Oppanna.com

ಸ್ವಯಂವರ : ಕಾದಂಬರಿ : ಭಾಗ 02 – ಪ್ರಸನ್ನಾ. ವಿ. ಚೆಕ್ಕೆಮನೆ

ಬರದೋರು :   ಪ್ರಸನ್ನಾ ಚೆಕ್ಕೆಮನೆ    on   03/06/2019    3 ಒಪ್ಪಂಗೊ

ಈವರೆಗೆ:

ಸ್ವಯಂವರ : ಕಾದಂಬರಿ : ಭಾಗ 02 

ಇಬ್ರೂ ಬಸ್ಸಿಲ್ಲಿ ಹತ್ತಿ ಕೂದವು.ಬಸ್ಸಿಲ್ಲಿ ಇಷ್ಟರವರೆಗೆ ಹೋಗದ್ದ ಸುಪ್ರಿಯಂಗೆ ಬಸ್ಸಿಲ್ಲಿ ತುಂಬ ಜನರ ಕಾಂಬಗ ಎಂತೋ ಕಿರಿಕಿರಿ ಅಪ್ಪಲೆ ಸುರುವಾತು.

“ರಿಕ್ಷಾಲ್ಲಿ ಹೋಪ” ಹೇಳಿ ಹೇಳುವ ಮಾತು ನಾಲಗೆ ಕೊಡಿ ವರೆಗೆ ಬಂದರೂ ವಿಜಯನ ಕಷ್ಟ ಗೊಂತಿದ್ದ ಕಾರಣ ಮಾತಾಡಿದ್ದಿಲ್ಲೆ. ಸಾಲದ್ದಕ್ಕೆ ಹೋಪದೆಲ್ಲಿಗೇಳಿ ಕೂಡ ಅದು ಹೇಳಿದ್ದೂಯಿಲ್ಲೆ.

ಡಿಗ್ರಿಗೆ ಸೇರಿಯಪ್ಪಗಲೇ ಅದಕ್ಕೆ ವಿಜಯನ ಗುರ್ತ ಆದ್ದದು. ಒಂದೇ ಕ್ಲಾಸಿಲ್ಲಿ ಕಲಿವ ಕಾರಣ ಅಲ್ಲ.!

ವಿಜಯ ತುಂಬ ಚೆಂದಕೆ ಹೊಲಿತ್ತು ಹೇಳಿ ಅದರೊಟ್ಟಿಂಗೆ ಹಾಸ್ಟೆಲ್ ಲಿ ಇಪ್ಪವು ಹೇಳಿದ ಕಾರಣ ಸುಪ್ರಿಯನೇ ಬೇರೆ ಕ್ಲಾಸಿಲ್ಲಿ ಕಲಿವ ವಿಜಯನ ಗುರ್ತ ಮಾಡ್ಯೊಂಡದು.ಅಂಬಗಂಬಗ ಬೇರೆ ಬೇರೆ ನಮೂನೆಯ ಅಂಗಿ, ಚೂಡಿದಾರ ಹೊಲಿವಲೆ ಅಲ್ಲದ್ರೆ ಹೊಸತ್ತು ತೆಗದ್ದರ ಸಣ್ಣ ಮಾಡ್ಲೆ, ಹೊಲಿಗೆ ಹಾಕಲೆ ಎಲ್ಲ ವಿಜಯನೇ ಆಯೆಕು ಅದಕ್ಕೆ.

ಆರತ್ರೂ ಹೆಚ್ಚು ಮಾತಾಡದ್ದ ವಿಜಯ ಸುಪ್ರಿಯಂಗೆ ಹೇಂಗೆ ಇಷ್ಟು ಹತ್ತರೆ ಆತೋ ಹೇಳಿಯೇ ಅರ್ಥಾವ್ತಿಲ್ಲೆ.

ವಿಜಯನ ಮನಗೆ ಅದು ತುಂಬ ಸರ್ತಿ ಹೋಯಿದು.ಒಂದೇ ಉಗ್ರಾಣದ ಬಾಡಿಗೆ ಮನೆ ಅದು.ಒಬ್ಬ° ತಮ್ಮ ಬಿಟ್ಟು ಬೇರೆ ಆರನ್ನೂ ಅದು ಇಷ್ಟರವರೆಗೆ ಅಲ್ಲಿ ಕಂಡಿದೂ ಇಲ್ಲೆ.ಆರ ಶುದ್ದಿಯು ಅದರ ಬಾಯಿಲಿ ತಪ್ಪಿ ಕೂಡ ಬಯಿಂದೂ ಇಲ್ಲೆ.

