಅಡಿಗೆ ಮಾಡ್ಲೆ ಅತ್ತಗೆ ಸಕಾಯ ಮಾಡಿಕ್ಕಿ ಹೆರ ಬಂದು ಒಂದು ಕೋಣೆಯ ಗಿಳಿಬಾಗಿಲಿಂಗೆರಗಿ ಹೆರ ಎಲ್ಲಿಗೋ ನೋಡಿಂಡು ನಿಂದ ಸುಪ್ರಿಯಂಗೆ ಸುದೀಪನ ಮಾತು ಕೇಳುಗ ಫಕ್ಕನೆ ಬೆಚ್ಚಿ ಬಿದ್ದ ಹಾಂಗೆ ಆತು.
“ಎಂತ ಇಲ್ಲೆ ” ಹೇಳಿಂಡು ಕಣ್ಣ ಕರೇಲಿ ಎರ್ಕಿದ ನೀರಿನ ಚೂಡೀದಾರದ ಶಾಲಿಲ್ಲಿ ಉದ್ದಿಕ್ಕಿ ಅವನ ಮೋರೆ ನೋಡಿ ನೆಗೆ ಮಾಡ್ಲೆ ಗ್ರೇಶಿರೂ ಸೀದಾ ಅವನ ಕಣ್ಣುಗಳ ಎದುರುಸಲೆ ಎಡಿಯದ್ದೆ ತಲೆ ಅಡಿಯಂಗೆ ಹಾಕಿತ್ತು.
“ಅಮ್ಮನ ಕಾಣದ್ದೆ ಅಸಕ್ಕಾತ. ಅಲ್ಲ ಎನ್ನ ಹೆದರಿಕೆಯಾ?” ಮೆಲ್ಲಂಗೆ ಕೇಳಿದ°.
“ಅಲ್ಲ ” ಹೇಳಿ ತಲೆ ಆಡ್ಸಿತ್ತಷ್ಟೆ ಅದು.
“ನೋಡು ಸುಪ್ರಿಯಾ..ಬದುಕಿನ ಆಯ್ಕೆ ಯಾವಗಲೂ ನಮ್ಮ ಕೈಲಿ ಬೇಕು. ಮುಖ್ಯವಾಗಿ ಕೂಸುಗೊ ಮನಸಿಲ್ಲಿ ಇಪ್ಪ ವಿಶಯ ಆರತ್ರಾರು ಹೇಳೆಕು. ಬಹುಶಃ ಈಗ ನಮ್ಮ ಹಿರಿಯರು ಮಾತಾಡಿದಾಂಗೆ ನಿನಗೆ ಎನ್ನ ಮದುವೆ ಅಪ್ಪಲೆ ಒಪ್ಪಿಗೆ ಇಲ್ಲದ್ರೆ ಈಗಲೇ ಹೇಳು. ಎನಗೆ ಯಾವ ಬೇಜಾರವೂ ಇಲ್ಲೆ. ಅಥವಾ ಬೇರೆ ಆರನ್ನಾರು ಮನಸಿಲ್ಲಿ ಮಡಿಕ್ಕೊಂಡಿದ್ದರೆ ಅದನ್ನೂ ಎನ್ನತ್ರೆ ಧೈರ್ಯವಾಗಿ ಹೇಳ್ಲಕ್ಕು……”
ಅವನ ಮಾತು ಕೇಳಿ ಎಂತ ಉತ್ತರ ಕೊಡೆಕು ಹೇಳಿ ಅರಡಿಯದ್ದೆ ಅವನನ್ನೇ ನೋಡಿಂಡು ನಿಂದತ್ತದು.
ಸುಪ್ರಿಯ° ಮದುವೆ ವಿಶಯ ಆಲೋಚನೆ ಮಾಡಿ ಬೇಜಾರ ಮಾಡುದು ಹೇಳಿ ಗ್ರೇಶಿದ ಅವ° ಮಾತು ಮುಂದುವರ್ಸಿದ°
“ಮದ್ಲಾಣ ಕಾಲಲ್ಲಿ ಕೂಸುಗೊಕ್ಕೆ ಕೆಲವು ವಿಶಯಲ್ಲಿ ಒಳ್ಳೆ ಸ್ವಾತಂತ್ರ್ಯ ಕೊಟ್ಟುಕೊಂಡಿತ್ತಿದ್ದವು. ಅವರ ಬದುಕಿಂಗೆ ಬೇಕಾದ ಸಂಗಾತಿಯ ಆಯ್ಕೆ ಮಾಡ್ಲೆ ಪುರಾಣಗಳ ಕಾಲಲ್ಲೇ ಸ್ವಯಂವರ ಮಾಡಿಂಡಿತ್ತಿದ್ದವು…..