ಹೊಲುದು ಆ ಪೈಸೆಲಿ ಅದು ಕೋಲೇಜಿಂಗೆ ಬಪ್ಪದು.ತಮ್ಮ ಏಳನೆಯೋ ,ಎಂಟನೆಯೋ ಹೇಳಿ ಸುಪ್ರಿಯಂಗೆ ಗೊಂತಿಲ್ಲೆ.

ಊರಿಂಗೆ ಹೋದಿಪ್ಪಗ ಅಬ್ಬೆ ಹತ್ತರೆ ವಿಜಯನ ಶುದ್ದಿ ಹೇಳುವ ಕ್ರಮ ಇದ್ದು ಸುಪ್ರಿಯಂಗೆ. ಅಂಬಗ ಅಬ್ಬೆ ಹೇಳುಗು
“ಅದರ ಬದುಕಿಲ್ಲಿ ಎಂತಾರು ಬೇಜಾರದ ಸಂಗತಿ ನಡದಿಕ್ಕು.ಅದಾಗಿ ಹೇಳದ್ದೆ ನೀನಾಗಿ ಕೇಳಿ ಅದರ ಮನಸಿಂಗೆ ಬೇಜಾರು ಮಾಡಿಕ್ಕೆಡ”.

ರಜ ಶ್ರೀಮಂತಿಕೆಲಿ ಹುಟ್ಟಿ ಬೆಳದ ಅದಕ್ಕೆ ಇನ್ನೊಬ್ಬನ ಕಷ್ಟ ಎಲ್ಲ ಅಷ್ಟು ಬೇಗ ಅರ್ಥ ಆಗದ್ರೂ ವಿಜಯನೊಟ್ಟಿಂಗೆ ಸೇರಿದ ಮತ್ತೆ  ರಜ ರಜಾ ಗೊಂತಪ್ಪಲೆ ಸುರುವಾತು.

ವಿಜಯ ಎಲ್ಲಿಗೂ ತಿರುಗಲೆ ಹೋಪ ಕೂಸಲ್ಲ.ಆರತ್ರೂ ಮಾತಾಡುವ ಜೆನವು ಅಲ್ಲ.ಕೋಲೇಜು ,ಮನೆ ಇಷ್ಟೇ .ಬಹುಶಃ ಆರದ್ದೋ ಮನೆಯ ಮಕ್ಕೊಗೆ ಉದಿಯಪ್ಪಗ ಟ್ಯೂಶನು ಕೊಡ್ಲೆ ಹೋಪದು ಬಿಟ್ರೆ ಬೇರೆಲ್ಲಿಗೆ ಹೋಪದನ್ನು ಸುಪ್ರಿಯ ಕಂಡಿದಿಲ್ಲೆ.

ಸುಪ್ರಿಯ ಹಾಸ್ಟೆಲ್ ಲಿ ಉದಾಸೀನ ಆದರೆ ವಿಜಯನ ಮನಗೆ ಬಕ್ಕು. ನೇರ್ಪ ಕೂಬಲೆ ಒಂದು ಕುರ್ಚಿ ಕೂಡ ಇಲ್ಲದ್ದ ಆ ಮನೆಲಿ ಅಡಿಗೆ ಸರಿಯಾಗಿ ಮಾಡುವ ಕ್ರಮ ಇದ್ದೊ ಹೇಳಿ ಕೂಡಾ ಸಂಶಯ ಅಪ್ಪದದಕ್ಕೆ.

” ಎಂತಾರು ಕುಡಿತ್ತೆಯಾ” ಹೇಳಿ ವಿಜಯ ಕೇಳಿರೆ ಸುಪ್ರಿಯ ” ಬೇಡ ” ಹೇಳುದು.ಅದು ನಿಜವಾಗಿಯೂ ಹೊಟ್ಟೆ ತುಂಬ ತಿಂದಿಕ್ಕಿ ಬಪ್ಪ ಕಾರಣ ಎಂತದೂ ಬೇಕಾವ್ತು ಇಲ್ಲೆ.ಅಂದರೂ ಒಂದು ಮೂಲೆಲಿ ಸಣ್ಣ ಸ್ಟೌ ದೆ ,ನಾಲ್ಕೈದು ಪಾತ್ರವು ಬಿಟ್ರೆ ಅಲ್ಲಿ ಬೇರೆಂತದೂ ಕಣ್ಣಿಂಗೆ ಬಿದ್ದಿದೂ ಇಲ್ಲೆ.

ಹಾಂಗಾಗಿ ಊರಿಂಗೆ ಹೋಗಿಂಡು ಬಪ್ಪಗ ಅಬ್ಬೆ ಮಾಡಿದ ಕೊಟ್ಟಿಗೆ,ಉಂಡ್ಳಕಾಳು,ಮೈಸೂರುಪಾಕು,ಉಪ್ಪಿನಕಾಯಿ ಎಲ್ಲ ವಿಜಯಂಗು ತಂದು ಕೊಡುಗು.ಸುಪ್ರಿಯನ ಅಬ್ಬಗೆ ವಿಜಯನ ಶುದ್ದಿ ಮಗಳು ಹೇಳಿದ ಮತ್ತೆ ಅದರತ್ರೆ ಎಂತೋ ಒಂದು ವಿಶೇಷ ಪ್ರೀತಿ.

“ಅದು ಊರಿಂಗೆ ಬಾ’ ಹೇಳಿರೆ ಬತ್ತಿಲ್ಲೆ. ಇದರನ್ನಾದರು ಕೊಂಡೋಗಿ ಕೊಡು.ನೀನಿದರ ಹೊತ್ತುಕೊಂಡು ಹೋಯೆಕೂಳಿಲ್ಲೆ.ಅಣ್ಣನ ಕಾರಿಲ್ಲಿ ಹಾಕಿರೆ ಅಲ್ಲಿಗೆತ್ತುತ್ತು” ಹೇಳಿ ಮತ್ತೊಂದು ಕಟ್ಟವನ್ನು ಕೊಡುಗು.

ಸುರು ಸುರುವಿಂಗೆ ವಿಜಯಂಗೆ ಹಾಂಗೆಲ್ಲ ತೆಕ್ಕೊಂಬಲೆ ಲಾಯ್ಕ ಆಗದ್ರೂ ಸುಪ್ರಿಯ ಒತ್ತಾಯ ಮಾಡಿಯಪ್ಪಗ ಅದರ ಪ್ರೀತಿಗೆ ಸೋಲಲೇ ಬೇಕಾಗಿ ಬಂತು.

“ಈ ವರ್ಷ ಕೂಡ ನೀನು ತಂದು ಕೊಡುವೆ.ಇನ್ನಾಣ ವರ್ಷ ಎನಗೆ ಆಶೆಯಾದರೆ ಆನೆಂತ ಮಾಡುದಪ್ಪಾ?” ಳಿ ವಿಜಯ ಒಂದೊಂದರಿ ಸುಪ್ರಿಯನತ್ತರೆ ಕುಶಾಲು ಮಾತಾಡುವ ಕ್ರಮ ಇದ್ದು.

“ಎನಗೆ ಇನ್ನೂ ಎರಡು ವರ್ಷ ಕಲಿಯೆಕು.ಮತ್ತೆ ಸಾಕು ……”

“ಮದುವೆ ಅಲ್ಲದಾ?” ವಿಜಯ ನೆಗೆ ಮಾಡಿರೆ ಅದು ಇಲ್ಲದ್ದ ಕೋಪ ಬಂದ ಹಾಂಗೆ ಮಾಡುಗು.

ಸುಪ್ರಿಯನ ಅತ್ತೆ ಮಗ ಸಂದೀಪ ಅದಕ್ಕೆ ಕಲ್ತಾದ ಕೂಡ್ಲೇ ಮದುವೆ ಅಪ್ಪಲೆ ತಯಾರಾಗಿಂಡಿದ್ದ° ಹೇಳಿ ವಿಜಯನತ್ರೆ ತುಂಬ ಸರ್ತಿ ಹೇಳಿದ್ದತ್ತು. ಅದಕ್ಕೆ ವಿಜಯ ಒಂದೊಂದರಿ ಅದರ ಮದಿಮ್ಮಾಳು ಹೇಳಿ ತಮಾಶೆ ಮಾಡುದು.

ಅಬ್ಬೆ ಅಪ್ಪನ ಎರಡು ಜನ ಮಕ್ಕಳಲ್ಲಿ ಹೆರಿಯವ ಸಂದೀಪ.ಬಿ.ಎ.ಎಂ.ಎಸ್ ಡಾಕ್ಟರ್ ಆಗಿ ಅವರ ಮನೆ ಹತ್ತರೆ ಕ್ಲಿನಿಕ್ ಮಡುಗಿದ ಅವಂಗೆ ರಜ ಮಾತು, ಕುಶಾಲು ಕಮ್ಮಿ ಹೇಳಿ ಸುಪ್ರಿಯನ ದೂರು.ಎಷ್ಟೋ ಸರ್ತಿ ವಿಜಯನತ್ರೆ ಹೇಳುಗದು
“ಇವಂಗೊಂದರಿ ಎನ್ನತ್ರೆ ಮಾತಾಡ್ಲಾಗದ? ವ್ಯಾಟ್ಸಾಪ್ ಲಿ ಮೆಸೇಜ್ ಆದರೂ ಮಾಡ್ಲಾಗದ? ಬರೀ ಮಂಗ! ಮದುವೆ ಅಪ್ಪಲಿಪ್ಪ ಕೂಸಿನತ್ರೆ ಕೂಡ ಒಂದು ಕುಶಾಲು ಮಾತಾಡದ್ದ ಪ್ರಾಣಿ”