‘ಸ್ವಯಂವರ’ ಹೇಳುವ ಶಬ್ದ ಕೇಳುಗ ಸುಪ್ರಿಯಂಗೆ ಮೈಯೆಲ್ಲ ಚಳಿ ಕೂದಾಂಗಾಗಿ ನಡುಗಿತ್ತು.
” ಸಾಕು……ಪ್ಲೀಸ್… ಒಂದರಿ ನಿಲ್ಸು…” ಸುಪ್ರಿಯ ಅಷ್ಟು ಹೇಳಿಯಪ್ಪಗ ಅವಂಗೆ ಹೇಳಿದ್ದರ್ಲಿ ಎಂತೋ ತಪ್ಪಿದ್ದಾಳಿ ಆಗಿ ಫಕ್ಕ ಮಾತು ನಿಲ್ಸಿದ°.
“ಸುಪ್ರಿಯಾ…..ಎಲ್ಲಿದ್ದೇ…..?” ಅತ್ತೆಯ ಸ್ವರ ಕೇಳಿಯಪ್ಪಗ ಎಲ್ಲಾ ವಿಷಯವನ್ನು ಮರದು ಹೊಸ ಜನರ ಹಾಂಗೆ ಅವನ ಮೋರೆ ನೋಡಿ ನೆಗೆ ಮಾಡಿಕ್ಕಿ
“ಬಂದೆ ಅತ್ತೇ….” ಹೇಳಿಂಡು ಹೆರ ಇಳುದತ್ತು.
ಎಂತದೂ ಅರ್ಥಾಗದ್ರೂ ಅವನೂ ಸುಮ್ಮನೇ ನೆಗೆ ಬರ್ಸಿದ ಹಾಂಗೆ ಮಾಡಿಂಡು ಅದರೊಟ್ಟಿಂಗೆ ಹೆರ ಬಂದ°
ಸುಪ್ರಿಯನೂ,ಸುದೀಪನೂ ಒಟ್ಟಿಂಗೆ ಹೆರ ಬಪ್ಪದು ಕಂಡು ಅತ್ತೆಯ ಮನಸ್ಸು ತಂಪಾತು. ಇವರಿಬ್ರನ್ನು ಒಟ್ಟಿಂಗೆ ಸೇರ್ಸು ದೇವರೇ ಹೇಳಿ ದೇವರತ್ರೆ ಬೇಡ್ಯೊಂಡು ಅವರ ಕಂಡರೂ ಕಾಣದ್ದವರ ಹಾಂಗೆ ಕೊಶೀಲಿ ಒಳ ನಡದವು .
ಇನ್ನೂ ಇದ್ದು ಇನ್ನಾಣ ವಾರಕ್ಕೆ >>>>
- ಒಲುಮೆಯ ಸಿರಿದೀಪ - October 22, 2021
- ಸ್ವಯಂವರ ಭಾಗ 51-ಪ್ರಸನ್ನಾ ವಿ ಚೆಕ್ಕೆಮನೆ - June 1, 2020
- ಸ್ವಯಂವರ ಭಾಗ 50-ಪ್ರಸನ್ನಾ ವಿ ಚೆಕ್ಕೆಮನೆ - May 25, 2020
ಸುಪ್ರಿಯ-ಸುದೀಪರ ಬದ್ಧ ಬೇಗನೇ ಇಕ್ಕು ಹೇಳಿ ಕಾಣ್ತು. ಒಳ್ಳೆ ಜೋಡಿ. ಸುಪ್ರಿಯನ ಮನಸ್ಸು ಹೇಂಗಾರು ಬದಲಿತ್ತಾನೆ. ಕತೆ ರೈಸುತ್ತಾ ಇದ್ದು.
Supriyana manasili ippa tholalaata ellavannu maravale susandarbha odagi baindu. Anireekshithavagi atheya maneli nindu sudeepana bagge hecchu tiliva avakasha sikkiddu olledathu. Munde avtitta anahutha thappule idu Supriyange devare kotta avakasha. Avvibru jotheyagi baalali heludu odugara haaraike kooda.. 😄