“ಹಾಂಗೆಲ್ಲ ಹೇಳ್ಲಾಗ ಮಾರಾಯ್ತೀ.” ಹೇಳಿ ವಿಜಯ ಅದಕ್ಕೆ ಬುದ್ದಿ ಹೇಳಿರೂ ಸುಪ್ರಿಯಂಗೆ ಅದೆಲ್ಲ ನಾಟಲೇ ನಾಟ.ಸಣ್ಣಾದಿಪ್ಪಗಲೇ ಒಟ್ಟಿಂಗೆ ಬೆಳದ ಕಾರಣ ಅವನ ತಮಾಶೆ ಮಾಡ್ಲೂ ಹೆದರಿಕೆ ಇಲ್ಲೆ ಅದಕ್ಕೆ.

“ಪ್ರೀತಿಸಲೆ ಗೊಂತಿಲ್ಲದ್ದ ಇವನ ಮದುವೆ ಆಗಿ ಆನು ಜೀವನಪೂರ್ತಿ ನರಕ್ಕ ಬರೆಕಾ. ಬೇರೆ ಗೆಂಡು ಮಕ್ಕಳ ನೋಡು, ಹೇಂಗಿರ್ತವು.ಕೂಸುಗಳತ್ರೆಲ್ಲ ಎಷ್ಟು ಚಂದಕೆ ಮಾತಾಡ್ತವು.ಈ ಮೋಞ°ಂಗೆ ಮಾತ್ರ ಎಂತದೂ ಅರಡಿತ್ತಿಲ್ಲೆ.ಎನ್ನ ಗ್ರಾಚಾರ”

“ನೀನದಕ್ಕೆಲ್ಲ ಮಂಡೆಬೆಚ್ಚ ಮಾಡೆಡ.ಮದುವೆ ಕಳುದ ಮತ್ತೆ ನಿನಗೆ ಬೇಕಾದಾಂಗೆ ಇಕ್ಕು. ಈಗ ಸರಿ ಆವ್ತಿಲ್ಲೇದಿಕ್ಕು’ ವಿಜಯ ಸಮದಾನ ಮಾಡಿರೂ ಕನಸಿನ ಲೋಕಲ್ಲಿ ಸದಾ ತೇಲುತ್ತಾ, ,ಯಾವುದೋ ರಮ್ಯ ಬದುಕಿನ ಸ್ಪಷ್ಟವಾದ ಗುರಿಯಿಲ್ಲದ್ದ ಕಲ್ಪನೆಲಿ ಇಪ್ಪ ಈ ಕೂಸು ಮಾಡಿದ್ದೆಂತರ……‌….!!!!

ಇನ್ನೂ ಇದ್ದು, ಇನ್ನಾಣ ವಾರಕ್ಕೆ >>>

ಪ್ರಸನ್ನಾ ಚೆಕ್ಕೆಮನೆ

3 thoughts on “ಸ್ವಯಂವರ : ಕಾದಂಬರಿ : ಭಾಗ 02 – ಪ್ರಸನ್ನಾ. ವಿ. ಚೆಕ್ಕೆಮನೆ

  1. ಈ ಕೂಸು ಮಾಡಿದ್ದೆಂತರ……

    ತಿಳಿವಲೆ ಇನ್ನು ಒಂದು ವಾರ ಕಾಯೆಕ್ಕಾ..

    ಒಳ್ಳೆ ನಿರೂಪಣೆ

  2. ಮುಂದಾಣ ಕಂತಿನ ಈಗಳೇ ಓದುವ° ಹೇಳುವಷ್ಟು ಕುತೂಹಲ…
    ಎಂತದೋ ಕತೆಲಿ ಕೆಟ್ಟ ತಿರುವು ಬಪ್ಪ ಸೂಚನೆ ಕಾಣ್ತಪ್ಪಾ…
    ಎಲ್ಲವೂ ಸುಖಾಂತ್ಯ ಆದರೆ ಸಾಕಪ್ಪಾ…. ದೇವರೇ…

  3. ಭಾರೀ ಕುತೂಹಲಕಾರಿಯಾಗಿ ಹೋವುತ್ತಾ ಇದ್ದು.ನಿರೂಪಣೆ ಲಾಯ್ಕ ಆಯಿದು ಪ್ರಸನ್ನಕ್ಕಾ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×